ಕೊನೆಗೂ ರೇವತಿ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ!

Suvarna News   | Asianet News
Published : Feb 03, 2020, 08:40 AM ISTUpdated : Feb 04, 2020, 04:58 PM IST
ಕೊನೆಗೂ ರೇವತಿ ಬಗ್ಗೆ ಸೀಕ್ರೆಟ್‌  ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ!

ಸಾರಾಂಶ

ನಿಖಿಲ್‌ ಕುಮಾರಸ್ವಾಮಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಒಂದಷ್ಟು ದಿನಗಳ ಗ್ಯಾಪ್‌ ನಂತರ ನಾಲ್ಕು ಚಿತ್ರಗಳಿಗೆ ಹೀರೋ ಆಗಿದ್ದಾರೆ. ಮತ್ತೊಂದೆಡೆ ಅವರಿಗೆ ರಿಯಲ್‌ ಲೈಫ್‌ನಲ್ಲಿ ಕಂಕಣ ಭಾಗ್ಯವೂ ಕೂಡಿ ಬಂದಿದೆ. ಆ ಮೂಲಕ 2020 ಅವರಿಗೆ ಮಹತ್ವದ ವರ್ಷವೇ ಆಗಿದೆ. ಸಿಕ್ಕಾಪಟ್ಟೆ ಜೋಶ್‌ನಲ್ಲಿರುವ ಈ ಜರ್ನಿಯ ಕುರಿತು ನಿಖಿಲ್‌ ಜತೆಗೆ ಮಾತುಕತೆ.

ದೇಶಾದ್ರಿ ಹೊಸ್ಮನೆ

ಹೊಸ ವರ್ಷದ ಆರಂಭಕ್ಕೆ ಸಾಕಷ್ಟುವಿಶೇಷತೆಗಳೊಂದಿಗೆ ಸುದ್ದಿಯಲ್ಲಿದ್ದೀರಿ ...

ಹುಟ್ಟುಹಬ್ಬಕ್ಕೆ ನಾಲ್ಕು ಸಿನಿಮಾ ಅನೌನ್ಸ್‌ ಆಗಿವೆ. ನಾಲ್ಕೂ ಒಳ್ಳೆಯ ಕತೆ ಹೊಂದಿರುವಂತಹ ಸಿನಿಮಾ. ಹಾಗೆಯೇ ಒಳ್ಳೆಯ ಪಾತ್ರಗಳು ಸಿಕ್ಕಿವೆ. ಇನ್ನೊಂದೆಡೆ ಮದುವೆ. ಇದು ಎಲ್ಲರ ಬದುಕಲ್ಲೂ ಆಗುವಂತಹದ್ದೇ ಅಲ್ಲವೇ? ಈಗ ನನ್ನ ಸರದಿ. ಆ ಮೂಲಕ ಇನ್ನಷ್ಟುಜವಾಬ್ದಾರಿ ಹೆಚ್ಚಾಗುತ್ತಿದೆ ಎನ್ನುವುದಷ್ಟೇ ವಿಶೇಷ.

ನಿಖಿಲ್ ಮದುವೆ ಅವರಿಷ್ಟಪಟ್ಟ ಈ ಜಾಗದಲ್ಲಿ ನಡೆಯುತ್ತಂತೆ!

ಮದುವೆ ಆಗುತ್ತಿರುವ ಹುಡುಗಿಯ ಆಯ್ಕೆಯಲ್ಲಿ ನಿಮ್ಮದೆಷ್ಟುಪಾತ್ರ?

ಮೊದಲೇ ಹೇಳಿದ್ದ ಮಾತು ಉಳಿಸಿಕೊಂಡಿರುವ ಖುಷಿಯಿದೆ. ಮನೆಯವರು ನೋಡಿ, ಆಯ್ಕೆ ಮಾಡಿದ ಹುಡುಗಿಯನ್ನೇ ಮದುವೆ ಆಗುತ್ತೇನೆ ಅಂದಿದ್ದೆ. ಅದೇ ರೀತಿ ಈಗ ಮನೆಯವರೇ ನೋಡಿ ಆಯ್ಕೆ ಮಾಡಿದ ಹುಡುಗಿ. ಇಷ್ಟವೋ ಇಲ್ಲವೋ ಎನ್ನುವ ವಿಚಾರ ಬಂದಾಗ ಸಹಜವಾಗಿ ನನ್ನದು ಪಾತ್ರ ಇರುತ್ತೆ. ಮನೆಯವರು ನೋಡಿದ್ರು. ಆಮೇಲೆ ನನ್ನದು ಅಭಿಪ್ರಾಯ ಕೇಳಿದ್ರು. ಓಕೆ ಅಂದ ಮೇಲೆಯೇ ಮದುವೆ ಫಿಕ್ಸ್‌ ಆಗಿದೆ.

ಸಂಪ್ರದಾಯ ಬದ್ಧವಾಗಿಯೇ ಮದುವೆ ಆಗ್ಬೇಕು ಅಂತೆನಿಸಿದ್ದು ಯಾಕೆ?

ಇದು ನಮ್ಮ ಸಂಪ್ರಾದಾಯ. ಅದನ್ನು ನಾವು ಗೌರವಿಸದೆ, ಇನ್ನಾರು ಗೌರವಿಸಬೇಕು? ನಮ್ಮ ಮನೆತನ ಯಾವತ್ತಿಗೂ ಅದಕ್ಕೆ ಬೆಲೆ ಕೊಟ್ಟಿದೆ. ದೇವೇಗೌಡ್ರು ಕುಟುಂಬ ಏನು ಅನ್ನೋದು ರಾಜ್ಯಕ್ಕೆ ಗೊತ್ತಿದೆ. ಕುಮಾರಣ್ಣ ಕೂಡ ಅದನ್ನೇ ಪಾಲಿಸುತ್ತಾ ಬಂದಿದ್ದಾರೆ. ಅವರಿಗೆ ನಾನು ವಿರುದ್ಧವಾಗಿ ನಡೆದುಕೊಂಡರೆ, ನಾಳೆ ನಮ್ಮ ಮಕ್ಕಳಿಗೆ ಇನ್ನೇನು ಹೇಳಿಕೊಡಲು ಸಾಧ್ಯ? ಇದು ನನ್ನ ನಂಬಿಕೆ. ನಮ್ಮ ಸಂಪ್ರಾದಾಯ, ಇಲ್ಲಿನ ಆಚಾರ-ವಿಚಾರಗಳಿಗೆ ನಾನು ನೀಡುತ್ತಿರುವ ಗೌರವ.

ನಿಖಿಲ್‌ ಕುಮಾರಸ್ವಾಮಿಗೆ ಜೋಡಿಯಾದ ಕಿರುತೆರೆ ನಟಿ!

ಮದುವೆ ಆಗುತ್ತಿರುವ ಹುಡುಗಿಯ ಬಗ್ಗೆ ಒಂದೇ ಮಾತಿನಲ್ಲಿ ಹೇಳೋದಾದ್ರೆ...

ಒಳ್ಳೆಯ ಸಂಸ್ಕೃತಿ ಮತ್ತು ಸಂಪ್ರದಾಯಸ್ಥ ಕುಟುಂಬದ ಹುಡುಗಿ. ವಿದ್ಯಾವಂತೆ. ನನಗೆ ರೇವತಿ ಅವರೇ ಪರ್ಫೆಕ್ಟ್ ಪಾರ್ಟನರ್‌ ಎನ್ನುವುದು ನನ್ನ ಅಭಿಪ್ರಾಯ.

ಮದುವೆ ಜತೆಗೀಗ ನಿಮ್ಮ ಸಿನಿಮಾ ಸಂಭ್ರಮವೂ ದೊಡ್ಡದಿದೆ, ಆ ಬಗ್ಗೆ ಹೇಳಿ?

ಎಲ್ಲಾ ಒಳ್ಳೆಯ ಕೆಲಸಗಳಿಗೆ ಒಟ್ಟಿಗೆ ಚಾಲನೆ ಸಿಕ್ಕಿರುವುದೇ ದೊಡ್ಡ ಸಂಭ್ರಮ. ಚುನಾವಣೆ ಕಾರಣಕ್ಕೆ ಒಂದಷ್ಟುಗ್ಯಾಪ್‌ ಆಯ್ತು. ಸದ್ಯಕ್ಕೀಗ ಲಹರಿ ನಿರ್ಮಾಣದ ಸಿನಿಮಾಗೆ ಚಾಲನೆ ಸಿಕ್ಕಿದೆ. ಒಂದೊಳ್ಳೆಯ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಿದೆ. ಇದಾದ ನಂತರ ಉಳಿದ ಸಿನಿಮಾಗಳು ಹಂತ ಹಂತವಾಗಿ ಶುರುವಾಗಲಿವೆ. ಈ ವರ್ಷ ಕನಿಷ್ಠ ಎರಡು ಸಿನಿಮಾವಾದರೂ ತೆರೆಗೆ ಬರಬೇಕು, ಆಮೂಲಕ ಪ್ರೇಕ್ಷಕರನ್ನು ರಂಜಿಸಬೇಕು ಎನ್ನುವುದು ನನ್ನಾಸೆ.

