ಇದೇನು ಕೈಬರಹವೋ, ಕಂಪ್ಯೂಟರ್​ ಪ್ರಿಂಟೊ? ವಿಶ್ವದ ಸುಂದರ ಹ್ಯಾಂಡ್​ರೈಟರ್​ ಪ್ರಶಸ್ತಿಗೆ ಭಾಜನ ಈ ಬಾಲಕಿ!

Published : Feb 10, 2025, 07:44 PM ISTUpdated : Feb 13, 2025, 11:45 AM IST
ಇದೇನು ಕೈಬರಹವೋ, ಕಂಪ್ಯೂಟರ್​ ಪ್ರಿಂಟೊ? ವಿಶ್ವದ ಸುಂದರ ಹ್ಯಾಂಡ್​ರೈಟರ್​ ಪ್ರಶಸ್ತಿಗೆ ಭಾಜನ ಈ ಬಾಲಕಿ!

ಸಾರಾಂಶ

ಮೊಬೈಲ್ ಯುಗದಲ್ಲಿ ಕೈಬರಹ ಮರೆಯಾಗುತ್ತಿರುವಾಗ, 17 ವರ್ಷದ ನೇಪಾಳದ ಪ್ರಕೃತಿ ಮಲ್ಲಾ ತಮ್ಮ ಸುಂದರ ಕೈಬರಹದಿಂದ ಜಾಗತಿಕ ಮನ್ನಣೆ ಗಳಿಸಿದ್ದಾರೆ. "ಪ್ರಪಂಚದ ಅತಿ ಸುಂದರ ಕೈಬರಹಗಾರ್ತಿ" ಎಂಬ ಬಿರುದು ಪಡೆದ ಇವರು, 8ನೇ ತರಗತಿಯಿಂದಲೇ ಪ್ರಸಿದ್ಧರಾಗಿದ್ದರು. ಯುಎಇ ರಾಯಭಾರಿ ಕಚೇರಿಗೆ ಬರೆದ ಪತ್ರ ಮತ್ತು ನೇಪಾಳ ಸೈನ್ಯದಿಂದ ಸನ್ಮಾನ ಇವರ ಸಾಧನೆಗೆ ಸಾಕ್ಷಿ.

ಈಗಿನ ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರಿಗೂ ಕೈಬರಹ ಎನ್ನುವುದೇ ದೊಡ್ಡ ತಲೆನೋವಾಗಿ ಬಿಟ್ಟಿದೆ. ಮೊಬೈಲ್​ ಯುಗದಲ್ಲಿ ಪೆನ್ನು ಹಿಡಿದು ಬರೆಯೋದನ್ನೇ ಎಷ್ಟೋ ಮಂದಿ ಮರೆತುಬಿಟ್ಟಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಸದ್ಯಕ್ಕಂತೂ ಪೆನ್ನೇ ಅನಿವಾರ್ಯ ಆಗಿರುವುದರಿಂದ ಕಷ್ಟಪಟ್ಟು ಕೈಯಲ್ಲಿ ಬರೆಯುವ ಪರಿಸ್ಥಿತಿ ಇದೆ. ಇದು ಇನ್ಯಾವಾಗ ಮಾಯವಾಗುತ್ತೋ ಗೊತ್ತಿಲ್ಲ. ಹೋಮ್​ವರ್ಕ್​ ಕೂಡ ಪಿಡಿಎಫ್​ ರೂಪದಲ್ಲಿ ವಾಟ್ಸ್​ಆ್ಯಪ್​ನಲ್ಲಿಯೇ ಕಳುಹಿಸುವ ಹಲವು ಶಾಲೆಗಳು ಇರುವುದರಿಂದ ಹೋಮ್​ವರ್ಕ್​ ಕೂಡ ಕೈಬರಹ ಬರೆಯದ ಸ್ಥಿತಿಯಲ್ಲಿ ನಮ್ಮ ಮಕ್ಕಳಿದ್ದಾರೆ. ಇದರ ಮಧ್ಯೆ ಸುಂದರ ಹ್ಯಾಂಡ್​ರೈಟಿಂಗ್​ ಎನ್ನುವ ಕಲ್ಪನೆಯೇ ದೂರವಾಗಿದೆ. ಕೈಯಲ್ಲಿ ಬರೆಯಲು ಬಂದರೆ ಸಾಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಆದರೆ ಇಲ್ಲೊಬ್ಬ 17 ವರ್ಷದ ಬಾಲಕಿ ಈಗ ಕೈಬರಹದಿಂದ ಸಕತ್​ ಫೇಮಸ್​ ಆಗಿದ್ದಾರೆ. ಖ್ಯಾತಿ ಗಳಿಸಿರುವುದು ಮಾತ್ರವಲ್ಲದೇ, ಪ್ರಪಂಚದ  ಅತಿ ಸುಂದರ ಕೈಬರಹಗಾರ್ತಿ ಎನ್ನುವ ಬಿರುದನ್ನು ಕೂಡ ಪಡೆದುಕೊಂಡಿದ್ದಾರೆ. ಇವರ ಹೆಸರು ಪ್ರಕೃತಿ ಮಲ್ಲಾ. ನೇಪಾಳ ಮೂಲದ ಈ ಯುವತಿ ಈಗ ಕೈಬರದಿಂದಾಗಿ ಫೇಮಸ್​ ಆಗಿದ್ದಾರೆ. ಇವರ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜಗತ್ತಿನ ಅತ್ಯಂತ ಸುಂದರ ಹ್ಯಾಂಡ್​ರೈಟರ್​ ಎನ್ನುವ ಕೀರ್ತಿ ಇವರ ಪಾಲಿಗೆ ಬಂದಿದೆ. 

