ನಾನು ನಾಯಿ ಪ್ರಿಯೆ, ಅದಕ್ಕೇ 777 ಚಾರ್ಲಿ ಆಡಿಶನ್‌ಗೆ ಹೋಗಿದ್ದೆ; ಸಂಗೀತಾ ಶೃಂಗೇರಿ ಜತೆ ಮಾತುಕತೆ

By Kannadaprabha News  |  First Published Apr 16, 2021, 9:10 AM IST

ಪರಮ್‌ವಃ ಪ್ರೊಡಕ್ಷನ್‌ನಿಂದ ರಿಲೀಸ್‌ಗೆ ಸಿದ್ಧವಾಗಿರುವ ಸಿನಿಮಾ ‘ಚಾರ್ಲಿ 777’. ರಕ್ಷಿತ್‌ ಶೆಟ್ಟಿಹೀರೋ ಆಗಿರುವ ಈ ಚಿತ್ರದ ನಾಯಕಿ ಸಂಗೀತಾ ಶೃಂಗೇರಿ ಜತೆ ಮಾತುಕತೆ. ನಾಗೇಂದ್ರ ಪ್ರಸಾದ್‌ ನಿರ್ದೇಶನದ ಪುನೀತ್‌ ರಾಜ್‌ ಕುಮಾರ್‌, ಡಾರ್ಲಿಂಗ್‌ ಕೃಷ್ಣ ಅಭಿನಯದ ಹೊಸ ಚಿತ್ರವೂ ಸೇರಿದಂತೆ ಒಟ್ಟು ನಾಲ್ಕು ಸಿನಿಮಾ ಸಂಗೀತಾ ಕೈಯಲ್ಲಿದೆ.


ಪ್ರಿಯಾ ಕೆರ್ವಾಶೆ

777 ಚಾರ್ಲಿ ಸಿನಿಮಾದಲ್ಲಿ ನಾಯಕ ಮತ್ತು ನಾಯಿಯ ವಿಜೃಂಭಣೆ ಆಗ್ತಿದೆ. ನಾಯಕಿ ಪಾತ್ರ ಯಾವ ಥರದ್ದು?

Latest Videos

undefined

ಅಫ್‌ಕೋರ್ಸ್‌ ಇಡೀ ಸಿನಿಮಾ ಚಾರ್ಲಿ ಅನ್ನುವ ನಾಯಿಯ ಸುತ್ತ ಸಾಗುವ ಕಥೆ. ದಕ್ಷಿಣ ಭಾರತಕ್ಕೇ ಬಹಳ ಅಪರೂಪದ ಸಿನಿಮಾ ಇದು. ನನ್ನ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ದೇವಿಕಾ ಆರಾಧ್ಯ ಅನ್ನುವ ಪಾತ್ರ ನನ್ನದು. ಎನಿಮಲ್‌ ವೆಲ್‌ಫೇರ್‌ ಆಫೀಸರ್‌ ರೋಲ್‌. ಇಡೀ ಟೀಮ್‌ ಜೊತೆಗೆ ಕಳೆದ ಪ್ರತೀ ಕ್ಷಣವೂ ಅದ್ಭುತ. ಹಾಗೆ ನೋಡಿದ್ರೆ ಟೀಮ್‌ನಲ್ಲಿ ನಾನೊಬ್ಳೇ ಫೀಮೇಲ್‌ ಇದ್ದದ್ದು, ಆದ್ರೆ ಒಂಚೂರೂ ಕಸಿವಿಸಿ ಆಗಿಲ್ಲ. ಈ ಟೀಮ್‌ ಜೊತೆಗೆ ಯಾವ ಸಿನಿಮಾ ಮಾಡಲೂ ನಾನು ರೆಡಿ ಅನ್ನುವಷ್ಟುಆಪ್ತವಾಗಿತ್ತು. ರಾಜಸ್ಥಾನ, ಗುಜರಾತ್‌, ಗೋವಾದಲ್ಲೆಲ್ಲ ಶೂಟಿಂಗ್‌ ಆಯ್ತು. ಅಲ್ಲಿನ ಸಂಸ್ಕೃತಿ, ಸ್ಥಳೀಯರು ಹೊಸಬರನ್ನು ಸ್ವಾಗತಿಸಿದ ರೀತಿ ಕಂಡು ಹೃದಯ ತುಂಬಿ ಬಂತು.

ಇಡೀ ಸಿನಿಮಾ ನಾಯಿ ಬಗ್ಗೆ ಅಂತೀರಿ. ನೀವೂ ಪ್ರಾಣಿ ಪ್ರಿಯೆನಾ?

ಖಂಡಿತಾ. ನಾನು ಈ ಸಿನಿಮಾ ಅಡಿಶನ್‌ಗೆ ಹೋಗಲು ಮುಖ್ಯ ಕಾರಣವೇ ಅದು. ನಾಯಿ, ಬೆಕ್ಕು, ಪ್ರಾಣಿಗಳನ್ನು ಕಂಡರೆ ಬಹಳ ಬಹಳ ಪ್ರೀತಿ. ಒಂದಿಷ್ಟುಇಂಡಿಯನ್‌ ಪಪ್ಪಿಗಳು, ಬೆಕ್ಕುಗಳನ್ನು ರಕ್ಷಣೆ ಮಾಡಿದ್ದೀನಿ. ತೀರಾ ಇತ್ತೀಚೆಗೆ ಒಂದು ಪುಟ್ಟನಾಯಿ ಮರಿ ರಸ್ತೆಯಲ್ಲಿ ಅನಾಥವಾಗಿ ಬಿದ್ದಿತ್ತು. ಫೆä್ಲೕರಾ ಅಂತ ಹೆಸರಿಟ್ಟು ಪ್ರೀತಿಯಿಂದ ಸಾಕುತ್ತಿದ್ದೆ. ಸ್ವಲ್ಪ ಸಮಯಕ್ಕೇ ಅವಳಿಗೆ ಕರುಳಿನ ಸಮಸ್ಯೆ ಬಂತು. ಆಪರೇಶನ್‌ ಮಾಡಿದ್ರೂ ಬದುಕಿಸೋದಕ್ಕಾಗಲಿಲ್ಲ. ಒಂದು ತಿಂಗಳಾಯ್ತು ಅವಳನ್ನು ಕಳೆದುಕೊಂಡು. ಆ ಬೇಜಾರಿಂದ ಹೊರಬರಲಾಗದೇ ಸದ್ಯಕ್ಕೆ ನಾಯಿಗಳ ಸಹವಾಸಕ್ಕೆ ಹೋಗಬಾರದು ಅಂತ ತೀರ್ಮಾನ ಮಾಡಿದ್ದೀನಿ. ಚಾರ್ಲಿ ಸಿನಿಮಾದ ನಾಯಿಯನ್ನು ಕಂಡರೂ ಬಹಳ ಇಷ್ಟ.

ಕಾಶ್ಮೀರದಲ್ಲಿ ರಕ್ಷಿತ್‌ ಶೆಟ್ಟಿ;ಕೊರೆಯುವ ಚಳಿಯಲ್ಲೂ ಚಾರ್ಲಿ ಹಂಗಾಮ! 

777 ಚಾರ್ಲಿ ಬಗ್ಗೆ ನಿಮ್ಮ ನಿರೀಕ್ಷೆ?

ಈ ಚಿತ್ರದ ನಿರ್ದೇಶಕ ಕಿರಣ್‌ರಾಜ್‌ ಅವರ ಎನರ್ಜಿ ಕಂಡೇ ಥ್ರಿಲ್‌ ಆಯ್ತು. ಒಂದು ನಾಯಿಯನ್ನು ಬಳಸಿ ಸಿನಿಮಾ ಮಾಡಬೇಕು ಅಂದರೆ ಬಹಳ ತಾಳ್ಮೆ ಬೇಕು. ಅಂಥಾ ಸಹನೆ ತಾಳ್ಮೆ ರಕ್ಷಿತ್‌ ಶೆಟ್ಟಿಅವರಲ್ಲೂ ಕಂಡೆ. ಇಂಥಾ ಎನರ್ಜೆಟಿಕ್‌ ಟೀಮ್‌ನಿಂದ ಬರುವ ಸಿನಿಮಾ ಸಖತ್ತಾಗಿರುತ್ತೆ ಅನ್ನೋದರಲ್ಲಿ ಎರಡು ಮಾತಿಲ್ಲ. ನಮ್ಮ ತಂಡದ ಶ್ರಮಕ್ಕೆ ವೀಕ್ಷಕರಿಂದ ಉತ್ತಮ ಬೆಂಬಲ ಸಿಗುತ್ತೆ ಅನ್ನೋ ನಿರೀಕ್ಷೆ ನನ್ನದು.

ನೀವು ನಾಯಕಿಯಾಗಿರುವ 777 ಚಾರ್ಲಿ ಚಿತ್ರೀಕರಣ ಮುಗಿದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳೂ ಮುಗಿದು ಇನ್ನೇನು ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಬೇಕು ಅನ್ನುವಾಗ ಮತ್ತೆ ಕೋವಿಡ್‌, 50 ಆಕ್ಯುಪೆನ್ಸಿ. ಏನನಿಸುತ್ತೆ?

