ತೆಲುಗು ಸಿನಿಮಾ 'ಭೀಷ್ಮ'ದಲ್ಲಿ ಅನಂತ್‌ನಾಗ್‌ ಟೈಟಲ್ ರೋಲ್!

By Kannadaprabha NewsFirst Published Nov 12, 2019, 9:15 AM IST
Highlights

ತೆಲುಗು ವೆಂಕಿ ಕುಡುಮುಲ ‘ಚಲೋ’ ನಿರ್ದೇಶಿಸಿ ಯಶಸ್ಸು ಕಂಡವರು. ಈಗ ‘ಭೀಷ್ಮ’ ಚಿತ್ರ ರೂಪಿಸುತ್ತಿದ್ದಾರೆ. ಇಲ್ಲಿ ಟೈಟಲ್ ರೋಲ್‌ನಲ್ಲಿ ಕನ್ನಡದ ಹಿರಿಯ ಅನಂತ್‌ನಾಗ್ ನಟಿಸುತ್ತಿದ್ದಾರೆ.

ಆರ್.ಕೇಶವಮೂರ್ತಿ

ತೆಲುಗಿನಲ್ಲಿ ಕನ್ನಡದ ಅನಂತ್‌ನಾಗ್ ಅವರಿಂದ ಪಾತ್ರ ಮಾಡಿಸುವ ವಿಶೇಷತೆ ಏನು?

ನಾನು ಬರೆದುಕೊಂಡಿದ್ದ ಪಾತ್ರ ತುಂಬಾ ಹೊಸತನದಿಂದ ಕೂಡಿತ್ತು. ಈ ಪಾತ್ರಕ್ಕೆ ಒಂದು ಹೊಸ ಮುಖ ಬೇಕಿತ್ತು. ಜತೆಗೆ ಅವರು ಪ್ರಬುದ್ಧ ಕಲಾವಿದ, ಲೆಜೆಂಡರಿ ಆಗಿರಬೇಕಿತ್ತು. ಆದರೆ, ತೆಲುಗಿನ ಯಾರನ್ನೇ ಈ ಪಾತ್ರಕ್ಕೆ ಹಾಕಿಕೊಂಡರೂ ‘ಇವರು ಇದೇ ಪಾತ್ರ ಮಾಡಿರುತ್ತಾರೆ’ ಎಂದು ಊಹೆ ಮಾಡಿಕೊಳ್ಳುತ್ತಾರೆ. ಹಾಗೆ ಊಹೆ ಮಾಡಲು ಆಗದೆ, ತೆಲುಗಿನವರಿಗೆ ಹೊಸ ಫೇಸ್ ಎನ್ನುವ ನಟ ಎಂದಾಗ ನನಗೆ ಅನಂತ್‌ನಾಗ್ ಅವರು ಸೂಕ್ತ ಅನಿಸಿತು.

ಅಪ್ಸರಧಾರಾ ಲೋಕಾರ್ಪಣೆ ಮಾಡಲಿದ್ದಾರೆ ಅನಂತ್ ನಾಗ್

ಅನಂತ್‌ನಾಗ್ ಅವರನ್ನು ನೀವು ನೋಡಿದ್ದು ಎಲ್ಲಿ, ಅವರು ಹೇಗೆ ಗೊತ್ತು?

ನಾನು ನಿರ್ದೇಶಕನಾಗುವ ಮೊದಲು ‘ಮಾಲ್ಗುಡಿ ಡೇಸ್’ನಲ್ಲಿ ನೋಡಿದ್ದೆ. ಆ ನಂತರ ನಾನು ‘ಭೀಷ್ಮ’ ಚಿತ್ರ ಮಾಡುವಾಗ ಅನಂತ್‌ನಾಗ್ ಅವರು ನೆನಪಾಗಿ, ಈಗ ಅವರು ಏನು ಮಾಡುತ್ತಿದ್ದಾರೆ ಎಂದು ಅವರ ಸಿನಿಮಾಗಳ ಪಟ್ಟಿ ನೋಡಿದೆ. ಆಗ ನನ್ನ ಗಮನ ಸೆಳೆದಿದ್ದು ‘ಗೋಧಿಬಣ್ಣ ಸಾಧಾರಣ ಮೈಕಟ್ಟು’. ಈ  ಸಿನಿಮಾ ನೋಡಿದೆ. ಅದರಲ್ಲಿ ಅನಂತ್‌ನಾಗ್ ನಟನೆ ನೋಡಿ ಮರುಳಾದೆ. ಅದರಲ್ಲೂ ಪುಷ್ಪ ಜತೆಗಿನ ತಮ್ಮ ಪ್ರೀತಿಯನ್ನು ವಿವರಿಸುವಾಗ ಅದ್ಭುತ ಅನಿಸಿತು. ಆ ನಂತರ ಅನಂತ್‌ನಾಗ್ ಅವರನ್ನು ಭೇಟಿ ಮಾಡಿದೆ.

