ರಾಬರ್ಟಗ ನಟಿ ಆಶಾ ಭಟ್ ಸದ್ಯ ತನ್ನದೇ ಲಹರಿಯಲ್ಲಿದ್ದಾರೆ. ಹೊಸ ಪಾತ್ರಗಳನ್ನು ನಿರೀಕ್ಷೆಯಲ್ಲಿರುವ ಅವರಿಗೆ ಈಗೀಗ ಹೆಚ್ಚಚ್ಚು ಹಾಡಲು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರಂತೆ. ಅವಕಾಶ ಸಿಕ್ಕರೆ ಸಿನಿಮಾದಲ್ಲೂ ಹಾಡೋದಾಗಿ ಈ ನಟಿ ಹೇಳಿಕೊಂಡಿದ್ದಾರೆ.
ಪ್ರಿಯಾ ಕೆರ್ವಾಶೆ
ರಾಬರ್ಟ್ ನಂತರ ಹೊಸ ಸಿನಿಮಾ?
undefined
ಒಪ್ಪಿಕೊಂಡಿದ್ದಿದ್ರೆ ನಿಮಗೆ ಗೊತ್ತಾಗದೇ ಇರ್ತಿತ್ತಾ..
ಯಾಕೆ, ಬರುತ್ತಿರುವ ಯಾವ ಪಾತ್ರಗಳೂ ಇಷ್ಟಆಗುತ್ತಿಲ್ಲವಾ?
ಒಂದಿಷ್ಟು ಸ್ಕ್ರೀಪ್ಟ್‌ಗಳನ್ನು ಓದುತ್ತಿದ್ದೇನೆ. ಇನ್ನೂ ಫೈನಲ್ ಮಾಡಿಲ್ಲ. ಎಲ್ಲ ಒಂದು ಹಂತಕ್ಕೆ ಬಂದ ಮೇಲೆ ಆ ಬಗ್ಗೆ ಹೇಳಬಹುದು.
ನಿಮ್ಮ ಅಭಿಮಾನಿಗಳು ನಿಮ್ಮನ್ನು ಯಾವಾಗ ಮತ್ತೆ ತೆರೆ ಮೇಲೆ ನೋಡೋದು?
ಆದಷ್ಟುಬೇಗ ಅಂತಲೇ ಫಿಂಗರ್ ಕ್ರಾಸ್ ಮಾಡಿ ಇಟ್ಟುಕೊಳ್ಳೋಣ.
'ರಾಬರ್ಟ್' ನಟಿ ಆಶಾ ಭಟ್ ವಿಡಿಯೋ ವೈರಲ್!ರಾಬರ್ಟ್ ಸಿನಿಮಾದ ಸಕ್ಸಸ್ ಹೇಗನಿಸಿತು?
ಬಹಳ ಖುಷಿ ಆಗಿದೆ. ಆ ಕೆಲವೇ ದಿನಗಳಲ್ಲೇ ಥಿಯೇಟರ್‌ಗಳಲ್ಲಿ ಸಕ್ಸಸ್‌ಫುಲ್ ಆಗಿ ಪ್ರದರ್ಶನ ಕಂಡಿತು. ನಂತರ ಪ್ರೈಮ್‌ನಲ್ಲೂ ಸಾಕಷ್ಟುಜನ ನಮ್ ಸಿನಿಮಾ ನೋಡಿದ್ರು. ಅಂಥಾ ಸೂಪರ್ ಹಿಟ್ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು, ಅಮೃತಾಳಂಥಾ ಪಾತ್ರ, ಸೂಪರ್ ಹಿಟ್ ಹಾಡು ಎಲ್ಲದರ ಬಗ್ಗೆ ಖುಷಿ ಇದೆ. ಆದರೆ ಆಮೇಲೆ ಲಾಕ್‌ಡೌನ್ ಆಗಿಬಿಟ್ಟಿತಲ್ವಾ. ಇನ್ನೊಂದಿಷ್ಟುಸ್ಕಿ್ರಪ್ಟ್ ಓದಿ ಫೈನಲ್ ಮಾಡಿ ಅದು ಶೂಟಿಂಗ್ ಶುರು ಮಾಡುವಷ್ಟುಸಮಯ ನನಗೆ ಸಿಗಲೇ ಇಲ್ಲ.
ಬಾಲಿವುಡ್, ಕಾಲಿವುಡ್‌ಗಳಲ್ಲಿ ನಟಿಸೋ ಪ್ಲಾನ್?
ನಾನು ಬೇರೆ ಭಾಷೆಗಳಲ್ಲಿ ನಟಿಸಿದ ಕೂಡಲೇ ಕಡಿಮೆ ಕನ್ನಡತಿ ಆಗಲ್ಲ. ನಾನು ಎಂಟ್ರಿ ಕೊಟ್ಟಿದ್ದೇ ಹಿಂದಿ ಸಿನಿಮಾದಲ್ಲಿ. ಕಲಾವಿದರಿಗೆ ಭಾಷೆಯ ಬೇಲಿ ಹಾಕೋದು ಸರಿಯಲ್ಲ. ಎಲ್ಲ ಬಗೆಯ, ಎಲ್ಲ ಭಾಷೆಗಳ ಸಿನಿಮಾಗಳ ಅವಕಾಶವನ್ನೂ ಮುಕ್ತವಾಗಿ ಸ್ವೀಕರಿಸುತ್ತೇನೆ. ಪಾತ್ರದ ಬಗೆಗೂ ಮಿತಿ ಹಾಕಿಕೊಂಡಿಲ್ಲ. ಹಲವಾರು ಬಗೆಯ ಪಾತ್ರಗಳನ್ನು ಚಾಲೆಂಜಿಂಗ್ ಆಗಿ ತಗೊಂಡು ನಟಿಸಬೇಕು ಅನ್ನೋ ಆಸೆ ಇದೆ.
ಬೆಂಗಳೂರಾ, ಮುಂಬಯಿನಾ?
ಎರಡೂ ಕಡೆ ಓಡಾಡಿಕೊಂಡಿದ್ದೇನೆ. ಸ್ಕಿ್ರಪ್ಟ್ ರೀಡಿಂಗ್ ಇದೆ ಅಂದ್ರೆ, ಬ್ರಾಂಡ್ ಕಮಿಟ್‌ಮೆಂಟ್ ಇದ್ದಾಗ ಬೆಂಗಳೂರಿಗೆ ಬರ್ತೀನಿ, ಇಲ್ಲಾಂದ್ರೆ ಮುಂಬೈ.
ಬಾಲಿವುಡ್ ಬೇಡವೇ ಬೇಡ, ಕನ್ನಡ ಸಿನಿಮಾ ಬೇಕು: ನಟಿ ಆಶಾ ಭಟ್ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಹಾಡು, ಡ್ಯಾನ್ಸ್‌ಅನ್ನೂ ಜನ ಮೆಚ್ಕೊಳ್ತಿದ್ದಾರೆ?
ಕರ್ನಾಟಕ ಸಂಗೀತ ಮತ್ತು ಡ್ಯಾನ್ಸ್‌ಅನ್ನು ತುಂಬ ಪ್ರೊಫೆಶನಲ್ಲಾಗಿ ಮುಂದುವರಿಸೋಕೆ ಆಗ್ತಿಲ್ಲ. ಆದರೆ ಮನೆಯಲ್ಲಿರುವಾಗ ಅಭ್ಯಾಸ ಮಾಡುತ್ತಿದ್ದೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದಾಗ ಜನರಿಂದ ಉತ್ತಮ ಸ್ಪಂದನೆ ಬಂತು. ನೀವು ಸಿನಿಮಾದಲ್ಲೂ ಹಾಡಿ ಅಂತ ಒತ್ತಾಯಗಳೂ ಬಂದವು. ಅವಕಾಶ ಸಿಕ್ಕರೆ ಸಿನಿಮಾದಲ್ಲಿ ಹಾಡೋದಕ್ಕೂ ರೆಡಿ.
ಚೆನ್ನಾಗಿ ರಂಗೋಲೆ ಬರೀತೀರ ಅಲ್ವಾ?
ಅದು ಬಾಲ್ಯದಿಂದ ಬಂದ ಕಲೆ. ಚಿಕ್ಕವಳಿಂದಲೂ ಹಬ್ಬದ ವೇಳೆಗೆ ನಮ್ಮನೆಯಲ್ಲಿ ನಾನೇ ರಂಗೋಲೆ ಬರೀತಿದ್ದೆ. ಈಗಲೂ ಮನೆಯಲ್ಲಿದ್ದರೆ ನಾನೇ ರಂಗೋಲೆ ಬಿಡಿಸ್ತೀನಿ.
ಇನ್ನೇನು ಹೌಸ್‌ಫುಲ್ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಗಬಹುದು ಅಂತಿರುವಾಗಲೇ ಕೊರೋನಾ ಹೆಚ್ಚಾಗ್ತಿದೆ. ಆತಂಕ ಆಗ್ತಿಲ್ವಾ?
ನಮ್ಮ ತಾಳ್ಮೆ ಹೆಚ್ಚಬೇಕು. ಜೀವಕ್ಕಿಂತ ಮೇಲೆ ಏನೂ ಇಲ್ಲ. ಮೂರನೇ ಅಲೆ ಬರದ ಹಾಗೆ ತಡೆಯೋದು ನಮ್ಮ ಕೈಯಲ್ಲೇ ಇದೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದಿದ್ದರೆ ನಿಯಂತ್ರಿಸೋದು ಅಸಾಧ್ಯ ಅಲ್ಲ. ನಾನು ಆಶಾವಾದಿ. ಖಂಡಿತಾ ಶೀಘ್ರದಲ್ಲೇ ಇದೆಲ್ಲ ಸರಿಹೋಗಿ ಈಗಾಗಲೇ ಲೈನ್‌ಅಪ್ ಆಗಿರುವ ಮೂವೀಸ್ ರಿಲೀಸ್ ಆಗುತ್ತೆ ಆನ್ನುವ ನಂಬಿಕೆ ಇದೆ.