ಮದ್ವೆ ಎಂಟ್ರಿ ಅಂದ್ರೆ ಇದಪ್ಪಾ...! ಮದುಮಕ್ಕಳನ್ನು ಬಿಟ್ಟು ಅಂಬಾನಿ ದಂಪತಿಯನ್ನೇ ನೋಡಿದ ಅತಿಥಿಗಳು!

Published : Jan 04, 2024, 05:38 PM IST
 ಮದ್ವೆ ಎಂಟ್ರಿ ಅಂದ್ರೆ ಇದಪ್ಪಾ...!  ಮದುಮಕ್ಕಳನ್ನು ಬಿಟ್ಟು ಅಂಬಾನಿ ದಂಪತಿಯನ್ನೇ ನೋಡಿದ ಅತಿಥಿಗಳು!

ಸಾರಾಂಶ

ಆಮೀರ್​ ಖಾನ್​ ಪುತ್ರಿ ಇರಾ ಖಾನ್​ ಮದ್ವೆ ದಿನ ಮುಕೇಶ್​ ಮತ್ತು ನೀತಾ ಅಂಬಾನಿ ಭರ್ಜರಿ ಎಂಟ್ರಿ ಕೊಟ್ಟಿದ್ದು, ಎಂಟ್ರಿ ಅಂದ್ರೆ ಹೀಗಿರಬೇಕಪ್ಪಾ ಅಂತಿದ್ದಾರೆ ಫ್ಯಾನ್ಸ್​. ಅದರ ವಿಡಿಯೋ ವೈರಲ್​ ಆಗಿದೆ.  

ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದ ಆಮೀರ್​ ಖಾನ್​ ಪುತ್ರಿ ನಟಿ ಇರಾ ಖಾನ್​ ಹಾಗೂ ಅವರ ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ನಿನ್ನೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಇಷ್ಟು ವರ್ಷ ಸುತ್ತಾಟ, ಸಂಬಂಧ, ಡೇಟಿಂಗ್​ ಎಂದೆಲ್ಲಾ ಓಡಾಡಿಕೊಂಡು ಇದ್ದ ಜೋಡಿಗೆ ಇದೀಗ ಅಧಿಕೃತವಾಗಿ ಮದುವೆ ಎನ್ನುವ ಮುದ್ರೆ ಬಿದ್ದಾಗಿದೆ. ಈ ಭರ್ಜರಿ ಕಾರ್ಯಕ್ರಮದಲ್ಲಿ ಹಲವಾರು ವಿಶೇಷತೆಗಳು ನಡೆದಿದ್ದು, ಅದರ ವಿಡಿಯೋಗಳು ಒಂದೊಂದಾಗಿ ವೈರಲ್​ ಆಗುತ್ತಿವೆ. ಮದುಮಗ ಬನಿಯನ್​ ಮತ್ತು ಚಡ್ಡಿಯ ಮೇಲೆ ಇದ್ದರೆ, ಮದುಮಗಳು ಕೊನೆಯ ಕ್ಷಣದವರೆಗೂ ಮಿನಿ ಸ್ಕರ್ಟ್​ ತೊಟ್ಟು ಇದ್ದ ವಿಡಿಯೋಗಳು ಥಹರೇವಾರಿ ಕಮೆಂಟ್​ಗಳೊಂದಿಗೆ ವೈರಲ್​ ಆಗುತ್ತಿದ್ದರೆ, ಮದುವೆಗೆ ಎಂಟ್ರಿ ಕೊಟ್ಟ ಅತಿಥಿಗಳ ವಿಡಿಯೋ ಈಗ ಒಂದೊಂದೇ ಹೊರಬೀಳುತ್ತಿವೆ.

ಇವೆಲ್ಲವುಗಳಲ್ಲಿ ಭಾರಿ ಗಮನ ಸೆಳೆದದ್ದು ಮುಕೇಶ್​ ಮತ್ತು ನೀತಾ ಅಂಬಾನಿಯವರ ಆಗಮನ. ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾಗಿರುವ ಈ ಜೋಡಿಯ ಎಂಟ್ರಿ ಎಂದರೆ ಸುಮ್ಮನೇನಾ? ಭಾರಿ ಭದ್ರತೆ ಇರುತ್ತದೆ. ಹಿಂದೆ-ಮುಂದೆ ಹತ್ತಾರು ರಕ್ಷಣಾ ಕಾರುಗಳು, ಬಿಗಿ ಬಂದೋಬಸ್ತ್​ ನಡುವೆ ಇವರ ಎಂಟ್ರಿಯಾಗುವುದು ಸಹಜ. ಅದೇ ರೀತಿ ನಿನ್ನೆ ಮುಕೇಶ್​ ಮತ್ತು ನೀತಾ ಅಂಬಾನಿ ದಂಪತಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಹತ್ತಾರು ಕಾರುಗಳು ಸೈರನ್​  ಮಾಡುತ್ತಾ ಬರುತ್ತಿದ್ದರೆ, ಬಂದಿದ್ದ ಅತಿಥಿಗಳು ಮದುಮಕ್ಕಳನ್ನು ಬಿಟ್ಟು ಇವರ ಎಂಟ್ರಿಯನ್ನು ಕಣ್ತುಂಬಿಸಿಕೊಂಡರು. ಇದರ ವಿಡಿಯೋ ಈಗ ವೈರಲ್​  ಆಗಿದೆ. ಮದ್ವೆಯ ಎಂಟ್ರಿ ಎಂದರೆ ಹೀಗಿರಬೇಕು. ಜನರು ಮದುಮಕ್ಕಳನ್ನು ಬಿಟ್ಟು ನಿಮ್ಮನ್ನು ನೋಡುವಂತಿರಬೇಕು ಎಂದು ಕ್ಯಾಪ್ಷನ್​ ನೀಡಲಾಗಿದ್ದು, ಅಂಬಾನಿ ದಂಪತಿಯ ಸಿನಿಮೀಯ ರೀತಿಯ ಎಂಟ್ರಿಯ ವಿಡಿಯೋ ಹಾಕಲಾಗಿದೆ. 

