
ಪ್ರಿಯಾ ಕೆರ್ವಾಶೆ
- ಮೊದಲ ಸಲ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದೀರಿ, ಹೇಗಿತ್ತು ಅನುಭವ?
ತುಂಬ ಚೆನ್ನಾಗಿತ್ತು. ಆದರೆ ಫಾಸ್ಟ್ ಬೀಟ್ಸ್‌ಗೆ ಸ್ಪೆಪ್ಸ್ ಹಾಕೋದು ಅಂದುಕೊಂಡಷ್ಟು ಸುಲಭ ಅಲ್ಲ. ಡ್ಯಾನ್ಸ್ ಬಹಳ ಎನರ್ಜಿ ಬೇಡ್ತಿತ್ತು. ಡ್ಯಾನ್ಸ್ ಅನ್ನು ತುಂಬ ಪ್ರೀತಿಸ್ತೀನಿ. ನನಗಿರುವ ಡ್ಯಾನ್ಸ್ ವ್ಯಾಮೋಹಕ್ಕೆ ಇಂಥದ್ದೊಂದು ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿ ಇದೆ. ಅದರಲ್ಲೂ ಭಟ್ಟರ ಹಾಡಿಗೆ ಸ್ಟೆಪ್ಸ್ ಹಾಕಿದ್ದು ಥ್ರಿಲ್ಲಿಂಗ್ ಅನುಭವ.
- ಈ ಡ್ಯಾನ್ಸ್‌ಗೆ ಸಿದ್ಧತೆ?
ಹರ್ಷ ಸರ್ ಮೊದಲೇ ರಿಹರ್ಸಲ್ ಮಾಡಿಸಿದ್ರು. ಎರಡು ದಿನ ಡ್ಯಾನ್ಸ್ ಶೂಟ್ ನಡೀತು. ಖಾಲಿ ಹೊಟ್ಟೆಯಲ್ಲಿ ಕುಣೀಬೇಕಿತ್ತು. ಆದ್ರೆ ಸಖತ್ ಎನರ್ಜಿ ಬೇಕಿತ್ತು. ಬರೀ ಲಿಕ್ವಿಡ್ ಅಷ್ಟೇ ತಗೊಳ್ತಿದ್ದದ್ದು. ಹುಮ್ಮಸ್ಸು, ಆಸಕ್ತಿ ಇತ್ತಲ್ಲಾ, ಹೀಗಾಗಿ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಅಷ್ಟು ಪ್ರೀತಿಯಿಂದ ಕಷ್ಟಪಟ್ಟು ಮಾಡಿದ್ದಲ್ವಾ, ಯಾವಾಗ ಈ ಹಾಡು ರಿಲೀಸ್ ಆಗುತ್ತೋ ಅಂತ ಎದುರು ನೋಡ್ತಿದ್ದೆ.
ನಟಿ ನಿಶ್ವಿಕಾ ನಾಯ್ಡು ದೊಡ್ಡ ಬ್ಯಾಗ್‌ನಲ್ಲಿ ಏನೆಲ್ಲಾ ಇದೆ ನೋಡಿ!
- ನಿಮ್ಮ ಡ್ಯಾನ್ಸ್‌ನಲ್ಲಿ ಆ್ಯಬ್ಸ್ ಕೂಡ ಗಮನ ಸೆಳೀತಿತ್ತು.. ಜಿಮ್‌ನಲ್ಲಿ ಸಿಕ್ಕಾಪಟ್ಟೆ ಬೆವರಿಳಿಸ್ತೀರಾ?
ಆ್ಯಬ್ಸ್‌ಗಾಗಿ ನಾನು ವಿಶೇಷ ಪ್ರಯತ್ನನೇನೂ ಮಾಡಿಲ್ಲ. ದಿನಕ್ಕೆ ಒಂದು ಗಂಟೆ ಜಿಮ್‌ನಲ್ಲಿ ವರ್ಕೌಟ್ ಮಾಡ್ತೀನಷ್ಟೇ. ಆ್ಯಬ್ಸ್ ಬಂದಿದ್ದು ನನ್ನ ಅದೃಷ್ಟ ಅನಿಸುತ್ತೆ.
- ಒಮ್ಮೆ ಇಂಥಾ ಹಾಡಿನಲ್ಲಿ ಕಾಣಿಸಿಕೊಂಡ್ರೆ ಇದಕ್ಕೆ ಫಿಟ್ ಮಾಡ್ತಾರೆ ಅನಿಸಲ್ವಾ?
ನಟಿಯಾಗಿ ನಾನು ವೈವಿಧ್ಯತೆಯನ್ನು ಇಷ್ಟಪಡ್ತೀನಿ. ಚೆನ್ನಾಗಿದೆ ಅನಿಸಿದರೆ ಒಪ್ಕೊಳ್ತೀನಿ.
- ಹೊಸ ಸ್ಕ್ರಿಪ್ಟ್ ಓದಿದ್ದು, ಹೊಸ ಸಿನಿಮಾ ಒಪ್ಕೊಂಡಿದ್ದು?
ಯೋಗರಾಜ ಭಟ್ ಅವರ ನಿರ್ದೇಶನದಲ್ಲಿ ನನ್ನ ಮುಂದಿನ ಸಿನಿಮಾ. ಆ ಬಗೆಗಿನ ಮಾಹಿತಿಯನ್ನು ಮುಂದೆ ಭಟ್ಟರೇ ಘೋಷಿಸುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.