ನರೇಶ್ ಕುಮಾರ್ ನಿರ್ದೇಶನದ ‘ಸೌತ್ ಇಂಡಿಯನ್ ಹೀರೋ’ ಚಿತ್ರ ಫೆ.24ರಂದು ತೆರೆಗೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರದ ನಾಯಕಿ ಕಾಶಿಮಾ ಅವರ ಮಾತುಗಳು ಇಲ್ಲಿವೆ.
ನಿಮ್ಮ ಹಿನ್ನೆಲೆ ಏನು?
ನಾನು ಮೂಲತಃ ಮಂಗಳೂರು. ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. ಬಿಸಿಎ ಗ್ರಾಜುವೇಷನ್ ಮಾಡುವಾಗ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವ ಆಸೆ ಹುಟ್ಟಿಕೊಂಡು ಚಿತ್ರರಂಗದ ಕಡೆಗೆ ಬಂದೆ. ನಮ್ಮ ಕುಟುಂಬದಲ್ಲಿ ಯಾರೂ ಚಿತ್ರರಂಗದಲ್ಲಿ ಇಲ್ಲ. ನಾನೇ ಮೊದಲು.
undefined
ಆರಂಭದ ಚಿತ್ರಗಳು ಯಾವುವು?
ದಿನೇಶ್ ಬಾಬು ಅವರ ನಿರ್ದೇಶನದ ‘ಕಸ್ತೂರಿ ಮಹಲ್’ ಹಾಗೂ ‘ಟೆಂಪರ್’ ಚಿತ್ರಗಳಲ್ಲಿ ನಟಿಸಿದ್ದೇನೆ. ಈ ಚಿತ್ರಗಳಲ್ಲಿ ನಟಿಸಿದ ಮೇಲೆ ನನಗೆ ಮತ್ತಷ್ಟುಭರವಸೆ ಮತ್ತು ನಂಬಿಕೆ ಬಂದು ಸಂಪೂರ್ಣವಾಗಿ ಚಿತ್ರರಂಗದಲ್ಲೇ ತೊಡಗಿಸಿಕೊಳ್ಳುವ ನಿರ್ಧಾರಕ್ಕೆ ಬಂದೆ.
‘ಸೌತ್ ಇಂಡಿಯನ್ ಹೀರೋ’ ಚಿತ್ರಕ್ಕೆ ನೀವು ಕನೆಕ್ಟ್ ಆಗಿದ್ದು ಹೇಗೆ?
‘ರಾಜು ಕನ್ನಡ ಮೀಡಿಯಂ’ ಚಿತ್ರದ ನಿರ್ದೇಶಕ ನರೇಶ್ ಕುಮಾರ್ ಅವರು ಮತ್ತೊಂದು ಚಿತ್ರ ಮಾಡುತ್ತಿದ್ದಾರೆಂದು ತಿಳಿದು ನಾನೇ ಹೋಗಿ ಆಡಿಷನ್ ಕೊಟ್ಟೆ. ಎರಡು ಚಿತ್ರಗಳಲ್ಲಿ ನಟಿಸಿದ ಮೇಲೂ ಆಡಿಷನ್ ಮೂಲಕವೇ ಈ ಚಿತ್ರಕ್ಕೆ ಕನೆಕ್ಟ್ ಆದೆ.
ಫೆ.24ಕ್ಕೆ ನರೇಶ್ ಕುಮಾರ್ ನಿರ್ದೇಶನದ 'ಸೌತ್ ಇಂಡಿಯನ್ ಹೀರೋ' ಚಿತ್ರ ಬಿಡುಗಡೆ
ಚಿತ್ರದಲ್ಲಿನ ನಿಮ್ಮ ಪಾತ್ರ ಹೇಗಿದೆ?
ನಾನು ಇಲ್ಲಿ ಹಳ್ಳಿಯಲ್ಲಿ ಟೀಚರ್ ಆಗಿರುತ್ತೇನೆ. ಮಾನಸಿ ಎಂಬುದು ನನ್ನ ಪಾತ್ರದ ಹೆಸರು. ಕತೆಗೆ ಪೂರಕವಾಗಿರುವ ಪಾತ್ರವಿದು. ತುಂಬಾ ಚೆನ್ನಾಗಿದೆ.
ಮಾನಸಿ ಪಾತ್ರ ಯಾಕೆ ಇಷ್ಟಆಯಿತು?
ಸ್ಕ್ರೀನ್ ಸ್ಪೇಸ್ ಜಾಸ್ತಿ ಇದೆ. ಪಾತ್ರದ ವಿಸ್ತರಣೆ ಹೆಚ್ಚಿದೆ. ಮಾನಸಿ ಚಿತ್ರದ ಹಾರ್ಚ್ ಆಫ್ ದಿ ಸೋಲ್ ಆಗಿರುತ್ತಾಳೆ. ಹೀಗಾಗಿ ನನಗೆ ಈ ಚಿತ್ರದಲ್ಲಿನ ಪಾತ್ರ ಇಷ್ಟವಾಯಿತು.
