ಬೃಂದಾವನ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮಿಲನಾ ನಾಗರಾಜ್‌ಗೆ ಬ್ರೇಕ್ ಕೊಟ್ಟ ಸಿನಿಮಾ 'ಲವ್ ಮಾಕ್ಟೇಲ್' ಹಾಗೂ ಫೇಮ್ ಕೊಟ್ಟ ಪಾತ್ರ ನಿಧಿಮಾ. ಹೇಗಿದೆ ಮಿಲನಾ ಸಿನಿ ಜರ್ನಿ?
ಆರಂಭದ ದಿನಗಳನ್ನು ಈಗ ನೆನಪಿಸಿಕೊಂಡಾಗ?
ಪ್ರಾಮಾಣಿಕವಾಗಿ ಹಾರ್ಡ್‌ವರ್ಕ್ ಮಾಡಿದರೆ ನಮ್ಮನ್ನು ಪ್ರೇಕ್ಷಕರು ಗುರುತಿಸುತ್ತಾರೆ, ಚಿತ್ರರಂಗವೂ ಗೌರವಿಸುತ್ತದೆ ಎನ್ನುವುದು ಗೊತ್ತಾಗುತ್ತಿದೆ. ಎಲ್ಲರಿಗೂ ಆರಂಭದ ದಿನಗಳಲ್ಲಿ ಏನೆಲ್ಲ ಕಷ್ಟಗಳು, ಬೇಸರ, ಆತಂಕಗಳು ಇದ್ದವೋ ನನಗೂ ಅದೇ ಇತ್ತು. ಈಗ ನಮ್ಮನ್ನು ಗುರುತಿಸುವುದರಿಂದ ಜವಾಬ್ದಾರಿ ಹೆಚ್ಚಾಗಿದೆ. ಆರಂಭದ ದಿನಗಳಿಗೂ, ಈಗಿನ ದಿನಗಳಿಗೂ ಇಷ್ಟೇ ವ್ಯತ್ಯಾಸ.
undefined
ಖುಷಿ ಕೊಟ್ಟ ಆ ಕ್ಷಣಗಳು ಯಾವುವು?
ಅನುಮಾನವಿಲ್ಲದೆ ಹೇಳಬಹುದಾದ ಕ್ಷಣ ಎಂದರೆ ‘ಲವ್ ಮಾಕ್ಟೇಲ್’ ಚಿತ್ರದ ಯಶಸ್ಸು. ಈ ಸಿನಿಮಾ ಕೊಟ್ಟ ಖುಷಿ ಕ್ಷಣಗಳನ್ನು ನಾನು ಪದಗಳಲ್ಲಿ ಹೇಳಲಾರೆ. ಈ ಚಿತ್ರಕ್ಕೆ ನಾನು ಬರೀ ನಾಯಕಿ ಆಗಿರಲಿಲ್ಲ. ನಿರ್ಮಾಪಕಿ, ಕತೆ, ಸೆಟ್ ಕೆಲಸ ಹೀಗೆ ಎಲ್ಲದರಲ್ಲೂ ಇದ್ದೆ.
ತುಂಬಾ ಬೇಗ ಕೋಪ ಮಾಡಿಕೊಳ್ಳುವುದು ಯಾರು?; ಆದಿ-ನಿಧಿ ಲವ್ ಸ್ಟೋರಿ!
ನಿರೀಕ್ಷೆಯೇ ಇಲ್ಲದೆ ಬಂದ ಸಂಭ್ರಮ?
ನಟ ದರ್ಶನ್ ಅವರ ಜತೆ ‘ಬೃಂದಾವನ’ ಚಿತ್ರದಲ್ಲಿ ನಟಿಸುವ ಅವಕಾಶ ಬಂದಿದ್ದು. ಚಿತ್ರರಂಗಕ್ಕೆ ಬಂದ ಬಹುಬೇಗ ನನಗೆ ಅವರ ಚಿತ್ರದಲ್ಲಿ ನಾಯಕಿ ಆಗುವ ಅವಕಾಶ ಸಿಕ್ಕಿತು. ಇದನ್ನು ನಾನು ನಿರೀಕ್ಷೆಯೇ ಮಾಡಿರಲಿಲ್ಲ. ನಿಜವಾಗಲೂ ಇದು ನನಗೆ ಸರ್ಪ್ರೈಸ್ ಆಗಿತ್ತು.
ಯಶಸ್ಸಿನ ಸೂತ್ರಗಳೇನು?
ಯಾವುದೋ ಒಂದು ಸೂತ್ರ ಅಂತ ಇಲ್ಲಿ ವರ್ಕ್ ಆಗಲ್ಲ. ಅದೃಷ್ಟ, ಸಮಯ- ಸಂದರ್ಭ ಮತ್ತು ನಾವು ಒಪ್ಪಿಕೊಳ್ಳುವ ಸಿನಿಮಾ. ಈ ಎಲ್ಲವೂ ಚೆನ್ನಾಗಿದ್ದಾಗ ಜನ ಸಿನಿಮಾ ನೋಡುತ್ತಾರೋ ಇಲ್ಲವೋ ಎನ್ನುವ ಅನುಮಾನ. ಹೀಗಾಗಿ ಒಂದು ಸೂತ್ರದಲ್ಲಿ ಯಶಸ್ಸು ಅನ್ನೋದು ಚಿತ್ರರಂಗದಲ್ಲಿ ಇಲ್ಲ. ಗೆದ್ದ ಮೇಲೆಯೂ ಇಂಥ ಸೂತ್ರಗಳು ಕೆಲಸ ಮಾಡುತ್ತವೆ ಅಂತ ಆ ನಂತರ ಅಂದುಕೊಳ್ಳಬಹುದೇ ಹೊರತು, ಮೊದಲೇ ನಿರ್ಧರಿಸಲಾಗದು.
ನಿಮ್ಮ ಮುಂದಿರುವ ಕನಸುಗಳೇನು?
ಕನಸು ಮತ್ತು ಆಸೆಗಳಿಗೆ ಕೊನೆ ಇರಲ್ಲ. ಸಿನಿಮಾ ಗೆಲ್ಲಿಸಿ ಯಶಸ್ಸು ಕೊಟ್ಟರು, ಮುಂದೆ ಒಳ್ಳೆಯ ಸಿನಿಮಾ, ಒಳ್ಳೆಯ ಕತೆ, ಒಳ್ಳೆಯ ನಟನ ಜತೆ ಪಾತ್ರ ಮಾಡುವ ಅವಕಾಶ ಸಿಗಲಿ, ಆ ಚಿತ್ರ ನಮಗೆ ಹೆಸರು ತಂದುಕೊಡಲಿ... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಏನೇ ಪಟ್ಟಿ ಬೆಳೆದರೂ ಉತ್ತಮ ನಟಿ ಎನಿಸಿಕೊಳ್ಳಬೇಕು, ಒಳ್ಳೆಯ ಚಿತ್ರಗಳಲ್ಲಿ ಅದ್ಭುತವಾದ ಪಾತ್ರ ಮಾಡಿದ್ದಾರೆ ಎನ್ನುವ ಮೆಚ್ಚುಗೆ ಪಡೆಯಬೇಕು ಎಂಬುದೇ ಕನಸು.