ರಾಧಿಕಾ ಕುಮಾರಸ್ವಾಮಿ ನಟನೆಯ ‘ದಮಯಂತಿ’ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಲಾಂಚ್ ನ.12ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ದರ್ಶನ್ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಧಿಕಾ ಕುಮಾರಸ್ವಾಮಿ ಜತೆ ಮಾತುಕತೆ.
ಅರ್. ಕೇಶವಮೂರ್ತಿ
ದರ್ಶನ್ ನಿಮ್ಮ ನಟನೆಯ ಚಿತ್ರದ ಕಾರ್ಯಕ್ರಮದ ಅತಿಥಿಗಳಾಗಿ ಬರುತ್ತಿದ್ದಾರೆ. ಹೇಗನಿಸುತ್ತಿದೆ?
ನಾನು ಮತ್ತು ದರ್ಶನ್ ತುಂಬಾ ವರ್ಷಗಳ ನಂತರ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿದ್ದೇವೆ. ಮಂಡ್ಯ ಹಾಗೂ ಅನಾಥದರು ಚಿತ್ರಗಳ ನಂತರ ಅವರನ್ನು ನಾನು ಭೇಟಿ ಮಾಡಿರಲಿಲ್ಲ. ಈಗ ನನ್ನ ನಟನೆಯ ‘ದಮಯಂತಿ’ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆಗೆ ಬರುತ್ತಿರುವುದು ಖುಷಿ ಕೊಟ್ಟಿದೆ. ಇದು ನನ್ನ ಹುಟ್ಟು ಹಬ್ಬಕ್ಕೆ ಸಿಗುತ್ತಿರುವ ಗಿಫ್ಟ್ ಎನ್ನಬಹುದು.
ನೀವಿಬ್ಬರು ಜತೆಯಾಗಿ ಸಿನಿಮಾ ಮಾಡುವ ಸಂದರ್ಭಗಳು ಬರಲಿಲ್ಲವೇ?
ನಿಜ ಹೇಳಬೇಕು ಅಂದರೆ ನಾನು ಚಿತ್ರರಂಗಕ್ಕೆ ರೀ ಎಂಟ್ರಿ ಆದದ್ದು ದರ್ಶನ್ ಚಿತ್ರನಿರ್ಮಿಸಬೇಕು ಎನ್ನುವ ಕನಸಿನೊಂದಿಗೆ. ಅವರಿಗಾಗಿ ಕತೆ ಹುಡುಕುತ್ತಿದ್ದಾಗಲೇ ‘ಲಕ್ಕಿ’ ಚಿತ್ರದ ಕತೆ ಕೇಳಿದ್ದು. ದರ್ಶನ್ ಅವರಿಗೆ ಕತೆ ಸಿಗದಿದ್ದಾಗ ನಾನು ನಟ ಯಶ್ ಅವರೊಂದಿಗೆ ‘ಲಕ್ಕಿ’ ಚಿತ್ರವನ್ನು ನಿರ್ಮಿಸಿದೆ.
ರಾಧಿಕಾ ಕುಮಾರಸ್ವಾಮಿ ಪತಿ, ಮಗಳೊಂದಿಗನ ಫೋಟೋಗಳು... ...
ಈಗಲೂ ಅವರ ಜತೆಗೆ ಸಿನಿಮಾ ಮಾಡುವ ಯೋಚನೆಗಳು ಇವೆಯೇ?
ಖಂಡಿತ ಇದೆ. ಯಾಕೆಂದರೆ ನಾನು ಕೇವಲ ನಟಿ ಮಾತ್ರವಲ್ಲ. ನಿರ್ಮಾಪಕಿ ಕೂಡ. ಬೇರೆ ನಾಯಕ, ನಾಯಕಿಯರಿರುವ ಒಳ್ಳೆಯ ಚಿತ್ರಗಳನ್ನು ನಿರ್ಮಿಸುವುದಕ್ಕೂ ನಾನು ರೆಡಿ. ಅದರಲ್ಲೂ ದರ್ಶನ್ ಅವರ ಸಿನಿಮಾ ಎಂದರೆ ಏನೂ ಯೋಚನೆ ಮಾಡದೆ ನಿರ್ಮಾಪಕಿ ಆಗುತ್ತೇನೆ.
