ಹಲವು ಚಿತ್ರಗಳಲ್ಲಿ ಪುಟ್ಟ ಪಾತ್ರಗಳ ಮೂಲಕ ಕಾಣಿಸಿಕೊಂಡು ಗಮನ ಸೆಳೆಯುತ್ತಿದ್ದ ನಟ ನಾಗಭೂಷಣ್, ಇಕ್ಕಟ್ ಚಿತ್ರದ ಮೂಲಕನಾಯಕನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಭೂಮಿ ಶೆಟ್ಟಿ ನಾಯಕಿ. ಜು.21ರಂದು ಅಮೆಜಾನ್ ಪ್ರೈಮ್‌ನಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ನಾಗಭೂಷಣ್ ಜೊತೆ ಸಂದರ್ಶನ.
ಆರ್. ಕೇಶವಮೂರ್ತಿ
ನಿಮ್ಮ ಚಿತ್ರದಲ್ಲಿ ಎಷ್ಟು ಇಕ್ಕಟ್ ಇದೆ?
undefined
ಇಡೀ ಸಿನಿಮಾ 20-30 ಅಳತೆಯ ಮನೆಯಲ್ಲಿ ನಡೆಯುತ್ತದೆ.ಫುಲ್ ಸೈಟ್ ಮನೆ ಕೂಡ ಅಲ್ಲ. ಕೆಲವೇ ಪಾತ್ರಗಳು, 17 ರಿಂದ 18 ದಿನಗಳ ಕಾಲಮನೆಯಿಂದ ಆಚೆ ಬಾರದೆ ಶೂಟಿಂಗ್ ಮಾಡಿದ ಚಿತ್ರ. ಹೀಗಾಗಿ ಚಿತ್ರದಲ್ಲಿ ತುಂಬಾ ಇಕ್ಕಟ್ ಇದೆ. ಕೊರೋನಾ ಸಂದರ್ಭದಲ್ಲಿ ಮನೆಯಿಂದ ಆಚೆ ಬಾರದೆ ಒಂದೇ ಮನೆಯಲ್ಲಿ ಚಿತ್ರೀಕರಣಮಾಡಿದ್ದೇವೆ.
ಏನು ಹೇಳಕ್ಕೆ ಹೊರಟಿದ್ದೀರಿ ಈ ಚಿತ್ರದ ಮೂಲಕ?
ಗಂಡ ಹೆಂಡತಿ ಮುನಿಸಿಕೊಂಡು ಡಿವೋರ್ಸ್‌ತೆಗೆದುಕೊಳ್ಳುವುದಕ್ಕೆ ನಿರ್ಧರಿಸುತ್ತಾರೆ. ಮರು ದಿನ ವಿಚ್ಛೇದನಕ್ಕೆ ಪ್ಲಾನ್‌ಮಾಡಿಕೊಳ್ಳುತ್ತಾರೆ. ಆದರೆ, ಆಗಲೇ ಲಾಕ್‌ಡೌನ್ ಘೋಷಣೆ ಆಗುತ್ತದೆ. ದೂರ ಆಗಬೇಕಾದ ಗಂಡ- ಹೆಂಡತಿ 21 ದಿನ ಮನೆಯಲ್ಲಿ ಹೇಗಿರುತ್ತಾರೆ, ನಾಲ್ಕು ಗೋಡೆಗಳ ನಡುವೆ ಜಗಳಮಾಡುವುದು ಮಾತ್ರವಲ್ಲ ಪ್ರೀತಿಸುವುದು ಕೂಡ ಹೇಗೆ ಎಂದು ಹೇಳುವ ಕತೆ ಇಲ್ಲಿದೆ. ಹಾಸ್ಯದ ಮೂಲಕ ಪ್ರೀತಿ ಮತ್ತು ಸಂಬಂಧಗಳನ್ನು ಹೇಳುತ್ತಿದ್ದೇವೆ.
94 ಪ್ರಶಸ್ತಿ ಪಡೆದ 'ದಾರಿ ಯಾವುದಯ್ಯ ವೈಕುಂಠಕೆ' ನಿರ್ದೇಶಕ ಸಿದ್ದು ಪೂರ್ಣಚಂದ್ರ ಜೊತೆ ಮಾತುಕತೆ!ಆದರೆ, ಈ ಚಿತ್ರದ ನಂತರ ನಿಮ್ಮನ್ನು ಹೀರೋ ಅಂದ್ರೆ?
ಅದು ನೋಡಗರ ಪ್ರೀತಿ ಮತ್ತು ಅಭಿಮಾನ. ಆದರೆ, ನಾನುಒಳ್ಳೆಯ ಕತೆ ಮತ್ತು ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಕ್ಯಾರೆಕ್ಟರ್ ಆರ್ಟಿಸ್‌ಟ್ ಆಗಿಯೇ ಇರಬೇಕು ಎಂದು ಬಯಸುತ್ತೇನೆ. ಆದರೆ, ಇದು ನನ್ನ ವೃತ್ತಿ ಜೀವನಕ್ಕೆ ತಿರುವುಕೊಡುವ ಚಿತ್ರ ಎನ್ನಬಹುದು. ಈ ಚಿತ್ರದ ನಂತರ ನನಗೆ ಮತ್ತಷ್ಟು ಒಳ್ಳೆಯ ಪಾತ್ರಗಳು ಬರಬಹುದು.
ಅಮೆಜಾನ್ ನಂತಹ ಓಟಿಟಿಗಳು ಕನ್ನಡ ಚಿತ್ರಗಳಿಗೆ ಮಹತ್ವಕೊಡಲ್ಲ ಎನ್ನುವ ಮಾತುಗಳ ನಡುವೆ ನಿಮ್ಮ ಚಿತ್ರ ಅದೇ ಅಮೆಜಾನ್‌ನಲ್ಲಿ ಬರುತ್ತಿದೆಯಲ್ಲ?
ಚಿತ್ರೀಕರಣ ಮುಗಿಸಿ ಹೇಗೆ ಇದನ್ನು ಬಿಡುಗಡೆ ಮಾಡಬೇಕು ಎಂದುಕೊಳ್ಳುತ್ತಿರುವಾಗ ಪವನ್ ಕುಮಾರ್ ಅವರಿಗೆ ಸಿನಿಮಾ ತೋರಿಸಿದ್ವಿ. ಅವರು ಚಿತ್ರವನ್ನು ಮೆಚ್ಚಿ, ಅಮೆಜಾನ್‌ಗೆ ಮಾತನಾಡಿಸಿದರು. ಜು.21ರಿಂದ 240 ದೇಶಗಳಲ್ಲಿ ನಮ್ಮ ಚಿತ್ರವನ್ನು ವೀಕ್ಷಿಸಬಹುದು.