ಶಾಲೆಯಲ್ಲಿ ಬಾಲಕಿಯರ ನಡುವೆ ಇದೇನಿದು? ಶಾಕಿಂಗ್​ ವಿಡಿಯೋ ನೋಡಿ ಕೆಂಡ ಕಾರುತ್ತಿರೋ ನೆಟ್ಟಿಗರು....
 
 ಅಂದಹಾಗೆ ಪ್ರಕೃತಿ ಅವರು, ಹೈಸ್ಕೂಲ್​ನಲ್ಲಿ ಇದ್ದಾಗಲೇ ಅಂದರೆ, 8ನೇ ತರಗತಿಯಲ್ಲಿದ್ದಾಗ ಅವರ ಕೈಬರಹ ಸದ್ದು ಮಾಡಿತ್ತು. ಅವರು ಬರೆದ ಒಂದು ಲೇಖನ ಕೈಬರಹದಿಂದಾಗಿ ಖ್ಯಾತಿ ಪಡೆದಿತ್ತು. ಆಗಲೇ ಅವರು ದೊಡ್ಡಮಟ್ಟದಲ್ಲಿ ಹೆಸರು ಕೂಡ ಮಾಡಿದ್ದರು. ಇದೀಗ ಅವರನ್ನು ಮೀರಿಸುವವರು ಯಾರೂ ಇಲ್ಲವಾಗಿದೆ.  

 ಯುನೈಟೆಡ್​ ಅರಬ್ ಎಮಿರೆಟ್ಸ್​ನ 51ನೇ ಸ್ಪಿರಿಟ್ ಆಫ್​ ಯುನಿಯನ್​ ವಿಶೇಷ ಸಂದರ್ಭಕ್ಕೆ ಶುಭಾಶಯಗಳನ್ನು ತನ್ನ ಕೈ ಬರಹದ ಪ್ರಕೃತಿ ಬರೆದ ಪತ್ರವನ್ನು ಯುಎಇ ರಾಯಭಾರಿ ಕಚೇರಿಗೆ ನೀಡಲಾಗಿತ್ತು. ಆ ಫೋಟೋಗಳು ಈಗ ಪುನಃ ವೈರಲ್​ ಆಗುತ್ತಿವೆ. ಪ್ರಕೃತಿ ಅವರಿಗೆ  ನೇಪಾಳದ ಸಶಸ್ತ್ರ ಪಡೆಯಿಂದ ಸನ್ಮಾನ ಕೂಡ ಸಿಕ್ಕಿದೆ. 

ಹಿಂದೂ ಹೆಣ್ಣುಮಕ್ಕಳೇ ಈತನ ಟಾರ್ಗೆಟ್​! ನಾಪತ್ತೆಯಾದ 11 ಬಾಲಕಿಯರು ಸಿಕ್ಕಿದ್ದು... ಮೈ ನಡುಗಿಸುವ ಕಥೆ ಕೇಳಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು