ಲಾಕ್ಡೌನ್ ಮೂಲಕ ಸುಧಾರಿಸಿದ್ದೇನು?: ಸುಧಾರಾಣಿ ಮಾತು

By Suvarna NewsFirst Published Jul 29, 2020, 5:51 PM IST
Highlights

ಸುಧಾರಾಣಿಯವರು ಇತ್ತೀಚೆಗೆ ಖಾಸಗಿ ಆಸ್ಪತ್ರೆಯೊಂದರ ಮುಂದೆ ನಿಂತು ಅಲ್ಲಿನ ಚಿಕಿತ್ಸೆಯ ವಿಧಾನದ ಬಗ್ಗೆ ಸಿಡಿದಿದ್ದನ್ನು ಎಲ್ಲರೂ ನೋಡಿರುತ್ತೀರ. ಅನ್ಯಾಯ ಕಂಡಾಗ ಅದರ ವಿರುದ್ಧ ಗಟ್ಟಿ ಧ್ವನಿಯಾಗುವಲ್ಲಿ ಅವರು ಎಂದಿಗೂ ಹಿಂದೆ ಬಿದ್ದಿಲ್ಲ. ಹಾಗಾಗಿಯೇ ಆಕ್ಷನ್ ಪಾತ್ರಗಳನ್ನು ನಿಭಾಯಿಸದಿದ್ದರೂ ಅವರ ಪಾತ್ರಗಳಲ್ಲಿನ ಗಂಡುಬೀರಿ ವ್ಯಕ್ತಿತ್ವ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ. ಅಂಥವರು ಲಾಕ್ಡೌನ್ ದಿನ ಮತ್ತು ನಟನಾರಂಗ ಮೌನವಾದ ಘಳಿಗೆಗಳನ್ನು ಹೇಗೆ ಕಾಣುತ್ತಿದ್ದಾರೆ ಎನ್ನುವ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಅವರೊಂದಿಗೆ ಮಾತನಾಡಿದಾಗ ಸಿಕ್ಕ ಒಂದಷ್ಟು ಆಕರ್ಷಕ ಅಂಶಗಳನ್ನು ಇಲ್ಲಿ ನೀಡಲಾಗಿದೆ.
 

- ಶಶಿಕರ ಪಾತೂರು

ಕೊರೊನಾ ಕಾರಣದ ಲಾಕ್ಡೌನ್ ನಿಮ್ಮನ್ನು ಬದಲಾಯಿಸಿತೇ?
ಕೋವಿಡ್ 19 ಕಾರಣದಿಂದ ತುಂಬ ಜನ ಆರೋಗ್ಯ ಸಮಸ್ಯೆ, ಹಣಕಾಸಿನ ತೊಂದರೆ, ಸಾವು ಎಲ್ಲವನ್ನು ಅನುಭವಿಸಬೇಕಾಯಿತು. ಇದು ಎಲ್ಲರಿಗೂ ಗೊತ್ತು. ಆದರೆ ನಾನು ಲಾಕ್ಡೌನ್ ಮಾತ್ರ ಎದುರಿಸಬೇಕಾದವರ ಒಂದು ಪಾಸಿಟಿವ್ ಸೈಡನ್ನು ಹೇಳಲು ಇಷ್ಟಪಡುತ್ತೇನೆ. ಒಂದು ರೀತಿಯಲ್ಲಿ ಫಸ್ಟ್ ಲಾಕ್ಡೌನ್ ಚೆನ್ನಾಗಿಯೇ ಇತ್ತು. ಎಲ್ಲರೂ ಅವರವರ ಹೆಕ್ಟಿಕ್ ಲೈಫ್ ಸ್ಟೈಲ್ ನಲ್ಲಿನ ಓಡಾಟದಿಂದ ರಿಯಾಲಿಟಿಗೆ ಬರಲು ಸಹಕಾರಿಯಾಗಿತ್ತು. ಸಂಬಂಧಗಳ ಆಳದ ಅರಿವು, ಮೆಟೀರಿಯಲಿಸ್ಟಿಕ್ ಥಿಂಗ್ ಏನು ಬೇಕು, ಏನು ಬೇಡ, ಎಲ್ಲವೂ ಒಂದು ರೀತಿ ರಿಯಾಲಿಟಿ ಚೆಕ್ ತರಹ. ನಮ್ಮ ದೇಶದಲ್ಲಿ ಬಾಲ್ಯದಿಂದಲೇ ಎಲ್ಲದಕ್ಕೂ ಅವಲಂಬನೆಯನ್ನೇ ಕಲಿಸಿರುತ್ತೇವೆ. ಅಂಥ ಸಂದರ್ಭದಲ್ಲಿ ನಮ್ಮ ಕೆಲಸ ನಾವೇ ಮಾಡುವ ವಿಚಾರದಲ್ಲಿ ಇಂದಿನ ಯುವ ಸಮೂಹಕ್ಕೆ ಕೂಡ ಒಂದು ರೀತಿಯ ಅರಿವು ನೀಡಿತು. 

Latest Videos

ಈ ಕಾಲಘಟ್ಟ  ನಿಮ್ಮ ವೈಯಕ್ತಿಕ ಬದುಕಿನ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಿತು?
ಸಾಮಾನ್ಯವಾಗಿ ನಾನು ಟ್ರಾವೆಲ್ ಮಾಡುತ್ತಿರುತ್ತೇನೆ. ನನ್ನ ಮನೆಗೆ ಸಂಬಂಧಪಟ್ಟ ಕೆಲಸಗಳನ್ನು ನಾನೇ ಮಾಡುವುದರಲ್ಲಿ ನನಗೆ ಖುಷಿ. ನನ್ನ ಗಂಡ, ನನ್ನ ಮಗಳು, ನನ್ನ ಸಂಸಾರಕ್ಕೆ ನಾನು ಮಾಡುತ್ತಿದ್ದೇನೆ ಎನ್ನುವುದು ಒಂದು ರೀತಿ ಆತ್ಮತೃಪ್ತಿ ಕೊಡುತ್ತದೆ. ಅವರಿಗೆ ಏನು ಬೇಕು ಎನ್ನುವುದು ನನಗೆ ಗೊತ್ತು. ತರಕಾರಿ ತರುವುದರಿಂದ ಹಿಡಿದು, ಮನೆಗೆ ಬೇಕಾದ ವಸ್ತುಗಳನ್ನು ತರಲು ನಾನೇ ಹೋಗುತ್ತೇನೆ. ಅದಲ್ಲದೆ ವಾರಕ್ಕೊಮ್ಮೆ ಡಿನ್ನರ್, ಲಂಚ್ ಅಂತ ಫ್ಯಾಮಿಲಿಗೆ ಜೊತೆಗೆ, ಫ್ರೆಂಡ್ಸ್ ಜತೆಗೆ ಹೋಗುತ್ತಿರುತ್ತೇನೆ. ನನ್ನ ಮಗಳು ಸ್ಕೂಲಲ್ಲಿದ್ದಾಗ ಅವಳ ಕೆಲಸಗಳಿಗೆ ಪೇರೆಂಟ್ಸ್ ಮೀಟಿಂಗ್ಸ್‌ಗೆ ಎಲ್ಲ ನಾನೇ ಹೋಗುತ್ತಿದ್ದೆ. ನಟಿಯಾಗಿದ್ದರೂ ನನಗೆ ಲೈಫಲ್ಲಿ ಬ್ಯಾಲೆನ್ಸ್ ಇರಬೇಕಿತ್ತು. ಅಂದರೆ ಒಂದು ಸಾಧಾರಣ ಜೀವನ ಕೂಡ ಹೇಗೆ ಎನ್ನುವುದು ತಿಳಿದಿರಬೇಕಿತ್ತು. ನನ್ನ ಹಸ್ಬೆಂಡ್ ಅವರ ಕಚೇರಿ ಮನೆಯ ಪಕ್ಕದಲ್ಲೇ ಇರುವುದು. ಎಲ್ಲ ಬಂದ್ ಆದಾಗ ಅವರು ಸದಾ ಮನೇಲೇ  ಇರುವಂತಾಯಿತು.  ಉಳಿದಂತೆ ನಾನು ಮೊದಲಿನಿಂದಲೂ ಇತರ ಕಲಾವಿದರಿಗಿಂತ ವಿಭಿನ್ನವಾಗಿಯೇ ಇದ್ದೆ. ಈಗ ಅದೇ ಸರಿ ಎನ್ನುವ ಮನಸ್ಥಿತಿ ಮೂಡಿದೆ.

ಸದ್ಯದಲ್ಲೇ ಟಾಕೀಸ್ ತೆಗೀತಾರಂತೆ ಸೃಜನ್ ಲೋಕೇಶ್

ಒಟ್ಟಿನಲ್ಲಿ ನಿಮಗೂ ಒಂದು ಜ್ಞಾನೋದಯವಾಗಿದೆ ಎನ್ನಬಹುದೇ?
ಖಂಡಿತವಾಗಿ. ಉದಾಹರಣೆಗೆ ನಾನು ಒಬ್ಬ ನಟಿ. ನಟನೆ ಎನ್ನುವುದು ನನಗೆ ಇಷ್ಟವೇನೆ. ಆದರೆ, ಅದರ ಜೊತೆಯಲ್ಲೇ ಕೆಲವರು ವೀಕೆಂಡ್ ಪಾರ್ಟಿ ಮೊದಲಾದವುಗಳಿಗೆ ಹೋಗುವುದೆಲ್ಲ ಸಹಜ ಎಂದುಕೊಂಡಿರುತ್ತಾರೆ. ಆದರೆ ಅವೆಲ್ಲ ನನಗೆ ಇಷ್ಟವಲ್ಲ. ಆದರೆ ಹೆಚ್ಚಿನವರೆಲ್ಲ ಪಾರ್ಟಿ ಇಷ್ಟಪಡುತ್ತಿರುವುದನ್ನು ಕಂಡಾಗ ಅದೇ ಸಹಜವೇನೋ, ನಾನು ಅದನ್ನೆಲ್ಲ ಒಪ್ಪದಿರುವುದೇ ತಪ್ಪೇನೋ ಎನ್ನುವಂಥ ತುಮುಲ ನನ್ನೊಳಗೂ ಶುರುವಾಗುತ್ತಿತ್ತು! ಇದು ಒಂದು ಉದಾಹರಣೆ ಅಷ್ಟೇ; ಅಥವಾ ಅದೊಂದೇ ಅಂತ ಅಲ್ಲ. ನದಿಯಂತೆ ಒಂದೇ ಕಡೆ ಹರಿಯುತ್ತಿರುವ ವಾತಾವರಣದಲ್ಲಿ ನಾನೆಲ್ಲೋ ವಿರುದ್ಧ ನಿಂತು ಬಿಟ್ಟೆನೇನೋ ಎನ್ನುವ ಸಂದೇಹ ನನಗೆ ಬರುತ್ತಲೇ ಇತ್ತು. ಆದರೆ ಈ ಲಾಕ್ಡೌನ್ ಸಮಯದಲ್ಲಿ ಆದ ಅನುಭವಗಳು ನಾನು ಹೇಗಿದ್ದೀನೋ ಅದು ನೂರಕ್ಕೆ ನೂರರಷ್ಟು ಸರಿಯಾಗಿದೆ ಎನ್ನುವುದನ್ನು ಸಾಬೀತು ಮಾಡಿದವು. ಹಾಗಾಗಿ ಇದು ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಲು ಸಿಕ್ಕ ಸಂದರ್ಭ ಎಂದುಕೊಂಡಿದ್ದೀನಿ. 

ಯಶ್ ಮುಂದಿನ ಚಿತ್ರ ಯಾವುದು?

click me!