Kantara ಕೆರಾಡಿಯಲ್ಲಿ ಕಾಂತಾರ, ಕತೆ ಕೇಳ್ತಾ ಕೇಳ್ತಾ ದಂತಕತೆಯಾಗುತ್ತೆ: ರಿಷಬ್ ಶೆಟ್ಟಿ

By Kannadaprabha News  |  First Published Sep 30, 2022, 8:54 AM IST

‘ಕಾಂತಾರ ಕತೆ ಕೇಳ್ತಾ ಕೇಳ್ತಾ ದಂತಕತೆಯಾಗುತ್ತೆ.. ಅಂತಾರೆ ಈ ಚಿತ್ರದ ನಿರ್ದೇಶಕ, ನಾಯಕ ರಿಷಬ್‌ ಶೆಟ್ಟಿ. ಅಂಥದ್ದೊಂದು ದಂತಕತೆಯ ಕ್ಷಣಗಳನ್ನು ಅವರಿಲ್ಲಿ ಬಿಟ್ಟಿಚ್ಚಿದ್ದಾರೆ. ಹೊಂಬಾಳೆ ಫಿಲಂಸ್‌ ಮೂಲಕ ವಿಜಯ್‌ ಕಿರಗಂದೂರು ನಿರ್ಮಿಸಿರುವ ಈ ಚಿತ್ರ ಇಂದು ಬಿಡುಗಡೆ ಆಗುತ್ತಿದೆ. ಸಪ್ತಮಿ ಗೌಡ ನಾಯಕಿ.


ಪ್ರಿಯಾ ಕೆರ್ವಾಶೆ

ನೀವು ಓಡಾಡಿದ ನೆಲದ ಕಥೆಯನ್ನು ಸಿನಿಮಾ ಆಗಿಸುವಾಗಿನ ನಿಮ್ಮ ಅನುಭವದ ಬಗ್ಗೆ ಹೇಳೋದಾದ್ರೆ?

Latest Videos

undefined

ಅದೊಂದು ಅದ್ಭುತ ಅನುಭವ. ನನ್ನೂರಿನ ಕಥೆ ಹೇಳುವಾಗ ಅದು ನನಗೆ ಬರೀ ಸಿನಿಮಾ ಅಷ್ಟೇ ಆಗಿರಲ್ಲ, ಅದು ಎಮೋಶನ್‌. ಅಲ್ಲಿ ತೋರಿಸಿರುವ ಸಂಸ್ಕೃತಿ ನಾವು ನಡೆದುಕೊಳ್ಳೋದು, ಆರಾಧಿಸೋದು, ನಮ್ಮ ಜನ ಜೀವನ ಎಲ್ಲವೂ ಆಗಿರುವಾಗ ಇದು ಭಾವನಾತ್ಮಕವಾಗಿ ನನಗೆ ಹೆಚ್ಚು ಕನೆಕ್ಟೆಡ್‌.

ಸೀಮಿತ ಪ್ರದೇಶದ ಸಂಸ್ಕೃತಿ, ಕಥೆಯನ್ನು ಜಗತ್ತಿಗೆ ದಾಟಿಸುವಾಗಿನ ಸವಾಲು?

ನಾನು ಯಾವತ್ತೂ ನಂಬೋದು ಮೋರ್‌ ರೀಜನಲ್‌, ಮೋರ್‌ ಯೂನಿವರ್ಸಲ್‌ ಅನ್ನೋದನ್ನು. ಹೆಚ್ಚು ಸ್ಥಳೀಯವಾಗಿಯೇ ನಮ್ಮೊಳಗೆ ಇರುವ ‘ಕೋರ್‌’ ಅಂತೀವಲ್ವಾ, ಆ ಕೋರ್‌ ಕಂಟೆಂಟ್‌ ಯಾವತ್ತೂ ಯೂನಿವರ್ಸಲ್‌ ಆಗಿರುತ್ತೆ.

ಕಥೆ ಮೊಳಕೆ ಒಡೆದ ಸನ್ನಿವೇಶ?

ನನ್ನ ಲಿಸ್ಟ್‌ನಲ್ಲಿ ಇಲ್ಲದೇ ಇದ್ದಿದ್ದ ಸಿನಿಮಾ ಈ ಕಾಂತಾರ. ಅದು ಸೆಕೆಂಡ್‌ ಲಾಕ್‌ಡೌನ್‌ ಸಮಯ. ಊರಲ್ಲಿದ್ದೆ. ಗೆಳೆಯರ ಜೊತೆಗೆ ಯಾವುದೋ ವಿಷಯ ಚರ್ಚಿಸುತ್ತಿದ್ದಾಗ ಸಡನ್ನಾಗಿ ಒಂದು ಥಾಟ್‌ ಬಂತು. ಮಾತಾಡ್ತಾ ಮಾತಾಡ್ತಾ ಕಥೆಯ ರೂಪ ಪಡೆಯಿತು. ಅರ್ಧ ಗಂಟೆಯಲ್ಲಿ ಫಸ್ಟ್‌ ಹಾಫ್‌ ಕಥೆ ಕಂಪ್ಲೀಟ್‌ ಆಗೋಯ್ತು! ಸೆಕೆಂಡ್‌ ಹಾಫ್‌ ಮಾಡುವಾಗ ಒಂದಿಷ್ಟುರೀಸಚ್‌ರ್‍, ಚರ್ಚೆಗಳೆಲ್ಲ ನಡೆದು ಟೈಮ್‌ ತಗೊಳ್ತು.

'ಕಾಂತಾರ'ದ ಪ್ರಪಂಚ ತೆರೆದಿಟ್ಟ ಶಿವ ಮತ್ತು ಗ್ಯಾಂಗ್​

ಸಿನಿಮಾ ಕಥೆಯೇ ಬೇರೆ ಬಗೆಯದ್ದಾಗಿರುವ ಕಾರಣ ಸಾಮಾನ್ಯ ಅಲ್ಲದ ಬೇರೆ ಬಗೆಯ ಅನುಭವ ಏನಾದ್ರೂ?

ಸಿನಿಮಾ ಪ್ರೊಸೆಸ್‌ ಉದ್ದಕ್ಕೂ ರಿಯಲ್‌ ವಲ್ಡ್‌ರ್‍ ಕಾಂತಾರ ಫೀಲ್‌ ಇತ್ತು. ಬಹಳ ಪ್ರಾಮಾಣಿಕವಾಗಿ, ಭಕ್ತಿ, ಜಾಗರೂಕತೆಯಿಂದ ಮಾಡಿದ ಪ್ರೊಸೆಸ್‌ ಇದು. ಸಿನಿಮಾ ಮುಗಿಸಿದಾಗ ಏನೋ ಮಿರಾಕಲ್‌ ಆಗ್ತಿದೆ ಅನ್ನೋ ಫೀಲ್‌.

ಇಡೀ ಸಿನಿಮಾ ಶೂಟಿಂಗ್‌ ಆಗಿದ್ದು ಕೆರಾಡಿಯಲ್ಲಿ.

ನನ್ನೂರು ಕೆರಾಡಿ. ಬಹಳ ಫ್ಯಾಸಿನೇಟಿಂಗ್‌ ಆಗಿ ಅಲ್ಲಿನ ಲೊಕೇಶನ್‌ಗಳು ನನಗೆ ಕಾಡುತ್ತವೆ. ನಮ್ಮೂರಲ್ಲಿ ಎಲ್ಲಿ ಫ್ರೇಮಿಟ್ಟರೂ ಚಂದನೇ. ಶೂಟಿಂಗ್‌ ಟೈಮಲ್ಲಿ ‘ಕೆರಾಡಿ ಫಿಲಂ ಸಿಟಿ’ ಅಂತ ಹೆಸರಿಟ್ಟಿದ್ವಿ. ಕುಗ್ರಾಮ ಅದು. ಕಾಂತಾರವನ್ನು ಅಲ್ಲೇ ಕಲ್ಪನೆ ಮಾಡಿರೋದರಿಂದಾಗಿ ನಾನೆಲ್ಲಿ ಕಲ್ಪಿಸಿಕೊಂಡಿದ್ದೆನೋ ಅಲ್ಲೇ ಹೋಗಿ ಕ್ಯಾಮರಾ ಇಡ್ತಿದ್ದೆ. ಇದರ ಜೊತೆಗೆ ಇದರಲ್ಲಿ ಕಂಬಳ ನಡೆಸಿದ ಗದ್ದೆ ನಮ್ಮ ಮನೆ ಗದ್ದೆ. ನಮ್ಮದು ಬೀಡಿನ ನಮ್ಮ ಕುಟುಂಬ. ನಾವೇ ಅಲ್ಲಿ ಕಂಬಳ ನಡೆಸ್ತೀವಿ. ಹಾಗೆ ಕಂಬಳ ಮಾಡುವಾಗಲೇ ಶೂಟಿಂಗ್‌ ಮಾಡಿದ್ದದು.

