ಚಿತ್ರೀಕರಣದ ವೇಳೆ ಕೈಗೆ ಗಂಭೀರ ಗಾಯ ಮಾಡಿಕೊಂಡ ಅಭಿಷೇಕ್ ಬಚ್ಚನ್. ಫೋಟೋ ಹಂಚಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ.
ಬಾಲಿವುಡ್ ಸಿಂಪಲ್ ಮ್ಯಾನ್ ಅಭಿಷೇಕ್ ಬಚ್ಚನ್ ತಮ್ಮ ಹೊಸ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಚಿತ್ರೀಕರಣದ ವೇಳೆ ಆಯಾತಪ್ಪಿ ಬಿದ್ದ ಕಾರಣ ಕೈಗೆ ಬಲವಾದ ಪೆಟ್ಟು ಬಿದ್ದಿತ್ತು. ತಕ್ಷಣವೇ ಅಭಿಷೇಕ್ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಅಮಿತಾಭ್, ಸಹೋದರಿ ಶ್ವೇತಾ ಹಾಗೂ ಪತ್ನಿ ಐಶ್ವರ್ಯಾ ಆಸ್ಪತ್ರೆಗೆ ಆಗಮಿಸುತ್ತಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗಿದ್ದವು. ಆದರೆ ಯಾರೂ ಜೂ.ಬಚ್ಚನ್ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿರಲಿಲ್ಲ.
ಚಿತ್ರೀಕರಣದ ವೇಳೆ ಅವಘಡ; ಆಸ್ಪತ್ರೆಗೆ ದಾಖಲಾದ ಅಭಿಷೇಕ್ ಬಚ್ಚನ್!'ಕಳೆದ ಬುಧವಾರ ಚೆನ್ನೈನಲ್ಲಿ ನನ್ನ ಹೊಸ ಸಿನಿಮಾ ಚಿತ್ರೀಕರಣ ಮಾಡುವಾಗ ಸಣ್ಣ ಆ್ಯಕ್ಸಿಡೆಂಟ್ ಆಯಿತು. ಇದರಿಂದ ನನ್ನ ಬಲಗೈ ಫ್ಯಾಕ್ಚರ್ ಆಗಿದೆ. ಇದನ್ನು ಸರಿ ಮಾಡಲು ಸರ್ಜರಿ ಅಗತ್ಯವಿದೆ ಎಂದಿದ್ದರು. ತಕ್ಷಣವೇ ಮುಂಬೈಗೆ ಆಗಮಿಸಿ ಚಿಕಿತ್ಸೆ ಪಡೆದಿದ್ದೇನೆ. ಸರ್ಜರಿ ನಡೆದಿದೆ ಹಾಗೂ ಪ್ಯಾಚಪ್ ಮಾಡಲಾಗಿದೆ. ಈಗ ನಾನು ಮತ್ತೆ ಚೆನ್ನೈಗೆ ಆಗಮಿಸಿರುವೆ, ಚಿತ್ರೀಕರಣ ಶುರು ಮಾಡುತ್ತಿರುವೆ. ಎಲ್ಲರೂ ಹೇಳುವ ಹಾಗೆ..The Show must go on! ಹಾಗೂ ನನ್ನ ತಂದೆ ಹೇಳುವ ಹಾಗೆ ಗಂಡಸರಿಗೆ ನೋವಾಗಲ್ಲ. ಸರಿ ಸರಿ ಸ್ವಲ್ಪ ನೋವಾಯಿತು,' ಎಂದು ಬರೆದುಕೊಂಡಿದ್ದಾರೆ.
ಅಭಿಷೇಕ್ ಬೇಗ ಗುಣಮುಖರಾಗಲಿ, ಎಂದು ನೆಟ್ಟಗರು ಹಾಗೂ ಸ್ನೇಹಿತರು ಕಾಮೆಂಟ್‌ನಲ್ಲಿ ಶುಭ ಹಾರೈಸಿದ್ದಾರೆ. ಸದ್ಯ ಬಾಬ್ ಬಿಸ್ವಾಸ್ ಮತ್ತು ದಸ್ವಿ ಸಿನಿಮಾ ಚಿತ್ರೀಕರಣದಲ್ಲಿ ಅಭಿಷೇಕ್ ಬ್ಯುಸಿಯಾಗಿದ್ದಾರೆ. ಆದರೆ ಚೆನ್ನೈನಲ್ಲಿ ಚಿತ್ರೀಕರಣ ನಡೆಯುತ್ತಿರುವ ಮೂರನೇ ಚಿತ್ರದ ಹೆಸರಿನ್ನೂ ರಿವೀಲ್ ಆಗಿಲ್ಲ. ಒಟಿಟಿಯಲ್ಲಿ ಬಿಡುಗಡೆಯಾದ ದಿ ಬಿಗ್ ಬುಲ್ ನಂತರ ಅಭಿಷೇಕ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಅಭಿಷೇಕ್ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿದೆ.