
ಜಾಹೀರಾತುಗಳು ಇಂದು ಅದೆಷ್ಟರ ಮಟ್ಟಿಗೆ ಮೋಡಿಮಾಡುತ್ತವೆ ಎಂದರೆ, ತಮ್ಮ ನೆಚ್ಚಿನ ತಾರೆಯರು ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡರೆ, ಅದನ್ನೇ ಹೋಗಿ ಖರೀದಿ ಮಾಡುವ ದೊಡ್ಡ ವರ್ಗವೇ ಇದೆ. ಸೆಲೆಬ್ರಿಟಿಗಳು ತಿಂದದ್ದನ್ನೇ ತಿನ್ನುವುದು, ಕುಡಿದಿದ್ದನ್ನೇ ಕುಡಿಯವುದು, ಅವರನ್ನೇ ಅನುಸರಿಸುವುದು, ಕ್ರೀಮು, ಸೋಪು, ಶ್ಯಾಂಪು, ಬಟ್ಟೆ... ಅಬ್ಬಬ್ಬಾ... ಇವರನ್ನೇ ಸರ್ವಸ್ವ ಎಂದುಕೊಂಡವರಿಗೆ ಲೆಕ್ಕವಿಲ್ಲ. ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆದು ವಿಷಕಾರಕ ಪಾನೀಯವನ್ನು ಸೇವನೆ ಮಾಡುವ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಚಿತ್ರನಟರು, ಕ್ರಿಕೆಟಿಗರನ್ನು ಅನುಸರಿಸಿ ಅದನ್ನೇ ಸೇವಿಸುವುದು, ಪಾನ್ ಮಸಾಲಾ ತಿನ್ನುವುದು, ಸಿನಿಮಾಗಳಲ್ಲಿ ಚಿತ್ರ ನಟರು ಮಾಡಿದಂತೆ ಧಮ್ ಎಳೆಯುವುದು, ಮದ್ಯ ಸೇವನೆ ಮಾಡುವುದು, ಲಾಂಗು-ಮಚ್ಚು ಹಿಡಿದು ರಕ್ತಪಾತ ಹರಿಸುವುದು... ಅಬ್ಬಬ್ಬಾ ಅಭಿಮಾನಿಗಳು ಮಾಡುವ ಕೆಲಸ ಒಂದಾ, ಎರಡಾ? ಆದರೆ ಅಸಲಿಯತ್ತಿಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಈ ಸೆಲೆಬ್ರಿಟಿಗಳು ಅವುಗಳನ್ನು ಸೇವನೆ ಮಾಡೇ ಇರುವುದಿಲ್ಲ ಎನ್ನುವುದು ಪಾಪ ಅವರನ್ನು ಅನುಸರಿಸುವ ಅವರ ಅಭಿಮಾನಿಗಳಿಗೆ ಗೊತ್ತೇ ಇರುವುದಿಲ್ಲ. ದುಡ್ಡು ಪಡೆದು ಅವರು ಜನರನ್ನು ಮರಳು ಮಾಡುತ್ತಾರೆ ಎನ್ನುವ ಅರಿವೂ ಇರುವುದಿಲ್ಲ.
ಕೆಲ ದಿನಗಳ ಹಿಂದಷ್ಟೇ ನಟಿ ಆಲಿಯಾ ಭಟ್ ವಿಡಿಯೋ ಒಂದು ವೈರಲ್ ಆಗಿತ್ತು. ನಟಿ ಆಲಿಯಾಗೆ ನೆತ್ತಿಯ ಮೇಲಿನ ಕೂದಲೆಲ್ಲವೂ ಉದುರಿ ಹೋಗಿರುವುದು ರಿವೀಲ್ ಆಗಿತ್ತು. ಆದರೆ ನಟಿ ಮಾತ್ರ ಶ್ಯಾಂಪೂ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಅಂಥದ್ದೇ ಇನ್ನೊಂದು ಉದಾಹರಣೆ ರಿವೀಲ್ ಆಗಿದೆ. ಇದು ನಟಿ ಯಾಮಿ ಗೌತಮ್ಅವರದ್ದು. ಕೆಲವರ ಪ್ರತಿಭಟನೆಯಿಂದ 2-3 ವರ್ಷಗಳ ಹಿಂದೆ ಹೆಸರು ಬದಲಾಯಿಸಿದ್ದ ಬ್ಯೂಟಿ ಕ್ರೀಮ್ ಒಂದರ ಜಾಹೀರಾತಿನಲ್ಲಿ ಯಾಮಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ಹಚ್ಚಿದರೆ ತಮ್ಮಂತೆಯೇ ಗ್ಲೋ ಆಗಬಹುದು ಎಂದು ಅವರು ಈ ಜಾಹೀರಾತಿನಲ್ಲಿ ಹೇಳುತ್ತಾರೆ. ಆದರೆ, ಅವರಿಗೆ ಚರ್ಮದ ಸಮಸ್ಯೆ ಇರುವ ವಿಷಯವೊಂದು ರಿವೀಲ್ ಆಗಿದೆ. ಕೆಲ ವರ್ಷಗಳ ಹಿಂದೆ ನಟಿಯೇ ಈ ಬಗ್ಗೆ ಖುದ್ದು ಹೇಳಿಕೊಂಡಿದ್ದರು. ಅದು ಈಗ ಮತ್ತೊಮ್ಮೆ ವೈರಲ್ ಆಗುತ್ತಿದೆ.
ಶ್ಯಾಂಪೂ ಜಾಹೀರಾತಲ್ಲಿ ಕಾಣಿಸಿಕೊಳ್ಳೋ ನಟಿ ಆಲಿಯಾ ಭಟ್ ನಿಜ ಬಣ್ಣ ಬಯಲಾಗೋಯ್ತು! ಫ್ಯಾನ್ಸ್ ಶಾಕ್
ಅಷ್ಟಕ್ಕೂ, ನಟಿಗೆ ಇರುವುದು ಕೆರಟಾಸಿಸ್ ಪಿಲಾರಿಸ್ (keratosis pilaris) ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಚರ್ಮರೋಗ ತಜ್ಞರ ಪ್ರಕಾರ, keratosis pilaris ಚರ್ಮದ ಕೂದಲು ಅಥವಾ ಕೋಶಕಗಳಲ್ಲಿ ಕೆರಾಟಿನ್ ಎಂಬ ಪ್ರೋಟೀನ್ ರಚನೆಯು ರಂಧ್ರಗಳನ್ನು ನಿರ್ಬಂಧಿಸುವುದಿಂದ ಉಂಟಾಗುವ ಸಮಸ್ಯೆ. ಇದರ ಪರಿಣಾಮವು ಚರ್ಮದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸಮಸ್ಯೆಯಲ್ಲಿ, ಚರ್ಮವು ಒರಟಾಗಿರುತ್ತದೆ, ಕಲೆಗಳು ಮತ್ತು ಸಣ್ಣ ಮೊಡವೆಗಳು ಅದರ ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಈ ಮೊಡವೆಗಳ ಬಣ್ಣವು ಕೆಂಪು-ಕಂದು ಆಗಿರಬಹುದು. ಮೊಡವೆಗಳು ಕೆನ್ನೆ, ಕೈ ಅಥವಾ ತೊಡೆಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಇದರ ಬಗ್ಗೆ ಮಾಹಿತಿ ನೀಡಿದ್ದ ನಟಿ, ತಮಗೆ ಈ ಸಮಸ್ಯೆ ಇದ್ದು, ಗುಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಅಥವಾ ಸಂಪೂರ್ಣವಾಗಿ ವಾಸಿಯಾಗುವುದಿಲ್ಲ ಎಂದು ಹೇಳಿದ್ದರು.
ಅಂದಹಾಗೆ, ನಟಿ, ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವ ಸಂದರ್ಭದಲ್ಲಿ ಸಾಕಷ್ಟು ಮೇಕಪ್ ಮಾಡಿಕೊಳ್ಳುತ್ತಿದ್ದರಂತೆ. ಆದರೆ, ಇದರಿಂದ ಸಮಸ್ಯೆ ಹೆಚ್ಚಾಗುವ ಕಾರಣ, ನಂತರ ಹಾಗೆ ಮಾಡಲು ಹೋಗುತ್ತಿಲ್ಲ ಎಂದಿದ್ದಾರೆ. ಆದರೆ ಅನಿವಾರ್ಯದ ಸಂದರ್ಭಗಳಲ್ಲಿ ಅದರಲ್ಲಿಯೂ ಬ್ಯೂಟಿ ಕ್ರೀಮ್ನಂಥ ಜಾಹೀರಾತುಗಳಲ್ಲಿ ಮೇಕಪ್ ಅನಿವಾರ್ಯ ಆಗಿರುವುದಿಂದ ಮೇಕಪ್ ಮೊರೆ ಹೋಗಲೇಬೇಕಾಗಿದೆ ನಟಿಗೆ. ಅಷ್ಟಕ್ಕೂ, ಕೆರಾಟಾಸಿಸ್ ಪಿಲಾರಿಸ್ ಗಂಭೀರ ಕಾಯಿಲೆಯೇನಲ್ಲ ಎನ್ನುತ್ತಾರೆ ವೈದ್ಯರು. ಸರಿಯಾದ ಚಿಕಿತ್ಸೆಯೊಂದಿಗೆ, ಇದನ್ನು ತಕ್ಕಮಟ್ಟಿಗೆ ಪರಿಹರಿಸಬಹುದು ಎನ್ನುವುದು ಅವರ ಮಾತು. ಇದು ತುರಿಕೆ ಅಥವಾ ಸುಡುವಿಕೆಯಂತಹ ಸಮಸ್ಯೆಗಳನ್ನು ಸಹ ಉಂಟುಮಾಡುವುದಿಲ್ಲ. ಆದಾಗ್ಯೂ, ಗುಣವಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಸರಿಯಾದ ಚಿಕಿತ್ಸೆಯಿಂದ ಈ ಸಮಸ್ಯೆಯನ್ನು ನಿಯಂತ್ರಿಸಬಹುದು ಎನ್ನುತ್ತಾರೆ. ಅಂದಹಾಗೆ ನಟಿ ಈಗ ಆ ಸಮಸ್ಯೆಯಿಂದ ಮುಕ್ತರಾಗಿದ್ದಾರೋ ಇಲ್ಲವೋ ಎನ್ನುವ ಅಪ್ಡೇಟ್ ಇನ್ನೂ ಹೊರಬಂದಿಲ್ಲ.
ಯುವಕರೇ ಎಚ್ಚರ, ಎಚ್ಚರ... ಮೂತ್ರ ಶೇಖರಿಸಿಟ್ಟು ಗರ್ಭಿಣಿಯಾಗ್ತಾರೆ! ಹೊಸ ವಂಚನೆ ಬಗ್ಗೆ ಇವಳ ಬಾಯಲ್ಲೇ ಕೇಳಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.