ವಿಷ್ಣುವರ್ಧನ್ ಸರ್ ನೆನಪು ಮಾಡಿಸಿದರು ಅನಿರುದ್ಧ್: ಸುಧಾರಾಣಿ

By Suvarna News  |  First Published Feb 17, 2021, 7:26 PM IST

`ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನಿರುದ್ಧ್ ಅವರದು ಆರ್ಯವರ್ಧನ್ ಪಾತ್ರ. ಆದರೆ ಧಾರಾವಾಹಿ ವೀಕ್ಷಕರಿಂದ ಹಿಡಿದು, ಪಾತ್ರಧಾರಿಗಳ ತನಕ ಪ್ರತಿಯೊಬ್ಬರೂ ಆರ್ಯವರ್ಧನ್ ಅವರಲ್ಲಿ ವಿಷ್ಣುವರ್ಧನ್ ಕಂಡಿದ್ದಾಗಿ ಹೇಳುತ್ತಾರೆ. ಇದೀಗ ನಟಿ ಸುಧಾರಾಣಿಯವರು ಕೂಡ ತಮ್ಮ ಆ ಅನಿಸಿಕೆಯನ್ನು ಒಂದಷ್ಟು ವಿಭಿನ್ನವಾಗಿಯೇ ಹಂಚಿಕೊಂಡಿದ್ದಾರೆ.


ಸುಧಾರಾಣಿಯವರು ಕಳೆದ ಮೂರೂವರೆ ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ಆದರೆ ಇಂದಿಗೂ ಅವರು ಒಂದು ಸಿನಿಮಾದಲ್ಲಿ ನಟಿಸುತ್ತಾರೆ ಅಂದರೆ ಅವರು ಮಾಡುವ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ಆಸಕ್ತಿ ಮೂಡುತ್ತದೆ. ಅದಕ್ಕೆ ಕಾರಣ ಅವರು ಇದುವರೆಗೆ ಆಯ್ದುಕೊಂಡಿರುವಂಥ ಪಾತ್ರಗಳೇ ಆಗಿವೆ. ಹಾಗಾಗಿ `ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸಲು ಬಂದಾಗಲೂ ಪ್ರೇಕ್ಷಕರಲ್ಲಿ ಅದೇ ರೀತಿಯ ಕುತೂಹಲ ಮೂಡಿಸಿದ್ದಾರೆ. ಧಾರಾವಾಹಿಯ ಭಾಗವಾಗಿ ಅವರ ಒಟ್ಟು ಅನುಭವಗಳ ಬಗ್ಗೆ ಸ್ವತಃ ಸುಧಾರಾಣಿಯವರು ಸುವರ್ಣ ನ್ಯೂಸ್.ಕಾಮ್ ಜೊತೆಗೆ ಮಾತನಾಡಿದ್ದಾರೆ.

ಶಶಿಕರ ಪಾತೂರು

Latest Videos

undefined

`ಜೊತೆ ಜೊತೆಯಲಿ' ಎನ್ನುವ ಧಾರಾವಾಹಿಯ ಪಾತ್ರವನ್ನು ನೀವು ಒಪ್ಪಿಕೊಂಡಂಥ ಕಾರಣವೇನು?
`ಜೊತೆ ಜೊತೆಯಲಿ' ಸೀರಿಯಲ್‌ನಲ್ಲಿ ನನ್ನ ಪಾತ್ರ ತುಂಬ ಪಾಸಿಟಿವ್ ಆಗಿದೆ. ಅದರಲ್ಲಿಯೂ ತಾಯಿ ಮಗನ ಸಂಬಂಧ ತುಂಬ ಆತ್ಮೀಯವಾಗಿದೆ. ನಮ್ಮ ದೇಶದಲ್ಲಿ ಅಮ್ಮ ಮಗ ಎಂದಷ್ಟೇ ಅಲ್ಲ, ಹಿರಿಯರೊಂದಿಗಿನ ಸಂಬಂಧವನ್ನು ತುಂಬ ಗೌರವಪೂರ್ವಕವಾಗಿ, ಭಯ ಭಕ್ತಿ ಇರಿಸಿರುವಂತೆ ತೋರಿಸುತ್ತೇವೆ. ಆದರೆ ಈಗಿನ ಟ್ರೆಂಡ್‌ಗೆ ಹೊಂದಿಕೊಂಡು, ಮಕ್ಕಳೊಂದಿಗೆ ಆತ್ಮೀಯವಾಗಿರುವಂಥ ಪಾತ್ರ ನನಗೆ ಅದರಲ್ಲಿ ದೊರಕಿದೆ. ಮೊದಲ ಜನಪ್ರಿಯತೆ ಹೊಂದಿರುವ ಧಾರಾವಾಹಿ ಅದು. ಅದಕ್ಕೆ ಸೇರಿಕೊಂಡ ಬಳಿಕವಂತೂ  ಮೇಕಿಂಗ್ ರೀತಿ, ಆರೂರು ಜಗದೀಶ್ ಅವರ ನಿರ್ದೇಶನದ ಶೈಲಿ ಎಲ್ಲವೂ ಇಷ್ಟವಾಯಿತು.

