'ನೀವ್ ಮನಲಿ ಇರಿ, ಐಶ್ವರ್ಯಾಗೆ ಹೆಚ್ಚು ಸಿನಿಮಾ ಮಾಡಲು ಬಿಡಿ' ಎಂದ ಅಭಿಮಾನಿಗೆ ಅಭಿಷೇಕ್ ಹೇಳಿದ್ದು ಹೀಗೆ

Published : Apr 30, 2023, 02:33 PM IST
'ನೀವ್ ಮನಲಿ ಇರಿ, ಐಶ್ವರ್ಯಾಗೆ ಹೆಚ್ಚು ಸಿನಿಮಾ ಮಾಡಲು ಬಿಡಿ' ಎಂದ ಅಭಿಮಾನಿಗೆ ಅಭಿಷೇಕ್ ಹೇಳಿದ್ದು ಹೀಗೆ

ಸಾರಾಂಶ

'ನೀವು ಮನಲಿ ಇರಿ, ಐಶ್ವರ್ಯಾಗೆ ಹೆಚ್ಚು ಸಿನಿಮಾ ಮಾಡಲು ಬಿಡಿ' ಎಂದ ಅಭಿಮಾನಿಗೆ ಅಭಿಷೇಕ್ ಪ್ರತಿಕ್ರಿಯೆ ನೀಡಿದ್ದಾರೆ. 

ಮಾಜಿ ವಿಶ್ವ ಸುಂದರಿ, ಬಾಲಿವುಡ್ ಸ್ಟಾರ್ ನಟಿ ಐಶ್ವರ್ಯಾ ರೈ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  ಸದ್ಯ ಐಶ್ವರ್ಯಾ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.  ಮೊದಲ ಭಾಗದ ಸೂಪರ್ ಸಕ್ಸಸ್ ಬಳಿಕ ಪಾರ್ಟ್-2 ಮೂಲಕ ಮತ್ತೆ ಮೋಡಿ ಮಾಡುತ್ತಿದ್ದಾರೆ. ಪತಿ ಅಭಿಷೇಕ್ ಸಿನಿಮಾಗಿಂತ ಐಶ್ವರ್ಯಾ ರೈ ಸಿನಿಮಾಗಳು ಸಕ್ಸಸ್ ಕಾಣುತ್ತಿವೆ. ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡುತ್ತಿವೆ. ಈ ಬಗ್ಗೆ ಅಭಿಮಾನಿಯೊಬ್ಬರು ಮಾಡಿರುವ ಕಾಮೆಂಟ್ ವೈರಲ್ ಆಗಿದೆ. ಈ ಬಗ್ಗೆ ಸ್ವತಃ ಅಭಿಷೇಕ್ ಬಚ್ಚನ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಪೊನ್ನಿಯಿನ್ ಸೆಲ್ವನ್-2 ಸಿನಿಮಾದ ಬಗ್ಗೆ ನಟ ಅಭಿಷೇಕ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿ ಸಿನಿಮಾ ನೋಡಿ ವಿಮರ್ಶೆ ಮಾಡಿರುವ ಅಭಿಷೇಕ್ ಬಚ್ಚನ್ ಹಾಡಿಹೊಗಳಿದ್ದಾರೆ. ಅಭಿಷೇಕ್ ಟ್ವೀಟ್‌ಗೆ  ಕಾಮೆಂಟ್ ಮಾಡಿರುವ ವ್ಯಕ್ತಿಯೊಬ್ಬ ಐಶ್ವರ್ಯಾ ರೈ ಅವರಿಗೆ ಹೆಚ್ಚು ಸಿನಿಮಾ ಮಾಡುವ ಅವಕಾಶ ಕೊಡಿ ಎಂದು ಹೇಳಿದ್ದಾರೆ. 'ನೀವು ಮಗಳು ಆರಾಧ್ಯರನ್ನು  ನೋಡಿಕೊಳ್ಳಿ, ಐಶ್ವರ್ಯಾ ರೈ ಅವರಿಗೆ ಹೆಚ್ಚು ಸಿನಿಮಾ ಮಾಡಲು ಬಿಡಿ' ಎಂದು ಹೇಳಿದ್ದಾರೆ.  

