
ಪ್ರಿಯಾ ಕೆರ್ವಾಶೆ
777 ಚಾರ್ಲಿ ಹುಡುಗಿ ಸಂಗೀತಾ ಈಗೆಲ್ಲಿದ್ದೀರಿ?
ಕುಂದಾಪುರದ ಮಳೆಯಲ್ಲಿ! ಇಲ್ಲಿ ಡಾರ್ಲಿಂಗ್ ಕೃಷ್ಣ ಅವರ ಜೊತೆಗೆ ‘ಲಕ್ಕಿ ಮ್ಯಾನ್’ ಸಿನಿಮಾದ ಹಾಡಿನ ಶೂಟಿಂಗ್‌ನಲ್ಲಿ ಇದ್ದೀನಿ. ಉಳಿದೆಲ್ಲ ಚಿತ್ರೀಕರಣ ಮುಗಿದಿದೆ. ಇದೀಗ ಹಾಡಿನ ಚಿತ್ರೀಕರಣವೂ ಮುಗಿಯುವ ಹಂತದಲ್ಲಿದೆ. ಇಲ್ಲಿಂದ ಗೋಕರ್ಣಕ್ಕೆ ಶೂಟಿಂಗ್‌ಗೆ ಹೋಗ್ತೀವಿ.
ಯಾವ ಪಾತ್ರ ನಿಮ್ಮದು?
ಇದು ಫ್ರೆಂಡ್‌ಶಿಪ್, ಪ್ರೇಮ ಕಥಾ ಹಂದರದಲ್ಲಿ ಸಾಗುವ ಸಿನಿಮಾ. ನಾವು ಮೂರು ಜನ ಸ್ನೇಹಿತರು. ಅವರಲ್ಲಿ ಒಬ್ಬರ ಜೊತೆ ಲವ್ವಲ್ಲಿ ಬೀಳೋ ಥರ. ಸಖತ್ ಬೋಲ್‌ಡ್ ಆಗಿರುವ ಪಾತ್ರ ನನ್ನದು.
ಆ ಬೋಲ್‌ಡ್ನೆಸ್ ಮಾತಿನಲ್ಲಿರುತ್ತಾ, ಕಾಸ್ಟೂ ್ಯಮ್‌ನಲ್ಲಾ?
ಕಾಸ್ಟೂ ್ಯಮ್ ಬಹಳ ಡೀಸೆಂಟ್ ಆಗಿದೆ. ವ್ಯಕ್ತಿತ್ವದಲ್ಲಿ ಬೋಲ್‌ಡ್ನೆಸ್ ಇದೆ. ಸಖತ್ ಜೋಶ್ ಇರುವ ಪಾತ್ರ. ಇದು ಪ್ರಭುದೇವ ಅವರ ತಮ್ಮ ನಾಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾ. ನಮ್ಮ ಟೀಮ್ ಬಹಳ ಕ್ರಿಯೇಟಿವ್ ಆಗಿದೆ.
ಬೇರೆ ಸಿನಿಮಾಗಳು?
ಇದೂ ಸೇರಿ ಒಟ್ಟು ನಾಲ್ಕು ಸಿನಿಮಾ ಇದೆ. 777 ಚಾರ್ಲಿ, ಎಸ್ ಮಹೇಂದರ್ ಅವರ ಸಂಪ, ಮಾರಿಗೋಲ್‌ಡ್ ಮತ್ತು ಲಕ್ಕಿಮ್ಯಾನ್.
ಚಿತ್ರರಂಗದ ಚಟುವಟಿಕೆ ಚಿಗುರುತ್ತಿರುವಾಗಲೇ ಮತ್ತೆ ಕೊರೋನಾ 3ನೇ ಅಲೆಯ ಸೂಚನೆ. ನಿಮ್ಮ ಆತಂಕಗಳು?
