ಉದ್ದ ಕೂದಲು ಹಾಗೂ ವಸ್ತ್ರ ವಿನ್ಯಾಸದ ರಹಸ್ಯ ಬಿಚ್ಚಿಟ್ಟ ನಾಗಿಣಿ ನಟಿ ನಮ್ರತಾ!

By Suvarna NewsFirst Published Sep 9, 2020, 1:10 PM IST
Highlights

ನಾಗಿಣಿ ಧಾರಾವಾಹಿ ಮಾಡಿದ ಹೆಸರಿಗಿಂತ ದೊಡ್ಡ ಮಟ್ಟದ ಹೆಸರನ್ನೇ ಮಾಡುತ್ತಿದೆ `ನಾಗಿಣಿ 2'. ಅದರಲ್ಲಿ ಬಹಳಷ್ಟು ಕ್ರೆಡಿಟ್ ನಾಯಕಿಯ ಪಾತ್ರದಲ್ಲಿರುವ ನಮ್ರತಾ ಗೌಡ ಅವರಿಗೆ ಸಲ್ಲಬೇಕು. ಪಾತ್ರಕ್ಕಾಗಿ ತೆರೆಯ ಹಿಂದಿನ ಡೆಡಿಕೇಶನ್ಸ್ ಬಗ್ಗೆ ನಮ್ರತಾ ಇಲ್ಲಿ ಮಾತನಾಡಿದ್ದಾರೆ.
 

ನಮ್ರತಾ ಗೌಡ ತಮ್ಮ ಹೆಸರಿಗಿಂತ ಈಗ ನಾಗಿಣಿಯೆಂದೇ ಹೆಚ್ಚು ಜನಪ್ರಿಯೆ. ಅದಕ್ಕೆ ಕಾರಣ ಕಿರುತೆರೆಯ ಜನಪ್ರಿಯ ಧಾರಾವಾಹಿ ನಾಗಿಣಿ 2.  ಅದರಲ್ಲಿ ನಮೃತಾ ನಿರ್ವಹಿಸುವ ಶಿವಾನಿಯ ಪಾತ್ರ, ನಾಗಿಣಿಯ ಶೇಡ್ ಎಲ್ಲದಕ್ಕೂ ಅಪಾರ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಈ ಹಿಂದೆ ನಾಗಿಣಿ ಮಾಡಿದವರಿಗಿಂತ ವಿಭಿನ್ನವಾದ ಛಾಯೆ ಮೂಡಿಸಿ ತಮ್ಮ ಸ್ಥಾನ ಭದ್ರಗೊಳಿಸುವಲ್ಲಿ ಯಶಸ್ವಿಯಾಗಿರುವುದು ನಮ್ರತಾ ವಿಶೇಷ. ನಾಗಿಣಿ ಪಾತ್ರ ಎಷ್ಟು ಚಾಲೆಂಜಾಗಿದೆ ಎನ್ನುವ ಬಗ್ಗೆ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಿದ ವಿಶೇಷ ಮಾತುಕತೆ ಇಲ್ಲಿವೆ.

