21.75 ಕೋಟಿಯ ಕಿವಿಯೊಲೆ, 2 ಕೋಟಿ ಉಂಗುರ; ರಾಣಿಯಂತೆ ಬದುಕುತ್ತಿರೋ ನಟಿ

Published : Feb 27, 2025, 01:36 PM ISTUpdated : Feb 27, 2025, 02:46 PM IST
21.75 ಕೋಟಿಯ ಕಿವಿಯೊಲೆ, 2 ಕೋಟಿ ಉಂಗುರ; ರಾಣಿಯಂತೆ ಬದುಕುತ್ತಿರೋ ನಟಿ

ಸಾರಾಂಶ

Bollywood Actress: ನಟಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆಕ್ಷನ್, ರೊಮ್ಯಾನ್ಸ್, ಎಮೋಷನಲ್ ಪಾತ್ರಗಳಲ್ಲಿ ಮಿಂಚಿರುವ ಇವರು, ವಿದೇಶದಲ್ಲಿ ಗಂಡನೊಂದಿಗೆ ನೆಲೆಸಿದ್ದಾರೆ. ಕೋಟಿ ಕೋಟಿ ಬೆಲೆಬಾಳುವ ಆಭರಣಗಳನ್ನು ಧರಿಸಿ ರಾಣಿಯಂತೆ ಬದುಕುತ್ತಿದ್ದಾರೆ.

ಮುಂಬೈ: ಈ ನಟಿ ಬಾಲಿವುಡ್‌ನಲ್ಲಿ ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಚೆಲುವೆ. ಆಕ್ಷನ್, ರೊಮ್ಯಾನ್ಸ್, ಎಮೋಷನಲ್ ಎಂತಹುವುದೇ ಪಾತ್ರವನ್ನು ನಟಿಸಬಲ್ಲೇ ಎಂಬ ಭರವಸೆಯನ್ನು ಮೂಡಿಸಿದ ನಟಿ. ನಿರ್ದೇಶಕರ ಮೆಚ್ಚಿನ ನಟಿ ಎಂದು ಕರೆಸಿಕೊಳ್ಳುವ ದೇಸಿ ಗರ್ಲ್, ವಿದೇಶಿ ಹುಡುಗನನ್ನು ಮದುವೆಯಾಗಿದ್ದಾರೆ. ವಿದೇಶದಲ್ಲಿಯೇ ಮಗಳು ಮತ್ತು ಗಂಡನೊಂದಿಗೆ ಸೆಟೆಲ್ ಆಗಿರುವ ಫ್ಯಾಶನ್ ಸುಂದರಿ ಆಗಾಗ್ಗೆ ಭಾರತಕ್ಕೆ ಬಂದು ಹೋಗುತ್ತಿರುತ್ತಾರೆ. ಇತ್ತೀಚೆಗಷ್ಟೇ ಸೋದರನ ಮದುವೆಗೆ ನಟಿ ಬಂದಿದ್ದರು. ಹಾಲಿವುಡ್ ಸಿನಿಮಾದಲ್ಲಿಯೂ ನಟಿಸುವ ಮೂಲಕ ಗ್ಲೋಬಲ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿಯೂ ರಾಣಿಯಂತೆ ಬದುಕುತ್ತಿದ್ದಾರೆ. 

ಬಾಲಿವುಡ್ ದೇಸಿ ಗರ್ಲ್ ಅಂತಾನೇ ಜನಪ್ರಿಯತೆ ಪಡೆದುಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ಸಿನಿಮಾಗಳಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದಾರೆ. ಮಾಡೆಲಿಂಗ್ ಮೂಲಕ ತಮ್ಮ ಕೆರಿಯರ್ ಆರಂಭಿಸಿದ ನಟಿ ಪ್ರಿಯಾಂಕಾ ಚೋಪ್ರಾ ಮುಟ್ಟಿದ್ದೆಲ್ಲಾ ಚಿನ್ನವಾಗಲು ಶುರುವಾಯ್ತು. ಬ್ಲಫ್ ಮಾಸ್ಟರ್ (2005), ಡಾನ್ (2006), ಫ್ಯಾಶನ್ (2008), ಕಮಿನೆ (2009), 7 ಖೂನ್ ಮಾಫ್ (2011), ಬರ್ಫಿ (2012), ಮೇರಿ ಕೋಮ್ (2014), ಬಾಜೀರಾವ್ ಮಸ್ತಾನಿ (2015) ಸೇರಿದಂತೆ ಹಲವು ಸಿನಿಮಾಗಳಲ್ಲಿ ಪ್ರಿಯಾಂಕಾ ಚೋಪ್ರಾ  ನಟಿಸಿದ್ದಾರೆ. ಕೇವಲ ಗ್ಲಾಮರ್‌ ಪಾತ್ರಗಳಿಗೆ ಸೀಮಿತವಾಗದ ಪ್ರಿಯಾಂಕಾ ಚೋಪ್ರಾ ಎಲ್ಲಾ ಕೆಟಗರಿಯ ಪಾತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸೂಪರ್ ಹಿಟ್ ಸಿನಿಮಾ, ವಿವಿಧ ಉತ್ಪನ್ನಗಳಿಗೆ ರಾಯಭಾರಿಯಾಗಿರೋ ಪ್ರಿಯಾಂಕಾ ಚೋಪ್ರಾ ಕೋಟಿ ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. 

