‘ವಿಂಡೋ ಸೀಟ್‌’ರೊಮ್ಯಾನ್ಸ್‌ Rapper‌ನಲ್ಲಿರುವ ಥ್ರಿಲ್ಲರ್‌,ನಿರ್ದೇಶನ ನನಗಿಷ್ಟ: ಶೀತಲ್‌ ಶೆಟ್ಟಿ

By Kannadaprabha News  |  First Published Sep 25, 2020, 9:46 AM IST

ನಟಿ, ನಿರೂಪಕಿಯಾಗಿ ಫೇಮಸ್‌ ಆಗಿದ್ದ ಶೀತಲ್‌ ಶೆಟ್ಟಿ‘ವಿಂಡೋ ಸೀಟ್‌’ ಸಿನಿಮಾದ ಮೂಲಕ ನಿರ್ದೇಶಕಿಯಾಗಿದ್ದಾರೆ. ಆ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಆ ಸಿನಿಮಾದ ಬಗ್ಗೆ, ನಿರ್ದೇಶಕಿಯಾಗಿ ಎದುರಿಸಿದ ಸವಾಲುಗಳ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.


ಪ್ರಿಯಾ ಕೆರ್ವಾಶೆ

ನಿರ್ದೇಶಕಿ ಹ್ಯಾಟ್‌ ಧರಿಸಿದ್ದೀರಿ. ಕಂಫರ್ಟ್‌ ಫೀಲ್‌ ಇದೆಯಾ?

Latest Videos

undefined

(ನಗು) ನಿರ್ದೇಶಕಿ ಸ್ಥಾನ ಯಾವತ್ತೂ ಅಂಥಾ ಕಂಫರ್ಟೆಬಲ್‌ ಅಲ್ಲ. ಆನ್‌ ದ ಎಡ್ಜ್‌ ಆಫ್‌ ವನ್ಸ್‌ ಸೀಟ್‌ ಅದು. ಆದ್ರೆ ತುಂಬ ಖುಷಿಯಾಗಿದ್ದೀನಿ. ಈ ಸ್ಥಾನ, ಈ ಕೆಲಸ ಎಲ್ಲವೂ ಬಹಳ ಇಷ್ಟವಾಗುತ್ತಿದೆ.

ನೀವೊಬ್ಬ ನಟಿ, ನಿರೂಪಕಿ ಅಂತ ಗೊತ್ತು. ನಿರ್ದೇಶಕಿ ಶೀತಲ್‌ ಅವರಿಂದ ಜನ ಏನು ನಿರೀಕ್ಷಿಸಬಹುದು?

ನಟಿ, ನಿರೂಪಕಿ ಏನೇ ಇರಬಹುದು, ಅದು ಬೇರೆಯವರು ನನ್ನನ್ನು ನೋಡಿರುವ ರೀತಿ. ನಿರ್ದೇಶಕಿ ಅನ್ನೋದು ನಾನೇ. ಇಷ್ಟಪಟ್ಟು, ಕಷ್ಟಪಟ್ಟು ಇಲ್ಲಿಗೆ ಬರೋದಿಕ್ಕೆ ಟ್ರೈ ಮಾಡಿದ್ದೀನಿ. ಪ್ರಯತ್ನ ಇನ್ನೂ ಮುಂದುವರಿದಿದೆ. ಜನ ನನ್ನ ನಿರ್ದೇಶನ ಇಷ್ಟಪಟ್ಟರೆ ಸಾಕು. ಫಸ್ಟ್‌ಲುಕ್‌ ಅನ್ನು ಜನ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ. ತುಂಬ ಪಾಸಿಟಿವ್‌ ಆಗಿ ಕಮೆಂಟ್‌ ಮಾಡ್ತಿದ್ದಾರೆ. ಡಿಸ್‌ಲೈಕ್‌ ಇಲ್ವೇ ಇಲ್ಲ. ಲುಕ್‌ ತುಂಬ ಫ್ರೆಶ್‌ ಇದೆ ಅಂತಿದ್ದಾರೆ. ಅರ್ಜುನ್‌ ಜನ್ಯಾ ಅವರ ಅದ್ಭುತ ಮ್ಯೂಸಿಕ್‌, ಸಿನಿಮಾಟೋಗ್ರಫಿ ಎಲ್ಲವೂ ಇದಕ್ಕೆ ಕಾರಣ.

 

ವಿಂಡೋ ಸೀಟ್‌ನಲ್ಲಿ ಕೂತ ಪ್ರೇಕ್ಷಕನಿಗೆ ಏನೆಲ್ಲ ಕಾಣಬಹುದು?

ಒಂದೊಳ್ಳೆ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಕಾಣಿಸುತ್ತೆ. ತುಂಬ ಪ್ರೀತಿ ಇದೆ. ಇದರ ಒಳಗೆ ಥ್ರಿಲ್ಲಿಂಗ್‌ ಅಂಶಗಳು, ಇನ್‌ವೆಸ್ಟಿಗೇಶನ್‌, ಮರ್ಡರ್‌ ಮಿಸ್ಟ್ರಿ ಇದೆ. ಸೊಗಸಾದ ಥ್ರಿಲ್ಲರ್‌ಅನ್ನು ರೊಮ್ಯಾನ್ಸ್‌ನಲ್ಲಿ ರಾರ‍ಯಪ್‌ ಮಾಡಿ ಕೊಡ್ತಾ ಇರೋದು ಈ ಸಿನಿಮಾದ ವಿಶೇಷ.

ನಟಿಯಿಂದ ನಿರ್ದೇಶಕಿಯಾಗುವಾಗಿನ ಪ್ರೊಸೆಸ್‌ ಹೇಗಿತ್ತು?

ನನಗೆ ಯಾವಾಗ್ಲೂ ಹೊಸದು ಏನಾದ್ರೂ ಮಾಡಬೇಕು ಅನ್ನುವ ತುಡಿತ. ಅದು ನನ್ನ ಸುಮ್ನೆ ಕೂತ್ಕೊಳಕ್ಕೆ ಬಿಡಲ್ಲ. ಯಾವಾಗ ಸಿನಿಮಾಗೋಸ್ಕರ ಮೀಡಿಯಾವನ್ನು ಬಿಟ್ಟೆನೋ ಆಗ ನಿರ್ದೇಶನದ ಸೂಕ್ಷ್ಮಗಳನ್ನು ಗಮನಿಸುತ್ತಾ ಬಂದೆ. ಒಂದು ಕತೆ ಸಿನಿಮಾವಾಗುವಾಗಿನ ಪ್ರೊಸೆಸ್‌ ಬಹಳ ಇಂಟರೆಸ್ಟಿಂಗ್‌ ಅನಿಸುತ್ತಿತ್ತು. ಒಂದು ಕತೆ ಬರೆದೆ. ಆಪ್ತರಿಗೆ ತೋರಿಸಿದಾಗ, ಕತೆ ತುಂಬ ಚೆನ್ನಾಗಿದೆ, ನೀನು ಡೈರೆಕ್ಷನ್‌ ಮಾಡಬಹುದಲ್ಲಾ ಅನ್ನುವ ಮಾತು ಬಂತು. ಆಗ ನಿರ್ದೇಶಕಿಯಾಗುವ ಹಂಬಲಕ್ಕೆ ಒಂದು ದಾರಿ ಸಿಕ್ಕ ಹಾಗಾಯಿತು. ಈ ಹಂತದಲ್ಲೇ ಎರಡು ಶಾರ್ಟ್‌ ಮೂವಿ ಮಾಡಿದೆ.

ಶೀತಲ್‌ ಶೆಟ್ಟಿ ಸಿನಿಮಾ ವಿಂಡೋಸೀಟ್ ಫಸ್ಟ್‌ ಲುಕ್‌..!

ಚಾಲೆಂಜಿಂಗ್‌ ಅನಿಸಿದ್ದು?

ನಿರ್ದೇಶನದ ಇಡೀ ಪ್ರೊಸೆಸ್ಸೇ ಚಾಲೆಂಜಿಂಗ್‌. ಕತೆಯನ್ನು ಸಿನಿಮಾವಾಗಿಸೋದು, ಅದಕ್ಕೆ ತಕ್ಕ ಲೊಕೇಷನ್‌, ಪಾತ್ರ, ತಾಂತ್ರಿಕತೆ ಸವಾಲೇ. ಶೂಟಿಂಗ್‌ ಹೊತ್ತಿನ ಸಣ್ಣ ಕಾಸ್ಟೂ್ಯಮ್‌ ಕಂಟಿನ್ಯುವಿಟಿ ಮಿಸ್‌ ಆಗೋದು ಸಹ ಮ್ಯಾಟರ್‌ ಆಗುತ್ತೆ. ಇಲ್ಲಿ ಟೀಮ್‌ ಬಹಳ ಮುಖ್ಯ. ಅದೃಷ್ಟವಶಾತ್‌ ಅತ್ಯುತ್ತಮ ಟೀಮ್‌ ನನಗೆ ಸಿಕ್ಕಿತು. ಚಿತ್ರಕತೆಯ ಟೀಮ್‌, ಸಂಗೀತ ನಿರ್ದೇಶನ ಮಾಡಿರುವ ಅರ್ಜುನ್‌ ಜನ್ಯಾ, ನಮ್‌ ಸಂಕಲನಕಾರರು, ಸಿನಿಮಟೋಗ್ರಫಿ ಮಾಡಿರುವ ವಿಘ್ನೇಶ್‌ ಎಲ್ಲರೂ ಅದ್ಭುತವಾಗಿ ಅವರವರ ಕೆಲಸ ನಿರ್ವಹಿಸಿದ್ದಾರೆ.

ಮಹಿಳೆ ಅನ್ನೋದು ನಿಮಗೆ ಪಾಸಿಟಿವ್‌ ಆಯ್ತಾ, ನೆಗೆಟಿವ್‌ ಆಯ್ತಾ?

ನಿರ್ದೇಶನದಲ್ಲಿ ಹೆಣ್ಣು, ಗಂಡು ಅಂತಿಲ್ಲ. ನಿರ್ದೇಶಕರು ಕ್ರಿಯೇಟಿವ್‌ ಆಗಿರಬೇಕು, ನಿರ್ಧರಿಸುವ ಶಕ್ತಿ ಇರಬೇಕು, ಜನರ ಜೊತೆ ಬೆರೆತು ಟ್ಯಾಲೆಂಟ್‌ ಹಂಟ್‌ ಮಾಡುವ ಕೆಪ್ಯಾಸಿಟಿ ಇರಬೇಕು. ಆದರೆ ಹುಡುಗೀರು ಯಾಕೆ ಈ ಫೀಲ್ಡ್‌ಗೆ ಬರ್ತಿಲ್ವೋ ಗೊತ್ತಿಲ್ಲ. ಬಂದರೆ ಕತೆ, ಟೆಕ್ನಿಕಲ್‌ ಫೀಲ್ಡ್‌ನಲ್ಲೂ ತೊಡಗಿಸಿಕೊಳ್ಳಬಹುದು.

ನಿರ್ದೇಶಕಿ ಶೀತಲ್ ಶೆಟ್ಟಿಯ ವಂಡರ್‌ಫುಲ್ ಥಾಟ್

ನಮ್‌ ಹೆಣ್ಮಕ್ಕಳು ಕಮರ್ಷಿಯಲ್‌ ಸಿನಿಮಾ ನಿರ್ದೇಶಿಸಲಿಕ್ಕಾಗಲ್ಲ, ಅವರಿಗೆ ಕಾಮಿಡಿ ಸೆನ್ಸೇ ಇರಲ್ಲ ಅನ್ನುವ ಮನಸ್ಥಿತಿ ಬಗ್ಗೆ ಏನು ಹೇಳ್ತೀರಿ?

ಇದು ಕಮೆಂಟ್‌ ಮಾಡುವವರ ತಿಳುವಳಿಕೆಯ ಮಿತಿ ಅಷ್ಟೇ. ಸಿನಿಮಾ ಅಂದ್ರೆ ಸಿನಿಮಾ ಅಷ್ಟೇ. ಇಂಥಾ ಕ್ರಿಯೇಟಿವ್‌ ವರ್ಕ್ ಅನ್ನು ಒಂದು ಫಾರ್ಮುಲಾ ಮೂಲಕ ಜಡ್ಜ್‌ ಮಾಡಲಿಕ್ಕಾಗೋದಿಲ್ಲ.

"

ಇನ್ಮೇಲೆ ನಿರ್ದೇಶಕಿಯಾಗಿಯೇ ಮುಂದುವರಿಯುತ್ತೀರಾ? ಅಥವಾ ನಟನೆಯಲ್ಲೂ ಇರ್ತೀರಾ?

ನನಗೆ ನಿರ್ದೇಶನ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಇದೆ. ಇನ್ನೊಂದು ಸ್ಕಿ್ರಪ್ಟ್‌ ಸಹ ರೆಡಿ ಆಗ್ತಿದೆ. ಉತ್ತಮ ಅವಕಾಶ ಸಿಕ್ಕರೆ ನಟನೆಯಲ್ಲೂ ಮುಂದುವರಿಯುತ್ತೇನೆ.

ಕನ್ನಡಕ್ಕೊಬ್ಬ ಪ್ರತಿಭಾವಂತ ನಿರ್ದೇಶಕಿ ಸಿಕ್ಕರು ಅಂತ ಖುಷಿ ಪಡಬಹುದಾ?

ಅದನ್ನು ಜನ ಹೇಳಿದ್ರೆ ಚಂದ. ಆ ನಿಟ್ಟಿನಲ್ಲಿ ನನ್ನ ಪ್ರಯತ್ನವಂತೂ ಚಾಲ್ತಿಯಲ್ಲಿದೆ.

ಸಿನಿಮಾ ರಿಲೀಸ್‌ ಯಾವಾಗ? ಓಟಿಟಿಯಲ್ಲಿ ಬಿಡುಗಡೆ ಮಾಡುವ ಇರಾದೆ ಇದೆಯಾ?

ನಾವು ಬಹಳ ಕಷ್ಟಪಟ್ಟು ಸೂಕ್ಷ್ಮವಾದ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೀವಿ. ಮ್ಯೂಸಿಕ್‌ನಲ್ಲಂತೂ ಅರ್ಜುನ್‌ ಜನ್ಯಾ ಸಾಕಷ್ಟುಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಇದೆಲ್ಲವನ್ನೂ ಥಿಯೇಟರ್‌ನಲ್ಲೇ ಸವಿಯಬೇಕು. ಹೀಗಾಗಿ ಥಿಯೇಟರ್‌ಗಳು ಜನರಿಗೆ ತೆರೆದ ಕೂಡಲೇ ಸಿನಿಮಾ ರಿಲೀಸ್‌ ಮಾಡ್ತೀವಿ.

click me!