
ಇತ್ತೀಚೆನ ದಿನಗಳಲ್ಲಿ ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ ಎನ್ನುವುದು ಸಿನಿಮಾತಂಡದವರ ದೊಡ್ಡ ಅಳಲು. ಜನರನ್ನು ಚಿತ್ರಮಂದಿರಕ್ಕೆ ಕರೆತರುವುದು ದೊಡ್ಡ ಸವಾಲಾಗಿದೆ. ಕೆಲವೇ ಕೆಲವು ಸಿನಿಮಾಗಳು ಮಾತ್ರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಬಹುತೇಕ ಸಿನಿಮಾಗಳು ಸೋಲು ಕಾಣುತ್ತಿವೆ. ಇದು ಕೇವಲ ಸ್ಯಾಂಡಲ್ ವುಡ್ ಅಂತಲ್ಲ ಎಲ್ಲಾ ಭಾಷೆಯ ಸಿನಿಮಾಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಬಹುಕೋಟಿ ವೆಚ್ಚದಲ್ಲಿ ತಯಾರಿಸಿದ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದೆ. ಸಿನಿಮಾ ಸೋಲಿಗೆ ಕಾರಣ ಏನು ಎಂದು ಒಬ್ಬೊಬ್ಬರು ಒಂದೊಂದು ಕಾರಣ ನೀಡುತ್ತಾರೆ. ಅಚ್ಚರಿ ಎಂದರೆ ತೆಲುಗಿನ ಖ್ಯಾತ ನಿರ್ದೇಶಕ ತೇಜ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಅವರ ಪ್ರಕಾರ ಸಿನಿಮಾಗಳು ಸೋಲಲು ಪಾಪ್ಕಾರ್ನ್ ಕಾರಣವಂತೆ. ಈ ಬಗ್ಗೆ ನಿರ್ದೇಶಕ ತೇಜ ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ.
ಟಾಲಿವುಡ್ ನಿರ್ದೇಶಕ ತೇಜ ಸಿನಿಮಾ ಸೋಲಿನ ಬಗ್ಗೆ ಮಾತನಾಡಿದ್ದಾರೆ. 2000ರಿಂದ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ತೇಜ ಸಾಕಷ್ಟು ಅನುಭವ ಹೊಂದಿರುವ ನಿರ್ದೇಶಕ. ಸದ್ಯ ನಟ ಗೋಪಿಚಂದ್ ನಟನೆಯ ರಾಮ ಬಾಣಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆ ಸಲುವಾಗಿ ಗೋಪಿಚಂದ್ ಅವರನ್ನು ತೇಜ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನದಲ್ಲಿ ಪಾಪ್ಕಾರ್ನ್ ವಿಚಾರ ಪ್ರಸ್ತಾಪ ಆಗಿದೆ.
ಮಲ್ಟಿಪ್ಲೆಕ್ಸ್ಗಳಲ್ಲಿ ಎಲ್ಲದರ ಬೆಲೆಯೂ ದುಬಾರಿ ಆಗಿರುತ್ತದೆ. ಪಾರ್ಕಿಂಗ್, ಪಾನೀಯ, ತಿಂಡಿ-ತಿನಿಸು.. ಹೀಗೆ ಎಲ್ಲದಕ್ಕೂ ಹೆಚ್ಚುವರಿ ಹಣ ನೀಡಬೇಕು. ಇದು ಸಾಮಾನ್ಯ ಪ್ರೇಕ್ಷಕರಿಗೆ ಹೊರೆ ಆಗುತ್ತಿದೆ. ಹೊರಗಿನ ಆಹಾರವನ್ನು ತಂದು ತಿನ್ನಲು ಕೂಡ ಮಲ್ಟಿಪ್ಲೆಕ್ಸ್ಗಳಲ್ಲಿ ಅವಕಾಶ ಇಲ್ಲ. ಈ ವಿಚಾರಗಳ ಕುರಿತಾಗಿ ನಿರ್ದೇಶಕ ತೇಜ ಮಾತನಾಡಿದ್ದಾರೆ.
