ಚಿತ್ರ-ವಿಚಿತ್ರ ಬಟ್ಟೆಗಳಿಂದಲೇ ಸದ್ದು ಮಾಡುತ್ತಿರುವ ಉರ್ಫಿ ಜಾವೇದ್‌ಗೆ ಸಾರ್ವಜನಿಕವಾಗಿಯೇ ಸೆಕ್ಸ್ ಕುರಿತು 15 ವರ್ಷದ ಬಾಲಕ ಕೇಳಿದ್ದೇನು?
ಉರ್ಫಿ ಜಾವೇದ್ ಎಂದಾಕ್ಷಣ ಕಣ್ಣಿಗೆ ಬರುವುದು ಚಿತ್ರ-ವಿಚಿತ್ರ ಅವತಾರದ ನಟಿಯೇ. ಒಮ್ಮೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್ ನೀಡುವ ನಟಿ ಈಕೆ. ದಿನವೂ ಬಟ್ಟೆಗಳಿಂದಲೇ ಟ್ರೋಲ್ (Troll) ಆಗುವುದು ಎಂದರೆ ತುಂಬಾ ಖುಷಿ ಈಕೆಗೆ. ಇದೇ ಕಾರಣಕ್ಕೆ ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿಯ ವಿಚಿತ್ರ ವೇಷ ಮಾತ್ರ ಮುಂದುವರೆದೇ ಇದೆ. ಕೆಲ ದಿನಗಳ ಹಿಂದಷ್ಟೇ ನನ್ನದು ಫ್ಲ್ಯಾಟ್ ಚೆಸ್ಟ್ ಎಂದು ಹೇಳುವ ಡಿಜಿಟಲ್ ಬೋರ್ಡ್ ಹಾಕಿಕೊಂಡು ಸುತ್ತಾಡಿದ್ದ ಉರ್ಫಿ ಕೊನೆಗೆ ಎದೆ ಮೇಲೆ ಉಡ ಬಿಟ್ಕೊಂಡು ಸದ್ದು ಮಾಡಿದ್ದರು. ಉಡ ಅವರ ಮೈಮೇಲೆ ಹರಿದಾಡುವಂತೆ ಕಾಣುವ ವಿಡಿಯೋ ಶೇರ್ ಮಾಡಿದ್ದರು.
ಕಳೆದ ಮೂರು ವರ್ಷಗಳಿಂದ ಯಾರ ಜೊತೆಯೂ ಸೆಕ್ಸ್ ಮಾಡಿಲ್ಲ ಎಂದಿದ್ದರು. ಯಾವುದೇ ಪುರುಷನಿಗೆ ಕಿಸ್ ಕೂಡ ನೀಡಿಲ್ಲ. ಯಾರ ಜೊತೆಯೂ ಆಕೆ ರೋಮ್ಯಾಂಟಿಕ್ ಆಗಿ ಮಾತನಾಡಿಲ್ಲ ಎಂದೂ ಸಾರ್ವಜನಿಕವಾಗಿಯೇ ಯಾವುದೇ ಹಿಂಜರಿಕೆ ಇಲ್ಲದೇ ಬಹಿರಂಗಪಡಿಸಿದ್ದ ನಟಿಗೆ ಈಗ ನೇರವಾಗಿ ಇದೇ ಪ್ರಶ್ನೆಯನ್ನು ಮಾಡಿದ್ದಾನೆ 15 ವರ್ಷದ ಬಾಲಕ! ಈ ಕುರಿತು ನಟಿ ಖುದ್ದು ಹೇಳಿಕೊಂಡಿದ್ದು, ಬಾಲಕನೊಬ್ಬನಿಗೆ ಇಂಥ ಪ್ರಶ್ನೆಯನ್ನು ಕೇಳಿರುವುದಕ್ಕೆ ನನಗೆ ಶಾಕ್ ಆಯಿತು ಎಂದಿದ್ದಾರೆ. ನನ್ನ ತಾಯಿ ಮತ್ತು ಸಹೋದರಿಯರ ಎದುರೇ ಸಾರ್ವಜನಿಕವಾಗಿಯೇ ಬಾಲಕ ಇಂಥದ್ದೊಂದು ಪ್ರಶ್ನೆ ಕೇಳಿರುವ ಬಗ್ಗೆ ನಟಿ ಶಾಕ್ ಆಗಿದ್ದಾರೆ. ಇದರ ಬಗ್ಗೆ ನಟಿ ಬರೆದುಕೊಳ್ಳುತ್ತಲೇ ಪರ-ವಿರೋಧಗಳ ಚರ್ಚೆ ಶುರುವಾಗಿದೆ.
3 ವರ್ಷದಿಂದ ಸೆಕ್ಸೇ ಮಾಡಿಲ್ಲ ಅಂದ ಉರ್ಫಿ ಎದೆ ಮೇಲೆ ಉಡ ಬಿಟ್ಕೊಳೋದಾ? ಕಮೆಂಟಿಗರು ಸುಮ್ನೆ ಇರ್ತಾರಾ?