ಸಿನಿಮಾ ಉದ್ದಕ್ಕೂ ನಾನು ಬೀಡ ಹಾಕೊಂಡೆ ಇದ್ದೆ; ರಿಷಬ್ ಶೆಟ್ಟಿ

ಪಾತ್ರದ ಬಗ್ಗೆ ಕೇಳೋದಾದ್ರೆ ಕರಾವಳಿಯವರನ್ನು ಈ ಶಿವ ಅಷ್ಟೊಂದು ಸೆಳೆಯೋದು ಯಾಕೆ?

ಶಿವನಲ್ಲಿರುವ ಆ ರೇಜ್‌. ಆ ಸ್ವಭಾವ ನನ್ನನ್ನು ಬಹಳ ಹಾಂಟ್‌ ಮಾಡಿತ್ತು. ಆ ರೇಜ್‌ ನನ್ನಲ್ಲೂ ಇತ್ತು. ನಮ್ಮೂರಿನ ಒಂದಿಷ್ಟುಜನರಲ್ಲೂ ನೋಡಿದ್ದೆ. ನನ್ನ ಕಲ್ಪನೆಯ ಶಿವನೂ ಹಾಗೇ ಇದ್ದ. ನಮ್ಮೂರನ್ನು ಪರಶುರಾಮ ಸೃಷ್ಟಿಅಂತಾರೆ. ಶಿಕಾರಿಗೆ ಹೋಗುವಾಗ ಫಾರೆಸ್ಟ್‌ ಡಿಪಾರ್ಚ್‌ಮೆಂಟ್‌ನವರ ಜೊತೆಗೆ ಆಗುವ ಕ್ಲಾಶ್‌ಗಳನ್ನು ನೋಡಿದ್ದೆ. ಸರ್ಕಾರಿ ಭೂಮಿ ಅತಿಕ್ರಮಣದ ಅಂಶವೂ ಇದರಲ್ಲಿ ಬರುತ್ತೆ.

ನನ್ನ ಪಾತ್ರದ ಕಲ್ಪನೆ ಮೊದಲೇ ಇತ್ತು. ಆದರೆ ಕಂಬಳ, ದೈವದ ಪಾತ್ರಗಳಿಗೆಲ್ಲ ನಾನು ಬಹಳ ತಯಾರಿ ಮಾಡಿಕೊಂಡಿದ್ದೆ. ಪ್ರತೀವಾರ ಊರಿಗೆ ಹೋಗಿ ಕಂಬಳ ಓಡಿಸುವ ಟ್ರೈನಿಂಗ್‌ ಪಡೆಯುತ್ತಿದ್ದೆ. ಶೂಟಿಂಗ್‌ನಲ್ಲಿ ಒಂದು ದಿನದಲ್ಲಿ 36 ರೌಂಡ್‌ ಕೋಣ ಓಡಿಸಿದ್ದೀನಿ! ಹೇರ್‌ಲೈನ್‌ ಫ್ರಾಕ್ಚರ್ರೂ ಆಯ್ತು, ಸಿನಿಮಾದುದ್ದಕ್ಕೂ ಹೊಡೆತ ತಿಂತಾನೇ ಇದ್ದೆ. ರಿಯಲಿಸ್ಟಿಕ್‌ ಅನಿಸಬೇಕು. ಸಿನಿಮ್ಯಾಟಿಕ್‌ ಅನುಭವವನ್ನೂ ಕೊಡೋ ಥರದ ಆಕ್ಷನ್‌ ಬೇಕಿತ್ತು. ಚಿತ್ರ ಮುಗಿಯೋ ಹೊತ್ತಿಗೆ ಸಾಕು ಸಾಕಾಯ್ತು

click me!