
ತಮಿಳು ಚಿತ್ರನಟ ಜಯಂ ರವಿ ಮತ್ತು ಪತ್ನಿ ಆರತಿ ಡಿವೋರ್ಸ್ ಪಡೆದ ವೈಯಕ್ತಿಕ ವಿಚಾರ ಈಗ ಫುಲ್ ಪಬ್ಲಿಕ್ ಟಾಕ್ ಆಗಿದೆ. ಕಾರಣ ಬಿಚ್ಚಿಡದೆ ಜಯರಂ ರವಿ ಇದ್ದಕ್ಕಿದ್ದಂತೆ ಡಿವೋರ್ಸ್ ಬಗ್ಗೆ ಪೋಸ್ಟ್ ಹಾಕಿಬಿಟ್ಟರೆ ಈ ಸಮಯದಲ್ಲಿ ಹಲವರು ಆರತಿ ವಿರುದ್ಧ ತಿರುಗಿಬಿದ್ದರು, ಆಕೆ ಯಾರೊಟ್ಟಿಗೊ ಇದ್ದಾಳೆ ಏನೋ ಮಾಡುತ್ತಿದ್ದಾಳೆ ಹಾಗೆ ಹೀಗೆ ಎಂದು. ಇದರಿಂದ ಬೇಸರಗೊಂಡ ಆರತಿ ಡಿವೋರ್ಸ್ ಬಗ್ಗೆ ಸ್ಪಷ್ಟನೆ ಕೊಟ್ಟರು, ನನ್ನ ಒಪ್ಪಿಗೆ ಇಲ್ಲದೆ ಡಿವೋರ್ಸ್ ಪಡೆದಿದ್ದಾರೆ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ದೊಡ್ಡ ತಪ್ಪು ಇದರಿಂದ ನನ್ನ ಮಕ್ಕಳಿಗೂ ಸಮಾಜದಲ್ಲಿ ಸಮಸ್ಯೆ ಆಗುತ್ತದೆ ಎಂದು. ಅಲ್ಲಿಗೆ ಎಲ್ಲಾ ಕ್ಲಿಯರ್ ಆಯ್ತು ಅಂದುಕೊಂಡರೆ ಜಯಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ....
ಹೌದು! ನನ್ನ ಪತ್ನಿ ನನಗೆ ಕಿರುಕುಳ ನೀಡುತ್ತಿದ್ದಾಳೆ ಅಲ್ಲದೆ ನನ್ನ ಇನ್‌ಸ್ಟಾಗ್ರಾಂ ಅಕೌಂಟ್ ಕೂಡ ಕೊಡದೇ ಆರತಿ ಸತಾಯಿಸುತ್ತಿದ್ದಳು ಹೀಗಾಗಿ ಮೆಟಾಗೆ ದೂರು ನೀಡಿ ಜಯಂರವಿ ತಮ್ಮ ಅಕೌಂಟ್ ಅನ್ನು ಮರಳಿ ಪಡೆದುಕೊಂಡಿದ್ದಾರೆ. ಕೋಟಿ ಕೋಟಿ ಆಸ್ತಿ ಇದ್ದರೂ ಜಯಂ ರವಿ ಮನೆಯಿಂದ ಹೊರ ಉಳಿದುಬಿಟ್ಟಿದ್ದಾರೆ. ಪ್ರತಿ ಸಲವೂ ಪತ್ನಿಯಿಂದ ಕಿರುಕುಲ ಎದುರಿಸುತ್ತಿರುವುದರ ಬಗ್ಗೆ ಜಯಂ ಪರೋಕ್ಷವಾಗಿ ತಿಳಿಸಿದ್ದಾರೆ. ಡಿವೋರ್ಸ್ ವಿಚಾರವಾಗಿ ಇಬ್ಬರ ನಡುವೆ ಈಗಲೂ ಬಿನ್ನಾಭಿಪ್ರಾಯವಿದೆ, ಒಂದಾದ ಮೇಲೊಂದು ಸಮಸ್ಯೆ ಶುರುವಾಗುತ್ತಿರುವುದಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಸಹಾಯ ಕೇಳಿದ್ದಾರೆ ರವಿ.