ಮುಂದೆ ದರ್ಶನ್ ಅವರ ಜತೆ ನಾಯಕಿ ಆಗುವ ಅವಕಾಶಗಳು ಇವೆಯೇ?
ನಾನಂತೂ ಅವರ ಜತೆಗೆ ನಟಿಸುವ ಅಸೆ ಇದೆ. ಅವರಿಗೂ ಸೂಕ್ತ ಎನಿಸುವ ಕತೆ, ಆ ಕತೆಗೆ ನಾನು ನಾಯಕಿ ಆಗಬಹುದು ಎನ್ನುವುದಾದರೆ ನಾನು ದರ್ಶನ್ ಅವರೊಂದಿಗೆ ನಟಿಸುವುದಕ್ಕೆ ಸಿದ್ಧ.
ದರ್ಶನ್ ಎಂದಾಗ ನೆನಪಾಗುವುದು ಏನು?
ಅವತ್ತಿನಿಂದ ಇವತ್ತಿನವರೆಗೂ ಅದೇ ಒಳ್ಳೆಯತನ ಉಳಿಸಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಅಭಿಮಾನಿ ಸಮೂಹವನ್ನು ಒಳಗೊಂಡಿದ್ದರೂ ಯಾವುದೇ ಆ್ಯಟಿಟೂಡ್ ಇಲ್ಲ. ಇನ್ನೂ ‘ಅನಾಥರು’ ಚಿತ್ರದ ಶೂಟಿಂಗ್. ಅವರು ಗೇಮ್ ಆಡುವಾಗ ಮೋಸ ಮಾಡಿ ಓಡುತ್ತ ಕೆಳಗೆ ಬಿದ್ದಾಗ ಅವರ ಬೆನ್ನ ಮೇಲೆ ಕೂತು ಕತ್ತು ಹಿಡಿಯುವುದು, ಟ್ರೈನ್ನಲ್ಲಿ ಅವರ ಜತೆ ಜಗಳ ಆಡುವುದು... ಇದು ನನ್ನ ಫೇವರೇಟ್ ದೃಶ್ಯಗಳು. ಇಂಥ ದೃಶ್ಯಗಳಲ್ಲಿ ನಟಿಸುವಾಗ ನಾಯಕನ ಬೆಂಬಲ ತುಂಬಾ ಅಗತ್ಯ ಇರುತ್ತದೆ. ಆ ಸಮಯದಲ್ಲಿ ದರ್ಶನ್ ಅವರು ನನಗೆ ಕೊಟ್ಟ ಪ್ರೋತ್ಸಾಹ ಮರೆಯಲಾಗದು. ನನ್ನ ಮಗಳಿಗೂ ಈ ಚಿತ್ರ ಎಂದರೆ ಇಷ್ಟ.
ಹಾರರ್ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡರೆ ಹೇಗಿರುತ್ತದೆ? ..
ದಮಯಂತಿ ಚಿತ್ರ ಬಗ್ಗೆ ದರ್ಶನ್ ಅವರು ಹೇಳಿದ್ದೇನು?
ಚಿತ್ರದ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ಒಳ್ಳೆಯ ಸಿನಿಮಾ ಮಾಡಿದ್ದೀರಿ. ಅದ್ದೂರಿ ಮೇಕಿಂಗ್ ಸಿನಿಮಾ ಇದು ಎಂದು ಹೇಳಿ ಚಿತತ್ರದ ಟ್ರೇಲರ್ ಹಾಗೂ ಆಟಿಯೋ ಬಿಡುಗಡೆಗೆ ಬರಲು ಒಪ್ಪಿದ್ದಾರೆ.