ಅಭಿಷೇಕ್ ಮಾಡಿದ ಟ್ವೀಟ್ 

'PS2 (ಪೊನ್ನಿಯಿನ್ ಸೆಲ್ವನ್ 2) ಸರಳವಾಗಿ ಅದ್ಭುತವಾಗಿದೆ. ಪದಗಳಲ್ಲಿ ವರ್ಣಿಸಲು ಸಾಧ್ಯವಾಗುತ್ತಿಲ್ಲ. ಇಡೀ ತಂಡಕ್ಕೆ ಶುಭವಾಗಲಿ ಮಿಣಿರತ್ನಂ, ಚಿಯಾನ್ ವಿಕ್ರಮ್, ತ್ರಿಷಾ, ಜಯಂರವಿ, ಕಾರ್ತಿ ಮತ್ತು ಉಳಿದ ಎಲ್ಲಾ ಕಲಾವಿದರಿಗೂ ಹಾಗು ನನ್ನ ಶ್ರೀಮತಿ ಬಗ್ಗೆ ತುಂಬಾ ಹೆಮ್ಮೆ ಇದೆ' ಎಂದು ಹೇಳಿದ್ದಾರೆ. 

ಅಭಿಮಾನಿಯ ಕಾಮೆಂಟ್

ಅಭಿಷೇಕ್ ಬಚ್ಚನ್ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ ವ್ಯಕ್ತಿಯೊಬ್ಬರು, 'ಈಗ ಐಶ್ವರ್ಯಾ ರೈ ಇನ್ನಷ್ಟು ಸಿನಿಮಾಗಳಿಗೆ ಸಹಿ ಮಾಡಲಿ ಮತ್ತು ನೀವು ಆರಾಧ್ಯ ಅವರನ್ನು ನೋಡಿಕೊಳ್ಳಿ' ಎಂದು ಹೇಳಿದ್ದಾರೆ. ಇದಕ್ಕೆ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ. 

ಐಶ್ವರ್ಯಾ ರೈ ಮತ್ತು ಅಭಿಷೇಕ್ ನಡುವೆ ಬಿರುಗಾಳಿ ಎದ್ದಿದ್ಯಾ? ನಿಜಕ್ಕೂ ಏನ್ ನಡೀತಿದೆ..

ಅಭಿಷೇಕ್ ಕೊಟ್ಟ ಉತ್ತರ 

'ಅವಳು ಸಿನಿಮಾಗೆ ಸಹಿ ಮಾಡಲಿ ಸರ್. ಆಕೆಗೆ ಏನ್ ಮಾಡಲು ನನ್ನ ಅನುಮತಿ ಬೇಕಾಗಿಲ್ಲ. ವಿಶೇಷವಾಗಿ ಅವಳು ಪ್ರೀತಿಸುವ ವಿಷಯದಲ್ಲಿ' ಎಂದು ಹೇಳಿದ್ದಾರೆ. ಅಭಿಷೇಕ್ ಅವರ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿದೆ. ತುಂಬಾ ಉತ್ತಮವಾದ ಪ್ರತಿಕ್ರಿಯೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ಅನೇಕರು ನೀವಿಬ್ಬರು ಒಟ್ಟಿಗೆ ಸಿನಿಮಾ ಮಾಡಿ ಎಂದು ಹೇಳುತ್ತಿದ್ದಾರೆ.

ಸಲ್ಮಾನ್ ಖಾನ್ ಜೊತೆ ಸಂಬಂಧ ಕೆಟ್ಟ ಕನಸಿನಂತೆ: ಐಶ್ವರ್ಯಾ ರೈ

ಅಭಿಷೇಕ್ ಮತ್ತು ಐಶ್ವರ್ಯಾ ರೈ  2007 ರಲ್ಲಿ ವಿವಾಹವಾದರು. 2011 ರಲ್ಲಿ ಮಗಳು ಆರಾಧ್ಯ ಅವರನ್ನು ಸ್ವಾಗತಿಸಿದರು. ಈ ಸ್ಟಾರ್ ಜೋಡಿ ಗುರು, ಧೂಮ್ 2, ರಾವನ್ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮಗುವಿಗೆ ಜನ್ಮ ನೀಡಿದ ಬಳಿಕ ಐಶ್ವರ್ಯಾ ರೈ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡರು. ಬಳಿಕ ಕೆಲವೇ ಕೆಲವು ಸಿನಿಮಾಗಳಲ್ಲಿ ಐಶ್ವರ್ಯಾ ನಟಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಿನಿಮಾ ಮಾಡುತ್ತಾರಾ ಕಾದುನೋಡಬೇಕಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?