ಸೌತ್ ವರ್ಸಸ್ ಬಾಲಿವುಡ್ ಚರ್ಚೆಯ ಬಗ್ಗೆ ಬಾಲಿವುಡ್‌ನ ಖ್ಯಾತ ನಟ, ಕಾಶ್ಮೀರ್ ಫೈಲ್ಸ್ ಹೀರೋ ಅನುಪಮ್ ಖೇರ್ ತನ್ನ ಅಭಿಪ್ರಾಯ ಹೊರಹಾಕಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳು ಕಥೆ ಹೇಳಿದ್ರೆ ಹಿಂದಿ ಸಿನಿಮಾಗಳು ಸ್ಟಾರ್‌ಗಳನ್ನು ಸೇಲ್ ಮಾಡುತ್ತಾರೆ ಎಂದು ಹೇಳಿದ್ದಾರೆ.
ಬಾಲಿವುಡ್ ವರ್ಸಸ್ ಸೌತ್ ಸಿನಿಮಾರಂಗದ ಚರ್ಚೆ ಅನೇಕ ದಿನಗಳಿಂದ ನಡೆಯುತ್ತಿದೆ. ಬಾಲಿವುಡ್‌ನಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಭರ್ಜರಿ ಹಿಟ್ ಆಗುತ್ತಿತ್ತು ಸೌತ್ ಸಿನಿಮಾಗಳನ್ನು ಪ್ರೇಕ್ಷಕರು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹಿಂದಿ ಸಿನಿಮಾಗಳು ಸಾಲು ಸಾಲು ಸೋಲು ಕಂಡಿವೆ. ದೊಡ್ಡ ದೊಡ್ಡ ಸ್ಟಾರ್‌ಗಳ, ಬಿಗ್ ಬಜೆಟ್ ಚಿತ್ರಗಳು, ನಿರೀಕ್ಷೆಯ ಸಿನಿಮಾಗಳು ಸೋಲು ಕಂಡಿವೆ. ಅಕ್ಷಯ್ ಕುಮಾರ್, ಆಮೀರ್ ಖಾನ್ ಸಿನಿಮಾಗಳು ಸಹ ಬಾಕ್ಸ್ ಆಫೀಸ್ ನಲ್ಲಿ ಹೇಳ ಹೆಸರಿಲ್ಲದೆ ಹೋಗಿವೆ. ಸೌತ್ ಸಿನಿಮಾಗಳ ಅಬ್ಬರ ಬಾಲಿವುಡ್ ಮಂದಿಯ ನಿದ್ದೆಗೆಡಿಸಿವೆ. ಸೌತ್ ಸಿನಿಮಾರಂಗದಲ್ಲಿ ಸಾಲು ಸಾಲು ಸಿನಿಮಾಗಳು ಗೆಲುವು ದಾಖಲಿಸುತ್ತಿವೆ. ಈ ಬಗ್ಗೆ ಅನೇಕ ಸ್ಟಾರ್ ಕಲಾವಿದರು ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾದ ಕಾಂಟೆಂಟ್ ಚೆನ್ನಾಗಿದ್ದರೆ ಯಾವುದೇ ಭಾಷೆ ಎನ್ನದೆ ಪ್ರೇಕ್ಷಕರು ಸಿನಿಮಾ ವೀಕ್ಷಿಸುತ್ತಾರೆ ಅಂತ ಕೆಲವರು ಕೇಳಿದ್ರೆ ಇನ್ನು ಕೆಲವರು ಕೆಲವರು ಸೌತ್ ಸಿನಿಮಾಗಳು ಹಿಟ್ ಆದ ಮಾತ್ರಕ್ಕೆ ದಕ್ಷಿಣ ಭಾರತದ ಸಿನಿಮಾರಂಗ ಗ್ರೇಟ್ ಅಂತ ಹೇಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ಇದೀಗ ಬಾಲಿವುಡ್‌ನ ಖ್ಯಾತ ನಟ, ಕಾಶ್ಮೀರ್ ಫೈಲ್ಸ್ ಹೀರೋ ಈ ಬಗ್ಗೆ ಅನುಪಮ್ ಖೇರ್ ಪ್ರತಿಕ್ರಿಯೆ ನೀಡಿದ್ದಾರೆ. ಸೌತ್ ವರ್ಸಸ್ ಬಾಲಿವುಡ್ ಚರ್ಚೆಯ ಬಗ್ಗೆ ತನ್ನ ಅಭಿಪ್ರಾಯ ಹೊರಹಾಕಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳು ಕಥೆ ಹೇಳಿದ್ರೆ ಹಿಂದಿ ಸಿನಿಮಾಗಳು ಹೀರೋಗಳನ್ನು ಸೇಲ್ ಮಾಡುತ್ತಾರೆ ಎಂದು ಹೇಳಿದ್ದಾರೆ.
ಕಂಗನಾ ರಣಾವತ್ 'ಎಮರ್ಜೆನ್ಸಿ'ಯಲ್ಲಿ ಅನುಪಮ್ ಖೇರ್; ಯಾವ ಪಾತ್ರ?
ಇತ್ತೀಚಿಗಷ್ಟೆ ಈ ಟೈಮ್ಸ್ ಜೊತೆ ಮಾತನಾಡಿದ ಅನುಪಮ್ ಖೇರ್ ದಕ್ಷಿಣ ಭಾರತೀಯ ಸಿನಿಮಾಗಳನ್ನು ಹೊಗಳಿದ್ದಾರೆ. ತೆಲುಗಿನಲ್ಲಿ ಸಿನಿಮಾ ಮಾಡಿದ್ದೇನೆ, ತೆಲುಗು ಸಿನಿಮಾಗಳಿಂದ ತುಂಬಾ ಕಲಿತ್ತಿದ್ದೇನೆ. ತಮಿಳು ಭಾಷೆಯಲ್ಲೂ ಸಿನಿಮಾ ಮಾಡುತ್ತೀದ್ದೇನೆ. ಮಲಯಾಳಂನಲ್ಲೂ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. 'ದಕ್ಷಿಣ ಭಾರತದ ಸಿನಿಮಾರಂಗ ಮತ್ತು ಬಾಲಿವುಡ್ ನಡುವೆ ವ್ಯತ್ಯಾಸವೇನಿದೆ ಎಂದು ನಾನು ಯೋಚಿಸುತ್ತೇನೆ, ದಕ್ಷಿಣ ಭಾರತದವರು ಹಾಲಿವುಡ್‌ಗೆ ಒಲವು ತೋರುತ್ತಿಲ್ಲ. ಅವರು ಕಥೆಗಳನ್ನು ಹೇಳುತ್ತಿದ್ದಾರೆ, ಇಲ್ಲಿ ನಾವು ಹೀರೋಗಳನ್ನು ಮಾರಾಟ ಮಾಡುತ್ತಿದ್ದೇವೆ' ಎಂದು ಹೇಳಿದರು.
ರಶ್ಮಿಕಾ ಜೊತೆ ಫೋಟೋ ಕೇಳಿದ ಅನುಪಮ್ ಖೇರ್; ನಾಚಿನೀರಾದ ನಟಿ
ಅನುಪಮ ಖೇರ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚಿಗಷ್ಟೆ ನಿಖಿಲ್ ಅವರ ಕಾರ್ತಿಕೇಯ-2 ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಸೂರಜ್ ಬಾರ್ಜ್ಯ ಅವರ ಊಂಚೈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಲ್ಲಿ ಅಮಿತಾಭ್ ಬಚ್ಚನ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನು ಕಂಗನಾ ರಣಾವತ್ ನಟನೆಯ ಎಮರ್ಜೆನ್ಸಿ ಸಿನಿಮಾದಲ್ಲೂ ನಟಿ ಸುತ್ತಿದ್ದಾರೆ. ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.