ಕೇವಲ 70 ಕೋಟಿ ಸಿನಿಮಾ ಮಾಡಿದ್ದು 2,070 ಕೋಟಿ ಕಲೆಕ್ಷನ್;  ಸಿನಿಮಾದಲ್ಲಿರೋ ಅಪ್ಪ ತುಂಬಾನೇ ಡೇಂಜರ್!

Published : Feb 26, 2025, 04:54 PM ISTUpdated : Feb 26, 2025, 05:00 PM IST
ಕೇವಲ 70 ಕೋಟಿ ಸಿನಿಮಾ ಮಾಡಿದ್ದು 2,070 ಕೋಟಿ ಕಲೆಕ್ಷನ್;  ಸಿನಿಮಾದಲ್ಲಿರೋ ಅಪ್ಪ ತುಂಬಾನೇ ಡೇಂಜರ್!

ಸಾರಾಂಶ

Super Hit Cinema: 2016ರಲ್ಲಿ ಬಿಡುಗಡೆಯಾದ ನಿತೇಶ್ ತಿವಾರಿ ನಿರ್ದೇಶನದ ಸಿನಿಮಾವು 70 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ 2070 ಕೋಟಿ ಕಲೆಕ್ಷನ್ ಮಾಡಿದೆ. ಈ ಚಿತ್ರವು ನೈಜ ಕಥೆಯನ್ನು ಆಧರಿಸಿದ್ದು, ಸೂಪರ್ ಹಿಟ್ ಆಗಿತ್ತು.

ಮುಂಬೈ: ಕಳೆದ ವಾರವಷ್ಟೇ ಬಿಡುಗಡೆಯಾಗಿರುವ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಒಂದೊಂದೇ ದಾಖಲೆಗಳನ್ನು ಬ್ರೇಕ್ ಮಾಡುತ್ತಿದೆ. ಆದ್ರೆ 2016ರಲ್ಲಿ ಬಿಡುಗಡೆಯಾದ ಈ ಸಿನಿಮಾದ ದಾಖಲೆಯನ್ನು ಬ್ರೇಕ್ ಮಾಡೋದು ಅಷ್ಟು ಸುಲಭವಲ್ಲ. 70 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಈ ಸಿನಿಮಾ ವಿಶ್ವದಾದ್ಯಂತ 2,070 ಕೋಟಿ ರೂಪಾಯಿ ದಾಖಲೆಯನ್ನು ಮಾಡಿತ್ತು. ನೆರೆಯ ಚೀನಾದಲ್ಲಿಯೂ ನೂರಾರು ಕೋಟಿ ಹಣವನ್ನು ಬಾಚಿಕೊಂಡು ಭಾರತಕ್ಕೆ ಬಂದಿತ್ತು. ಕಡಿಮೆ ಸಮಯದಲ್ಲಿಯೇ 300 ಕೋಟಿಯ ಕ್ಲಬ್‌ಗೆ ಸೇರಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೇ ರೀತಿ ಸಿನಿಮಾ ಹಲವು ದಾಖಲೆಗಳನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ. 

ರಾಮಾಯಣ ಸಿನಿಮಾದ ನಿರ್ದೇಶನ ಮಾಡುತ್ತಿರುವ ನಿತೇಶ್ ತಿವಾರಿ ಅವರೇ ಈ ಸೂಪರ್ ಹಿಟ್ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ನಿತೇಶ್ ತಿವಾರಿ ಈ ಸಿನಿಮಾಗಾಗಿ ಮೂರು ಹೊಸ ನಾಯಕಿಯರನ್ನು ಕರೆ ತಂದಿದ್ದರು. ನೈಜ ಘಟನೆಯಾಧರಿತ ಕಥೆಯನ್ನು ಹೊಂದಿದ್ದ ಸಿನಿಮಾ ತೆರೆಯ ಮೇಲೆ ಅದ್ಭುತವಾಗಿ ಮೂಡಿ ಬಂದಿತ್ತು. ಇಷ್ಟು ಮಾತ್ರವಲ್ಲ ಸಿನಿಮಾ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತ್ತು.  ಚಿತ್ರದ ಹಾಡು ಮತ್ತು ಡೈಲಾಗ್‌ಗಳು ಇಂದಿಗೂ ಜನಪ್ರಿಯವಾಗಿವೆ.  ಫಾದರರ್ಸ್ ಡೇ ಯಂದು ಸಿನಿಮಾದ ಹಾಡು ಟ್ರೋಲ್ ಆಗುತ್ತಿರುತ್ತದೆ. 

ಸೂಪರ್ ಸ್ಟಾರ್, ಮಿಸ್ಟರ್ ಪರ್ಫೆಕ್ಟ್ ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ 'ದಂಗಲ್' ಇದುವರೆಗಿನ ಅತ್ಯಧಿಕ ಗಳಿಕೆಯ ಸಿನಿಮಾ ಆಗಿದೆ. 70 ಕೋಟಿ ಬಜೆಟ್‌ನ ಈ ಸಿನಿಮಾಗಾಗಿ ಆಮೀರ್ ಖಾನ್ ದೇಹವನ್ನು ಹುರಿಯಾಗಿಸಿಕೊಂಡಿದ್ದರು. ಆಮೀರ್ ಖಾನ್ ದೇಹದ ಬದಲಾವಣೆ ಕಂಡು ಫ್ಯಾನ್ಸ್ ದಂಗಾಗಿದ್ದರು. ಆಮೀರ್ ಖಾನ್ ಜೊತೆಯಲ್ಲಿ ಸಾನ್ಯಾ ಮಲ್ಹೋತ್ರಾ, ಸಾಕ್ಷಿ ತಂವರ್, ಫಾತಿಮಾ ಸನಾ ಶೇಖ್, ಜೈರಾ ವಸೀ, ಸುಹಾನಿ ಭಟ್ನಾಗರ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. 

ಇದನ್ನೂ ಓದಿ: ನೋಡುಗರ ಮನಸ್ಸನ್ನು ಬೆಚ್ಚಿಬೀಳಿಸುವ 7.2 ರೇಟಿಂಗ್ ಮಲಯಾಳಂ ಸಿನಿಮಾ 8 ತಿಂಗಳ ನಂತರ ಹಿಂದಿಯಲ್ಲಿ ರಿಲೀಸ್

ಅಮೀರ್ ಖಾನ್ ಅವರ ಫ್ಯಾಮಿಲಿ ಡ್ರಾಮಾ ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು. ಯಾವುದೇ ಸನ್ನಿವೇಶದಲ್ಲಿಯೂ ದಂಗಲ್ ನಿಮ್ಮನ್ನು ನಿರಾಸೆಗೊಳಿಸಲ್ಲ. ಈ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪರಿಚಯಗೊಂಡಿದ್ದು ಮುದ್ದು ಮುಖದ ಚೆಲುವೆ ಜೈರಾ ವಾಸೀಂ ಕೆಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ದಾರೆ. 

ಮಾಜಿ ಕುಸ್ತಿಪಟು ಮಹಾವೀರ್ ಫೋಗಟ್ ಮತ್ತು ಅವರ ಮಕ್ಕಳಾದ ಗೀತಾ ಫೋಗಟ್ ಹಾಗೂ ಬಬಿತಾ ಫೋಗಟ್ ಜೀವನಾಧರಿತ ಕಥೆಯೇ ದಂಗಲ್ ಸಿನಿಮಾ. ಆಮೀರ್ ಖಾನ್ ಸಿನಿಮಾದಲ್ಲಿ ಮಹಾವೀರ್ ಫೋಗಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದ ಬಾಪು ಸೇಹದ್ ಕೇ ಲಿಯೇ ಹಾನಿಕಾರಕ್ ಹೈ ಹಾಡು ಸೂಪರ್ ಹಿಟ್ ಆಗಿತ್ತು.

ಇದನ್ನೂ ಓದಿ: ಈ ಸಿನಿಮಾದಲ್ಲಿ ಪ್ರತಿಕ್ಷಣಕ್ಕೂ ಸಸ್ಪೆನ್ಸ್; ನೋಡ್ತಾ ನೋಡ್ತಾ 2 ಗಂಟೆ 27 ನಿಮಿಷ ಸಮಯ ಹೋಗಿದ್ದೆ ಗೊತ್ತಾಗಲ್ಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?