ನಿರ್ದೇಶಕ ತೇಜ ಹೇಳಿದ್ದೇನು?
‘ಮಲ್ಟಿಪ್ಲೆಕ್ಸ್ಗಳಲ್ಲಿ ಕೋಕ್ ಮತ್ತು ಪಾಪ್ಕಾರ್ನ್ ಬೆಲೆ ಜನಸಾಮಾನ್ಯರ ಕೈಗೆ ಎಟುಕುತ್ತಿಲ್ಲ. ನಾನು ಕೋಕ್ ಮತ್ತು ಸಮೋಸಾ ಜೊತೆ ಸಿನಿಮಾ ನೋಡುತ್ತೇನೆ. ಮುಂಬೈನಲ್ಲಿ ಹಿಂದಿ ಸಿನಿಮಾಗಳನ್ನು ಸಾಯಿಸಿದ್ದು ಒಟಿಟಿ ಅಥವಾ ಟಿವಿ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಸಿನಿಮಾ ಸಾಯಲು ನಿಜವಾದ ಕಾರಣ ಪಾಪ್ ಕಾರ್ನ್’ ಎಂದು ತೇಜ ಹೇಳಿದ್ದಾರೆ.
ಹಾಲಿವುಡ್‌ನಿಂದ Jr.NTRಗೆ ಬಂತು ದೊಡ್ಡ ಆಫರ್: RRR ಸ್ಟಾರ್ ಜೊತೆ ಕೆಲಸ ಮಾಡಬೇಕೆಂದ ಖ್ಯಾತ ನಿರ್ದೇಶಕ
‘ತೆಲುಗು ಸಿನಿಮಾಗಳನ್ನು ಪಾಪ್ಕಾರ್ನ್ ಕೊಂದಿಲ್ಲ. ಯಾಕೆಂದರೆ ನಮ್ಮಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಾಕಷ್ಟಿವೆ. ಎಲ್ಲರೂ ಇಂಥ ಚಿತ್ರಮಂದಿರಕ್ಕೆ ಹೋಗಬೇಕು ಎಂದು ನಾನು ಸಲಹೆ ನೀಡುತ್ತೇನೆ. ಇಂಥ ಕಡೆಗಳಲ್ಲಿ ಪರದೆ ದೊಡ್ಡದಾಗಿರುತ್ತದೆ. ಹೆಚ್ಚು ಮಲ್ಟಿಪ್ಲೆಕ್ಸ್ಗಳು ಇರುವ ಕಡೆಗಳಲ್ಲಿ ಸಿನಿಮಾ ಯಶಸ್ಸು ಕಾಣುವುದಿಲ್ಲ. ಪಾಪ್ಕಾರ್ನ್ ಇಲ್ಲದೇ ನಾವು ಸಿನಿಮಾವನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ ತೇಜ.
'ಬಾಹುಬಲಿ'ಯ ದೊಡ್ಡ ಸಕ್ಸಸ್ ಯಾರು ನಿರೀಕ್ಷಿಸಿರಲಿಲ್ಲ; ಸಮಂತಾ 'ಶಾಕುಂತಲಂ' ಸೋಲಿಗೆ ನಟಿ ಮಧೂ ರಿಯಾಕ್ಷನ್
ಮಲ್ಟಿಫ್ಲೆಕ್ಸ್ ಧೋರಣೆ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದರು. ಸಿನಿಮಾ ಪ್ರೇಕ್ಷಕರು ಕೂಡ ಈ ಬಗ್ಗೆ ಮಾತನಾಡಿದ್ದರು. ಕುಟುಂಬ ಸಮೇತರಾಗಿ ಮಲ್ಟಿಫ್ಲೆಕ್ಸ್ ಗೆ ಹೋಗಿ ಸಿನಿಮಾ ವೀಕ್ಷಿಸಲು ತುಂಬಾ ದುಬಾರಿ ಆಗುತ್ತೆ ಎನ್ನುವುದು ಅನೇಕರ ಮಾತು. ಇದೇ ಮಾತನ್ನು ನಿರ್ದೇಶಕ ತೇಜ ಕೂಡ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.