ನೀವು ಕತೆ ಹೇಳಿದ ಕೂಡಲೇ ಒಪ್ಪಿಕೊಂಡ್ರಾ?

ಖಂಡಿತ ಇಲ್ಲ. ಯಾಕೆಂದರೆ ‘ನಾನು ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿಲ್ಲ’ ಎಂದು ನನ್ನ ಬಳಿ ಹೇಳಿದರು. ಕೊನೆಗೆ ನಾನೇ ಬೆಂಗಳೂರಿಗೆ ಬಂದು ಚಿತ್ರಕಥೆಯನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಕೊಟ್ಟೆ. ಕತೆ ಪೂರ್ತಿ ಓದಿ, ಅದರಲ್ಲಿನ ತಮ್ಮ ಪಾತ್ರದ ಮಹತ್ವ ತಿಳಿದುಕೊಂಡ ಮೇಲೆ ನಟಿಸುವುದಕ್ಕೆ ಒಪ್ಪಿಕೊಂಡರು.

ಅನಂತ್‌ನಾಗ್ ಅವರ ಪಾತ್ರವೇನು?

ಅವರ ಪಾತ್ರದ ಹೆಸರು ಭೀಷ್ಮ, ಚಿತ್ರದ ಟೈಟಲ್ ರೋಲ್ ಅವರದ್ದೇ. ಭೀಷ್ಮ ಆರ್ಗ್ಯಾನಿಕ್ ಕಂಪನಿಯ ಮಾಲೀಕನ ಪಾತ್ರ. ಪವರ್‌ಫುಲ್ ಕ್ಯಾರೆಕ್ಟರ್. ಚಿತ್ರದ ನಾಯಕ ನಿತಿನ್, ಅನಂತ್‌ನಾಗ್ ಹಾಗೂ ಈ ಭೀಷ್ಮ ಅನ್ನೋ ಪಾತ್ರಕ್ಕೆ ಏನು ಲಿಂಕು ಅನ್ನೋದೇ ಚಿತ್ರದ ಕತೆ.

ಕಾಸರಗೋಡಿಗೂ, ಅನಂತ್ ನಾಗ್‌ಗೂ ಏನು ನಂಟು?

ಅನಂತ್‌ನಾಗ್ ಪಾತ್ರ ಯಾವ ರೀತಿ ಇದೆ?

ನಾವು ತಿನ್ನುವ ಆಹಾರ ಎಷ್ಟು ವಿಷಪೂರಿತ ಎಂಬುದನ್ನು ಹೇಳುವಂತಹ ಪಾತ್ರ ಅವರದ್ದು. ಅದರಲ್ಲೂ ಆರ್ಗಾನಿಕ್ ಕೃಷಿಯ ಮಹತ್ವವನ್ನು ಮನರಂಜನೆ ಜತೆ ಇವರ ಪಾತ್ರದ ಮೂಲಕ ಹೇಳಲಾಗುತ್ತಿದೆ.

ನಿಮ್ಮ ಎರಡನೇ ಚಿತ್ರಕ್ಕೂ ರಶ್ಮಿಕಾ ಮಂದಣ್ಣ ಅವರೇ ನಾಯಕಿ ಆಗುತ್ತಿದ್ದಾರಲ್ಲ?

ಅವರು ನಿರ್ದೇಶಕನ ಕಲ್ಪನೆಯ ಪಾತ್ರಕ್ಕೆ ಜೀವ ತುಂಬುವ ನಟಿ. ‘ಕಿರಿಕ್ ಪಾರ್ಟಿ’ ಚಿತ್ರದಲ್ಲಿ ನೋಡಿದ್ದೆ. ‘ಚಲೋ’ ಚಿತ್ರಕ್ಕೆ ನಾಯಕಿ ಮಾಡಿಕೊಂಡೆ.

ನಿಮ್ಮ ಹಿನ್ನೆಲೆ ಹೇಳಬಹುದಾ?

ಕೃಷಿ ಪದವಿಧರ.

click me!