ಕಿರಿಕ್ ಪಾರ್ಟಿಗಳಿಗೆ ಖಡಕ್‌ ಉತ್ತರ ನೀಡುತ್ತಾರೆ ರಕ್ಷಿತ್‌ ಶೆಟ್ಟಿ!

By Suvarna News  |  First Published Mar 10, 2020, 2:35 PM IST

ಲಹರಿ ಸಂಸ್ಥೆಯ ದೂರಿನನ್ವಯ ಕೋರ್ಟ್‌ಗೆ ಹಾಜರಾಗಿರದ ರಕ್ಷಿತ್ ಶೆಟ್ಟಿ ಅವರನ್ನು ಜಾಮೀನು ರಹಿತ ಬಂಧನಕ್ಕೆ ಕೋರ್ಟ್‌ ಆದೇಶಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ರಕ್ಷಿತ್‌ ಪ್ರಸ್ತುತ ಪಂಜಾಬ್‌ನಲ್ಲಿದ್ದು, ತಾವು ನಾಯಕರಾಗಿ ನಟಿಸುತ್ತಿರುವ `ಚಾರ್ಲಿ777' ಚಿತ್ರದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ನಿಜಕ್ಕೂ ಏನು ನಡೆದಿದೆ ಎನ್ನುವುದನ್ನು ಸುವರ್ಣನ್ಯೂಸ್‌.ಕಾಮ್‌ ಜತೆಗೆ ಅವರು ಹೇಳಿಕೊಂಡಿರುವ ವಿಶೇಷ ವಿಚಾರಗಳು ಇಲ್ಲಿವೆ.


ಆ ಚಿತ್ರಕ್ಕೆ `ಕಿರಿಕ್ ಪಾರ್ಟಿ' ಎನ್ನುವ ಹೆಸರನ್ನು ಯಾವಾಗ ಇಟ್ಟರೋ ಗೊತ್ತಿಲ್ಲ. ಚಿತ್ರ ಯಶಸ್ವಿಯಾದ ಮೇಲೆಯೂ ಅದು ಮೂಡಿಸುವ ಕಿರಿಕ್‌ ಕೊನೆಯಾಗಿಲ್ಲ! ಹಾಗಂತ ಬೇರೆಯವರು ಅಂದುಕೊಳ್ಳಬಹುದೇ ಹೊರತು, ರಕ್ಷಿತ್‌ ಮಾತ್ರ ಆ ಚಿತ್ರವನ್ನು ಪ್ರೀತಿಯಿಂದಲೇ ಕಾಣುತ್ತಾರೆ. ನನಗಷ್ಟೇ ಅಲ್ಲ, ಕನ್ನಡ ಚಿತ್ರೋದ್ಯಮಕ್ಕೆ ಯಶಸ್ಸು ತಂದುಕೊಟ್ಟ ಒಳ್ಳೆಯ ಚಿತ್ರ ಅದು. ಆದರೆ ಆ ಚಿತ್ರದ ಮೂಲಕ ಜನಪ್ರಿಯರಾದ ಯುವ ಪ್ರತಿಭೆಗಳನ್ನು ಸಹಿಸದವರು ಮಾತ್ರವೇ ಕಿರಿಕ್ ಮಾಡುತ್ತಿದ್ದಾರೆ ಎನ್ನುವುದು ಅವರ ಅಭಿಪ್ರಾಯ. ಯಾಕೆಂದರೆ ಶಾಂತಿ ಕ್ರಾಂತಿ ಹಾಡನ್ನು ನೆನಪಿಸುವ ಒಂದು ಗೀತೆ ಅದರಲ್ಲಿತ್ತು ಎನ್ನುವುದರ ಹೊರತು, ಟ್ಯೂನ್ ಅಪಹರಿಸುವಂಥ ಕೆಲಸ ಅಲ್ಲಿ ನಡೆದಿಲ್ಲ. ಈ ವಿಚಾರದಲ್ಲಿ ಈಗಾಗಲೇ ಒಮ್ಮೆ ನ್ಯಾಯಾಲಯ ತಮ್ಮ ಪರವಾಗಿ ಆದೇಶ ನೀಡಿದೆ. ಆದರೆ ಪದೇ ಪದೆ ಕಾಲು ಕೆರೆದು ಬರುವವರು ಕುತಂತ್ರ ಪೂರ್ವಕವಾಗಿ ಮುನ್ನುಗ್ಗುತ್ತಿದ್ದಾರೆ. ಅವರಿಗೆ ಸದ್ಯದಲ್ಲೇ ನ್ಯಾಯಾಲಯದ ಮೂಲಕ ಉತ್ತರ ನೀಡಲಿದ್ದೇನೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.  ಲಹರಿ ಸಂಸ್ಥೆಯ ದೂರಿನನ್ವಯ ಕೋರ್ಟ್‌ಗೆ ಹಾಜರಾಗಿರದ ಅವರನ್ನು ಜಾಮೀನು ರಹಿತ ಬಂಧನಕ್ಕೆ ಕೋರ್ಟ್‌ ಆದೇಶಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.  ರಕ್ಷಿತ್‌ ಪ್ರಸ್ತುತ ಪಂಜಾಬ್‌ನಲ್ಲಿದ್ದು, ತಾವು ನಾಯಕರಾಗಿ ನಟಿಸುತ್ತಿರುವ `ಚಾರ್ಲಿ777' ಚಿತ್ರದ ಶೂಟಿಂಗ್‌ ಭಾಗಿಯಾಗಿದ್ದಾರೆ.  ಘಟನೆಯ ಹಿನ್ನೆಲೆಯಲ್ಲಿ ನಿಜಕ್ಕೂ ಏನು ನಡೆದಿದೆ ಎನ್ನುವುದನ್ನು ಸುವರ್ಣನ್ಯೂಸ್‌.ಕಾಮ್‌ ಜತೆಗೆ ಅವರು ಹೇಳಿಕೊಂಡಿರುವ ವಿಶೇಷ ವಿಚಾರಗಳು ಇಲ್ಲಿವೆ.

- ಶಶಿಕರ ಪಾತೂರು

Latest Videos

undefined

ಪ್ರಕರಣ ವಾರಂಟ್‌ ಹೊರಡಿಸುವ ತನಕ ಮುಂದುವರಿದಿದ್ದು ಯಾಕೆ?

ವಾರಂಟ್ ಹೇಗೆ ಬಂತು ಎನ್ನುವುದೇ ವಿಶೇಷ. ಈ ಪ್ರಕರಣದಲ್ಲಿ ಮೊದಲು ನಾವು ಗೆದ್ದಿದ್ದೆವು. ಹತ್ತು ಲಕ್ಷ ಡೆಪಾಸಿಟ್ ಇಟ್ಟು ಫೈಟ್ ಮಾಡಿ ಆ ಹಣವನ್ನು ವಾಪಾಸು ಪಡೆದಿದ್ದೇವೆ. ಅದರ ಬಳಿಕ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ! ಮೊದಲ ಬಾರಿ ಪ್ರಕರಣ ದಾಖಲಿಸಿದಾಗ ನನಗೆ ಪೋನ್ ಮಾಡಿದ ವಕೀಲರೇ ಖುದ್ದಾಗಿ ಭೇಟಿಯಾಗಿ ಕೈಗೆ ಸಮನ್ಸ್ ನೀಡಿದ್ದರು. ಆದರೆ ಈ ಬಾರಿ ನನಗೆ ವಾರಂಟ್ ಇಶ್ಯೂ ಆದ ಮೇಲೆಯೇ ವಿಚಾರ ತಿಳಿಯುವಂತಾಯಿತು. ಅವರು ಫೋನ್ ಮಾಡಿ ಹೇಳಿಲ್ಲ ಎನ್ನುವುದೊಂದೇ ಕಾರಣವಲ್ಲ, ಆ ಸಮನ್ಸ್ ನನ್ನ ವಿಳಾಸಕ್ಕೆ ಕಳಿಸಿಯೇ ಇಲ್ಲ ಎನ್ನುವುದು ಸತ್ಯ. ಯಾಕೆಂದರೆ ನಾನು ಈ ಬಗ್ಗೆ ಅರಿತು ವಕೀಲರನ್ನು ಇರಿಸಿ ಫೈಟ್ ಮಾಡಿದರೆ ಖಂಡಿತವಾಗಿ ಗೆಲ್ಲುತ್ತೇನೆ ಎನ್ನುವ ಸ್ಪಷ್ಟ ಅರಿವು ಅವರಿಗಿದೆ. ಅದಕ್ಕಾಗಿಯೇ ಮೋಸದಿಂದ ಮಣಿಸಲು ನೋಡಿದ್ದಾರೆ. ಹಾಗಾಗಿ ಅವರದು ಕಾನೂನು ಪ್ರಕಾರ ಹೋರಾಟವಲ್ಲ, ಕಾನೂನನ್ನು ದಾರಿ ತಪ್ಪಿಸುವ ಪ್ರಯತ್ನ ಎಂದು ಹೇಳಬಲ್ಲೆ.

ಈ ನಟಿಯರ ದೃಷ್ಟಿಯಲ್ಲಿ ಆದರ್ಶ ಮಹಿಳೆ ಎಂದರೆ...?

ಹಾಗಾದರೆ ಇದು ಉದ್ದೇಶಪೂರ್ವಕವಾಗಿ ನಿಮಗೆ ತೊಂದರೆ ನೀಡುವ ಪ್ರಯತ್ನ ಎನ್ನಬಹುದೇ?

ನಿಸ್ಸಂದೇಹವಾಗಿ ಅದನ್ನೇ ಮಾಡುತ್ತಿದ್ದಾರೆ. ಮೊದಲ ಬಾರಿ ಕೇಸ್ ಹಾಕಿದಾಗಲೂ ಅವರದ್ದು ಅಂಥದ್ದೇ ವರ್ತನೆಯಾಗಿತ್ತು. ಬಿಡುಗಡೆಯ ಹಿಂದಿನ ದಿನ ಚಿತ್ರಕ್ಕೆ ಸ್ಟೇ ತಂದಿದ್ದರು. ಹಾಗಾಗಿ ಕೆಲವೆಡೆಗಳಲ್ಲಿ ಮೊದಲ ಪ್ರದರ್ಶನದಲ್ಲೇ ಆ  ಹಾಡು ಕತ್ತರಿಸಿ ಪ್ರದರ್ಶಿಸಬೇಕಾದ ಪರಿಸ್ಥಿತಿ ಬಂದಿತ್ತು. ಈ ಬಾರಿಯೂ ಅಷ್ಟೇ, ಕೋರ್ಟ್‌ ನೋಟೀಸ್ ಬಗ್ಗೆ ನನಗೆ ಫೋನ್ ಮಾಡಿ ಹೇಳುವ ವಿಚಾರ ಪಕ್ಕಕ್ಕಿರಲಿ, ನೋಟೀಸ್ ನನ್ನ ವಿಳಾಸಕ್ಕೆ ತಲುಪದಂತೆ ಎಚ್ಚರಿಕೆ ವಹಿಸಿದ್ದರು. ಹಾಗಾಗಿ ಅದನ್ನು ಮೂರು ವರ್ಷಗಳ ಹಿಂದೆ ನಾನು ಇದ್ದಂಥ ಜಯನಗರದ ಹಳೆಮನೆಯ ವಿಳಾಸಕ್ಕೆ ಕಳಿಸಿದ್ದರು! ಅಲ್ಲಿನ ಕಾವಲುಗಾರನನ್ನು ವಿಚಾರಿಸಿದಾಗ ಆತ ಹೇಳುತ್ತಿರುವುದು ಈ ಪ್ರಕರಣ ದಾಖಲಾದ ಹಿಂದಿನ ದಿನವಷ್ಟೇ ಆ ನೋಟೀಸ್ ಆತನ ಕೈ ಸೇರಿದೆ ಎಂದು!  ನನ್ನ ಸಂಪರ್ಕ ಸಂಖ್ಯೆ ಇದ್ದರೂ ನೇರವಾಗಿ ಸಂಪರ್ಕಿಸಲಿಲ್ಲ ಎನ್ನುವುದರ ಜತೆಗೆ,  ಮತ್ತೊಂದೆಡೆ ನನ್ನ `ಪರಮ್ವ ಸ್ಟುಡಿಯೋ' ಬಗ್ಗೆ ಗೂಗಲ್ ಮಾಡಿದರೂ ಹೊಸ ವಿಳಾಸ ಪಡೆಯಬಹುದಿತ್ತು ಎನ್ನುವುದು ಪರಮ ವಾಸ್ತವ. ಅಷ್ಟೇ ಅಲ್ಲ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಮೇಲೆ ಕಳಿಸಿರುವ ನೋಟೀಸ್ ಕೂಡ ನನ್ನ ಹಳೆಯ ವಿಳಾಸಕ್ಕೆ ಕಳಿಸುವ ಅಗತ್ಯ ಏನು? ಅದನ್ನು ಅಜನೀಶ್ ಸ್ಟುಡಿಯೋ ವಿಳಾಸಕ್ಕೆ ಕಳಿಸಿದರೆ ನಾವು ತಕ್ಷಣ ವಕೀಲರನ್ನು ಏರ್ಪಾಟು ಮಾಡಿ ನಮ್ಮ ನಿರಪರಾಧಿತ್ವ ಸಾಬೀತು ಮಾಡಿಬಿಟ್ಟರೆ ತಮ್ಮ ಗತಿಯೇನು ಎನ್ನುವ ಭಯದಿಂದಲೇ ಇಂಥ ಕೆಲಸ ಮಾಡಿದ್ದಾರೆ.

ಇದರಿಂದ ಅವರು ಸಾಧಿಸುವುದಾದರೂ ಏನು?
ಇದಕ್ಕೆ ಅವರೇ ಉತ್ತರ ಹೇಳಬೇಕು! ಆದರೆ ಅವರ ವರ್ತನೆ ನೋಡುವಾಗ ನನ್ನ ಹೆಸರು ಕೆಡಿಸುವುದೇ ಉದ್ದೇಶ ಇರುವಂತಿದೆ. ಕೋರ್ಟ್‌ನಿಂದ ಹೊರಡಿಸಲಾದ ವಾರಂಟ್ ಮರುದಿನ ಪೊಲೀಸರ ಕೈಗೆ ಸೇರುವ ಮೊದಲೇ ಚಿತ್ರೋದ್ಯಮದವರ, ಮಾಧ್ಯಮದವರ ವಾಟ್ಸ್ಯಾಪ್ ಗಳಲ್ಲಿ ಹರಿದಾಡಿತ್ತು. ಹಾಗೆ ನನ್ನ ವಾಟ್ಸ್ಯಾಪ್‌ಗೂ ಬಂತು. ಸರಿ ನಾನು ಕೋರ್ಟ್‌ಗೆ ಹೋಗದಿರುವುದು ತಪ್ಪೇ ಎಂದು ಇಟ್ಟುಕೊಳ್ಳಿ. ಹಾಗಂತ ಪೊಲೀಸ್ ವಾರೆಂಟನ್ನು ಫೊಟೋ ತೆಗೆದು ಅದನ್ನು ಪ್ರಚಾರ ಮಾಡುವ ಹಕ್ಕು ಅವರಿಗೆ ಇದೆಯೇ? ಈ ಹಿಂದೆ ನಾನು ಪ್ರಕರಣ ಗೆದ್ದಾಗಲೂ ಅದರ ಬಗ್ಗೆ ಅನೌನ್ಸ್‌ ಮಾಡಲು ಹೋಗಿರಲಿಲ್ಲ. ಯಾಕೆಂದರೆ ಲಹರಿ ಸೋತ ವಿಚಾರ ಮತ್ತೆ ಸುದ್ದಿಯಾಗುವುದು ಬೇಡ ಎನ್ನುವ ಕಾರಣಕ್ಕೆ ಸುಮ್ಮನಿದ್ದೆ. ಅದೇ ರೀತಿ ನಾವು ಗೆದ್ದಿದ್ದೇವೆ ಎಂದು ಸುದ್ದಿ ಮಾಡುವುದಾಗಲೀ, ಟ್ರೋಲ್ ಮಾಡುವುದಕ್ಕಾಗಲೀ ಹೋಗಿರಲಿಲ್ಲ. ಆದರೆ ನಮ್ಮ ಅಂಥ ಪ್ರತಿಕ್ರಿಯೆಗೆ ಈ ರೀತಿ ವರ್ತಿಸುವವರು ಕೂಡ ಇದ್ದಾರೆ ಎನ್ನುವುದನ್ನು ಕಂಡಾಗ ನನಗೆ ವಿಚಿತ್ರ ಅನಿಸುತ್ತದೆ.

