ಧನುಷ್ 'ಓಂ' ಸಿನಿಮಾ ಹೇಗಿದೆ? ಮಮ್ಮುಟ್ಟಿ, ಶ್ರೀಲೀಲಾ, ಸಾಯಿ ಪಲ್ಲವಿ ಅಭಿನಯದ ಬಗ್ಗೆ ಫಸ್ಟ್ ರಿವ್ಯೂ ಬಂತು ನೋಡಿ!

Ravi Janekal   | ANI
Published : Nov 20, 2026, 12:06 PM ISTUpdated : Nov 20, 2026, 12:16 PM IST
OM movie Public review

ಸಾರಾಂಶ

ಧನುಷ್, ಸಾಯಿ ಪಲ್ಲವಿ ಮತ್ತು ಮಮ್ಮುಟ್ಟಿ ಅಭಿನಯದ 'ಓಂ' ಸಿನಿಮಾ ಇಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ದ್ವಿತೀಯಾರ್ಧದ ಭರ್ಜರಿ ಆಕ್ಷನ್ ದೃಶ್ಯಗಳು ಹಾಗೂ ಸಾಯಿ ಅಭ್ಯಂಕರ್ ಸಂಗೀತಕ್ಕೆ ಜನಮನ್ನಣೆ ದೊರೆತಿದೆ.

ಕಾಲಿವುಡ್ ಸ್ಟಾರ್ ಧನುಷ್ ಅವರ ಆಕ್ಷನ್ ಎಂಟರ್‌ಟೈನರ್ 'ಓಂ(OM)' ಇಂದು ಬಿಡುಗಡೆಯಾಗಿದ್ದು ಪ್ರೇಕ್ಷರಿಂದ ಉತ್ತಮ ಪ್ರತಿಕ್ರಿಯೆ ಬರಲಾರಂಭಿಸಿವೆ. ಓಂ ಸಿನಿಮಾ ಕುರಿತಂತೆ ಪ್ರೇಕ್ಷಕರು ಕೂತುಹಲದಿಂದ ಕಾಯುತ್ತಿದ್ದರು. ಬಿಗ್ ಆಕ್ಷನ್ ಎಂಟರ್‌ಟೈನರ್ ಪ್ಯಾನ್‌ ಇಂಡಿಯಾ ಚಿತ್ರವಾಗಿರುವ 'ಓಂ' ನಲ್ಲಿ ಧನುಷ್ ಪ್ರಮುಖ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಈ ಚಿತ್ರದಲ್ಲಿ ರಾಮಾಯಣದ ಸೀತೆ ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ನಾಯಕಿಯರಾಗಿ ನಟಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ಮಲಯಾಳಂ ಸ್ಟಾರ್ ಹೀರೋ ಮಮ್ಮುಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂದು (ನ.20,ಶುಕ್ರವಾರ) ಬಿಡುಗಡೆಯಾಗಿರುವ ಈ ಚಿತ್ರದ ಬಗ್ಗೆ ನೆಟಿಜನ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಧನುಷ್ ಅವರ ಹೊಸ ಚಿತ್ರ ಹೇಗಿದೆ? ಸಾರ್ವಜನಿಕ ಚರ್ಚೆ ಏನು? ಎಂದು ತಿಳಿಯಲು ಕುತೂಹಲವೇ?

ಭರ್ಜರಿ ಎಂಟರ್‌ಟೈನರ್, ಆಕ್ಷನ್..

ಓಂ ಸಿನಿಮಾದ ಮೊದಲಾರ್ಧದಲ್ಲಿ ಯಾವುದೇ ಅರ್ಭಟವಿಲ್ಲದೆ ಶಾಂತವಾಗಿ ಸಾಗುತ್ತದೆ, ದ್ವಿತೀಯಾರ್ಧದಲ್ಲಿ ಪವರ್ ಪ್ಯಾಕ್ಡ್ ಆಕ್ಷನ್ ಭರ್ಜರಿ ಇವೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಪಾತ್ರ ಮಾತ್ರ ಅದ್ಭುತವಾಗಿದೆ ಎಂದು ವಿಮರ್ಶೆಗಳು ಹೇಳುತ್ತಿವೆ... ಸಾಯಿ ಪಲ್ಲವಿ ನಟನೆ ಸೂಪರ್. ಈ ಚಿತ್ರದೊಂದಿಗೆ ಧನುಷ್ ಪೂರ್ಣ ಪ್ರಮಾಣದಲ್ಲಿ ನಟಿಸಿ ತಮ್ಮ ನಟನಾ ಸಾಮರ್ಥ್ಯ ತೋರಿಸಿದ್ದಾರೆ ಎಂದು ಮಾಸ್ ಪ್ರೇಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಸಾಯಿ ಅಭ್ಯಂಕರ್ ಅವರ ಸಂಗೀತವನ್ನು ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಹೊಗಳಿದ್ದಾರೆ.

ಧನುಷ್ ತಮ್ಮ ವಂಡರ್‌ಬಾರ್ ಕಂಪನಿಯ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವು ಶ್ರೀಗಂಧದ ಕಳ್ಳಸಾಗಣೆ ಕುರಿತು ಕಥೆ ಹೊಂದಿದೆ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ 6 ಗಂಟೆಗೆ ಬಿಡುಗಡೆಯಾಗಿರುವ ಈ ಸಿನಿಮಾವು ಥಿಯೇಟರ್‌ಗಳಲ್ಲಿ ಪ್ರೇಕ್ಷಕರಿಂದ ತುಂಬಿರುವುದು ಮೊದಲ ಗೆಲುವು ಆಗಿದೆ. ಥಿಯೇಟರ್‌ಗಳಲ್ಲಿ ಹಾಡುಗಳಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿರುವ ವಿಡಿಯೋಗಳು ಸಹ ಸಿನಿಮಾ ಸಕತ್ ಎಂಟರ್‌ಟ್ರೇನ್‌ಮೆಂಟ್ ಆಗಿದೆ ಎಂಬುದನ್ನ ತೋರಿಸುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

1984ರಲ್ಲಿ ತೆರೆಗೆ ಬಂದಿದ್ದ 'ಶರಾಬಿ'ಯಲ್ಲಿ ನಿಜವಾಗಿಯೂ ಡ್ರಿಂಕ್ಸ್‌ ಮಾಡಿದ್ರಾ ಅಮಿತಾಭ್ ಬಚ್ಚನ್? ರಹಸ್ಯ ಇಲ್ಲಿದೆ!
'ರಾಮಾಯಣ' ಸುನಾಮಿ: 2 ವಾರದಲ್ಲಿ 20 ದಾಖಲೆ ಉಡೀಸ್; ರಣಬೀರ್-ಯಶ್ ಕಾಂಬಿನೇಷನ್ ಸೂಪರ್ ಹಿಟ್!