ಮನದ `ಅಂತರಾಳ' ತೆರೆದ ನಟಿ ಮಾನಸ ಜೋಶಿ

By Suvarna News  |  First Published Mar 13, 2020, 3:33 PM IST

ಮಾನಸ ಜೋಶಿ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿದ್ದು `ಬಹುಪರಾಕ್' ಸಿನಿಮಾದ ಮೂಲಕ. ಆದರೆ ಅದಕ್ಕೂ ಮೊದಲು ಅವರು ಮುಂಬೈನಲ್ಲಿ ಅನುಪಮ್ ಖೇರ್ ಅವರ `ಆಕ್ಟರ್ ಪ್ರಿಪೇರ್ಸ್'ನಿಂದ ಡಿಪ್ಲೊಮ ಮಾಡಿದ್ದರು. ಅವರು ನಟಿಸಿದಂಥ ಚಿತ್ರಗಳ ಪಾತ್ರಗಳು ಅವರನ್ನು ಒಬ್ಬ ಬಿಡ್ಜ್ ಸಿನಿಮಾ ನಟಿಯಾಗಿ ಗುರುತಿಸುವಂತೆ ಮಾಡಿತು.  ಕಥಕ್ ನೃತ್ಯಗಾತಿಯೂ ಆಗಿರುವ ಮಾನಸಾ, ಅವಕಾಶ ಸಿಕ್ಕರೆ ಕಮರ್ಷಿಯಲ್ ಚಿತ್ರಗಳಲ್ಲಿಯೂ ನಾಯಕಿಯಾಗಿ ಸಾಬೀತು ಪಡಿಸಲು ಸಿದ್ಧವಿದ್ದಾರೆ. ಇಲ್ಲಿ ಅವರು ತಮ್ಮ ರಂಗಾಸಕ್ತಿಯ ಬಗ್ಗೆ ಸುವರ್ಣ ನ್ಯೂಸ್. ಕಾಮ್ ಜತೆಗೆ ಮಾತನಾಡಿದ್ದಾರೆ.


ಮಾನಸ ಜೋಶಿ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಯವಾಗಿದ್ದು `ಬಹುಪರಾಕ್' ಸಿನಿಮಾದ ಮೂಲಕ. ಆದರೆ ಅದಕ್ಕೂ ಮೊದಲು ಅವರು ಮುಂಬೈನಲ್ಲಿ ಅನುಪಮ್ ಖೇರ್ ಅವರ `ಆಕ್ಟರ್ ಪ್ರಿಪೇರ್ಸ್'ನಿಂದ ಡಿಪ್ಲೊಮ ಮಾಡಿದ್ದರು. ಕನ್ನಡ ಮತ್ತು ಆಂಗ್ಲ ಭಾಷೆಯ ನಾಟಕಗಳ ಮೂಲಕ ರಂಗಭೂಮಿಯಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡ ಬಳಿಕ ಚಿತ್ರರಂಗ ಪ್ರವೇಶಿಸಿದ್ದರು. `ಲಾಸ್ಟ್ ಬಸ್', `ಕಿರಗೂರಿನ ಗಯ್ಯಾಳಿಗಳು' ಮೊದಲಾದ ಚಿತ್ರಗಳ ಪಾತ್ರಗಳು ಅವರನ್ನು ಒಬ್ಬ ಬಿಡ್ಜ್ ಸಿನಿಮಾ ನಟಿಯಾಗಿ ಗುರುತಿಸುವಂತೆ ಮಾಡಿತು. ಸಾಲದೆಂಬಂತೆ `ಯಶೋಗಾಥೆ', `ದೇವರ ನಾಡಲ್ಲಿ' ಮೊದಲಾದ ಸಿನಿಮಾಗಳಲ್ಲಿ ನಟಿಸಿದ ಮಾನಸ ಜೋಶಿ ಅಭಿನಯದ `ಹಜ್ಜ್', `ಕೌದಿ' ಸಿನಿಮಾಗಳು ರಾಜ್ಯ ಪ್ರಶಸ್ತಿಗೆ ಭಾಜನವಾದವು. ಕಥಕ್ ನೃತ್ಯಗಾತಿಯೂ ಆಗಿರುವ ಮಾನಸಾ, ಅವಕಾಶ ಸಿಕ್ಕರೆ ಕಮರ್ಷಿಯಲ್ ಚಿತ್ರಗಳಲ್ಲಿಯೂ ನಾಯಕಿಯಾಗಿ ಸಾಬೀತು ಪಡಿಸಲು ಸಿದ್ಧವಿದ್ದಾರೆ. ಇಲ್ಲಿ ಅವರು ತಮ್ಮ ರಂಗಾಸಕ್ತಿಯ ಬಗ್ಗೆ ಸುವರ್ಣ ನ್ಯೂಸ್. ಕಾಮ್ ಜತೆಗೆ ಮಾತನಾಡಿದ್ದಾರೆ.

