
ಮೋಹನ್ ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್ ತಮ್ಮ ಹೊಸ ಚಿತ್ರವನ್ನು ಒಟ್ಟಿಗೆ ಘೋಷಿಸುವ ಮೂಲಕ ಮತ್ತೊಮ್ಮೆ ಫ್ಯಾನ್ಸ್‌ಗೆ ಬಿಗ್ ಸರ್ಪೈಸ್ ಕೊಟ್ಟಿದ್ದಾರೆ. 12th ಮ್ಯಾನ್ ಸಸ್ಪೆನ್ಸ್-ಥ್ರಿಲ್ಲರ್ ಈಗಾಗಲೇ ಹವಾ ಸೃಷ್ಟಿಸಿದೆ.
ಈ ಚಿತ್ರವು ಮೋಹನ್ ಲಾಲ್ ಮತ್ತು ಜೀತು ಜೋಸೆಫ್ ಅವರ ದೃಶ್ಯಂ, ದೃಶ್ಯಂ 2 ಮತ್ತು ರಾಮ್ ಸೇರಿದಂತೆ ಅನೇಕ ಸಿನಿಮಾ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಪೋಸ್ಟರ್ ಪ್ರಕಟಿಸಿದ ಮೋಹನ್ ಲಾಲ್, 12th ಮ್ಯಾನ್ ಮೊದಲ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
ಸೋನಮ್ ಕಪೂರ್ - ಮೊಹನ್ ಲಾಲ್: ಬಾಹುಬಲಿ ಸಿನಿಮಾ ರಿಜೆಕ್ಟ್ ಮಾಡಿದ್ರು ಈ ಟಾಪ್ ಸ್ಟಾರ್ಸ್
ಆಂಟನಿ ಪೆರುಂಬಾವೂರ್ ನಿರ್ಮಿಸಿದ ಜೀತು ಜೋಸೆಫ್ ಅವರೊಂದಿಗೆ ನನ್ನ ಮುಂಬರುವ '12th ಮ್ಯಾನ್ ಸಿನಿಮಾ ಘೋಷಿಸಲು ಸಂತೋಷವಾಗುತ್ತಿದೆ ಎಂದಿದ್ದಾರೆ. ಪೋಸ್ಟರ್‌ನಲ್ಲಿ ಬಂಗಲೆಯ ಹೊರಗೆ ಒಬ್ಬ ವ್ಯಕ್ತಿ ನಿಂತಿರುವುದನ್ನು ಕಾಣಬಹುದು. ಹೊಸ ಚಿತ್ರದ ಬಗ್ಗೆ ಸಾಕಷ್ಟು ಉತ್ಸುಕರಾಗಿರುವ ಮೋಹನ್ ಲಾಲ್ ಅಭಿಮಾನಿಗಳು ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ "ಬೆಸ್ಟ್ ಈಸ್ ಬ್ಯಾಕ್ ಬ್ಯಾಕ್" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋಹನ್ ಲಾಲ್ ಅವರ ಕೊನೆಯ ಬ್ಲಾಕ್ ಬಸ್ಟರ್ ದೃಶ್ಯಂ2ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ದೃಶ್ಯಂನಲ್ಲಿ ಮೋಹನ್ ಲಾಲ್ ಫ್ಯಾಮಿಲಿ ಮ್ಯಾನ್ ಜಾರ್ಜ್ ಕುಟ್ಟಿ ಪಾತ್ರದಲ್ಲಿ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.