ಕಣ್ಮುಚ್ಚಿದ್ರೂ ಭಯ, ಕಣ್ ಬಿಟ್ರೂ ಭಯ; 2 ಗಂಟೆ 32 ನಿಮಿಷದ ಈ ಸೈಕೋ ಥ್ರಿಲ್ಲರ್ ಸಿನಿಮಾ ಇನ್ನು ನೋಡಿಲ್ವಾ ?

Published : Mar 02, 2025, 01:05 PM ISTUpdated : Mar 02, 2025, 01:10 PM IST
ಕಣ್ಮುಚ್ಚಿದ್ರೂ ಭಯ, ಕಣ್ ಬಿಟ್ರೂ ಭಯ; 2 ಗಂಟೆ 32 ನಿಮಿಷದ ಈ ಸೈಕೋ ಥ್ರಿಲ್ಲರ್ ಸಿನಿಮಾ ಇನ್ನು ನೋಡಿಲ್ವಾ ?

ಸಾರಾಂಶ

South Cinema: ಒಂದು ಸೈಕೋ ಥ್ರಿಲ್ಲರ್ ಸಿನಿಮಾ. ಇದರಲ್ಲಿ ಜಯಂ ರವಿ ಮತ್ತು ನಯನತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೈಕೋ ಕಿಲ್ಲರ್ ಮತ್ತು ಪೊಲೀಸ್ ಅಧಿಕಾರಿಯ ನಡುವಿನ ಹೋರಾಟ ರೋಚಕವಾಗಿದೆ.

Ravi Moha Nayanthara Film: ನಿಮಗೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ನೋಡಲು ಇಷ್ಟವೇ? ಹಾಗಾದ್ರೆ ಈ ಸಿನಿಮಾವನ್ನು ಮಿಸ್ ಮಾಡಿಕೊಳ್ಳಬೇಡಿ. 2023ರಂದು ಬಿಡುಗಡೆಯಾಗಿದ್ದ ಈ ಸಿನಿಮಾವನ್ನು ನೀವು ನೆಟ್‌ಫ್ಲಿಕ್ಸ್ OTT ಪ್ಲಾಟ್‌ಫಾರಂನಲ್ಲಿ ವೀಕ್ಷಿಸಬಹುದು. ನೀವು ಎಷ್ಟೇ ಸಿನಿಮಾ ಪ್ರಿಯರಾಗಿದ್ದರೂ ಕೆಲವೊಮ್ಮೆ ಅದ್ಭುತವಾದ ಚಿತ್ರಗಳು ಮಿಸ್ ಆಗಿರುತ್ತವೆ. ಇಂತಹ ಸಿನಿಮಾಗಳು ಆರಂಭದಿಂದ ಕೊನೆಯವರೆಗೆ ನಿಮ್ಮನ್ನು ಕುರ್ಚಿಯಿಂದ ಬಂಧಿಸಲ್ಪಡುತ್ತವೆ. ಒಂದು ಕ್ಷಣ ಅತ್ತಿತ್ತ ನೋಡಿದ್ರೂ ಸಿನಿಮಾ ಕಥೆಯೇ ಅರ್ಥವಾಗಲ್ಲ. ಈ ರೀತಿಯ ಸಿನಿಮಾಗಳು ಹಲವು ರೋಚಕ ತಿರುವುಗಳನ್ನು ತೆಗೆದುಕೊಳ್ಳುವ ಮೂಲಕ ಕಥೆಯ ಆಯಾಮವನ್ನೇ ಸಂಪೂರ್ಣವಾಗಿ ಬದಲಿಸುತ್ತದೆ. ಇಂದು ನಾವು ಹೇಳುತ್ತಿರುವ ಸಿನಿಮಾ ಈ ರೀತಿಯ ಕಥೆಯನ್ನು ಒಳಗೊಂಡಿದೆ. 

ಸೈಕೋಲಾಜಿಕಲ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ 'ಇರೈವನ್' ಸಿನಿಮಾ 2023ರಲ್ಲಿ ಬಿಡುಗಡೆಯಾಗಿತ್ತು. ತಮಿಳು ನಟ ಜಯಂ ರವಿ ಮತ್ತು ಲೇಡಿ ಸೂಪರ್ ಸ್ಟಾರ್‌ ನಯನತಾರಾ ಪ್ರಮುಖ ಪಾತ್ರದಲ್ಲಿರುವ ನಟಿಸಿರುವ ಇರೈವನ್ ಸಿನಿಮಾಗೆ ನಿರ್ದೇಶಕ ಐ.ಅಹಮದ್ ಆಕ್ಷನ್ ಕಟ್ ಹೇಳಿದ್ದರು. ಐಶ್ವರ್ಯಾ ಸುರೇಶ್, ವಿನೋದ್ ಕಿಶನ್, ಆಶಿಶ್ ವಿದ್ಯಾರ್ಥಿ, ವಿಜಯಲಕ್ಷ್ಮಿ ಫಿರೋಜ್, ಅಶ್ವಿನ್ ಕುಮಾರ್ ಲಕ್ಷ್ಮೀಕಾಂತ್ ಮತ್ತು ರಾಹುಲ್ ಬೋಸ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು. ಈ ಚಿತ್ರದ ನೆಗೆಟಿವ್ ರೋಲ್‌ನಲ್ಲಿ ರಾಹುಲ್ ಬೋಸ್ ಕಾಣಿಸಿಕೊಂಡಿದ್ದಾರೆ. 

 'ಇರೈವನ್' ಸಿನಿಮಾ ಕಥೆ ಏನು?
ಇರೈವನ್ ಯುವತಿಯರನ್ನು ಕ್ರೂರವಾಗಿ ಕೊಲ್ಲುವ ಸೈಕೋ ಕಿಲ್ಲರ್ ಕಥೆಯನ್ನು ಹೇಳುತ್ತದೆ. ಸೈಕೋ ಕಿಲ್ಲರ್ ಬ್ರಹ್ಮನಾಗಿ ರಾಹುಲ್ ಬೋಸ್ ನಟಿಸಿದ್ದಾರೆ. ಬ್ರಹ್ಮ ಎಂಬ ಪಾತ್ರಕ್ಕೆ ಜೀವ ತುಂಬಿರುವ ರಾಹುಲ್ ಬೋಸ್ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ. ಇನ್ನು ಜಯಂ ರವಿ ಇಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ನ್ಯಾಯಕ್ಕಾಗಿ ಹೋರಾಡುವ ಗುಣವನ್ನು ಈ ಪಾತ್ರ ಹೊಂದಿರುತ್ತದೆ. ನಗರದಲ್ಲಿ ನಡೆಯುವ ಸರಣಿ ಕೊಲೆಗಳ ಪ್ರಕರಣ ಕೈಗೆತ್ತಿಕೊಳ್ಳುವ ಹೀರೋ ಒಂದೊಂದೇ ಕೇಸ್ ಪರಿಹರಿಸುತ್ತಾ ಹೋದಾಗ ಕಥೆಗೆ ಒಂದಾದ ನಂತರ ಒಂದು ಟ್ವಿಸ್ಟ್ ಸಿಗುತ್ತದೆ. 

ಇದನ್ನೂ ಓದಿ: ಕೇವಲ 70 ಕೋಟಿ ಸಿನಿಮಾ ಮಾಡಿದ್ದು 2,070 ಕೋಟಿ ಕಲೆಕ್ಷನ್;  ಸಿನಿಮಾದಲ್ಲಿರೋ ಅಪ್ಪ ತುಂಬಾನೇ ಡೇಂಜರ್!

ಪೊಲೀಸ್ ಅಧಿಕಾರಿ ಮತ್ತು ಸೈಕೋ ಕಿಲ್ಲರ್ ನಡುವಿನ ರೇಸ್ ನಿಮ್ಮನ್ನು ರೋಮಾಂಚನಗೊಳಿಸುತ್ತದೆ. ನೀವು ಕಲ್ಪನೆಯಲ್ಲಿಯೂ ಊಹಿಸಿಕೊಳ್ಳದ ರೀತಿಯಲ್ಲಿ ಕ್ಲೈಮ್ಯಾಕ್ಸ್ ಕೊನೆಯಾಗುತ್ತದೆ. ಸಿನಿಮಾ ನೋಡಿದ ಬಳಿಕ ದೀರ್ಘ ಸಮಯದವರೆಗೆ ಸೈಕೋ ಕಿಲ್ಲರ್ ಬ್ರಹ್ಮ ನಿಮ್ಮ ಮನಸ್ಸಿನಲ್ಲಿಯೇ ಉಳಿಯುತ್ತಾನೆ. ಸದ್ಯ ಈ ಸಿನಿಮಾವನ್ನು Netflixನಲ್ಲಿ ವೀಕ್ಷಿಸಬಹುದು. 

'ಇರೈವನ್' ಚಿತ್ರವು ಸೆಪ್ಟೆಂಬರ್ 28, 2023 ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು.  Netflixನಲ್ಲಿ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಈ ಸಿನಿಮಾ ವೀಕ್ಷಿಸಬಹುದು. ಜಯಂ ರವಿ ಮತ್ತು ನಯನತಾರಾ ಅಭಿನಯದ ಈ ಚಿತ್ರ ಬಜೆಟ್ 4.5 ಕೋಟಿಯಲ್ಲಿ ತಯಾರಾಗಿತ್ತು. ಬಾಕ್ಸ್‌ ಆಫಿಸ್‌ನಲ್ಲಿ 22.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಇದನ್ನೂ ಓದಿ: ಸೌಥ್‌ನ ರಿಮೇಕ್‌ ಆದ್ರೂ 60ಕ್ಕೆ 379 ಕೋಟಿ ಗಳಿಕೆ; ಮುಳುಗುತ್ತಿದ್ದ ನಟನಿಗೆ ಆಸರೆಯಾದ ಸೂಪರ್‌ ಹಿಟ್ ರೊಮ್ಯಾಂಟಿಕ್ ಸಿನಿಮಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?