ಕಳ್ಳನೋಟು ಪ್ರಿಂಟ್ ಮಾಡಿರುವ ಬೆಳಗಾವಿಯ ಗ್ಯಾಂಗ್ ಸಿಕ್ಕಿಬಿದ್ದಿದೆ. ಇವರಿಗೆ ನಟರಾದ ಶಾಹಿದ್ ಕಪೂರ್, ವಿಜಯ್ ಸೇತುಪತಿಯೇ ಗಾಡ್ಫಾದರ್. ಏನಿದು ವಿಷಯ?
ಇಂದು ಸಿನಿಮಾ, ವೆಬ್ಸೀರಿಸ್ಗಳಲ್ಲಿ ಕ್ರೌರ್ಯ, ದೌರ್ಜನ್ಯ, ಹಿಂಸೆ ಮಿತಿಮೀರಿ ತೋರಿಸಲಾಗುತ್ತಿದೆ. ಇಂಥ ಚಿತ್ರಗಳು ಹಿಟ್ ಆಗುವ ಕಾರಣ, ನಾಯಕರ ಕೈಯಲ್ಲಿ ಕೊಲೆ, ರಕ್ತಪಾತ, ಲಾಂಗು, ಮಚ್ಚು ಹಿಡಿಸುವುದು ಮಾಮೂಲಾಗಿಬಿಟ್ಟಿದೆ. ಇದು ಯಾವ ಪರಿಯಲ್ಲಿ ಜನರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಇದಾಗಲೇ ಹಲವಾರು ಘಟನೆಗಳು ಸಾಕ್ಷಿಯಾಗಿವೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಇಂಥ ಚಿತ್ರದ, ಇಂಥ ನಾಯಕರೇ ನಮಗೆ ಸ್ಫೂರ್ತಿ, ಇಂಥ ಚಿತ್ರವನ್ನು ನೋಡಿ ಅಪರಾಧ ಕೃತ್ಯಕ್ಕೆ ಇಳಿದದ್ದು ಎನ್ನುವುದು ಮಾಮೂಲಾಗಿಬಿಟ್ಟಿದೆ. ಇಂದಿನ ಹಲವು ಸೀರಿಯಲ್ಗಳು ಮನೆಹಾಳು ಮಾಡುತ್ತಿವೆ ಎನ್ನುವ ಮಾತು ಒಂದೆಡೆಯಾದರೆ, ಇಂದು ಬಹುತೇಕ ಎಲ್ಲಾ ಭಾಷೆಗಳ ಸಿನಿಮಾಗಳು ಅಪರಾಧ ಪ್ರಪಂಚಕ್ಕೆ ದಾರಿಮಾಡಿಕೊಡುವಂತಿದೆ. ಅಂಥದ್ದೇ ಒಂದು ಪ್ರಕರಣಕ್ಕೆ ಬೆಳಗಾವಿ ಇದೀಗ ಸಾಕ್ಷಿಯಾಗಿದ್ದು, ಖದೀಮರು ಸಿಕ್ಕಿಬಿದ್ದಿದ್ದಾರೆ!
ಹೌದು. ಇದು ಶಾಹಿದ್ ಕಪೂರ್ ಮತ್ತು ವಿಜಯ್ ಸೇತುಪತಿ ಅವರು ನಟಿಸಿರುವ ವೆಬ್ ಸೀರಿಸ್ ಫರ್ಜಿಯ ಕಥೆ. ಈ ವೆಬ್ಸೀರಿಸ್ನಿಂದ ಪ್ರೇರೇಪಿತರಾಗಿರುವ ಬೆಳಗಾವಿಯ ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ವೆಬ್ ಸೀರಿಸ್ ನೋಡಿ ಖೋಟಾ ನೋಟು ದಂಧೆಗೆ ಇಳಿದಿದ್ದ ಇವರು ಈಗ ಪೊಲೀಸರ ಅತಿಥಿಗಳು. ಅನ್ವರ್ ಯಾದವಾಡ, ಸದ್ದಾಂ ಯಡಳ್ಳಿ, ರವಿ ಹಯಾಗಡಿ, ದುಂಡಪ್ಪ ಒಣಶೆಣವಿ, ವಿಟ್ಟಲ್ ಹೊಸತೋಟ, ಮಲ್ಲಪ್ಪ ಕುಂಡಲಿ ಎಂಬುವರು 100 ಮತ್ತು 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ತಯಾರಿಸುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿದ್ದು, ಇವರನ್ನು ಸದ್ಯ ಬೆಳಗಾವಿಯ ಜೈಲಿನಲ್ಲಿ ಇರಿಸಲಾಗಿದೆ.
undefined
ಸೆಕ್ಸ್ ಸೀನ್ಗಳಿಗೆ ಮೂಡ್ ಕ್ರಿಯೇಟ್ ಮಾಡ್ತಾರೆ, ಭಾವನೆ ತಡೆಯಲು ಆಗಲ್ಲ.. ಆಗ... ವಿಜಯ್ ವರ್ಮಾ ಓಪನ್ ಮಾತು
ಅಷ್ಟಕ್ಕೂ ಓಟಿಟಿಯಲ್ಲಿ ಬಿಡುಗಡೆಯಾಗಿರುವ ‘ಫರ್ಜಿ’ ವೆಬ್ ಸೀರಿಸ್(Farzi web series) ಭಾರಿ ಸದ್ದು ಮಾಡುತ್ತಿದೆ. ಇದನ್ನೇ ನೋಡಿಕೊಂಡಿರುವ ಈ ಗ್ಯಾಂಗು ರಾತ್ರೋರಾತ್ರಿ ಶ್ರೀಮಂತರಾಗುವ ಆಸೆಯಿಂದ ಖೋಟಾ ನೋಟ್ ಪ್ರಿಂಟ್ ಮಾಡಿದ್ದು, ಗೋಕಾಕ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇವರ ಲೀಡರ್ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಬಾವಿ ಗ್ರಾಮದವನು ಎನ್ನಲಾಗಿದೆ. ಕಳೆದ 29ರಂದು ಗೋಕಾಕ್ನಿಂದ ಕಡಬಗಟ್ಟಿ ಮಾರ್ಗವಾಗಿ ಬೆಳಗಾವಿಗೆ ಖೋಟಾ ನೋಟು ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಇವರಿಂದ 33 ಲಕ್ಷದ 96 ಸಾವಿರ ಮೌಲ್ಯದ 500 ರೂಪಾಯಿ ಮುಖ ಬೆಲೆಯ 6,792 ನೋಟುಗಳು, 100 ರೂಪಾಯಿ ಮುಖಬೆಲೆಯ 305 ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ವಿಚಾರಣೆ ಬಳಿಕ ಫರ್ಜಿಯಿಂದ ತಾವು ಪ್ರೇರೇಪಿತರಾಗಿರುವುದಾಗಿ ಆರೋಪಿಗಳು ಹೇಳಿದ್ದಾರೆ. ಅನ್ವರ್ ಯಾದವಾಡ ಮನೆಯ ಮೇಲೆ ದಾಳಿ ಮಾಡಿದಾಗ ನೋಟ್ ಪ್ರಿಂಟ್ ಮಾಡುವ ಮಷಿನ್ಗಳು ಸಿಕ್ಕಿವೆ. ಈ ಗ್ಯಾಂಗ್ ಒಂದು ಲಕ್ಷ ಮೌಲ್ಯದ ಅಸಲಿ ನೋಟುಗಳನ್ನು ಪಡೆದು ಮೂರರಿಂದ ಆರು ಲಕ್ಷ ಖೋಟಾ ನೋಟುಗಳನ್ನು ನೀಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದಾಗಲೇ ಸಾಕಷ್ಟು ಜನರಿಗೆ ಮೋಸ ಮಾಡಿದ್ದರೂ ಹೆದರಿ ಯಾರೂ ದೂರು ಕೊಟ್ಟಿಲ್ಲ ಎನ್ನಲಾಗಿದೆ.
ಬ್ರಾ ಧರಿಸಲ್ಲ ಎಂದು ಹಠ ಮಾಡಿದ್ದ ಮಾಧುರಿ- ರೇಪ್ ಸೀನ್ ಮಾಡಿಸುವಷ್ಟರಲ್ಲಿ ಸುಸ್ತಾದ ನಟ, ನಿರ್ದೇಶಕ!