
ತಮಿಳು ಚಿತ್ರರಂಗದ ಸ್ಟಾರ್ ನಟ ಆರ್ಯ ವಿರುದ್ಧ ಹೊಸದೊಂದು ಆರೋಪ ಕೇಳಿ ಬಂದಿದೆ. ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿರುವ ನಟ ಇದೀಗ ಜರ್ಮನಿ ಯುವತಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ನಟ ಆರ್ಯ ಜರ್ಮನಿ ಮೂಲದ ವಿದ್ಜಾ ಅವರನ್ನು ಪ್ರೀತಿ ಮದುವೆ ಆಗುವುದಾಗಿ ನಂಬಿಸಿದ್ದಾರೆ. ಆ ನಂತರ ಯಾರಿಗೂ ತಿಳಿಯದ ಹಾಗೆ ಮದುವೆ ಆಗಿದ್ದಾರೆ ಎನ್ನಲಾಗಿದೆ. ಈ ವಿಚಾರಗಳಿಗೆ ಬೇಕಾದ ಸಾಕ್ಷಿಗಳೊಂದಿಗೆ ವಿದ್ಜಾ ದೂರು ದಾಖಲು ಮಾಡಿದ್ದಾರೆ.ಇದರ ಜೊತೆ 70 ಲಕ್ಷ ರೂ. ವಂಚನೆ ಆರೋಪ ಕೂಡ ಮಾಡಿದ್ದಾರೆ.
ವಿದ್ಜಾ ಅವರಿಗೆ ಪವರ್ ಆಫ್ ಅಟಾರ್ನಿ ಆಗಿರುವ ಚೆನ್ನೈನ ರಾಜಪಾಂಡಿಯನ್ ಮದ್ರಾಸ್ ಹೈ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇಂದು ವಿಚಾರಣೆಯಲ್ಲಿ ಕೆಲವೊಂದು ಸತ್ಯ ಹೊರ ಬಂದಿದೆ. ನಟಿ ಸಯೇಷಾರನ್ನು ಮದುವೆಯಾಗುವ ಮುನ್ನ ಸಾಲ ತೀರಿಸುವುದಾಗಿ ಹೇಳಿದ್ದರು ಹಾಗೂ ಆರು ತಿಂಗಳಲ್ಲಿ ಸಯೇಷಾಗೆ ವಿಚ್ಛೇದನ ನೀಡುವೆ ಎಂದು ಭರಸವೆ ನೀಡಿದ್ದರು. ಒಪ್ಪಂದ ನಂತರ ವಿದ್ಜಾ ಎರಡನೇ ಮದುವೆಗೆ ಅನುಮತಿ ನೀಡಿದ್ದರು ಎನ್ನಲಾಗಿದೆ.
ಆರ್ಯ ತನಗಿಂತ 17 ವರ್ಷ ಹಿರಿಯವರು ಎಂದು ತಿಳಿದರೂ ಪ್ರೀತಿಸಿ ವೈವಾಹಿಕ ಜೀವಕ್ಕೆ ಕಾಲಿಟ್ಟ ನಟಿ ಸಯೇಷಾ ಜುಲೈ 24ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಂಭ್ರಮದಲ್ಲಿರುವ ಅರ್ಯ ಕುಟುಂಬಕ್ಕೆ ಈ ವಿಚಾರ ಆಘಾತ ತಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.