ರವಿಚಂದ್ರನ್ ಚಿತ್ರ ನಿರ್ದೇಶಿಸುವ ಆಸಕ್ತಿ ಇದೆ- ಜೀತು ಜೋಸೆಫ್

ವಿಜಯಸೂರ್ಯ ಅವರ ತಾಯಿಯ ಪಾತ್ರದಲ್ಲಿ ನಟಿಸುವಾಗ ನಿಮ್ಮ ಅನುಭವ ಹೇಗಿತ್ತು?
ಅವರು ತುಂಬ ಒಳ್ಳೆಯ ನಟ. ನಾನು ಯಾವಾಗಲೂ ಹೇಳುತ್ತಿರುತ್ತೇನೆ, ಆಕ್ಷನ್ ಮಾಡುವಾಗ ಅದಕ್ಕೆ ಜೊತೆಗಿದ್ದು ರಿಯಾಕ್ಷನ್ ನೀಡುವವರು ಮುಖ್ಯವಾಗುತ್ತಾರೆ. ಆ ರೀತಿಯಲ್ಲಿ ನೋಡಿದರೆ ವಿಜಯಸೂರ್ಯ ಅವರ ಪರ್ಫಾರ್ಮನ್ಸ್ ಚೆನ್ನಾಗಿರುವುದಕ್ಕಾಗಿಯೇ ನನಗೂ ಇನ್ನಷ್ಟು ಚೆನ್ನಾಗಿ ಮಾಡಬೇಕು ಎನ್ನುವ ಉತ್ಸಾಹ ಮೂಡುತ್ತಿತ್ತು. ಒಂದು ರೀತಿ ಚಿಕ್ಕ ಸ್ಪರ್ಧೆಯೇ ನಡೆದಿತ್ತು ಎನ್ನಬಹುದು. ಜೊತೆಗೆ ನಮ್ಮಿಬ್ಬರ ನಡುವೆ ಬಾಂಡಿಂಗ್ ಮತ್ತು ಅಂಡರ್‌ಸ್ಟಾಂಡಿಂಗ್ ಚೆನ್ನಾಗಿರುವ ಕಾರಣ ಅದು ಪರದೆಯ ಮೇಲೆಯೂ ಚೆನ್ನಾಗಿ  ಮೂಡುವಂತಾಗಿದೆ ಎನ್ನಬಹುದು.

