ಕೊರೊನಾ ವಿರುದ್ಧ ಪವನ್ ಒಡೆಯರ್ ಓದಿನ ಮಂತ್ರ..!

Suvarna News   | Asianet News
Published : Mar 19, 2020, 01:47 PM IST
ಕೊರೊನಾ ವಿರುದ್ಧ ಪವನ್ ಒಡೆಯರ್ ಓದಿನ ಮಂತ್ರ..!

ಸಾರಾಂಶ

ಕೊರೊನ ವೈರಾಣುವಿನ ಕಾಟದಿಂದ ಚಿತ್ರೀಕರಣ ಸ್ಥಗಿತಗೊಳಿಸಿ ಮನೆ ಸೇರಿಕೊಂಡವರಲ್ಲಿ `ರೇಮೊ' ಚಿತ್ರತಂಡವೂ ಸೇರಿದೆ. ಈ ಅನಿರೀಕ್ಷಿತ ಬ್ರೇಕ್ ನಲ್ಲಿ ನಿರ್ದೇಶಕ ಪವನ್ ಒಡೆಯರ್ ಏನು ಮಾಡುತ್ತಿದ್ದಾರೆ? ಈ ಸಂದೇಹ ಸಿನಿ ಪ್ರೇಮಿಗಳಿಗೆ ಸಹಜವೇ. ಯಾಕೆಂದರೆ ಪವನ್ ಒಡೆಯರ್ ಅವರದ್ದು ಕಾಲ ಹರಣ ಮಾಡುವ ಜಾಯಮಾನವಲ್ಲ. ಅವರಿಗೆ ಜತೆಯಾಗಿದ್ದು ಓದಿನ ಹವ್ಯಾಸ. ರಾಶಿ ಪುಸ್ತಕಗಳ ಜತೆಗೆ ತೆಗೆದುಕೊಂಡ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪವನ್ ಇವುಗಳನ್ನು ಓದಿ ಮುಗಿಸಿದ್ದು, ಇನ್ನಷ್ಟು ಪುಸ್ತಕಗಳು ಓದಿಗಾಗಿ ಕಾದಿವೆ ಎಂದಿದ್ದಾರೆ. ಇದೇ ವಿಚಾರದಲ್ಲಿ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.   

ಕೊರೊನ ವೈರಾಣುವಿನ ಕಾಟದಿಂದ ಚಿತ್ರೀಕರಣ ಸ್ಥಗಿತಗೊಳಿಸಿ ಮನೆ ಸೇರಿಕೊಂಡವರಲ್ಲಿ `ರೇಮೊ' ಚಿತ್ರತಂಡವೂ ಸೇರಿದೆ. ರೇವಂತ್ ಎನ್ನುವ ಹುಡುಗ ಮತ್ತು ಮೋಹನ ಎನ್ನುವ ಹುಡುಗಿಯ ನಡುವಿನ ಪ್ರೇಮಕತೆ ಹೇಳುವ ರೇಮೊ ಚಿತ್ರಕ್ಕೆ ಸಿಕ್ಕಿದಂಥ ಈ ಅನಿರೀಕ್ಷಿತ ಬ್ರೇಕ್ ನಲ್ಲಿ ನಿರ್ದೇಶಕ ಪವನ್ ಒಡೆಯರ್ ಏನು ಮಾಡುತ್ತಿದ್ದಾರೆ? ಈ ಸಂದೇಹ ಸಿನಿ ಪ್ರೇಮಿಗಳಿಗೆ ಸಹಜವೇ. ಯಾಕೆಂದರೆ ಪವನ್ ಒಡೆಯರ್ ಅವರದು ಕಾಲಹರಣ ಮಾಡುವ ಜಾಯಮಾನವಲ್ಲ. ಒಂದು ಚಿತ್ರ ಮಾಡುವ ಮುನ್ನ ಸಾಕಷ್ಟು ಯೋಜನೆ ಹಾಕಿ ಸಿದ್ಧವಾಗುವ ಕನ್ನಡದ ನಿರ್ದೇಶಕರ ಪಟ್ಟಿಯಲ್ಲಿ ಪವನ್ ಹೆಸರು ಕೂಡ ಮುಂಚೂಣಿಯಲ್ಲಿರುತ್ತದೆ. ಅಂಥ ಪವನ್ ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾದಾಗ ಮಾಡಿದ್ದೊಂದೇ ಕೆಲಸ. ಅವರಿಗೆ ಜತೆಯಾಗಿದ್ದು ಓದಿನ ಹವ್ಯಾಸ. ರಾಶಿ ಪುಸ್ತಕಗಳ ಜತೆಗೆ ತೆಗೆದುಕೊಂಡ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಪವನ್ ಇವುಗಳನ್ನು ಓದಿ ಮುಗಿಸಿದ್ದು, ಇನ್ನಷ್ಟು ಪುಸ್ತಕಗಳು ಓದಿಗಾಗಿ ಕಾದಿವೆ ಎಂದಿದ್ದಾರೆ. ಬೇರೆ ಭಾಷೆ ಸಿನಿಮಾ ನೋಡಿ ಹೊಸ ಸಿನಿಮಾ ನೋಡುವ ನಿರ್ದೇಶಕರ ನಡುವೆ, ಹೊಸ ಕಲ್ಪನೆಗಳಿಗೆ ಕೆಲಸ ಕೊಡುವಂಥ ಓದನ್ನು ಹಚ್ಚಿಕೊಂಡಿರುವ ಪವನ್ ವಿಭಿನ್ನ ಎನಿಸುತ್ತಾರೆ. ಇದೇ ವಿಚಾರದಲ್ಲಿ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.    