- ಶಶಿಕರ ಪಾತೂರು

ದೀಪಿಕಾ ದಾಸ್ ನಟಿಸಿದ ಪಾತ್ರ ಎನ್ನುವ ಕಾರಣದಿಂದ ನಾಗಿಣಿ ನಿಮಗೆಷ್ಟು ಚಾಲೆಂಜ್ ಆಗಿತ್ತು?
ಹಾಗೆ ಕೇಳಿದ್ರೆ ಪರ್ಟಿಕ್ಯುಲರ್ ಆಗಿ ದೀಪಿಕಾ ಮಾಡಿದ್ದಾರೆ ಅಂತಾನೇ ಅಲ್ಲ; ನಾಲ್ಕೈದು ವರ್ಷಗಳ ಕಾಲ ನಿರಂತರವಾಗಿ ಒಂದು ಪಾತ್ರವನ್ನು ಯಾರೇ ಮಾಡಿದರೂ ಜನ ಅವರನ್ನು ಬಿಟ್ಟು ಬೇರೆಯವರನ್ನು ನಾಗಿಣಿ ಎಂದು ಕಲ್ಪನೆ ಕೂಡ ಮಾಡಲು ಇಷ್ಟಪಡುವುದಿಲ್ಲ. ಅಂಥದ್ದರಲ್ಲಿ ಎರಡನೇ ಭಾಗದಲ್ಲಿ ನಾನು ಮಾಡುತ್ತೇನೆ ಎಂದಾಗ ನನಗೆ ಒಂದು ರೀತಿಯ ಆತಂಕ ಇತ್ತು. ಜನ ಎಷ್ಟರ ಮಟ್ಟಿಗೆ ಒಪ್ಪುತ್ತಾರೆ ಎನ್ನುವ ಭಯ ಇತ್ತು. ಆದರೆ ನನಗೆ ಆರಂಭದಿಂದಲೂ ಹೆಚ್ಚು ಪಾಸಿಟಿವ್ ರಿವ್ಯೂಗಳೇ ಬಂದವು. ಜನ ಚೆನ್ನಾಗಿ ಸ್ವಾಗತ ನೀಡಿದರು. ಮುಖ್ಯವಾಗಿ ನಿರ್ದೇಶಕ ರಾಮ್‌ಜಿ ಸರ್ ಪ್ರೊಡಕ್ಷನ್ ಆಗಿರುವುದರಿಂದ ವಿಶೇಷ ಕಂಫರ್ಟ್ ಇತ್ತು. ಯಾಕೆಂದರೆ ನನ್ನ ಈ ಹಿಂದಿನ `ಪುಟ್ಟಗೌರಿ ಮದುವೆ' ಕೂಡ ಅವರದೇ ಪ್ರೊಡಕ್ಷನ್. ಒಂದು ರೀತಿ ಹೋಮ್ ಪ್ರೊಡಕ್ಷನ್ ರೀತಿ ಆಗಿರುವುದರಿಂದ ಮನೆಯಂತೆ ಆರಾಮವಾಗಿದ್ದೀನಿ ಎಂದೇ ಹೇಳಬಹುದು. ವಾತಾವರಣ ಚೆನ್ನಾಗಿದೆ.

ಮತ್ತೊಮ್ಮೆ ಸ್ಟೇಷನ್ ಮೆಟ್ಟಿಲೇರುವೆ ಎಂದ ರಾಧಿಕಾ ಕುಮಾರ ಸ್ವಾಮಿ

ನಮೃತಾ ನಾಗಿಣಿಯ ಪಾತ್ರವಾಗಲು ಏನೆಲ್ಲ ತಯಾರಿ ಮಾಡಬೇಕಾಗುತ್ತದೆ?
ನಾಗಿಣಿ ಗೆಟಪ್‌ಗಾಗಿ ಏನಿಲ್ಲವೆಂದರೂ ಒಂದು ಗಂಟೆಯಷ್ಟು ಕಾಲಾವಕಾಶ ಬೇಕಾಗುತ್ತದೆ. ಉದ್ದ ಇರುವ ಕೂದಲನ್ನು ಕರ್ಲಿ ಮಾಡಬೇಕು, ಲೆನ್ಸ್ ಹಾಕಿಕೊಳ್ಳಬೇಕು, ಒಟ್ಟಿನಲ್ಲಿ ನಾಗಿಣಿಯಂತೆ ಕಾಣಿಸಲಿಕ್ಕಾಗಿಯೇ ನಲವತ್ತೈದು ನಿಮಿಷಗಳಷ್ಟು ಸಮಯ ಬೇಕಾಗುತ್ತದೆ. ತುಂಬ ಕಷ್ಟ. ಆದರೆ ನಾಗಿಣಿ ನನಗೆ ತುಂಬ ಖುಷಿ ನೀಡಿರುವ ಧಾರಾವಾಹಿ. ಪಾತ್ರದೊಳಗೆ ಒಂದಕ್ಕಿಂತ ಒಂದು ವಿಭಿನ್ನ ಎನ್ನುವಂತೆ ತೀರ ಬೇರೆ ಬೇರೆ ಶೇಡ್ಸ್‌ ಇರುತ್ತವೆ. ವಿಭಿನ್ನವಾದ ಗೆಟಪ್‌ಗಳಿಗೆ ತಯಾರಾಗುವುದೇ ಚಾಲೆಂಜ್ ಆಗಿದೆ. ಹಾಡು, ಸ್ಟಂಟ್ಸ್ ಎಲ್ಲವೂ ಇರುವುದರಿಂದ ಸಿನಿಮಾಗಳಲ್ಲಿ ಸಿಗಬಹುದಾದಂಥ ಅನುಭವ ಸಿಗುತ್ತಿದೆ. ಒಂದು ರೀತಿ ನಿತ್ಯವೂ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುವುದು ಎಂದರೆ ಸುಸ್ತಾಗುತ್ತದೆ. ಯಾಕೆಂದರೆ ಬೀಳೋದು, ಏಳೋದು, ಫೈಟ್ ಮಾಡುವುದು, ಕಾಡಲ್ಲಿ ಓಡಾಡುವುದು.. ಇವನ್ನೆಲ್ಲ ನಾನು ರಿಯಲ್ ಲೈಫಲ್ಲಿ ಮಾಡಿಯೇ ಇಲ್ಲ. ಮನೆಯಲ್ಲಿ ಮುದ್ದಾಗಿ ಬೆಳೆಸಿದ್ದಾರೆ. ಆದರೆ ಈಗ ಬಿಸಿಲಲ್ಲಿ ನಿಂತುಕೊಂಡು ಔಟ್‌ಡೋರಲ್ಲಿ ಶೂಟಿಂಗ್ ಮಾಡುವುದು ತುಂಬ ಕಷ್ಟಾನೇ. ಆದರೆ ಅದು ಟೆಲಿಕಾಸ್ಟ್ ಆದಾಗ ಜನ ಗುರುತಿಸುತ್ತಾರಲ್ಲ? ಆ ಖುಷಿಯಲ್ಲಿ ಎಲ್ಲವನ್ನು ಮರೆಯುತ್ತೇನೆ.


ನಾಗಿಣಿಯಲ್ಲಿ ಸ್ಟೈಲಿಶ್ ಆಗಿ ಕಾಣುವ ನಮ್ರತಾ ಯಾರು?

ನಿಮ್ಮ ಹೇರ್ ಸ್ಟೈಲ್ ಮತ್ತು ವಸ್ತ್ರ ವಿನ್ಯಾಸದ ಬಗ್ಗೆ ಹೇಳಿ?
ನನ್ನ ಹೇರ್‌ಸ್ಟೈಲ್ ಮತ್ತು ವಸ್ತ್ರ ವಿನ್ಯಾಸದ ವಿಶೇಷತೆಗೆ ಪ್ರಧಾನ ಕಾರಣವೇ ನಮ್ಮಮ್ಮ. ಯಾಕೆಂದರೆ ಧಾರಾವಾಹಿಯಲ್ಲಿ ನಾಗಿಣಿಯ ಉದ್ದ ಕೂದಲು ಏನು ನೋಡುತ್ತೀರೋ ಅವೆಲ್ಲವೂ ನನ್ನ ನಿಜವಾದ ಕೂದಲು. ಬಹಳ ಮಂದಿ ಪ್ರೇಕ್ಷಕರು ಈಗಲೂ ಅದನ್ನು ವಿಗ್ ಅಥವಾ ಎಕ್ಸ್ಟೆನ್ಷನ್ ಎಂದೇ ಅಂದುಕೊಂಡಿದ್ದಾರೆ. ಆದರೆ ಅದು ನಿಜವಾದ ಕೂದಲು ಎನ್ನುವ ಕಾರಣದಿಂದಲೇ ನನಗೆ ಇನ್ನೊಂದಷ್ಟು ಜನಪ್ರಿಯತೆ ಸಿಕ್ಕಿದೆ ಎಂದರೆ ತಪ್ಪಲ್ಲ. ನಮ್ಮಮ್ಮನಿಗೆ ಉದ್ದ ಕೂದಲು ಅಂದರೆ ತುಂಬ ಇಷ್ಟ. ಮೊದಲಿನಿಂದಲೂ ಅವರೇ ನನ್ನ ತಲೆಗೂದಲನ್ನು ಮೇನ್ಟೇನ್ ಮಾಡಿದ್ದರು. ಆದರೆ ಈಗ ಶೂಟಿಂಗಲ್ಲಿ ಕಲರಿಂಗ್, ಇಸ್ತ್ರಿ ಹಾಕೋದು ಎಲ್ಲ ಮಾಡುವುದರಿಂದ ಸ್ವಲ್ಪ ಕಡಿಮೆಯಾಗಿದೆ ಎಂದೇ ಹೇಳಬಹುದು. ಆದರೆ ಹೇಗೆ ಮೇನ್ಟೇನ್ ಮಾಡುತ್ತೀರಿ ಎನ್ನುವುದು ಎಲ್ಲರೂ ಕೇಳುವ ಪ್ರಶ್ನೆ. ಕಷ್ಟವಾದರೂ ಇಷ್ಟವಾದ ಕಾರಣ ನಾನು ಅದನ್ನು ಎಂಜಾಯ್ ಮಾಡುತ್ತೇನೆ. ಅದೇ ರೀತಿ ಬಟ್ಟೆಗಳ ಮೇಲಿನ ಕ್ರೇಜ್ ಕೂಡ ನನಗೆ ಅಮ್ಮನಿಂದಲೇ ಬಂತು. ಪ್ರೆಸೆನ್ಸ್ ಚೆನ್ನಾಗಿರಬೇಕು ಅಂದರೆ ನಾವು ಎಲ್ಲೇ ಹೋದರೂ ನಮ್ ಡ್ರೆಸ್ಸಿಂಗ್ ಸ್ಟಾಂಡೌಟ್‌ ಆಗಿ ಯುನಿಕ್ ಆಗಿರಬೇಕು ಎನ್ನುವುದು ನಮ್ಮಿಬ್ಬರ ಪಾಲಿಸಿ. ಆದರೆ ಇಂದಿಗೂ ನನ್ನ ಡ್ರೆಸಸ್‌ ಎಲ್ಲವನ್ನೂ ಅಮ್ಮನೇ ಸೆಲೆಕ್ಟ್ ಮಾಡುತ್ತಾರೆ. ಅವರೇ ಡಿಸೈನ್ ಮಾಡುತ್ತಾರೆ. ಈಗ ನಾಗಿಣಿಗೂ ಅಷ್ಟೇ. ತುಂಬ ಮಂದಿ ನನ್ನಲ್ಲಿ ನಿಮ್ಮ ಡ್ರೆಸ್ ಡಿಸೈನರ್ ಯಾರು ಎಂದು ಕೇಳುತ್ತಿರುತ್ತಾರೆ. ಆ ಕ್ರೆಡಿಟ್ ಸಂಪೂರ್ಣವಾಗಿ ನಮ್ಮಮ್ಮನಿಗೆ ಸಲ್ಲುತ್ತದೆ. ಈ ದೃಶ್ಯಕ್ಕೆ ಹೀಗೇ ಇರಬೇಕು ಎನ್ನುವ ಕಲ್ಪನೆಯೊಂದಿಗೆ ಅವರೇ ಹೊಲಿಸಿ ರೆಡಿ ಮಾಡುತ್ತಾರೆ. 

ಡ್ರಗ್ಸ್ ಬಗ್ಗೆ ಕೇಳಿದ್ದೆ ನಿಜ..! ಪೂಜಾ ಗಾಂಧಿ ಮಾತು

click me!