75 ವರ್ಷದ ನಿರ್ದೇಶಕ ಆ್ಯಂಟೋನಿ ಈಸ್ಟ್‌ಮನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿರ್ದೇಶಕ, ನಿರ್ಮಾಪಕ ಹಾಗೂ ಛಾಯಾಗ್ರಾಹಕ ಆ್ಯಂಟೋನಿ ಈಸ್ಟ್‌ಮನ್ ಹೃದಯಾಘಾತಕ್ಕೆ ಒಳಗಾಗಿ ಕೇರಳದ ತ್ರಿಶೂರ್ ಮೆಡಿಕಲ್ ಕಾಲೇಜ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 3ರಂದು ಕೊನೆ ಉಸಿರೆಳೆದಿದ್ದಾರೆ. ಇಡೀ ಮಾಲಿವುಡ್ ಚಿತ್ರರಂಗ ಇವರ ಸಾವಿಗೆ ಕಂಬನಿ ಮಿಡಿದಿದೆ.
ನಟಿ ಮಂದಿರಾ ಬೇಡಿ ಪತಿ, ನಿರ್ದೇಶಕ ರಾಜ್ ಕೌಶಲ್ ಇನ್ನಿಲ್ಲ
undefined
ಆ್ಯಂಟೋನಿ ಈಸ್ಟ್‌ಮ್ಯಾನ್ ಹುಟ್ಟಿದ್ದು ಕೇರಳದ ಕುಣಂಕುಲಂನಲ್ಲಿ. 60ರ ದಶಕದಲ್ಲಿ ಛಾಯಾಗ್ರಾಹಕನಾಗಿ ವೃತ್ತಿ ಆರಂಭಿಸಿ, ಆನಂತರ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಈಸ್ಟ್‌ಮನ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಹೊಂದಿದ್ದ ಆ್ಯಂಟೋನಿ 6 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
'ಇನಾಯೆ ಥೇಡಿ' ಚಿತ್ರದ ಮೂಲಕ ನಿರ್ದೇಶಕರಾದ ಆ್ಯಂಟೋನಿ ಇದೇ ಸಿನಿಮಾದಲ್ಲಿ ಸಿಲ್ಕ್ ಸ್ಮಿತಾರನ್ನು ಸಿನಿ ಜಗತ್ತಿಗೆ ಪರಿಚಯಿಸಿ ಕೊಟ್ಟರು. ವಿಜಯಲಕ್ಷ್ಮಿ ಆಗಿದ್ದ ಹೆಸರನ್ನು ಸ್ಮಿತಾ ಎಂದು ಬದಲಾಯಿಸಿದ್ದು ಆ್ಯಂಟೋನಿ. ಕೆಲವು ವರ್ಷಗಳ ಕಾಲ ಆ್ಯಂಟೋನಿ ನಾಯಕ, ಪೋಷಕ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆ್ಯಂಟೋನಿ ಅವರು ಪತ್ನಿ ಮೇರಿ, ಪುತ್ರ ಮತ್ತು ಪುತ್ರಿಯರನ್ನು ಅಗಲಿದ್ದಾರೆ.