ಗ್ರೇಟ್‌ ಲಾಸ್‌. ಒಬ್ಬ ನಟಿಯಾಗಿ ಓಟಿಟಿ ಪ್ಲಾಟ್‌ಫಾಮ್‌ರ್‍ಗಿಂತಲೂ ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್‌ ಆದಾಗಲೇ ಹೆಚ್ಚು ಖುಷಿ ಆಗೋದು. ಈಗ ಶೇ.50 ಸೀಟು ಭರ್ತಿಗೆ ಅವಕಾಶ ಇದೆ. ಮುಂದೇನೋ ಗೊತ್ತಿಲ್ಲ. ನಮಗಿಂತಲೂ ಪ್ರೊಡ್ಯೂಸರ್‌ಗೆ ಬಹಳ ಹಾನಿಯಾಗುತ್ತೆ. ಜೊತೆಗೆ ಈ ಪರಿಸ್ಥಿತಿಯಲ್ಲಿ ನಾನು ಬೇರೆ ಸಿನಿಮಾ ಒಪ್ಪಿಕೊಳ್ಳುವಾಗಲೂ ನನ್ನ ಸಂಭಾವನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಅದು ಹೆಚ್ಚು ಕಡಿಮೆ ಅರ್ಧಕ್ಕಿಳಿದಿದೆ. ಮುಂದೇನಾಗುತ್ತೆ ಆಗುತ್ತೆ ಅಂತ ಹೇಳಕ್ಕಾಗಲ್ಲ. ಎಷ್ಟುಒಳ್ಳೆ ಸಿನಿಮಾ ಮಾಡಿದ್ರೂ, ಎಷ್ಟೊಳ್ಳೆ ಕಾಸ್ಟಿಂಗ್‌ ಇದ್ದರೂ ಇಂಥಾ ಪರಿಸ್ಥಿತಿಯಲ್ಲಿ ಎಲ್ಲರೂ ಅಸಹಾಯಕರೇ. ಇದು ಬಹಳ ಕಠಿಣ ಪರಿಸ್ಥಿತಿ.

ರಕ್ಷಿತ್‌ ಶೆಟ್ಟಿಪಾತ್ರಕ್ಕೆ ಸ್ಫೂರ್ತಿಯಾಗುವ ರಾಯಲ್‌ ಕ್ಯಾರೆಕ್ಟರ್‌ ವಂಶಿನಾದನ್‌! 

ಕಳೆದ ವರ್ಷ ಈ ಹೊತ್ತಿಗೆ ಇಂಥದ್ದೇ ಸ್ಥಿತಿ ಇತ್ತು, ಲಾಕ್‌ಡೌನ್‌ ಕೂಡ ಆಗಿತ್ತು. ಈಗ ಅದೇ ಸ್ಥಿತಿಯ ಮರುಕಳಿಕೆ ಆಗ್ತಿದೆ?

ಹೌದು, ಕಳೆದ ಸಲ ಲಾಕ್‌ಡೌನ್‌ ಘೋಷಣೆಯಾದಾಗ ನನಗೆ ಮಿನಿ ಹಾರ್ಟ್‌ ಅಟ್ಯಾಕ್‌ ಆದ ಫೀಲ್‌. ಎರಡು ವರ್ಷ ಮತ್ಯಾವ ಸಿನಿಮಾವನ್ನೂ ಒಪ್ಪಿಕೊಳ್ಳುವ ಹಾಗಿಲ್ಲ ಅಂತ ಚಾರ್ಲಿ ಟೀಮ್‌ ಜೊತೆಗೆ ಅಗ್ರಿಮೆಂಟ್‌ ಆಗಿತ್ತು. ಅದೊಂದು ದೊಡ್ಡ ಡಿಸಿಶನ್‌. ಆ ಎರಡು ವರ್ಷ ಕಳೆದ ಮೇಲೂ ಶೂಟಿಂಗ್‌ ಮುಗಿಸಲಾಗುತ್ತಿಲ್ಲ ಅಂದ್ರೆ ನಾಯಕಿಯಾಗಿ ನನಗೆ ನುಂಗಲಾರದ ತುತ್ತು. ನಾಯಕಿಗೆ ವಯಸ್ಸು ಅನ್ನೋದು ಬಹಳ ಮುಖ್ಯ. ಈಗ ಹೀರೋಯಿನ್‌ಗೆ ಕರೆಕ್ಟ್ ವಯಸ್ಸು ನನ್ನದು. ಆದರೂ ಮೂರು ವರ್ಷ ಆ ಸಿನಿಮಾಗೆ ಡೆಡಿಕೇಟ್‌ ಮಾಡಬೇಕಾಯ್ತು. 2021 ಆದ್ರೂ ನನ್ನ ಮೂರು ಸಿನಿಮಾ ರಿಲೀಸ್‌ ಆಗುತ್ತೆ ಅಂದ್ಕೊಂಡಿದ್ದೆ. ಹೊಸ ಸಿನಿಮಾ ಸೇರಿ ಒಟ್ಟು ನಾಲ್ಕು ಸಿನಿಮಾ ಕೈಯಲ್ಲಿದೆ. ಈಗ ಮತ್ತೆ ಇಂಥಾ ಸ್ಥಿತಿ ಬಂದು ಬೇಜಾರಾಗ್ತಿದೆ. ಆದ್ರೂ ಚಾರ್ಲಿ ಇಂಥಾ ಟೈಮ್‌ನಲ್ಲಿ ರಿಲೀಸ್‌ ಆಗಿಲ್ಲ ಅನ್ನೋದು ನಿರಾಳತೆ. ಈ ಟೈಮ್‌ಅನ್ನು ಬಳಸಿ ಚಾರ್ಲಿ ಇನ್ನಷ್ಟುಚಾಮ್‌ರ್‍ನಿಂದ ಥಿಯೇಟರ್‌ಗೆ ಬರುತ್ತೆ ಅನ್ನೋ ವಿಶ್ವಾಸ ಇದೆ.

click me!