ಮಗಳ ಮದ್ವೆ ದಿನ ಆಮೀರ್​ ಖಾನ್​ ಕಿಸ್​ ಕೊಟ್ರೆ ಗುಟ್ಟಾಗಿ ​ಕೆನ್ನೆ ಒರೆಸಿಕೊಂಡ ಮಾಜಿ ಪತ್ನಿ! ಕ್ಯಾಮೆರಾ ಕಣ್ಣಿಗೆ ಬೀಳದೇ ಇರುತ್ತಾ?

ಇದೇ ವೇಳೆ, ಮದುವೆ ಮನೆಯಲ್ಲಿ ಗಮನ ಸೆಳೆದದ್ದು ಆಮೀರ್​ ಖಾನ್​ ಅವರ ಇಬ್ಬರು ಮಾಜಿ ಪತ್ನಿಯರು.  ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ಅವರ ಪುತ್ರಿ ಇರಾ ಖಾನ್​ ಮದ್ವೆಯಾಗಿದ್ದರೆ, ದ್ವಿತೀಯ ಪತ್ನಿ ಕಿರಣ್​ ರಾವ್​ ಕೂಡ ಗಮನ ಸೆಳೆದರು.  ಇರಾ ಖಾನ್​ ನಟ ಆಮೀರ್​ ಖಾನ್​ ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ.  ಅಂದಹಾಗೆ ಆಮೀರ್​ ಖಾನ್​ ಅವರು ಎರಡನೆಯ ಪತ್ನಿಯೂ ವಿಚ್ಛೇದನ ನೀಡಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್​ 2005ರಲ್ಲಿ ಕಿರಣ್​ ರಾವ್​ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್​ ಕೊಟ್ಟಿದ್ದಾರೆ. ಇದೀಗ ಮಗಳ ಮದುವೆಗೆ ಮೊದಲ ಪತ್ನಿ  ಕಿರಣ್​ ಕೂಡ ಹಾಜರಾಗಿದ್ದಾರೆ.  ಇರಾ ಖಾನ್​ ಸ್ಟಾರ್​ ಕಿಡ್​ ಆಗಿದ್ದರೂ ಬಣ್ಣದ ಲೋಕದಿಂದ ದೂರ ಉಳಿದು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. 

ಇನ್ನು ನೂಪುರ್ ಶಿಖರೆ ಕುರಿತು ಹೇಳುವುದಾದರೆ, ಅವರು 17 ವರ್ಷದವರಾಗಿದ್ದಾಗಲೇ ಜಿಮ್ನಲ್ಲಿ ಟ್ರೈನರ್ ಆಗಿ ಕೆಲಸ ಮಾಡಲು ಶುರುಮಾಡಿದ್ರು. ಶಿಕ್ರೆ ಫಿಟ್​ನೆಸ್​ಗೆ ಇರಾ ತುಂಬಾ ಪ್ರಭಾವಿತರಾಗಿದ್ದರು ಮತ್ತು ಅವರನ್ನು ಸೂಪರ್ ಫಿಟ್ ಮನುಷ್ಯ ಎಂದು ಕರೆದಿದ್ದಾರೆ. ಜಿಮ್​ನಲ್ಲಿ ಭೇಟಿಯಾದ ಈ ಜೋಡಿ ಸ್ನೇಹಿತರಾದರು ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರ ಲವ್ ಬಗ್ಗೆ ತಿಳಿದ ಬಳಿಕ ಆಮೀರ್ ಖಾನ್ ಮದುವೆಗೆ ಹಸಿರು ನಿಶಾನೆ ತೋರಿದ್ದು ಇದೀಗ ಮದುವೆ ಆಗಿದೆ. 

ಆಮೀರ್​ ಪುತ್ರಿ ಇರಾಗೆ ಮದ್ವೆ ದಿನನೇ ಆಂಟಿ ಶಾಕ್! ಈ ರೀತಿ ವೇಷ ಮಾಡ್ಕೊಂಡ್ರೆ ಇನ್ನೇನ್​ ಆಗತ್ತೆ ಕೇಳಿದ ನೆಟ್ಟಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇಂದು ರಶ್ಮಿಕಾ-ವಿಜಯ್‌ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ
ತೆರೆ ಮೇಲೆ ಮುದ್ದಾದ ಸಂಸಾರ, ರಿಯಲ್‌ ಆಗಿ ಮದುವೆಗೂ ಮುನ್ನವೇ ಸಹಜೀವನ: ಲಿವ್‌ ಇನ್‌ನಲ್ಲಿದ್ದ ಸೆಲೆಬ್ರಿಟಿಗಳು