ನನಗೆ ಯಾವುದೂ ಸುಲಭವಾಗಿ ಸಿಕ್ಕಿಲ್ಲ ಪ್ರತಿಯೊಂದಕ್ಕೂ ಕಷ್ಟ ಪಟ್ಟಿದ್ದೀನಿ: ನಟಿ ರಕ್ಷಿತಾ ಪ್ರೇಮ್
ಆಸ್ತಿ ವಿಚಾರವಾಗಿ ಸಾಕಷ್ಟು ಗೊಂದಲಗಳಿದೆ ಅಲ್ಲದೆ ಪತ್ನಿ ಮನೆಯಿಂದ ಹೊರ ಹಾಕಿದ್ದಾರೆ ಹೀಗಾಗಿ ಚೆನ್ನೈನ ಇಸಿಆರ್ ರಸ್ತೆಯಲ್ಲಿ ಇರುವ ಆರತಿ ಮನೆಯಲ್ಲಿ ನನ್ನ ವಸ್ತುಗಳು ಸಾಕಷ್ಟು ಇದೆ ಅದನ್ನು ನನಗೆ ವಾಪಸ್ ಕೊಡಿ ಎಂದು ಮನವಿ ಮಾಡಿದ್ದಾರೆ. ಆರತಿ ಮನೆಯಲ್ಲಿ ಇರುವ ಚಿನ್ನಾಭರಣ, ಪಾಸ್‌ಪೋರ್ಟ್ ಕಾರು ಕೀ ಮತ್ತು ಒಂದಿಷ್ಟು ದುಬಾರಿ ವಸ್ತುಗಳು ವಾಪಸ್ ಬೇಕು ಎಂದಿದ್ದಾರೆ. ಡಿವೋರ್ಸ್ ನಂತರ ಸಣ್ಣ ಪುಟ್ಟ ಚರ್ಚೆ ಆಗುತ್ತಿರುವ ಕಾರಣ ಮಕ್ಕಳಿಗೋಸ್ಕರ್ ಒಂದಾಗುತ್ತಾರೆ ಅನ್ನೋ ಗಾಳಿ ಮಾತುಗಳು ಕೇಳಿ ಬರುತ್ತಿದೆ.
ಬೀದಿ ನಾಯಿ ಪ್ರಾಣ ಉಳಿಸಿದ ಸೋನು ಗೌಡ; ನಿನ್ನಲ್ಲೂ ಒಳ್ಳೆ ಗುಣಗಳಿದೆ ಎಂದು ಕೊಂಡಾಡುತ್ತಿರುವ ನೆಟ್ಟಿಗರು!
ಜಯಂ ರವಿ ಪೋಸ್ಟ್:
ನನಗೆ ನನ್ನ ಮಕ್ಕಳಾದ ಆರವ್ ಮತ್ತು ಅಯಾನ್ ಪಾಲನೆಯಲ್ಲಿ ಅವಕಾಶ ಸಿಗಬೇಕು. ಈ ವಿಚ್ಛೇದನ ಕೇಸ್‌ನಲ್ಲಿ 10 ವರ್ಷ..20 ವರ್ಷ..ಅಥವಾ ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ನ್ಯಾಯಾಲಯದಲ್ಲಿ ಹೋರಾಡಲು ನಾನು ಸಿದ್ಧನಿದ್ದೇನೆ. ಆದರೆ ನನ್ನ ಭವಿಷ್ಯ ನನ್ನ ಮಕ್ಕಳು ಅವರು ನನ್ನ ಸಂತೋಷ' ಎಂದು ಜಯಂ ಸ್ಪಷ್ಟನೆ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.