
ಚಿತ್ರ ನಟಿಯರು ಎಂದರೆ ಹಾಗೆ ಅಲ್ವೆ? ಫಂಕ್ಷನ್ಗಳಿಗೆ ಹೋಗುವಾಗ ರೆಡ್ ಕಾರ್ಪೆಟ್ ಮೇಲೆ ನಡೆಯುವಾಗ ಅವರ ಭಾರಿ ಡ್ರೆಸ್ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರುತ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇಲ್ಲವೇ ಭಾರಿ ಡ್ರೆಸ್ ಧರಿಸಿ ಹಲವು ಸಲ ನಟಿಯರು ಪೇಚಿಗೆ ಸಿಲುಕುವುದು, ಎಡವಿ ಬೀಳುವುದು ಇಲ್ಲವೇ ಅವರ ಡ್ರೆಸ್ ಹಾರಿ ಹೋಗಿ ಅಂಗಾಂಗಗಳ ಪ್ರದರ್ಶನವಾಗುವುದು ಎಲ್ಲವೂ ಮಾಮೂಲಿ ಆಗಿದೆ. ಕೆಲವೊಮ್ಮೆ ಹೀಗೆ ಆದರೆ ಟ್ರೋಲ್ ಆಗಿ ಸಕತ್ ಸುದ್ದಿಯಾಗುತ್ತದೆ ಎನ್ನುವ ಕಾರಣಕ್ಕೆ ಇಂಥ ಡ್ರೆಸ್ಗಳನ್ನು ನಟಿಯರು ಧರಿಸಿ ಬರುತ್ತಾರೆ ಎನ್ನುವ ಆರೋಪಗಳೂ ಇವೆ. ಡ್ರೆಸ್ ಜಾರಿ ಹೋಗುತ್ತಿದ್ದರೂ ದೇಹದ ಮೇಲೆ ಅರಿವೇ ಇಲ್ಲದಂತೆ ನಟಿಯರು ನಡೆಯುವಾಗ ಇದು ಹೌದೇನೋ ಅನ್ನಿಸುವುದು ಉಂಟು.
ಇದೀಗ ನಟಿ ಕಂಗನಾ ಶರ್ಮಾ ಕಥೆಯೂ ಅದೇ ರೀತಿ ಆಗಿದೆ. ಮೊದಲೇ ಡೀಪ್ನೆಕ್ ಹಾಕಿಕೊಂಡು ಬಂದಿರೋ ನಟಿಗೆ ಪಾಪರಾಜಿಗಳು ಮುತ್ತಿಕೊಂಡಿದ್ದಾರೆ. ಆ ಬಳಿಕ ಯಾರೋ ಏನೋ ಹೇಳಿದರು ಎನ್ನಿಸತ್ತೆ. ಅದಕ್ಕೆ ತನ್ನ ಡ್ರೆಸ್ನಲ್ಲಿ ಏನೋ ಎಡವಟ್ಟು ಆಗಿದೆ ಎಂದು ನಟಿಗೆ ತಿಳಿದಿದೆ. ಇದೇನು ತಿಳಿಯದೇ ಇರುವ ವಿಷಯವಲ್ಲ ಬಿಡಿ. ಆದರೂ ಜನರನ್ನು ಸೆಳೆಯಲು, ಸುದ್ದಿಯಲ್ಲಿ ಇರಲು, ಟ್ರೋಲ್ ಆದರೂ ಸರಿ, ಸದ್ದು ಮಾಡುತ್ತಲೇ ಇರಲು ನಾಚಿಕೆ ಬಿಡುವ ಕೆಲಸ ಮಾಡುವವರ ಪಟ್ಟಿ ಹೆಚ್ಚೇ ಇದೆ. ಅದು ನಟಿಯರು ಮಾತ್ರವಲ್ಲದೇ ಇಂದು ರೀಲ್ಸ್ ಮಾಡುವ ಕೆಲವರನ್ನು ನೋಡಿದರೂ ತಿಳಿಯುತ್ತದೆ. ಅದಿರಲಿ ಬಿಡಿ. ಇನ್ನು ಕಂಗನಾ ಡ್ರೆಸ್ ಬಗ್ಗೆ ಹೇಳುವುದಾದರೆ, ಆಕೆ ಡ್ರೆಸ್ ಸರಿ ಮಾಡಿಕೊಂಡು ಓಕೆನಾ ಕೇಳಿದ್ದಾರೆ. ಆದರೆ ಅಲ್ಲಿ ಏನಾಗಬಾರದೋ ಅದೇ ಆಗಿದೆ.
ತುಂಡುಡುಗೆ ತೊಟ್ಟು ಮೆಟ್ಟಿಲಿನಿಂದ ಜಾರಿಬಿದ್ದ ಕಂಗನಾ- ಸೊಂಟಕ್ಕೇನಾಯ್ತು? ವೈರಲ್ ವಿಡಿಯೋಗೆ ಫ್ಯಾನ್ಸ್ ಶಾಕ್!
