
ಮುಂಬೈ: ಬಾಲಿವುಡ್ ನಟಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ ಸ್ವಾಮೀಜಿಯನ್ನು ಭದ್ರತಾ ಸಿಬ್ಬಂದು ಎಳೆದು ಹೊರಗೆ ಕಳುಹಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗಿದ್ದು, ಸ್ವಾಮೀಜಿಗಳು ಇನ್ನು ಮೋಹ, ಮಾಯೆ ಮತ್ತು ಆಸೆಯಿಂದ ಹೊರಗೆ ಬಂದಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಬುಧವಾರ ಮಹಾಶಿವರಾತ್ರಿ ಹಿನ್ನೆಲೆ ನಟಿ ಅಮಿತಾ ಪಟೇಲ್, ಮುಂಬೈನ ಜುಹುವಿನಲ್ಲಿರುವ ಶಿವನ ದೇವಾಲಯಕ್ಕೆ ಆಗಮಿಸಿದ್ದರು. ಪರಮಾತ್ಮನ ದರ್ಶನ ಪಡೆದು ಹಿಂದಿರುಗುವ ಸಂದರ್ಭದಲ್ಲಿ ಜನರು ತಮ್ಮ ನೆಚ್ಚಿನ ನಟಿಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
ಶಿವರಾತ್ರಿ ಹಿನ್ನೆಲೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿರುವ ಜನಸಂದಣಿ ಅಧಿಕವಾಗಿತ್ತು. ಈ ಹಿನ್ನೆಲೆ ಭದ್ರತಾ ಸಿಬ್ಬಂದಿ ದರ್ಶನ ಪಡೆದ ಭಕ್ತರನ್ನು ಹೊರಗೆ ಕಳುಹಿಸುವ ಮೂಲಕ ನೂಕು ನುಗ್ಗಲು ಉಂಟಾಗದಂತೆ ತಡೆಯುತ್ತಿದ್ದರು. ಅಮಿಶಾ ಪಟೇಲ್ ಆಗಮನದಿಂದ ನಟಿಯನ್ನು ನೋಡಲು ಜನರು ಸುತ್ತುವರಿದಿದ್ದರು. ಈ ನೂಕುನುಗ್ಗಲಿನಲ್ಲಿಯೇ ಸ್ವಾಮೀಜಿಯೊಬ್ಬರು ನಟಿ ಅಮಿಶಾ ಪಟೇಲ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ನಟಿ ಸಹ ಕ್ಯಾಮೆರಾಗೆ ಪೋಸ್ ನೀಡುತ್ತಿದ್ದರು. ಆದರೆ ಅಷ್ಟರಲ್ಲಿಯೇ ಅಲ್ಲಿಗೆ ಬಂದ ಭದ್ರತಾ ಸಿಬ್ಬಂದಿ, ಸ್ವಾಮೀಜಿ ಕೈ ಹಿಡಿದು ಎಳೆದು ಹೊರಗೆ ಕಳುಹಿಸಿದರು.
ಅರೇ ಬಾಬಾ ಮುಂದೆ ಬನ್ನಿ, ದಾರಿ ಬಿಡಿ ಎಂದು ಭದ್ರತಾ ಸಿಬ್ಬಂದಿ ಹೇಳುತ್ತಾರೆ. ಇದಕ್ಕೆ ನಟಿ ಅಮಿಶಾ ಪಟೇಲ್, ಪೊಲೀಸರ ಕೆಲಸವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದೀರಿ ಎಂದು ಭದ್ರತಾ ಸಿಬ್ಬಂದಿಯ ಬೆನ್ನು ತಟ್ಟಿ ಶಹಬಾಷ್ ನೀಡಿದರು. ಡೋಂಗಿ ಬಾಬಾಗಳು ಇದೇ ರೀತಿಯಾಗಿರುತ್ತಾರೆ ಎಂದು ಭದ್ರತಾ ಸಿಬ್ಬಂದಿ ಹೇಳುತ್ತಾರೆ. ನಟಿ ಅಮಿಶಾ ಪಟೇಲ್ ಕೆಂಪು ಬಣ್ಣದ ಶಲ್ವಾರ್ -ಪೈಜಾಮಾ ಧರಿಸಿ ಓಪನ್ ಹೇರ್ ಬಿಟ್ಕೊಂಡು, ಸ್ಟೈಲಿಶ್ ಕನ್ನಡಕ ಧರಿಸಿ ಮುಂದಾಗಿ ಕಾಣುತ್ತಿದ್ದರು.
ಈ ವಿಡಿಯೋ ನೋಡಿದ ನೆಟ್ಟಿಗರು, ಸ್ವಾಮೀಜಿ ಮತ್ತು ಪೊಲೀಸ್ ಇಬ್ಬರು ನಕಲಿ ಎಂದು ಕಮೆಂಟ್ ಮಾಡಿದ್ದಾರೆ. ಪೊಲೀಸಪ್ಪನ ಹೈಟ್ ನೋಡಿದ್ರೆ ಆತನೂ ನಕಲಿ ಎಂದು ಗೊತ್ತಾಗುತ್ತದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಗೆ ಪ್ರತಿಕ್ರಿಯೆ ನೀಡಿರುವ ಕೆಲವರು, ಆತ ಪೊಲೀಸ್ ಅಲ್ಲ. ದೇವಸ್ಥಾನದ ಭದ್ರತಾ ಸಿಬ್ಬಂದಿ ಎಂದು ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋಗೆ ಒಂದೂವರೆ ಲಕ್ಷಕ್ಕೂ ಅಧಿಕ ಲೈಕ್ಸ್, ಸಾವಿರಾರು ಕಮೆಂಟ್‌ಗಳು ಬಂದಿವೆ.
ಇದನ್ನೂ ಓದಿ: ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ ಧರ್ಮವೀರನ ಬಲಿದಾನದ ಕತೆ!
ಗುಜರಾತ್ ಮೂಲದ ಅಮೀಶಾ ಪಟೇಲ್ 2000ರಲ್ಲಿ ಬಿಡುಗಡೆಯಾದ ಹೃತಿಕ್ ರೋಷನ್ ಮೊದಲ ಚಿತ್ರ ಕಹೋ ನಾ ಪ್ಯಾರ್ ಹೈ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಮೊದಲ ಚಿತ್ರದ ಮೂಲಕವೇ ಅಮಿಶಾ ಪಟೇಲ್ ಸ್ಟಾರ್ ನಟಿ ಪಟ್ಟಕ್ಕೇರಿದರು. 2001ರಲ್ಲಿ ಬಿಡುಗಡೆಯಾದ 'ಗದರ್: ಏಕ್ ಪ್ರೇಮ್ ಕಥಾ' ಸಿನಿಮಾ ಸಹ ಆಮಿಶಾ ಪಟೇಲ್‌ಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿತು. ಬಾಲಿವುಡ್‌ಗೆ ಸೀಮಿತವಾಗದ ಅಮಿತಾ ಪಟೇಲ್ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಏ ಜಿಂದಗಿ ಕಾ ಸಫರ್, ಕ್ರಾಂತಿ, ಯೇ ಹೈ ಜಲ್ವಾ, ಹಮ್ರಾಜ್, ಮಂಗಲ್ ಪಾಂಡೆ, ತೀಸರಿ ಆಂಕೇ, ತಥಾಸ್ತು, ಆಪ್ ಕಿ ಖಾತಿರ್, ಭುಲ್ ಭುಲಯ್ಯಾ, ಪರಮ ವೀರ ಚಕ್ರ, ರೇಸ್, ಹೇ ಬೇಬಿ, ಗದರ್ -2 ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಮಿಶಾ ಪಟೇಲ್ ನಟಿಸಿದ್ದಾರೆ. 49 ವರ್ಷದ ಅಮಿಶಾ ಪಟೇಲ್, ತಾನು ಎಂದಿಗೂ ಆಂಟಿ ಪಾತ್ರದಲ್ಲಿ ನಟಿಸಲ್ಲ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಕೊನೆಗೂ 2ನೇ ಪತ್ನಿ ಶೋಭಿತಾಯಿಂದ ಬಯಲಾಯ್ತು ನಾಗಚೈತನ್ಯ ರಹಸ್ಯ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.