ರವಿಚಂದ್ರನ್ ಮಗನಿಗೆ ಅಮ್ಮನಾದ ತಾರಾ

ನಿಮ್ಮ ಮುಂದಿನ ಹೆಜ್ಜೆ ಏನು?
ಈ ಬಾರಿ ಕೇಸ್‌ ಬಗ್ಗೆ ನನಗೆ ಮೊದಲೇ ವಿಷಯ ಗೊತ್ತಿರಲಿಲ್ಲ. ಹಾಗಾಗಿ ನಾನು ಊರಲ್ಲಿ ಇಲ್ಲ ಎಂದ ಮಾತ್ರಕ್ಕೆ ಪರಾರಿಯಾಗಿದ್ದೇನೆ ಎಂದು ಅರ್ಥ ಅಲ್ಲ. ಆದರೆ ನನ್ನ ಬಗ್ಗೆ ಹರಡಿರುವ ವಿಚಾರಗಳನ್ನು ಗಮನಿಸಿದಾಗ ಕೊಲೆ ಮಾಡಿ ತಲೆ ಮರೆಸಿಕೊಂಡವನನ್ನು ಹುಡುಕಿಕೊಂಡು ಬಂದು ಅರೆಸ್ಟ್ ಮಾಡುವಂತೆ ಕೊಂಡೊಯ್ಯಲಿದ್ದಾರೆ ಎನ್ನುವಂಥ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ! `ಚಾರ್ಲಿ777' ಚಿತ್ರದ ಶೂಟಿಂಗ್‌ಗಾಗಿ ಪಂಜಾಬ್‌ಗೆ ಬಂದಿದ್ದೇನೆ. ಜಾಮೀನು ರಹಿತ ಬಂಧನದ ಆದೇಶ ಇದ್ದರೂ ಅದಕ್ಕೂ ಒಂದು ಕಾಲಾವಧಿ ಇದೆ. ಅದರೊಳಗೆ ಬಂದು ಖಂಡಿತವಾಗಿ ಕೋರ್ಟ್‌ಗೆ ಹಾಜರಾಗಲಿದ್ದೇನೆ. ನನ್ನ ದೇಶದ ನ್ಯಾಯಾಂಗ ವ್ಯವಸ್ಥೆ ಏನು ಬಯಸುತ್ತದೆಯೋ ಅದಕ್ಕೆ ಬದ್ಧನಾಗಬೇಕಿರುವುದು ನನ್ನ ಕರ್ತವ್ಯ ಎಂದು ನಾನು ನಂಬಿದ್ದೇನೆ.

"

click me!