ಲವ್ ಮ್ಯಾರೇಜ್ ಆದ ಸೆಲೆಬ್ರಿಟಿಗಳ ಮಾತು

ಅನಿರುದ್ಧ್ ಅವರು ನಿಮಗೆ ಯಾವಾಗಿನಿಂದ ಪರಿಚಯ?
ಅವರು ವಿಷ್ಣು ಸರ್ ಅವರ ಕುಟುಂಬದಲ್ಲಿ ಒಂದಾದ ದಿನಗಳಿಂದಲೂ ನನಗೆ ಅನಿರುದ್ಧ್ ಪರಿಚಯವಿದೆ.  ಆಮೇಲೆ ನಾವು `ತಮಾಷೆಗಾಗಿ' ಎನ್ನುವ ಕೂಡ್ಲು ರಾಮಕೃಷ್ಣ ಸರ್ ಅವರ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದೆವು. ಅದರಲ್ಲಿ ಒಂದು ರೀತಿ ನಾವಿಬ್ಬರೂ ಜೋಡಿಯಾಗಿಯೇ ನಟಿಸಿದ್ದೆವು ಎನ್ನಬಹುದು. ಅವರೊಬ್ಬ ವಂಡರ್‌ಫುಲ್ ಹ್ಯೂಮನ್‌ ಬೀಯಿಂಗ್‌. ಆ ಚಿತ್ರದಲ್ಲಿ ಅನಿರುದ್ಧ್ ಯಂಗ್‌ಸ್ಟರ್. ಒಂದು ರೀತಿ ಜೋವಿಯಲ್ ಆಗಿರುವಂಥ ಪ್ಲೇಬಾಯ್‌ ಪಾತ್ರವಾಗಿತ್ತು. ಆದರೆ ಈಗ ಆರ್ಯವರ್ಧನ್ ಪಾತ್ರದಲ್ಲಿ ಅವರ ವಯಸ್ಸಿಗೆ ತಕ್ಕದಾದಂಥ ಗಾಂಭೀರ್ಯ ಎದ್ದು ಕಾಣುವಂತಿದೆ. ಆಮೇಲೆ ಎಲ್ಲೋ ಒಂದುಕಡೆ ಅವರನ್ನು ನೋಡುವಾಗ ವಿಷ್ಣು ಸರ್ ನ ನೋಡಿದಂತಾಗುವುದು ನಿಜ.

"ನನ್ನನ್ನು ಟ್ರೋಲ್ ಮಾಡಿ, ಆದರೆ ರೂಲ್ ಮಾಡಬೇಡಿ" ಎಂದ ಶೋಭರಾಜ್

ಯಾವ ವಿಚಾರದಲ್ಲಿ ಅನಿರುದ್ಧ್ ಅವರಲ್ಲಿ ನಿಮಗೆ ವಿಷ್ಣು ಕಾಣುತ್ತಾರೆ?
ನನಗೆ ಅವರ ಕೆಲವೊಂದು ಮ್ಯಾನರಿಸಮ್‌ಗಳು ವಿಷ್ಣು ಸರ್ ಅವರನ್ನು ನೆನಪಿಸುತ್ತದೆ. ಅದರಲ್ಲಿಯೂ ಮುಖ್ಯವಾಗಿ ಸೂಟ್ಸ್‌ ಹಾಕಿಕೊಂಡ ದೃಶ್ಯಗಳಲ್ಲಿ ಅವರನ್ನೇ ನೋಡಿದ ಹಾಗೆ ಆಗುತ್ತದೆ. ಯಾಕೆಂದರೆ ವಿಷ್ಣ ಸರ್ ಅವರಿಗೆ ಕೂಡ ಅಂಥ ಸೂಟ್ಸ್‌ ಚೆನ್ನಾಗಿ ಕಾಣುತ್ತಿತ್ತು. ಇವರಿಗೆ ಕೂಡ ಅಷ್ಟೇ ಸೂಟ್ಸ್ ಬಣ್ಣಗಳು ಚೆನ್ನಾಗಿ ಒಪ್ಪುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಪಾತ್ರವನ್ನು ತುಂಬ ಚೆನ್ನಾಗಿ ಕ್ಯಾರಿ ಮಾಡುವ ಕಲೆ ಇವರಲ್ಲಿದೆ. ಪಾತ್ರದ ಗತ್ತು, ಗಾಂಭೀರ್ಯವನ್ನು ಉಳಿಸಿಕೊಂಡಂಥ ನಟನೆ ನೀಡುತ್ತಾರೆ. ನಟನೆಯೂ ಅಷ್ಟೇ, ಸೆಟಲ್‌ ಆಗಿ ತಮ್ಮ ಭಾವನೆಗಳನ್ನೆಲ್ಲ ಕಣ್ಣಲ್ಲೇ ತೋರಿಸಬಲ್ಲರು. 
 

click me!