ವಿಜಯ್‌ ಕುಮಾರ್‌ ಕೊಂಡ ನಿರ್ದೇಶನದ ಸಿನಿಮಾ ಒಪ್ಪಿಕೊಂಡಿದ್ದಕ್ಕೆ ಇದ್ದ ಕಾರಣ ಏನು?

ಅದಕ್ಕೆ ಮುಖ್ಯ ಕಾರಣ ಕತೆ. ಚುನಾವಣೆಗೂ ಮುಂಚೆಯೇ ನಾನು ಈ ಕತೆ ಕೇಳಿದ್ದೆ. ತುಂಬಾ ಚೆನ್ನಾಗಿತ್ತು. ಆನಂತರದ ದಿನಗಳಲ್ಲಿ ಒಂದಷ್ಟುವರ್ಕ್ ಮಾಡಿದ್ದೇವೆ. ಬಾಸ್ಕೆಟ್‌ಬಾಲ್‌ ಆಧರಿಸಿದ ಕತೆ. ಒಬ್ಬ ಮಧ್ಯಮ ವರ್ಗದ ಹುಡುಗ, ಹೇಗೆ ಬಾಸ್ಕೆಟ್‌ ಬಾಲ್‌ ಆಟಗಾರನಾಗಿ ಗೆಲ್ಲುತ್ತಾನೆ ಎನ್ನುವುದನ್ನು ಸಿನಿಮಾದ ಎಲ್ಲಾ ಸೂತ್ರಗಳ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.

ನಿಖಿಲ್ ಮದುವೆಯಾಗೋ ಹುಡುಗಿ ರೇವತಿ ಏನ್ ಓದಿದ್ದಾರೆ? ಏನ್ ಮಾಡ್ತಿದ್ದಾರೆ?

ಬಾಸ್ಕೆಟ್‌ ಬಾಲ್‌ ಆಟಗಾರನಾಗಿ ಕಾಣಿಸಿಕೊಳ್ಳಲು ಏನೆಲ್ಲ ತಯಾರಿ ನಡೆದಿವೆ?

ಸ್ಪೋಟ್ಸ್‌ ರ್‍ ಟಚ್‌ ಇದೆ. ವಾಲಿಬಾಲ್‌, ಫುಟ್ಬಾಲ್‌ ಆಡಿದ ಅನುಭವ ಇದೆ. ಆದ್ರೆ ಬಾಸ್ಕೆಟ್‌ ಬಾಲ್‌ ಅಷ್ಟಾಗಿ ಆಡಿರಲಿಲ್ಲ. ಈಗ ಅದಕ್ಕೆ ಬೇಕಾದ ಎಲ್ಲಾ ತಯಾರಿ ನಡೆದಿದೆ. ಜತೆಗೆ ಆ್ಯಕ್ಷನ್‌ ಸೀಕ್ವೆನ್ಸ್‌ ಕೂಡ ಸಾಕಷ್ಟಿದೆ. ಜಾಗ್ವಾರ್‌ ಮೂಲಕ ನಾನು ಬಂದಿದ್ದೆ ಆ್ಯಕ್ಷನ್‌ ಹೀರೋ ಆಗಿ. ಸಹಜವಾಗಿ ಆಡಿಯನ್ಸ್‌ಗೆ ಅದೆಲ್ಲ ಬೇಕು ಎನ್ನುವ ನಿರೀಕ್ಷೆ ಇದ್ದೇ ಇರುತ್ತೆ. ಅದಕ್ಕೆ ಪೂರಕವಾಗಿಯೇ ಈ ಸಿನಿಮಾ ತೆರೆಗೆ ಬರಲಿದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು