ಸೌತ್ ಸೂಪರ್ ಹಿಟ್ ಸಿನಿಮಾದ ರಿಮೇಕ್‌ನಲ್ಲಿ ಆಮೀರ್ ಖಾನ್ ಪುತ್ರ; ಇಲ್ಲಿದೆ ಮಾಹಿತಿ

Published : Mar 24, 2023, 04:43 PM ISTUpdated : Mar 24, 2023, 04:46 PM IST
ಸೌತ್ ಸೂಪರ್ ಹಿಟ್ ಸಿನಿಮಾದ ರಿಮೇಕ್‌ನಲ್ಲಿ ಆಮೀರ್ ಖಾನ್ ಪುತ್ರ; ಇಲ್ಲಿದೆ ಮಾಹಿತಿ

ಸಾರಾಂಶ

ಸೌತ್ ಸೂಪರ್ ಹಿಟ್ ಸಿನಿಮಾದ ರಿಮೇಕ್‌ನಲ್ಲಿ ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ವೈರಲ್ ಆಗಿದೆ.  

ಬಾಲಿವುಡ್‌ಗೆ ಸ್ಟಾರ್ ಕಿಡ್ಸ್ ಎಂಟ್ರಿ ಕೊಡುತ್ತಿದ್ದಾರೆ. ಶಾರುಖ್ ಮಕ್ಕಳು, ಕಾಜೋಲ್ ಮಗಳು, ಸೈಫ್ ಮಕ್ಕಳು ಸೇರಿದಂತೆ ಅನೇಕ ಸ್ಟಾರ್ ಕಲಾವಿದರ ಮಕ್ಕಳು ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದೀಗ ಮತ್ತೋರ್ವ ಸ್ಟಾರ್ ಆಮೀರ್ ಖಾನ್ ಪುತ್ರನ ಸರದಿ. ಆಮೀರ್ ಖಾನ್ ಮಗ ಜುನೈದ್ ಖಾನ್ ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಅದು ಸೌತ್ ಸೂಪರ್ ಹಿಟ್ ಸಿನಿಮಾದ ರಿಮೇಕ್ ಮೂಲಕ ಎನ್ನುವ ಮಾತು ಕೇಳಿಬರುತ್ತಿದೆ. ದಕ್ಷಿಣ ಭಾರತದ ಅನೇಕ ಸಿನಿಮಾಗಳು ಬಾಲಿವುಡ್‌ಗೆ ರಿಮೇಕ್ ಆಗಿವೆ. ಕೆಲವು ಸಕ್ಸಸ್ ಕಂಡರೇ ಇನ್ನೂ ಕೆಲವು ಫ್ಲಾಪ್ ಆಗಿವೆ. ತಮಿಳು ಮತ್ತು ತೆಲುಗಿನ ಅನೇಕ ಸಿನಿಮಾಗಳು ಹಿಂದೆಗೆ ರಿಮೇಕ್ ಆಗಿವೆ, ಈಗಲೂ ರಿಮೇಕ್ ಆಗುತ್ತಿವೆ. ಇದೀಗ ಆಮೀರ್ ಖಾನ್ ಪುತ್ರ ಕೂಡ ರಿಮೇಕ್ ಮೂಲಕ ಮಿಂಚಲು ಸಜ್ಜಾಗಿದ್ದಾರೆ ಎನ್ನಲಾಗಿದೆ. 

ಅಷ್ಟಕೂ ಅಮೀರ್ ಪುತ್ರ ಜುನೈದ್ ನಟಿಸಲು ಮುಂದಾರಿವು ಸಿನಿಮಾ ತಮಿಳಿನ ಸೂಪರ್ ಹಿಟ್ 'ಲವ್ ಟುಡೇ' ಸಿನಿಮಾ ಮೂಲಕ. ಲವ್ ಟುಡೇ ಸಿನಿಮಾದ ರಿಮೇಕ್ ಹಕ್ಕು ಈಗಾಗಲೇ ಬಾಲಿವುಡ್‌ಗೆ ಸೋಲ್ಡ್ ಆಗಿದೆ. ಲವ್ ಟುಡೇ ಹಿಂದಿ ರಿಮೇಕ್‌ಗೆ ಆಮೀರ್ ಖಾನ್ ಪುತ್ರ ಜುನೈದ್ ಫೈನಲ್ ಆಗಿದ್ದಾರೆ ಎನ್ನಲಾಗಿದೆ.  ಹಿಂದಿಯ ಫ್ಯಾಂಟಮ್ ಫಿಲ್ಮ್ಸ್ ಲವ್ ಟುಡೇ ಹಕ್ಕು ಖರೀದಿಸಿದ್ದು ಜುನೈದ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.  

