ಜನಪ್ರಿಯ ಸೀರಿಯಲ್ ‘ಕನ್ನಡತಿ’ಯ ಹೀರೋ ಕಿರಣ್‌ರಾಜ್ ಇದೀಗ ಚಿಕನ್ ಪುಳಿಯೋಗರೆ ಸಿನಿಮಾದ ಮೂಲಕ ಹೊಸ ಪ್ರೇಮಕತೆ ಹೇಳಲು ಹೊರಟಿದ್ದಾರೆ. ಮೊದಲ ಸಿನಿಮಾ ರಿಲೀಸ್‌ಗೂ ಮೊದಲೇ ತೆಲುಗಿನ ಎರಡು ಚಿತ್ರಗಳೂ ಸೇರಿ ಆರೇಳು ಸಿನಿಮಾಗಳು ಇವರ ಕೈಯಲ್ಲಿವೆ.
ಪ್ರಿಯಾ ಕೆರ್ವಾಶೆ
ಚಿಕನ್ ಪುಳಿಯೋಗರೆ ಟೈಟಲ್ಲೇ ವಿಚಿತ್ರ. ಈ ಟೈಟಲ್ ಮೂಲಕ ಏನು ಹೇಳಲು ಹೊರಟಿದ್ದೀರಾ?
ನೀವೇ ಗೆಸ್ ಮಾಡಿ.
ಚಿಕನ್ ಅಂದ್ರೆ ಹುಡುಗ, ಪುಳಿಯೋಗರೆ ಅಂದ್ರೆ ಬ್ರಾಹ್ಮಣ ಹುಡುಗಿ, ಅವರ ಪ್ರೇಮ ಕಥೆ ಇರಬಹುದಾ?
ಎಕ್ಸಾಕ್ಟಿ$್ಲೕ. ಇದು ಭಿನ್ನ ಹಿನ್ನೆಲೆಯ ಹುಡುಗ- ಹುಡುಗಿ ಪ್ರೇಮ ಕತೆ. ಜೊತೆಗೆ ಆ್ಯಕ್ಷನ್ನೂ ಇದೆ. ಪ್ರೀತಿ ಇರಬಹುದು, ಇನ್ಯಾವುದೇ ವಿಷಯ ಇರಬಹುದು, ಒಂದು ಹಂತದಲ್ಲಿ ನಾವು ಯಾವ ಲೆವೆಲ್‌ಗೆ ಇಳಿಯೋದಕ್ಕೂ ಸಿದ್ಧ ಇರ್ತೀವಿ. ಆದರೆ ಅದು ಕ್ಷಣಿಕ, ಕೊನೆಗೆ ಗೆಲ್ಲೋದು ನಮ್ಮ ಸ್ವಾಭಿಮಾನವೇ. ಈ ಸಂಗತಿಯೂ ಚಿತ್ರದಲ್ಲಿ ಬರುತ್ತೆ. ಇದನ್ನು ಕಾಲೇಜ್ ಹುಡುಗ್ರು ಸಖತ್ತಾಗಿ ಎನ್‌ಜಾಯ್ ಮಾಡ್ತಾರೆ. ಹಾಗಂತ ಹುಡುಗೀರಿಗೂ ಇಷ್ಟಆಗಲ್ಲ ಅಂತಿಲ್ಲ.
ನಿಮ್ಮ ಪಾತ್ರ ಹೇಗಿರುತ್ತೆ? ಹಿಂದೆ ಬಹದ್ದೂರ್ ಗಂಡು ಸಿನಿಮಾಕ್ಕೆ ರಾತ್ರಿ ಹಗಲು ದೇಹ ದಂಡಿಸಿದ್ರಿ. ಇದಕ್ಕೂ ಆ ಥರದ ಸಿದ್ಧತೆ ಮಾಡಿದ್ರಾ?
ಇದ್ರಲ್ಲಿ ನನ್ನದು ಸಿವಿಲ್ ಇಂಜಿನಿಯರ್ ಪಾತ್ರ. ನಾನು ಒಂದು ಪಾತ್ರವನ್ನು ಒಪ್ಪಿಕೊಂಡ ಮೇಲೆ ಅದರ ಬಗ್ಗೆ ಸಾಕಷ್ಟುಸ್ಟಡಿ ಮಾಡ್ತೀನಿ. ಸೂಕ್ಷ್ಮಗಳನ್ನು ತಿಳ್ಕೊಳ್ತೀನಿ. ಈ ಸಿನಿಮಾದ ನಿರ್ದೇಶಕ ಶರತ್ ಅವರೂ ಒಂದು ಕಾಲದಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದವರು. ಆಗ ಅವರಿದ್ದ ಲೊಕೇಶನ್‌ಗೆಲ್ಲ ಹೋಗಿ ಆ ಪರಿಸರ ಗಮನಿಸುತ್ತಿದ್ದೆ.
ದುಡಿಮೆಯ ಶೇ.40ರಷ್ಟನ್ನು ದಾನ ಮಾಡುವ ನಟ ಕಿರಣ್‌ರಾಜ್!ನಿಮ್ ಟೀಮ್ ಬಗ್ಗೆ ಹೇಳೋದಾದ್ರೆ?
ರಚನಾ ರೈ ಅಂತ ಹೊಸ ಹುಡುಗಿ ಹೀರೋಯಿನ್. ಅವರನ್ನು ಪರಿಚಯಿಸೋದೂ ಈಗ ಹೊರಬಿಟ್ಟಿರುವ ಟೀಸರ್‌ನ ಉದ್ದೇಶ ಆಗಿತ್ತು. ಶರತ್ ಹೆಚ್ ಎಸ್ ನಿರ್ದೇಶಕರು. ಅಜಯ್ ಕುಮಾರ್ ನಿರ್ಮಾಪಕರು. ಈ ಸಿನಿಮಾದಲ್ಲಿ ಒಂದು ಹಾಡು ನಾನು ಹಾಡಿದ್ದೀನಿ. ಅದು ಆಗಸ್ಟ್ 5ಕ್ಕೆ ಬಿಡುಗಡೆಯಾಗಲಿದೆ. ಜಯಂತ ಕಾಯ್ಕಿಣಿ, ಕವಿರಾಜ್ ಬರೆದ ಸೊಗಸಾದ ಗೀತೆಗಳಿವೆ.
ಈಗ ಸಿನಿಮಾದಲ್ಲೇ ಫುಲ್ ಬ್ಯುಸಿ ಅನಿಸುತ್ತೆ?
ಸದ್ಯಕ್ಕೆ ಕನ್ನಡದಲ್ಲಿ ಬಹದ್ದೂರು ಗಂಡು, ಬಡ್ಡೀಸ್ ಮತ್ತು ಚಿಕನ್ ಪುಳಿಯೋಗರೆ, ತೆಲುಗಿನಲ್ಲಿ ನುವ್ವೆ ನಾ ಪ್ರಾಣಂ ಇದೆ. ಅದು ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುತ್ತೆ. ವಿಕ್ರಮ್ ಗೌಡ ಮತ್ತೊಂದು ಸಿನಿಮಾ. ಕನ್ನಡದಲ್ಲಿ ಬಹುಶಃ ಬಹದ್ದೂರು ಗಂಡು ಮೊದಲು ರಿಲೀಸ್ ಆಗಬಹುದು. ಈ ಎಲ್ಲಾ ಸಿನಿಮಾಗಳ ಚಿತ್ರೀಕರಣ ಆಲ್ ಮೋಸ್ಟ್ ಮುಗಿದಿದೆ.