ಸಾಮಾನ್ಯವಾಗಿ ನಟಿಯರು ಎಷ್ಟೇ ದೇಹಪ್ರದರ್ಶನ ಮಾಡಿದರೂ ಒಂದಷ್ಟು ಭಾಗ ಮುಚ್ಚಿಕೊಂಡಿರುತ್ತಾರೆ. ಸಭ್ಯತೆಯ ಪರಿಯನ್ನು ಅಷ್ಟರಮಟ್ಟಿಗೆ ತಿಳಿದುಕೊಂಡಿರುವುದಕ್ಕೆ ಖುಷಿಯಿದೆ. ಆದರೆ ಕಂಗನಾ ಶರ್ಮಾ ವಿಷಯದಲ್ಲಿ ಹಾಗಾಗಲಿಲ್ಲ. ಏನು ಕಾಣಬಾರದು ಎಂದು ಹೇಳಲಾಗುತ್ತದೆಯೋ ಅದನ್ನೇ ಕಾಣಿಸಿದ್ದಾರೆ ಕಂಗನಾ. ಸಾಲದು ಎನ್ನುವುದಕ್ಕೆ ಟೀ ಷರ್ಟ್ ಮೇಲೆ ನನ್ನ ಮನಸ್ಸು ನನ್ನ ನಿಯಂತ್ರಣ ಮೀರಿ ಹೋಗಿದೆ. ಒಂದು ಸಂದೇಶ ಕಳುಹಿಸಿ ಎಂದು ಬರೆಯಲಾಗಿದೆ. ಇದನ್ನು ನೋಡಿದರೆ ನಟಿ ಉದ್ದೇಶಪೂರ್ವಕವಾಗಿ ಈ ರೀತಿ ಅಸಭ್ಯವಾಗಿ ವರ್ತಿಸಿರುವುದು ತಿಳಿಯುತ್ತದೆ. ಆಕೆ ಅಂದುಕೊಂಡಂತೆ ಇದೇ ಕಾರಣಕ್ಕೆ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಇನ್ನು ನೆಟ್ಟಿಗರು ಬಿಡಿ, ಅವರ ಕಮೆಂಟ್ಸ್ಗಳು ಈಕೆಯ ಅಸಭ್ಯ ಡ್ರೆಸ್ಗಿಂತಲೂ ಒಂದು ಹಂತ ಮೀರಿಯೇ ಹೋಗಿದೆ!
ಇನ್ನು ನಟಿ ಕಂಗನಾ ಶರ್ಮಾ ಕುರಿತು ಹೇಳುವುದಾದರೆ, ಕಂಗನಾ ಇದಾಗಲೇಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗ್ರೇಟ್ ಗ್ರ್ಯಾಂಡ್ ಮಸ್ತಿ, ತೇರೆ ಜಿಸ್ಮ್, ರಾಮ್ರತನ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ. ಆದರೆ ಸಿನಿಮಾ ಅಷ್ಟು ಅವರ ಕೈಹಿಡಿಯಲಿಲ್ಲ. ಆದ್ದರಿಂದ ಅವರು ನಟನೆಯಿಂದ ಸ್ವಲ್ಪ ದೂರವೇ ಇದ್ದು, ಮಾಡೆಲಿಂಗ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಇರುವ ನಟಿ, 2.8 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದಾರೆ. “2019 ರಲ್ಲಿ, ನಾನು ಯೋಗೇಶ್ ಅವರನ್ನು ವಿವಾಹವಾಗಿದ್ದಾರೆ ನಟಿ. ಆದರೆ ಕುಟುಂಬದ ಜವಾಬ್ದಾರಿ ತಮ್ಮ ಮೇಲೆಯೇ ಸಂಪೂರ್ಣ ಇದ್ದುದರಿಂದ ಮದುವೆಯ ಮುನ್ನ ಹಲವಾರು ಬಾರಿ ಯೋಚಿಸಿದ್ದೆ ಎಂದಿದ್ದರು ನಟಿ. ಜೊತೆಗೆ ಇವರ ಅಪ್ಪ-ಅಮ್ಮನ ಸಾಂಸಾರಿಕ ಜೀವನವೂ ಸರಿಯಿಲ್ಲದಿದ್ದರೆ ಕಾರಣ, ಮದುವೆಗೆ ಒಲ್ಲೆ ಎಂದಿದ್ದ ನಟಿ ಕೊನೆಗೂ ವಿವಾಹವಾಗಿದ್ದಾರೆ. ಈಗ ಮಾಡೆಲಿಂಗ್ ಮೂಲಕ ಸಾಕಷ್ಟು ಸಂಪಾದನೆ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.