ಗೊತ್ತಿರುವ ಕತೆಗಳನ್ನು ಕನೆಕ್ಟ್ ಮಾಡಿಸುವುದೇ ಸಿನಿಮಾ: ಕೆ ಎಂ ರಘು
ಯಾವ ರೀತಿ ಸಿನಿಮಾ ಇದು?
ಚಿತ್ರದ ಹೆಸರು ನೋಡಿ ಎಲ್ಲರು ಆ್ಯಕ್ಷನ್ ಸಿನಿಮಾ ಅಂದುಕೊಳ್ಳುತ್ತಾರೆ. ಇದು ಅದಲ್ಲ. ಪಕ್ಕಾ ಪ್ರೇಮ ಕತೆಯ ಸಿನಿಮಾ. ಲಕ್ಕಿ ಮತ್ತು ಮಾನಸಿಯ ಲವ್ ಸ್ಟೋರಿ ಇದು. ಲಕ್ಕಿ ಎಂಬುದು ಹೀರೋ ಪಾತ್ರದ ಹೆಸರು.
ಈ ಚಿತ್ರದ ಟ್ರೇಲರ್ ನೋಡಿ ಉಪೇಂದ್ರ ಮೆಚ್ಚಿದ್ದು ಹೇಗನಿಸುತ್ತಿದೆ?
ಉಪೇಂದ್ರ ಅವರು ನಿಜವಾದ ಸೌತ್ ಇಂಡಿಯನ್ ಹೀರೋ. ಅವರು ರಿಯಲ್ ಸ್ಟಾರ್ ಕೂಡ. ಅವರು ನಾನೇ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇನೆ ಎಂದರು. ಕನ್ನಡ ಸಿನಿಮಾ ತಾಕತ್ತು ತೋರಿಸಿ ಎಂದ ಉಪೇಂದ್ರ ಅವರು ನನ್ನ ನೋಡಿ ನೋಡಿ ‘ನೀವು ನೋಡಕ್ಕೆ ಪ್ರಿಯಾಂಕ ಚೋಪ್ರಾ ರೀತಿ ಇದ್ದೀರಿ’ ಎಂದು ಎಲ್ಲರ ಮುಂದೆಯೇ ಮೆಚ್ಚಿಕೊಂಡಿದ್ದು ತುಂಬಾ ಖುಷಿ ಕೊಟ್ಟಿತು. ಇದು ದೊಡ್ಡ ಅವಾರ್ಡ್ ಅಂತಲೇ ಭಾವಿಸುತ್ತೇನೆ.
ಹೆಸರು ‘ಸೌತ್ ಇಂಡಿಯನ್ ಹೀರೋ’ ಅಂತಿಟ್ಟು, ಕನ್ನಡದಲ್ಲಿ ಮಾತ್ರ ಬರುತ್ತಿದ್ದೀರಲ್ಲ?
ಮೊದಲು ಶುರುವಾಗಿದ್ದು ಕನ್ನಡ ಚಿತ್ರ ಅಂತಲೇ. ಆದರೆ, ಟ್ರೇಲರ್ ಬಿಡುಗಡೆ ಆದ ಮೇಲೆ, ಉಪೇಂದ್ರ ಅವರಂತಹ ದೊಡ್ಡ ನಟರು ನಮಗೆ ಬೆನ್ನೆಲುಬಾಗಿ ನಿಂತ ಮೇಲೆ ಬೇರೆ ಭಾಷೆಗಳಿಗೂ ಈ ಸಿನಿಮಾ ಹೋಗುವಂತಾಗಿದೆ. ಈಗ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ನಮ್ಮ ಸಿನಿಮಾ ಬರುತ್ತಿದೆ.
ನಿಮ್ಮ ಮುಂದಿನ ಸಿನಿಮಾಗಳು ಯಾವುವು?
ತಮಿಳಿನ ಆರ್ಯ ಜತೆಗೆ ಸಿನಿಮಾ ಮಾಡುತ್ತಿದ್ದೇನೆ. ಇದು ಮಲ್ಟಿಸ್ಟಾರ್ ಪ್ಯಾನ್ ಇಂಡಿಯಾ ಸಿನಿಮಾ. ಇದರ ನಂತರ ಕನ್ನಡದಲ್ಲಿ ಎರಡು ಕತೆಗಳನ್ನು ಕೇಳಿ ಓಕೆ ಮಾಡಿಕೊಂಡಿದ್ದೇನೆ. ಈ ಮೂರು ಚಿತ್ರಗಳೂ ಸದ್ಯದಲ್ಲೇ ಒಂದರ ನಂತರ ಒಂದು ಸೆಟ್ಟೇರಲಿವೆ.