94 ಪ್ರಶಸ್ತಿ ಪಡೆದ 'ದಾರಿ ಯಾವುದಯ್ಯ ವೈಕುಂಠಕೆ' ನಿರ್ದೇಶಕ ಸಿದ್ದು ಪೂರ್ಣಚಂದ್ರ ಜೊತೆ ಮಾತುಕತೆ!

By Kannadaprabha News  |  First Published Jul 12, 2021, 3:10 PM IST

94 ಕ್ಕೂ ಅಧಿಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡ ಚಿತ್ರ ‘ದಾರಿ ಯಾವುದಯ್ಯಾ ವೈಕುಂಠಕೆ’. ಈ ಸಿನಿಮಾದ ನಿರ್ದೇಶಕ ಸಿದ್ದು ಪೂರ್ಣಚಂದ್ರ ತಮ್ಮ ಸಿನಿಮಾದ ಬಗೆಗೆ ಇಲ್ಲಿ ಮಾತಾಡಿದ್ದಾರೆ.
 


 ಪ್ರಿಯಾ ಕೆರ್ವಾಶೆ

- ಅವಾರ್ಡ್ ತಂದಿಡುವ ಸಂತಸ, ಸಂಕಟಗಳೇನು?ಇಂಡಸ್ಟ್ರಿಗೆ ಬಂದ ಮೇಲೆ ಮೊದಲ ಬಾರಿ ಸಿಗುತ್ತಿರುವ ಪುರಸ್ಕಾರಗಳಿವು. ಕಷ್ಟಪಟ್ಟು ಮಾಡಿದ ಕೆಲಸಕ್ಕೆ ಸಿಕ್ಕ ಕೀರ್ತಿ, ಅದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದ ಬಗ್ಗೆ ಸಂತಸವಿದೆ. ಇವರು ಅವಾರ್ಡ್‌ಗೇ ಫಿಕ್‌ಸ್ ಆಗೋದ್ರಾ ಅನ್ನೋ ರೀತಿಯ ಚುಚ್ಚು ಮಾತುಗಳಿಂದ ಸಂಕಟ. ಇನ್ಮೇಲೆ ನೀವು ಫುಲ್ ಕಮರ್ಷಿಯಲ್ ಸಿನಿಮಾ ಮಾಡಬಹುದು ಅನ್ನೋ ಥರದ ಮಾತುಗಳಿಂದ ಸವಾಲೂ ಹುಟ್ಟಿಕೊಂಡಿದೆ.

ನನ್ನನ್ನು ಹೊಸದಾಗಿ ತೋರಿಸುವ ಚಿತ್ರಗಳಿಗೆ ಸ್ವಾಗತ: ಶಿವರಾಜ್‌ಕುಮಾರ್

Latest Videos

undefined

- ಇಷ್ಟೊಂದು ಪ್ರಶಸ್ತಿ ತನ್ನದಾಗಿಸಿಕೊಳ್ಳುವಂಥಾ ವಿಶೇಷತೆ ಏನಿದೆ ಸಿನಿಮಾದಲ್ಲಿ?ತಮ್ಮ ತಮ್ಮ ವೈಕುಂಠವನ್ನು ಅಂದರೆ ಕನಸನ್ನು ಬೆನ್ನತ್ತಿ ಹೋಗುವ ವ್ಯಕ್ತಿಗಳ ಬದುಕಿನ ಬಣ್ಣವನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದೇನೆ. ಒಬ್ಬ ಕಳ್ಳ, ಇನ್ನೊಬ್ಬ ಹೆಣ ಸುಡುವ ವ್ಯಕ್ತಿ ಮತ್ತು ಅವನ ನಾಯಿ, ಒಬ್ಬಾಕೆ ಗರ್ಭಿಣಿ, ಇನ್ನೊಬ್ಬ ವಿಕ್ಷಿಪ್ತ ವ್ಯಕ್ತಿ ಹೀಗೆ ಒಂದಿಷ್ಟು ಮಂದಿಯ ಹುಡುಕಾಟ, ಕೆಲವೊಂದು ಘಟನೆಗಳಿಂದ ಅವರಲ್ಲಾಗುವ ಬದಲಾವಣೆ, ಸೂಕ್ಷ್ಮ ವಿವರಗಳು ಕತೆಯ ಪಾಸಿಟಿವ್ ಅಂಶಗಳು. ವ್ಯವಸ್ಥೆಯಲ್ಲಿರುವ ಸೂಕ್ಷ್ಮ ಕ್ರೌರ್ಯವನ್ನೂ ಬಿಂಬಿಸುತ್ತದೆ. ಈ ಸಿನಿಮಾದ ಬಹುಭಾಗದ ಚಿತ್ರೀಕರಣ ಸ್ಮಶಾನದಲ್ಲಿ ಆಗಿರೋದು ವಿಶೇಷ. ಇದರಲ್ಲಿ ಸ್ಮಶಾನವನ್ನು ಹುಟ್ಟು-ಸಾವಿನ ರೂಪಕವಾಗಿ ತಂದಿದ್ದೇವೆ. ಬಾಲ ರಾಜವಾಡಿ ಹೆಣ ಸುಡುವವನ ಪಾತ್ರದಲ್ಲಿದ್ದಾರೆ. ವರ್ಧನ್, ತಿಥಿ ಸಿನಿಮಾ ಖ್ಯಾತಿಯ ಪೂಜಾ, ಅರುಣ್ ಮೂರ್ತಿ ನಟಿಸಿದ್ದಾರೆ.

ಪ್ರಶಸ್ತಿ ಅವಕಾಶ ಸೃಷ್ಟಿಸುತ್ತೆ ಅನ್ನುವ ಭರವಸೆಯಿಲ್ಲ: ಅಕ್ಷತಾ ಪಾಂಡವಪುರ

- ಈವರೆಗೆ ಬಂದಿರುವ ಕೆಲವು ಮುಖ್ಯ ಪ್ರಶಸ್ತಿಗಳ ಬಗ್ಗೆ ಹೇಳಬಹುದಾ?ಇದೀಗ ತಾನೇ ಟರ್ಕಿಯ ಇಸ್ತಾಂಬುಲ್ ಸಿನಿಮೋತ್ಸವದಲ್ಲಿ ಬೆಸ್‌ಟ್ ಫೀಚರ್ ಡೈರೆಕ್ಟರ್ ಪ್ರಶಸ್ತಿ ಬಂದಿದೆ. ಈವರೆಗೆ 94 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ. ರಾಜಸ್ಥಾನ್ ಇಂಟರ್‌ನ್ಯಾಶನಲ್ ಫಿಲಂ ಫೆಸ್ಟಿವಲ್‌ನಲ್ಲಿ ಬೆಸ್‌ಟ್ ಸ್ಟೋರಿ ಅವಾರ್ಡ್, ನವಾಡ ಇಂಟರ್‌ನ್ಯಾಶನಲ್ ಫಿಲಂ ಫೆಸ್‌ಟ್ನಲ್ಲಿ ಉತ್ತಮ ನಿರ್ದೇಶಕ ಡೈಮಂಡ್ ಅವಾರ್ಡ್, ಸಿಂಗಾಪುರದ ವರ್ಲ್‌ಡ್ ಫಿಲಂ ಕಾರ್ನಿವಲ್‌ನಲ್ಲಿ ಬೆಸ್‌ಟ್ ಡೈರೆಕ್ಟರ್ ಅವಾರ್ಡ್, ಪೋರ್ಟ್‌ಬ್ಲೇರ್‌ನ ವಿಶ್ವ ಸಿನಿಮೋತ್ಸವದಲ್ಲಿ ಬೆಸ್‌ಟ್ ಡೈರೆಕ್ಟರ್, ಬೆಸ್‌ಟ್ ಫೀಚರ್ ಫಿಲಂ ಅವಾರ್ಡ್.. ಹೀಗೆ ಹಲವು ಪ್ರಶಸ್ತಿ ಪುರಸ್ಕಾರಗಳು ಸಿಕ್ಕಿವೆ.

click me!