ಆಕಾಶ್ ಶ್ರೀವತ್ಸ ನಿರ್ದೇಶನ, ರಮೇಶ್ ಅರವಿಂದ್ ನಟನೆಯ ‘ಶಿವರಾಜಿ ಸುರತ್ಕಲ್ 2’ ಚಿತ್ರ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 25 ದಿನಗಳ ಸಂಭ್ರಮ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಅವರ ಮಾತುಗಳು ಇಲ್ಲಿವೆ.
ಆರ್ ಕೇಶವಮೂರ್ತಿ
ಆಕಾಶ್ ಶ್ರೀವತ್ಸ ನಿರ್ದೇಶನ, ರಮೇಶ್ ಅರವಿಂದ್ ನಟನೆಯ ‘ಶಿವರಾಜಿ ಸುರತ್ಕಲ್ 2’ ಚಿತ್ರ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 25 ದಿನಗಳ ಸಂಭ್ರಮ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ರಮೇಶ್ ಅವರ ಮಾತುಗಳು ಇಲ್ಲಿವೆ.
* ನಿಮ್ಮ ಚಿತ್ರಕ್ಕೆ 25ರ ಸಂಭ್ರಮ. ಹೇಗನಿಸುತ್ತಿದೆ?
ಇದು ಬಹಳ ಒಳ್ಳೆಯ ಸೂಚನೆ. ಇದಕ್ಕೆ ನಾವು ಋುಣಿ ಆಗಿರಬೇಕಿರೋದು ಪ್ರೇಕ್ಷಕರಿಗೆ. ಒಳ್ಳೆಯ ಸಿನಿಮಾ ಮಾಡಿದರೆ ಜನ ನಮ್ಮ ಜತೆಗೆ ನಿಲ್ಲುತ್ತಾರೆ ಎನ್ನುವ ಭರವಸೆ ಮತ್ತೊಮ್ಮೆ ಸಾಬೀತಾಗಿದೆ.
undefined
* ಚುನಾವಣೆ, ರಾಜಕೀಯ ಗದ್ದಲದಿಂದ ಜನ ಥಿಯೇಟರ್‌ಗಳಿಗೆ ಬರುತ್ತಿಲ್ಲ ಅಂತಾರಲ್ಲ?
ಒಂದು ಕಾಲದಲ್ಲಿ ಸಿನಿಮಾ ಅಂದರೆ ಸಿನಿಮಾ ಸೀಜನ್ ಮಾತ್ರ ಆಗಿತ್ತು. ಈಗ ಆ ಪರಿಸ್ಥಿತಿ ಇಲ್ಲ. ಚುನಾವಣೆ, ನಂತರ ಕ್ರಿಕೆಟ್, ಮಳೆ... ಹೀಗೆ ಯಾವುದಾದರೂ ಒಂದು ಇದ್ದೇ ಇರುತ್ತದೆ. ಇವುಗಳ ಜತೆಗೆ ನಾವು ಫೈಟ್ ಮಾಡಿಕೊಂಡೇ ಜನರನ್ನು ಥಿಯೇಟರ್‌ಗಳಿಗೆ ಕರೆಸುವ ಸಿನಿಮಾಗಳನು ಮಾಡಬೇಕಿದೆ. ನಾವು, ಸಿನಿಮಾಗಳ ಆಲೋಚನೆ, ಮೇಕಿಂಗ್, ಬದಲಾಗಬೇಕಿದೆ.
Weekend With Ramesh: ವರಮಹಾಲಕ್ಷ್ಮಿ ಹಬ್ಬದಂದೇ ಪತ್ನಿಯ ತಾಳಿ ಮಾರಿದ್ದ ಪ್ರೇಮ್! ಕಣ್ಣೀರಾದ ನಟ
* ಶಿವರಾಜಿ ಸುರತ್ಕಲ್ ಸರಣಿ ನಿಮ್ಮ ಇಮೇಜ್ ಬದಲಾಯಿಸಿತ್ತಲ್ಲ?
ಖಂಡಿತ. ಕೈಯಲ್ಲಿ ಗುಲಾಬಿ ಹಿಡಿದು ನಾಯಕಿಯರ ಜತೆಗೆ ತೆರೆ ಮೇಲೆ ಮುದ್ದಾಡಿಕೊಂಡು ಇದ್ದವನ ಕೈಗೆ ಪಿಸ್ತೂಲು, ಚಾಕು ಕೊಟ್ಟು ಮರ್ಡಮಿಸ್ಟ್ರಿ ಸಿನಿಮಾ ಮಾಡಿಸಿದ್ದಾರೆ. ನನ್ನ ಚಿತ್ರಗಳಲ್ಲಿ ರಕ್ತನೇ ಕಾಣುತ್ತಿಲ್ಲ. ಈಗ ನಾನೇ ಕೊಲೆಗಾರನಾಗಿದ್ದೇನೆ. ಗಡ್ಡನೇ ಇಲ್ಲದೆ ನೂರು ಸಿನಿಮಾಗಳನ್ನು ಮಾಡಿಬಿಟ್ಟೆ. ಈಗ ಎಲ್ಲೇ ಹೋದರೆ ನನ್ನ ಮೇಕಪ್‌ಮ್ಯಾನ್ ಗಡ್ಡ ಸೆಟ್ ಮಾಡಕ್ಕೆ ಬರುತ್ತಾರೆ. ನನ್ನ ಈ ಬದಲಾವಣೆ ಒಪ್ಪಿದ ಪ್ರೇಕ್ಷಕರು ತ್ಯಾಗರಾಜನನ್ನು ಶಿವಾಜಿಯಾಗಿಯೂ ಗೆಲ್ಲಿಸಿದ್ದಾರೆ.