-ಶಶಿಕರ ಪಾತೂರ್

Tap to resize

Latest Videos

undefined

ಸಿನಿಮಾದಿಂದ ಬ್ರೇಕ್ ತೆಗೆದುಕೊಂಡ ಹಾಗಿದೆಯಲ್ಲ?
ಹೌದು. ಆದರೆ ಅದು ಉದ್ದೇಶಪೂರ್ವಕವಾಗಿ ಅಲ್ಲ. ನಾನು ಮೂಲತಃ ರಂಗಭೂಮಿಯಿಂದ ಬಂದಿರುವುದು ನಿಮಗೂ ಗೊತ್ತು. ಹಾಗಾಗಿ ಪ್ರತಿ ಸಿನಿಮಾ ಮುಗಿದಾಕ್ಷಣ ಮತ್ತೆ ರಂಗಭೂಮಿ, ನೃತ್ಯಾಭ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತೇನೆ.  ನನ್ನ ಡ್ಯಾನ್ಸ್ ಕ್ಲಾಸ್ ಗೆ ಈಗ ಮೂರು ವರ್ಷ ತುಂಬುತ್ತಿದೆ. ಇದುವರೆಗೆ ಸಂಸ್ಥೆಯ ವಾರ್ಷಿಕೋತ್ಸವವನ್ನುಆಚರಿಸಿರಲಿಲ್ಲ. ಇದೀಗ ಅದು ಕೂಡ ಒಂದು ಹಂತಕ್ಕೆ ಬೆಳೆದು ನಿಂತಿದೆ. ಹಾಗಾಗಿ ಈ ಬಾರಿ ಆಚರಿಸೋಣ ಎಂದುಕೊಂಡಿದ್ದೇನೆ. ಆ ಬಗ್ಗೆ ಅದರ ಸಂಪೂರ್ಣ ತಯಾರಿಯಾದ ಮೇಲೆ ಹೇಳುವುದು ಸೂಕ್ತ ಅನಿಸುತ್ತದೆ. ಅದೇ ವೇಳೆ ಇನ್ನು ಮುಂದೆ ಸಿನಿಮಾಗಳಲ್ಲಿ ಕೂಡ ಗಂಭೀರವಾಗಿ ತೊಡಗಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ.

ಅಪ್ಪನಂತೆ ನಟನಾಗುತ್ತಿದ್ದಾರೆ ಅಕ್ಷಿತ್

ನೀವು ಇದುವರೆಗೆ ನಟಿಸಿದ ಸಿನಿಮಾಗಳೆಲ್ಲವೂ ಗಂಭೀರವಾಗಿಯೇ ಇದ್ದಂಥವು ಅಲ್ಲವೇ?
ನನ್ನ ನಟನೆಯ ಸಿನಿಮಾಗಳು, ನನಗೆ ಸಿಕ್ಕಂಥ ಪಾತ್ರಗಳು ಗಂಭೀರ ಸ್ವರೂಪದ್ದಾಗಿದ್ದವು ನಿಜ. ಅವುಗಳನ್ನು ನಾನು ಗಂಭೀರವಾಗಿಯೇ ಸ್ವೀಕರಿಸಿ ನಟಿಸಿರುವುದೂ ನಿಜ. ಆದರೆ  ಸಿನಿಮಾರಂಗದಲ್ಲೇ ಮುಂದುವರಿಯಬೇಕು ಎನ್ನುವ ವಿಚಾರದಲ್ಲಿ ನಾನು ಗಂಭೀರವಾಗಿರಲಿಲ್ಲ. ಅವಕಾಶಗಳು ಬಂದಾಗ ಆಯ್ಕೆ ಮಾಡಿ ನಟಿಸಿದರಾಯಿತು ಎನ್ನುವ ಮನೋಭಾವ ಇತ್ತು. ಆದರೆ ಸಿಕ್ಕ ಅವಕಾಶಗಳಲ್ಲಿ ಉತ್ತಮ ಪಾತ್ರ ಒಪ್ಪಿಕೊಂಡು ಮುಂದುವರಿಯಬೇಕು, ನಾನು ಗಂಭೀರವಾದ ಪಾತ್ರವನ್ನಷ್ಟೇ ಅಲ್ಲ, ಗ್ಲಾಮರಸ್ ಆಗಿಯೂ ನಟಿಸಬಲ್ಲೆ ಎನ್ನುವುದನ್ನು ವ್ಯಕ್ತಪಡಿಸಬೇಕು ಎನ್ನುವ ಬಗ್ಗೆ ಯೋಚನೆಯೇ ಮಾಡಿರಲಿಲ್ಲ. ಈಗ ಕಮರ್ಷಿಯಲ್ ಗುಣಗಳುಳ್ಳ ಸಿನಿಮಾಗಾಗಿಯೇ  ವಿಶೇಷ ಫೊಟೋ ಶೂಟ್‌ ಕೂಡ ನಡೆಸಿದ್ದೇನೆ.

ಕಿರಿಕ್ ಪಾರ್ಟಿಗಳಿಗೆ ಖಡಕ್ ಉತ್ತರ ನೀಡುತ್ತಾರೆ ರಕ್ಷಿತ್ ಶೆಟ್ಟಿ

ಹಾಗಾದರೆ ಸದ್ಯಕ್ಕೆ ರಂಗಭೂಮಿ ಚಟುವಟಿಕೆಗೆ ಬ್ರೇಕ್ ಹಾಕುತ್ತಿದ್ದೀರ?
ಇದೇ ತಿಂಗಳು ಒಂದು ಹೊಸ ನಾಟಕದ ಸಿದ್ಧತೆಯಲ್ಲಿದ್ದೇನೆ. ಅದು ಏಕವ್ಯಕ್ತಿ ಪ್ರದರ್ಶನ ಆಗಿರುತ್ತದೆ. ನಾಟಕದ ಹೆಸರು `ಅಂತರಾಳ'. ಇದೇ ಮಾರ್ಚ್ 28ರಂದು ಬೆಂಗಳೂರಿನ ಎನ್.ಆರ್ ಕಾಲನಿಯಲ್ಲಿರುವ ಸಿ.ಅಶ್ವಥ್ ಕಲಾಭವನದಲ್ಲಿ ಅದರ ಎರಡು ಪ್ರದರ್ಶನಗಳಿವೆ. ಸಂಜೆ ನಾಲ್ಕುವರೆ ಮತ್ತು ಏಳೂವರೆಯ ಪ್ರದರ್ಶನಗಳ ಬಳಿಕ ಮೈಸೂರಿಗೆ ತೆರಳಲಿದ್ದೇನೆ. ಮರದಿನ ಅಲ್ಲಿಯೂ ಅಂತರಾಳದ ಪ್ರದರ್ಶನವಿದೆ. ಅದು ಹೆಣ್ಣಿನ ಅತ್ಯಾಚಾರ ಸೇರಿದಂತೆ ಹೆಣ್ಣಿಗೆ ಹೇಗೆಲ್ಲ ಸಮಸ್ಯೆಗಳು ಸುತ್ತಿಕೊಳ್ಳುತ್ತವೆ ಎನ್ನುವುದನ್ನು ತೋರಿಸುವ ನಾಟಕವಾಗಿದೆ. ಕಿರುತೆರೆ ಖ್ಯಾತಿಯ ಗುರು ಪ್ರಸಾದ್ ಅವರು ರಚಿಸಿ ನಿರ್ದೇಶಿಸಿದ್ದಾರೆ. ಹೊಸ ಪ್ರತಿಭೆಗಳು ರಚಿಸಿರುವ ಗೀತೆಗೆ ಪ್ರದೀಪ್ ಮತ್ತು ಪ್ರವೀಣ್ ಸಹೋದರರು ಸಂಗೀತ ನೀಡಿದ್ದಾರೆ.  ನಾಟಕದ ವಿಚಾರ ಎಷ್ಟು ಪ್ರಸ್ತುತ ಎನ್ನುವುದಕ್ಕೆ ನಿರ್ಭಯಾ ಪ್ರಕರಣವನ್ನೇ ತೆಗೆದುಕೊಳ್ಳಬಹುದು. ಆರೋಪ ಸಾಬೀತಾಗಿದ್ದರೂ ಅಪರಾಧಿಗಳ ಪರವಾಗಿ ವಾದಿಸುವ ವಕೀಲರನ್ನು ಕಾಣುತ್ತಿದ್ದೇವೆ. ನೈತಿಕತೆ ಅರಿಯದೆ ಡಿಗ್ರಿಗಳನ್ನು ಪಡೆದು ಉಪಯೋಗವೇನು ಎನ್ನುವುದನ್ನು ನಾಟಕ ಹೇಳಲಿದೆ. ಅದೊಂದು ನಾಟಕದ ಬಳಿಕ ಗಮನವೆಲ್ಲ ಸಿನಿಮಾದತ್ತ.

click me!