ಲವ್ ಬ್ರೇಕ್ ಅಪ್ ಆಗಿದ್ದಕ್ಕೆ ಆಮೀರ್ ತಲೆ ಬೋಳಿಸಿಕೊಂಡಿದ್ರಾ? ಏನಿದು ಘಟನೆ?

ಆಂಗ್ಲ ಮಾಧ್ಯಮಕ್ಕೆ ಮೂಲಗಳು ಮಾಹಿತಿ ನೀಡಿದ್ದು, ಈ ಸಿನಿಮಾಗಾಗಿ ಜುನೈದ್ ಅವರನ್ನು ಸಂಪರ್ಕ ಮಾಡಲಾಗಿದೆ. ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಿದ್ದಾರೆ. ಕೆಲವೇ ದಿನಗಳ ಮೊದಲು ನಿರ್ಮಾಪಕರಾದ ಅರ್ಚನಾ ಕಲಾಪತಿ ಲವ್ ಟು ಡೇ ಹಿಂದಿ ರಿಮೇಕ್ ಬಗ್ಗೆ ಮಾಹಿತಿ ನೀಡಿದ್ದರು. ಫ್ಯಾಂಟಮ್ ಫಿಲ್ಮ್ಸ್ ನ ಸಹಾಯೋಗದೊಂದಿಗೆ ಹಿಂದಿಗೆ ರಿಮೇಕ್ ಮಾಡುತ್ತಿರುವುದಾಗಿ ಹೇಳಿದ್ದರು. ಅಂದಹಾಗೆ ಆಮೀರ್ ಖಾನ್ ಪುತ್ರ ಈಗಾಗಲೇ ಯಶ್ ರಾಜ್ ಫಿಲ್ಮ್ಸ್‌ನ ಮಹಾರಾಜ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಆದರೆ ಇನ್ನೂ ಈ ಸಿನಿಮಾ ರಿಲೀಸ್ ಆಗಿಲ್ಲ. ಈ ಸಿನಿಮಾದಲ್ಲಿ ಶಾರ್ವರಿ ವಾಘ್, ಶಾಲಿನಿ ಪಾಂಡೆ ಮತ್ತು ಜೈದೀಪ್ ಅಹ್ಲಾವತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿದ್ದಾರ್ಥ್ ಮಲ್ಹೇತ್ರಾ ನಿರ್ದೇಶನ ಮಾಡಿದ್ದಾರೆ. 

12 ದಿನ ಸ್ನಾನವೇ ಮಾಡಿರ್ಲಿಲ್ಲವಂತೆ ಆಮೀರ್ ಖಾನ್? ಹುಟ್ಟಿದಬ್ಬದಂದು ರಿವೀಲ್ ಆಯ್ತು ಸತ್ಯ

ಲವ್ ಟುಡೇ ಸಿನಿಮಾದ ಬಗ್ಗೆ  

ಲವ್ ಟುಡೇ ತಮಿಳು ಸಿನಿಮಾಗಾದಿದ್ದು ಪ್ರದೀಪ್ ರಂಗನಾಥನ್ ಮತ್ತು ಇವಾನಾ ಪ್ರಮುಕ ಪಾತ್ರದಲ್ಲಿ ನಟಿಸಿದ್ದಾರೆ. ಪ್ರದೀಪ್ ರಂಗನಾಥನ್ ಅವರೇ ನಿರ್ದೇಶನ ಮಾಡಿದ್ದಾರೆ.  ಪ್ರೇಮಿಗಳಿಬ್ಬರ ಫೋನ್ ಬದಲಾಯಿಸಿದಾಗ  ಎದುರಿಸುವ ಸವಾಲುಗಳ ಸುತ್ತಈ ಸಿನಿಮಾವಿದೆ. ಈ ಸಿನಿಮಾ 2022 ರಲ್ಲಿ ರಿಲೀಸ್ ಆಯಿತು. 5 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಹಿಂದಿಲ್ಲೂ ಭರ್ಜರಿ ಸಕ್ಸಸ್ ಕಾಣುತ್ತಾ ಕಾದು ನೋಡಬೇಕಿದೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 ವರ್ಷದ ಮಗಳಿಗೆ 'ನಿನ್ನ ಲವ್ವರ್ ಹೀಗೆ ಇರಬೇಕು, ಆಣೆ ಮಾಡು' ಎಂದ ಖ್ಯಾತ ನಟ;‌ ಕಂಡೀಷನ್‌ ಕೇಳಿ ಅನೇಕರಿಂದ ಛೀಮಾರಿ
'ವಾರಣಾಸಿ' ಸಿನಿಮಾ ಶೂಟಿಂಗ್ ನೋಡಲು ಅವತಾರ್ ಖ್ಯಾತಿಯ ಜೇಮ್ಸ್ ಕ್ಯಾಮರೂನ್ ಆಸಕ್ತಿ: ಆದ್ರೆ ರಾಜಮೌಳಿ ಹೇಳಿದ್ದೇನು?