ಶಶಿಕರ ಪಾತೂರು
 

- ನಿಮಗೆ ಇಷ್ಟವಾಗುವ ಬರಹಗಾರರು ಯಾರು?
ಸಾಮಾನ್ಯವಾಗಿ ನನಗೆ ಪುಸ್ತಕಗಳೆಂದರೇನೇ ನನಗೆ ಹಿಂದಿನಿಂದಲೂ ಅಚ್ಚುಮೆಚ್ಚು. ಪೂರ್ಣಚಂದ್ರ ತೇಜಸ್ವಿಯವರು ನನ್ನ ಫೇವರಿಟ್ ಬರಹಗಾರರು. ಅವರ ಪುಸ್ತಕಗಳನ್ನು ಓದುತ್ತಿರುತ್ತೇನೆ. ಹಾಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಕಾದಂಬರಿಗಳೂ ಇಷ್ಟವೇ. ಈಗ ನಾನು ಓದಿರುವ ರಾಶಿ ಕಾದಂಬರಿಗಳು ಎಲ್ಲವೂ ನಾನೇ ಮೆಚ್ಚಿ ಕೊಂಡುಕೊಂಡಂಥವು. ಸೈಕೋಪಾತ್ ಎನ್ನುವ ಪುಸ್ತಕ ಮಾತ್ರ  ಸ್ನೇಹಿತರೊಬ್ಬರು ಗಿಫ್ಟ್ ಕೊಟ್ಟಿದ್ದು. ಅದೇ ರೀತಿ ಸ್ನೇಹಿತರು ರೆಫರ್ ಮಾಡಿರುವಂಥ ಪುಸ್ತಕಗಳು ಕೂಡ ಸಾಕಷ್ಟು ಇರುತ್ತವೆ. ಅವುಗಳನ್ನು ಓದುತ್ತಿರುತ್ತೇನೆ.

ದಿಯಾ ನಟಿಯ ಮುಕ್ತ ಮಾತು


ನಿಮ್ಮ ಓದಿನ ಹವ್ಯಾಸ ಶುರುವಾಗಿದ್ದು ಹೇಗೆ?
ಚಿಕ್ಕ ವಯಸ್ಸಿನಿಂದಲೂ ನನಗೆ ಓದುವ ಹವ್ಯಾಸ ಇದೆ. ಆದರೆ ಪಠ್ಯ ಪುಸ್ತಕಗಳನ್ನು ಓದಿರುವುದಕ್ಕಿಂತ ಹೆಚ್ಚು 'ಬಾಲಮಂಗಳ' ಮೊದಲಾದ ಮಕ್ಕಳ ಪುಸ್ತಕಗಳನ್ನು ಓದಿರುವುದೇ ಹೆಚ್ಚು! ನನ್ನ ದಿನಗಳಲ್ಲಿ ನನ್ನ ವಯಸ್ಸಿನ ಮಕ್ಕಳಿಗೆ ಸೃಜನಶೀಲ ಪ್ರಪಂಚವನ್ನು ತೋರಿಸಲು ಇದ್ದಂಥ ಮಾಧ್ಯಮ ಎಂದರೆ ಪುಸ್ತಕ ಎಂದೇ ಹೇಳಬಹುದು. ಬಹುಶಃ ಅದೇ ಕಾರಣದಿಂದಲೇ ನಾನು ಓದನ್ನು ಹಚ್ಚಿಕೊಂಡಿರಬಹುದು. ಆದರೆ ಇತ್ತೀಚೆಗೆ ಓದುವುದು ಕಡಿಮೆಯಾಗಿದೆ. ಆಸಕ್ತಿಯಿಂದ ಪುಸ್ತಕ ಖರೀದಿಸಿದರೂ, ಅದನ್ನು ಮುಗಿಸಲು ತುಂಬ ಸಮಯ ತೆಗೆದುಕೊಳ್ಳುತ್ತೇನೆ.


ನೀವು ಮೊಬೈಲ್ ನಲ್ಲಿ ಕೂಡ ಸದಾ ಚಟುವಟಿಕೆಯಲ್ಲಿರುತ್ತೀರಲ್ಲ?
ಹೌದು! ಸಾಮಾನ್ಯವಾಗಿ ಮೊಬೈಲ್ ನಲ್ಲಿ ವಾಟ್ಸ್ಯಾಪ್ ಸ್ಟೇಟಸ್ ನೋಡೋದು,  ಮೆಸೇಜ್ ನೋಡುವುದರಲ್ಲಿ ತುಂಬ ತೊಡಗಿಸಿಕೊಂಡವರನ್ನು ನಾನು ಕೂಡ ನೋಡಿದ್ದೇನೆ. ಆದರೆ ಅವರೆಲ್ಲ ಅದರಲ್ಲಿಯೇ ಮುಳುಗಿ ಬಿಡುತ್ತಾರೆ. ಆದರೆ ದೇವರು ನನಗೆ ಮಲ್ಟಿ ಟಾಸ್ಕ್ ಮಾಡಬಲ್ಲಂಥ ಜಾಣ್ಮೆಯನ್ನು ಕೊಟ್ಟಿದ್ದಾನೆ. ಹಾಗಾಗಿ ಏನಾದರೂ ಪುಸ್ತಕ ಓದುತ್ತಿರುವ ವೇಳೆಯಲ್ಲಿ ಸಡನ್ನಾಗಿ ಶೂಟಿಂಗ್ ಕಂಪೋಸ್ ಮಾಡಬೇಕಾಗಿ ಬಂದರೆ, ಹೋಗಿ ಅವರಿಗೆ ಶಾಟ್ ಹೇಳಿ, ಮತ್ತೊಂದು ಕಡೆ ಅದರ ಡಿಸ್ಕಶನ್ ಗೆ ಹೇಳಿ, ಮೊಬೈಲ್ ನಲ್ಲಿ ಬಂದ ಮೆಸೇಜ್ ಗೆ ಕೂಡ ಆನ್ಸರ್ ಮಾಡುತ್ತಿರುತ್ತೇನೆ. ಆದರೆ ಎಲ್ಲವನ್ನೂ ಖುಷಿಯಿಂದ ಮಾಡುತ್ತೇನೆ ಅಂತ ಏನಿಲ್ಲ. ಕೆಲವೊಮ್ಮೆ ಸಂದರ್ಭ ತುಂಬ ಗಂಭೀರವಾಗಿದ್ದಾಗ ಸುಸ್ತಾಗಿ ಬಿಡುವುದೂ ಇದೆ.

ಯಶಸ್ಸಿನ ಕುದುರೆ ಏರಿದ ರೂಪಿಕಾ

`ರೇಮೋ' ಚಿತ್ರ ಯಾವ ಹಂತದಲ್ಲಿದೆ?
ನಾವು ಇತ್ತೀಚೆಗಷ್ಟೇ ಸಿಂಗಾಪುರ, ಥಾಯ್ ಲ್ಯಾಂಡ್ , ಮಲೇಷ್ಯಾಗಳಲ್ಲಿ ಚಿತ್ರೀಕರಣ ನಡೆಸಿಕೊಂಡು ಬಂದೆವು. ಎಲ್ಲರಿಗೂ ಕೊರೊನಾ ನೆಗೆಟಿವ್ ರಿಪೋರ್ಟ್ ಬಂದಿದೆ. ಹಾಗಾಗಿ ಏನೂ ತೊಂದರೆ ಇಲ್ಲ.  ಇನ್ನು ರಾಜಸ್ಥಾನ ಮತ್ತು ಹಿಮಾಲಯದಲ್ಲಿ ಚಿತ್ರೀಕರಣ ಮಾಡಬೇಕಿದೆ. ಎರಡು ಸಾಂಗ್ ಮತ್ತು ಒಂದು ಫೈಟ್ ಬಾಕಿ ಇದೆ. ಆದರೆ ಕೊರೊನಾ ಸಮಸ್ಯೆಯಿಂದಾಗಿ ಬ್ರೇಕ್ ತೆಗೆದುಕೊಳ್ಳಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಅಚ್ಯುತ್ ಕುಮಾರ್ ಮತ್ತು ಶರತ್ ಕುಮಾರ್ ಅವರನ್ನು ಹೊರತು ಪಡಿಸಿ ಉಳಿದೆಲ್ಲರ ಡಬ್ಬಿಂಗ್ ಕೂಡ ಮುಗಿದಿದೆ. ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಅರ್ಜುನ್ ಜನ್ಯ ಅವರು ಸ್ವಲ್ಪ ವಿಶ್ರಾಂತಿಯಲ್ಲಿರುವುದು ತಿಳಿಯಿತು. ಒಟ್ಟು ಆರು ಹಾಡುಗಳಿವೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ಒಡನೆ ಹಾಡಿನ ಕೆಲಸಗಳು ನಡೆಯಲಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು