ಪೆಪೆ ನಿಮ್ಮೊಳಗೊಂದು ಮೌನವನ್ನು ಉಳಿಸುತ್ತದೆ: ವಿನಯ್‌ ರಾಜ್‌ಕುಮಾರ್‌ ವಿಶೇಷ ಸಂದರ್ಶನ

By Kannadaprabha News  |  First Published Aug 30, 2024, 10:30 AM IST

ನಾಲ್ಕೈದು ಬಾರಿ ನಿರ್ದೇಶಕರಿಂದ ಕಥೆ ಕೇಳಿಸಿಕೊಂಡೆ. ಸ್ಕ್ರಿಪ್ಟ್‌ ಅನ್ನು ಒಂದಿಷ್ಟು ಸಲ ಓದಿದೆ. ನಂತರ ಆ ಪಾತ್ರದ ಆಳಕ್ಕಿಳಿಯುವ ಪ್ರಯತ್ನ ಮಾಡಿದೆ. ಪೆಪೆಯ ಯೋಚನೆಗಳು ಹೇಗಿರಬಹುದು, ಆತನ ಲೈಫ್‌ಸ್ಟೈಲ್‌ ಹೇಗೆ? 


ಪ್ರಿಯಾ ಕೆರ್ವಾಶೆ

* ಪೆಪೆ ಸಿನಿಮಾದ ಬ್ಲಡ್‌ ಶೇಡೆಡ್‌, ರಗಡ್‌ ಪಾತ್ರಕ್ಕೆ ಪಕ್ಕದ್ಮನೆ ಹುಡುಗನಂಥಾ ನಟ ಯಾಕೆ ಬೇಕಿತ್ತು?
ಏಕೆಂದರೆ ಪಕ್ಕದ್ಮನೆ ಹುಡುಗನಂಥ ವ್ಯಕ್ತಿತ್ವವೇ ಪೆಪೆ ಆಗಿರುವುದಕ್ಕೆ. ಈ ಹುಡುಗ ಮೌನಿ, ಸರಳ ವ್ಯಕ್ತಿತ್ವದವನು. ಅಂಥವನು ಟ್ರಿಗರ್‌ ಆಗುವ ಪಾಯಿಂಟ್‌ ಏನು ಅನ್ನುವುದು ಮುಖ್ಯ. ಕಥೆಯ ಕಾರಣಕ್ಕೇ ನಿರ್ದೇಶಕರು ನನ್ನನ್ನು ಆರಿಸಿದ್ದು.

Tap to resize

Latest Videos

undefined

* ವಿನಯ್‌ ಪೆಪೆಯಾಗಿ ಬದಲಾಗಿದ್ದು ಹೇಗಿತ್ತು?
ನಾಲ್ಕೈದು ಬಾರಿ ನಿರ್ದೇಶಕರಿಂದ ಕಥೆ ಕೇಳಿಸಿಕೊಂಡೆ. ಸ್ಕ್ರಿಪ್ಟ್‌ ಅನ್ನು ಒಂದಿಷ್ಟು ಸಲ ಓದಿದೆ. ನಂತರ ಆ ಪಾತ್ರದ ಆಳಕ್ಕಿಳಿಯುವ ಪ್ರಯತ್ನ ಮಾಡಿದೆ. ಪೆಪೆಯ ಯೋಚನೆಗಳು ಹೇಗಿರಬಹುದು, ಆತನ ಲೈಫ್‌ಸ್ಟೈಲ್‌ ಹೇಗೆ? ಸಂಬಂಧಗಳಿಗೆ ಈತನ ಸ್ಪಂದನೆ ಹೇಗಿರುತ್ತದೆ? ಪೆಪೆ ಈ ರೀತಿ ರೂಪುಗೊಳ್ಳಲು ಹಿನ್ನೆಲೆ ಏನು? ಅವನ ಬಾಲ್ಯ ಹೇಗಿತ್ತು? ಅವನ ಟ್ರಿಗರ್‌ ಪಾಯಿಂಟ್ ಏನು? ಅವನಿಗೆ ಯಾಕೆ ಸಡನ್ನಾಗಿ ಕೋಪ ಬರುತ್ತೆ? ಅವನ ಮೌನಕ್ಕೆ ಕಾರಣಗಳೇನು ಇವನ್ನೆಲ್ಲ ಗ್ರಹಿಸುತ್ತಾ ಹೋದೆ. ಈ ಪ್ರೊಸೆಸ್‌ನ ಒಂದು ಹಂತದಲ್ಲಿ ಪೆಪೆ ಈ ಸನ್ನಿವೇಶದಲ್ಲಿ ಹೀಗೇ ಆಡ್ತಾನೆ, ಅವನ ರಿಯಾಕ್ಷನ್‌ ಹೀಗೇ ಇರುತ್ತೆ ಎಂಬುದೆಲ್ಲ ಹೊಳೆಯಿತು. ಸಹಜವಾಗಿಯೇ ಆ ರೂಪಾಂತರ ಸಾಧ್ಯವಾಯಿತು.

Vinay Rajkumars Pepe: ಹೆಣ್ಮಕ್ಕಳು ನೋಡಬೇಕಾದ ಸಿನಿಮಾ ಪೆಪೆ: ನಿರ್ದೇಶಕ ಶ್ರೀಲೇಶ್ ನಾಯರ್

* ಪ್ರದೀಪ್‌ ಆಲಿಯಾಸ್‌ ಪೆಪೆಗೂ ವಿನಯ್‌ ವ್ಯಕ್ತಿತ್ವಕ್ಕೂ ಸಾಮ್ಯತೆ ಇದೆಯಾ?
ಇಬ್ಬರಲ್ಲೂ ಮುಗ್ಧತೆ ಇದೆ, ಶಾಂತ ವ್ಯಕ್ತಿತ್ವವಿದೆ, ನಾವಿಬ್ಬರೂ ಮೌನವನ್ನು ಇಷ್ಟ ಪಡುತ್ತೇವೆ. ಇದಲ್ಲದೇ ಕೆಲವು ಟ್ರಿಗರ್‌ ಪಾಯಿಂಟ್‌ಗಳಲ್ಲಿ ಸಾಮ್ಯತೆ ಇದೆ.

* ಪೆಪೆಯ ಹೈಲೈಟ್ಸ್‌?
ಬೇರೆಯದೇ ಅನುಭವ ಕಟ್ಟಿಕೊಡುವ ಸಿನಿಮಾ. ಸೌಂಡ್‌ ಡಿಸೈನ್‌, ಹಿನ್ನೆಲೆ ಸಂಗೀತ ಸೊಗಸಾಗಿದೆ. ಛಾಯಾಗ್ರಹಣದಲ್ಲಿ ಕೊಡಗಿನ ಪ್ರಕೃತಿ ಸೌಂದರ್ಯವನ್ನು ಆರ್ಟಿಸ್ಟಿಕ್‌ ಫ್ರೇಮ್‌ಗಳು ಸೆರೆಹಿಡಿದಿವೆ. ಇದೇ ಹಿನ್ನೆಲೆಯಲ್ಲಿ ಆ್ಯಕ್ಷನ್‌ ಸೀಕ್ವೆನ್ಸ್‌ಗಳೂ ಅದ್ಭುತವಾಗಿ ಬಂದಿವೆ. ಇದರಲ್ಲಿ ಹಲವಾರು ಪಾತ್ರಗಳು ಬರುತ್ತವೆ. ಪ್ರತೀ ಪಾತ್ರಕ್ಕೂ ಸ್ವತಂತ್ರ್ಯ ವ್ಯಕ್ತಿತ್ವ, ಕಥೆ, ಸಂಘರ್ಷ ಇದೆ. ಇದೊಂದು ಆ್ಯಕ್ಷನ್‌ ಸಿನಿಮಾವಾಗಿದ್ದರೂ ನಿಮ್ಮೊಳಗೆ ಮೌನವನ್ನು ಉಳಿಸುತ್ತದೆ. ಚಿಂತನೆಗೆ ಹಚ್ಚುತ್ತದೆ. ಈ ಸಿನಿಮಾ ಏನನ್ನೂ ಸ್ಪೂನ್‌ ಫೀಡ್‌ ಮಾಡಲ್ಲ. ಒಬ್ಬೊಬ್ಬರೊಳಗೆ ಒಂದೊಂದು ರೀತಿ ಕತೆ ಬೆಳೆಯುತ್ತದೆ. ಸಾಮಾಜಿಕ ಹೋರಾಟಗಳನ್ನು ನೈಜವಾಗಿ ಕಟ್ಟಿಕೊಟ್ಟಿದ್ದು. ಜಡ್ಜ್‌ಮೆಂಟಲ್‌ ಆಗಿಲ್ಲದೇ ಕಥೆ ಕಟ್ಟಿದ ಬಗೆಯೂ ವಿಶೇಷವೇ.