* ಈ ಸಿನಿಮಾದ ಗೆಲುವು ಕೊಟ್ಟ ಖುಷಿ ಏನು?
ನಾನೂ ಚಿತ್ರವನ್ನು ನೋಡಲು ಥಿಯೇಟರ್‌ಗೆ ಹೋಗಿದ್ದೆ. ಅಲ್ಲಿ ಬಂದಿದ್ದ ಪ್ರೇಕ್ಷಕರನ್ನು ನೋಡಿ ನಿಜವಾದ ಪ್ರೇಕ್ಷಕರು ಸಿನಿಮಾ ನೋಡಲು ಬಂದಿದ್ದಾರೆ. ಯಾವುದೋ ಕಾರಣಕ್ಕೆ ಚಿತ್ರಮಂದಿರಗಳಿಂದ ದೂರವೇ ಉಳಿದ್ದ ಪ್ರೇಕ್ಷಕ ವರ್ಗ ಮತ್ತೆ ಚಿತ್ರಮಂದಿರಕ್ಕೆ ಬಂದ ಖುಷಿ ಸಿಕ್ಕಿತು.
* ಗೆಲುವಿನ ಹೊರತಾಗಿ ಈ ಚಿತ್ರದಿಂದ ನಿಮಗೆ ಸಿಕ್ಕಿದ್ದೇನು?
ಹೊಸ ಈ ರೀತಿಯ ಪಾತ್ರ. ನನ್ನ ಹೊಸದಾಗಿ ನೋಡ ಬಯಸಿದ ಪ್ರೇಕ್ಷಕರು ಸಿಕ್ಕರು. ಒಂದು ವೇಳೆ ಶಿವಾಜಿ ಪಾತ್ರವನ್ನು ಒಪ್ಪದೆ ಹೋಗಿದ್ದರೆ, ನಾನು ಮತ್ತೆ ತ್ಯಾಗರಾಜನಾಗಬೇಕಿತ್ತು. ಒಂದು ಸಿನಿಮಾ ಗೆದ್ದರೆ, ಒಬ್ಬ ಕಲಾವಿದ ಹಾಗೂ ಆ ತಂಡಕ್ಕೆ ಮೂರು- ನಾಲ್ಕು ವರ್ಷ ಲೈಫ್ ಸಿಕ್ಕಂತೆ.
* ಈ ಚಿತ್ರದಲ್ಲಿ ನಿಮ್ಮನ್ನು ನೀವು ನೋಡಿಕೊಂಡಾಗ ಏನು ಅನಿಸಿತು?
ನನ್ನ ನಾನೇ ನವೀಕರಣ ಮಾಡಿಕೊಂಡಿದ್ದೇನೆ ಅನಿಸಿತು. 100 ಸಿನಿಮಾಗಳಲ್ಲಿ ಮಾಡದ ಪಾತ್ರವನ್ನು 103ನೇ ಸಿನಿಮಾದಲ್ಲಿ ಮಾಡಿದ್ದೇನೆ ಮಾಡಿದ್ದೇನಲ್ಲ ಎನ್ನುವ ಅಚ್ಚರಿ ಮೂಡಿಸಿತು. ಮೆಲೋಡಿಯಾಗಿ ಆಡಿಕೊಂಡು, ಕುಣಿದುಕೊಂಡು, ಲವ್ ಮಾಡಿಕೊಂಡು ಇದ್ದ ರಮೇಶ್ ಅರವಿಂದ್ ಕೂಡ ಕ್ರೈಮ್ ಮಾಡೋ ಪಾತ್ರವನ್ನು ಮಾಡಿದ್ದಾನಲ್ಲ ಅನಿಸಿತು.
ಜೈಲರ್ ಗ್ಲಿಂಫ್ಸ್‌ಗೆ ಫ್ಯಾನ್ಸ್ ಫಿದಾ: ರಜನಿಕಾಂತ್, ಶಿವಣ್ಣ, ಮೋಹನ್‌ಲಾಲ್ ಖಡಕ್ ಲುಕ್ ರಿವಿಲ್
* ನಿಮ್ಮ ಮುಂದಿನ ಸಿನಿಮಾ ಯಾವ ರೀತಿ ಇರಬಹುದು?
ನಾನೇ ಒಂದು ಕತೆ ಬರೆದಿದ್ದೇನೆ. ಅದು ಫೋರೆನ್ಸಿಕ್ ಎಕ್ಸ್‌ಪೋರ್ಟ್ ಸುತ್ತ ನಡೆಯುವ ಕತೆ. ತನ್ನ ತಿಳುವಳಿಕೆಯನ್ನು ಬಳಸಿಕೊಂಡು ತುಂಬಾ ಜಾಣತನದಿಂದ ಕ್ರೈಮ್ ಮಾಡುತ್ತಿರುವವನ ಕತೆ ಮಾಡಿಕೊಂಡಿದ್ದೇನೆ. ಇಲ್ಲಿ ಫೋರೆನ್ಸಿಕ್ ಎಕ್ಸ್‌ಪೋರ್ಟ್ ಪಾತ್ರಧಾರಿ ನಾನೇ ಆಗಿರುತ್ತೇನೆ.