What is your body count ಎಂದು ಬಾಲಕ ಪ್ರಶ್ನಿಸಿದ್ದಾನೆ. ಇದರ ಅರ್ಥ ಎಷ್ಟು ಜನರ ಜೊತೆ ಮಲಗಿರುವೆ ಎಂದು, ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಎಷ್ಟು ಮಂದಿಯ ಜೊತೆ ಸೆಕ್ಸ್ ಮಾಡಿರುವೆ ಎನ್ನುವುದು. ಇಂಥದ್ದೊಂದು ಪ್ರಶ್ನೆ ಹದಿನೈದು ವರ್ಷದ ಬಾಲಕನಿಂದ ಸಾರ್ವಜನಿಕವಾಗಿ ಬಂದಿರುವುದಕ್ಕೆ ಕಮೆಂಟಿಗರಿಂದ ವಿಭಿನ್ನ ರೀತಿಯಲ್ಲಿ ಅಭಿಪ್ರಾಯ ಮೂಡಿದೆ. ಇಂಥ ಪ್ರಶ್ನೆಗಳನ್ನು ಎಳೆಯ ವಯಸ್ಸಿನವರಲ್ಲಿಯೂ ಹುಟ್ಟುಹಾಕಲು ಕಾರಣ, ನಿನ್ನಂಥ ನಟಿಯರೇ ಎಂದು ಉರ್ಫಿಗೇ ಹಲವರು ತಿರುಗೇಟು ಕೊಟ್ಟಿದ್ದರೆ, ಪಾಲಕರು ತಮ್ಮ ಮಕ್ಕಳನ್ನು ಬೆಳೆಸಿರುವ ರೀತಿಯನ್ನು ಇದು ತೋರಿಸುತ್ತದೆ ಎಂದು ಮತ್ತೆ ಕೆಲವರು ಹೇಳಿದ್ದಾರೆ! ಸೋಷಿಯಲ್ ಮೀಡಿಯಾ, ಬೆಳೆಯುತ್ತಿರುವ ತಂತ್ರಜ್ಞಾನ, ಮೊಬೈಲ್ ಮಾಯೆ... ಇವೆಲ್ಲವುಗಳಿಂದ ಇಂದು ಸೆಕ್ಸ್ ವಿಡಿಯೋಗಳನ್ನೇ ಯುವ ಪೀಳಿಗೆ ಹೆಚ್ಚೆಚ್ಚು ನೋಡುತ್ತಿರುವ ಕಾರಣ, ಸಾರ್ವಜನಿಕವಾಗಿಯೇ ಇಂಥ ಪ್ರಶ್ನೆ ಕೇಳುವ ಧೈರ್ಯ ಬರುತ್ತಿರುವುದು ಆತಂಕದ ವಿಷಯ ಎಂದು ಮತ್ತೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನನ್ನ ಕುಟುಂಬದ ಜೊತೆಗೆ ಹೋಗುತ್ತಿರುವಾಗ ಎಲ್ಲರ ಎದುರೇ ಬಾಲಕ ಇಂಥ ಪ್ರಶ್ನೆ ಕೇಳಿದ ಎಂದು ನಟಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆಗಳನ್ನು ಕೇಳಿದ ಮೇಲೆ ಆದರೂ ವಿಚಿತ್ರ ವೇಷ ಬಿಡುವೆಯಾ ಎಂದು ಹಲವರು ಪ್ರಶ್ನಿಸಿದ್ದಾರೆ. ಇದರಲ್ಲಿ ಬಾಲಕನ ತಪ್ಪು ಇಲ್ಲ ಎನ್ನುವುದು ಅವರ ವಾದ. ಇದಕ್ಕೆಲ್ಲಾ ಕಾರಣವನ್ನು ಖುದ್ದು ನಟಿಯರೇ ಯೋಚಿಸಬೇಕಿದೆ. ಅಸಭ್ಯ, ಅಶ್ಲೀಲ ಎನ್ನುವ ವಿಡಿಯೋ, ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮುನ್ನ ಇನ್ನಾದರೂ ಯೋಚನೆ ಮಾಡಿ, ಸಾರ್ವಜನಿಕವಾಗಿ ಮರ್ಯಾದೆ ಹೋದರೆ ನಿಮಗೇನೂ ಆಗುವುದಿಲ್ಲ ಎನ್ನುವುದು ನಿಜವಾದರೂ, ಸಭ್ಯ ಮಹಿಳೆಯರು ಕೂಡ ಇಂಥ ಮುಜುಗರವನ್ನು ಅನುಭವಿಸಬೇಕಾಗುವುದು ದುರದೃಷ್ಟಕರ ಎನ್ನುತ್ತಿದ್ದಾರೆ ಹಲವರು.
ಮಗಳು ಸಾರಾ ಅಲಿಗೆ ಸೆಕ್ಸ್ ಬಗ್ಗೆ ಹೀಗೆ ಪ್ರಶ್ನೆ ಕೇಳೋದಾ ನಟಿ ಕರೀನಾ ಕಪೂರ್? ನೆಟ್ಟಿಗರು ಗರಂ