ಚಾರ್ಲಿಗೋಸ್ಕರವೇ 2 ವರ್ಷ ಕಾದಿದ್ದೆ. ಆಗ ಬೇರೆ ಪ್ರಾಜೆಕ್‌ಟ್ಗೆ ಸಹಿ ಮಾಡುವಂತಿರಲಿಲ್ಲ. ಆದರೂ ರಿಲೀಸ್ ಆಗುತ್ತಲ್ಲಾ ಅಂತ ಕಾದಿದ್ದೆ. ಅದಾಗಲಿಲ್ಲ. ಇಂಡಸ್ಟ್ರಿಯಲ್ಲಿ ಹೀರೋಯಿನ್ ವಯಸ್ಸೂ ಬಹಳ ಮುಖ್ಯ ಪಾತ್ರ ವಹಿಸುತ್ತಲ್ವಾ. ಆದರೆ ಗಡಿಬಿಡಿಯಲ್ಲಿ ಚಾರ್ಲಿ ಸಿನಿಮಾ ರಿಲೀಸ್ ಮಾಡದೇ ಇರೋದಕ್ಕೆ, ಇಂಪ್ರೂವೈಸ್‌ಗೆ ಅವಕಾಶ ಆಗಿದ್ದಕ್ಕೆ ಖುಷಿ ಇದೆ. ಎಲ್ಲರೂ ವ್ಯಾಕ್ಸಿನ್ ತಗೊಂಡರೆ ಪರಿಸ್ಥಿತಿ ಸುಧಾರಿಸಬಹುದು.
ಬೆಳಗ್ಗೆ ಮೂರಕ್ಕೆಲ್ಲ ಎದ್ದು ಯೋಗ ಮಾಡ್ತೀರಂತೆ?
ಹೌದು. ನಾನು ಹೆಚ್ಚಾಗಿ ಬೆಳಗ್ಗೆ ಮೂರು ಮೂರೂವರೆಗೆ ಎದ್ದು ಯೋಗ ಮಾಡ್ತೀನಿ. ತಿಂಡಿ ಅಥವಾ ಊಟಕ್ಕೂ ನಾಲ್ಕು ಗಂಟೆ ಮೊದಲು ಇದನ್ನು ಮಾಡ್ಬೇಕು. ಅದಕ್ಕೆ ಬೆಳಗ್ಗೆ ಮಾಡೋದು ಅನಿವಾರ್ಯ. ಅಂಗಮರ್ಧನ ಅನ್ನುವ ಒಂದು ಯೋಗ ಪ್ರಾಕ್ಟೀಸ್ ಇದೆ. ಅದರ ಜೊತೆಗೆ ಭೂತ ಶುದ್ಧಿ ಅಂತ ಪಂಚಭೂತಗಳನ್ನು ಶುದ್ಧಗೊಳಿಸುವ ಯೋಗ ವಿಧಾನ. ಕೊನೆಯಲ್ಲಿ ಶಾಂಭವಿ ಮಹಾಮುದ್ರ ಮಾಡ್ತೀನಿ. ಇದೊಂದು ಸಾಧನೆ. ಮಂಡಲ ಅಂತಿದೆ, ನಾನು ನಲವತ್ತು ದಿನಗಳ ಕಾಲ ಪ್ರತೀದಿನ ಇದನ್ನು ಮಾಡಲೇಬೇಕು. ನನಗೆ ಇತ್ತೀಚೆಗೆ ಅಧ್ಯಾತ್ಮಿಕ ಎಚ್ಚರದ ಸ್ಥಿತಿ ಉಂಟಾಗಿತ್ತು. ಅದೊಂದು ವಿಶಿಷ್ಟ ವೈಬ್ರೇಶನ್. ನನ್ನ ಯೋಗ ಸಾಧನೆಗೆ ರಕ್ಷಿತ್ ಶೆಟ್ಟಿ ಅವರ ಪ್ರೇರಣೆಯೂ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.