ಪ್ರಿಯಾಂಕಾ ಚೋಪ್ರಾ ಅವರ ಜೀವನಶೈಲಿ ಯಾವ ರಾಣಿಗೂ ಕಡಿಮೆ ಇಲ್ಲ. ಕೋಟಿ ಕೋಟಿ ಬೆಲೆಬಾಳುವ ಆಭರಣಗಳನ್ನು ಧರಿಸಿಯೇ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿರುತ್ತಾರೆ. ಪ್ರಿಯಾಂಕಾ ಧರಿಸುವ ಔಟ್‌ಫಿಟ್ ಬೆಲೆಯಲ್ಲಿ ಮಧ್ಯಮವರ್ಗದ ಜನತೆ ಸುಂದರವಾದ ಮನೆಯೊಂದನ್ನು ಕಟ್ಟಿಕೊಳ್ಳಬಹುದು. 

ಇದನ್ನೂ ಓದಿ: ಅವೆರಡು ಪಾರ್ಟ್​ ಚೆನ್ನಾಗಿದ್ರೆ ಮಾತ್ರ ಬಾಲಿವುಡ್​ನಲ್ಲಿ ಪಟ್ಟ, ಇಲ್ಲದಿದ್ರೆ ಚಟ್ಟ: ಪ್ರಿಯಾಂಕಾ ಹೇಳಿಕೆ ವೈರಲ್​!

ಲೈಫ್‌ಸ್ಟೈಲ್ ಏಶಿಯಾ ವರದಿ ಪ್ರಕಾರ, 2016ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ಆಭರಣಗಳು ಕೋಟಿ ಕೋಟಿ ಬೆಲೆಯನ್ನು ಹೊಂದಿದ್ದವು. ಅಂದು ಪ್ರಿಯಾಂಕಾ ಚೋಪ್ರಾ 21.75 ಕೋಟಿ ಬೆಲೆ ಬಾಳುವ ಕಿವಿಯೊಲೆ ಮತ್ತು 2 ಕೋಟಿ ಮೌಲ್ಯದ  50 ಕ್ಯಾರಟ್ ವಜ್ರದ ಉಂಗುರ ಧರಿಸಿದ್ದರು. ಪ್ರಿಯಾಂಕಾ ಧರಿಸಿದ್ದ ಔಟ್‌ಫಿಟ್ ಸಹ ಕೋಟಿ ಮೌಲ್ಯದಾಗಿತ್ತು. ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುವಾಗ ಪ್ರಿಯಾಂಕಾ ಧರಿಸುವ ಔಟ್‌ಫಿಟ್ ಮೌಲ್ಯ ಕೋಟಿಗಳಲ್ಲಿರುತ್ತದೆ. ಒಂದು ಇವೆಂಟ್‌ನಲ್ಲಿ 72 ಕೋಟಿ ಮೌಲ್ಯದ ರಾಲ್ಫ್ ರೂಸೋ ಗೌನ್ ಧರಿಸಿದ್ದರು. ಇನ್ನು ಮೆಟ್ ಗಾಲಾದಲ್ಲಿ ಪ್ರಿಯಾಂಕಾ ಕನಿಷ್ಠ 45 ಮೌಲ್ಯದ ಔಟ್‌ಫಿಟ್‌ನಲ್ಲಿ ಮಿಂಚಿದ್ದರು.

2018ರಲ್ಲಿ ಪಾಪ್ ಸಿಂಗರ್ ನಿಕ್ ಜೋನಸ್ ಜೊತೆಯಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಮದುವೆ ನಡೆದಿತ್ತು. GQ ವರದಿ ಪ್ರಕಾರ, ಪ್ರಿಯಾಂಕ ಅವರ ನಿಶ್ಚಿತಾರ್ಥ ಉಂಗುರದ ಮೌಲ್ಯ 2.1 ಕೋಟಿ ರೂಪಾಯಿ ಆಗಿತ್ತು. ಸದ್ಯ ಪ್ರಿಯಾಂಕಾ ಚೋಪ್ರಾ ಲಾಸ್ ಏಂಜಲಿಸ್‌ನ 160 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸುತ್ತಿದ್ದಾರೆ. ವರದಿಗಳ ಪ್ರಕಾರ, ಪ್ರಿಯಾಂಕಾ ಚೋಪ್ರಾ 650 ಕೋಟಿಯ ಒಡತಿ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ: 175 ಕೋಟಿ ಕಲೆಕ್ಷನ್, 68 ಅವಾರ್ಡ್; ಈ ಸಿನಿಮಾದಲ್ಲಿರಲಿಲ್ಲ ಹೀರೋಗೆ ಒಂದೇ ಒಂದು ಡೈಲಾಗ್, ಆದ್ರೂ ಸೂಪರ್ ಹಿಟ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?