* ಅಣ್ಣಾವ್ರ ಫ್ಯಾಮಿಲಿಯಿಂದ ಬಂದಿದ್ದರೂ ಸಾಮಾನ್ಯ ಹುಡುಗನ ರೀತಿ ಇರುತ್ತೀರಲ್ಲಾ..
ಚಿಕ್ಕ ವಯಸ್ಸಿಂದ ಹಾಗೇ ಸಹಜವಾಗಿ ಬಂದಿದೆ ಅನಿಸುತ್ತೆ. ಎಲ್ಲರಲ್ಲೂ ಒಂದಾದಾಗ ಎಲ್ಲ ದೃಷ್ಟಿಕೋನಗಳಿಂದ ಎಲ್ಲರಿಗೂ ಹತ್ತಿರವಾಗಬಹುದು. ಚಿಕ್ಕ ವಯಸ್ಸಲ್ಲಿ ಹೆಸರು, ಮಾನ್ಯತೆಯ ಆಕರ್ಷಣೆಗೆ ಬಿದ್ದಿರಬಹುದು. ಆದರೆ ಅದಕ್ಕಿಂತ ಉನ್ನತವಾದದ್ದು ಸರಳತೆ ಎಂಬುದನ್ನು ತೋರಿಸಿಕೊಟ್ಟ ತಾತ ಡಾ ರಾಜ್‌ ಅಂಥವರು ಜೊತೆಗೇ ಇರುವಾಗ ಮನಸ್ಸು ಬದಲಾಗಲೇ ಬೇಕಲ್ಲಾ.

* ನಾಟಕ ನೋಡ್ತೀರಂತೆ? ಮಾಡಲ್ವಾ?
ನಂಗೆ ನಾಟಕದಲ್ಲಿ ನಟನ ಆವೇಶವನ್ನು ಎದುರಾ ಎದುರು ಕೂತು ನೋಡೋದು ಅನುಭವಿಸೋದು ಬಹಳ ಥ್ರಿಲ್ಲಿಂಗ್‌. ಆತನ ಎನರ್ಜಿ ನಮಗೆ ಡೈರೆಕ್ಟ್‌ ಪಾಸ್‌ ಆಗುವ ಅನುಭೂತಿಯದು. ಸಿನಿಮಾಗೆ ಬರೋ ಮೊದಲು ಒಂದೇ ಒಂದು ನಾಟಕದಲ್ಲಿ ನಟಿಸಿದ್ದೇನೆ. ಉಳಿದಂತೆ ಮ್ಯೂಸಿಕಲ್‌ ಕಾನ್ಸರ್ಟ್‌ಗಳಿಗೆ ಹೋಗಿ ಸಂಗೀತ ಕೇಳೋದು ಇಷ್ಟ. ಸಿಟಿಗಿಂತ ಪ್ರಕೃತಿ ಇಷ್ಟ.

* ನಟನೆಗೆ ಸ್ಫೂರ್ತಿ?
ಕಲಾವಿದರ ಮನೆಯಲ್ಲಿ ಹುಟ್ಟಿದವರಿಗೆ ಎರಡು ಸನ್ನಿವೇಶ ಎದುರಾಗುತ್ತದೆ. ಬಾಲ್ಯದಿಂದಲೇ ಸಿನಿಮಾ ಪ್ರೊಸೆಸ್‌ ನೋಡಿ ನೋಡಿ ಸಾಕಾಗಿ ನಾನಿದನ್ನು ಮಾಡಬಾರದಪ್ಪಾ ಅಂತನಿಸೋದು ಒಂದು. ಚಿಕ್ಕ ಸ್ಟೋರಿ ಲೈನ್‌ನಿಂದ ದೊಡ್ಡ ಸಿನಿಮಾವಾಗುವವರೆಗಿನ ಹಂತವನ್ನು ನೋಡಿ ಅನುಭವಿಸಿ ಮೈಮರೆತು ತನ್ನ ಕನಸಾಗಿಸಿಕೊಳ್ಳುವುದು ಇನ್ನೊಂದು. ನನ್ನದು ಎರಡನೇ ವರ್ಗ. ಸಿನಿಮಾ ಕೊಟ್ಟ ಖುಷಿ ಬೇರೆಲ್ಲೂ ಸಿಕ್ಕಿಲ್ಲ.

ವಿನಯ್‌ ರಾಜ್‌ಕುಮಾರ್‌ನ ಪವರ್‌ಫುಲ್‌ ಗಂಡಸಾಗಿ ತೋರಿಸಿದ ಸಿನಿಮಾ ಪೆಪೆ: ಕಿಚ್ಚ ಸುದೀಪ್

* ವಿನಯ್‌ ಮದುವೆ ಬಗ್ಗೆ?
ಜೀವನವನ್ನು ನಾನು ಸಾಮಾಜಿಕ ಟೆಂಪ್ಲೇಟ್‌ನಲ್ಲಿಟ್ಟು ನೋಡಲ್ಲ. ವರ್ತಮಾನದಲ್ಲಿ ಬದುಕ್ತೀನಿ. ಸದ್ಯಕ್ಕಂತೂ ಮದುವೆ ಯೋಚನೆ ಇಲ್ಲ.

click me!