ದರ್ಶನ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಒಡೆಯ’ ಇಂದು ತೆರೆ ಕಾಣುತ್ತಿದೆ. ದರ್ಶನ್ ಅವರಿಗೆ ಇದು ಈ ವರ್ಷ ತೆರೆ ಕಾಣುತ್ತಿರುವ ಮೂರನೇ ಸಿನಿಮಾ. ಈಗಾಗಲೇ ಬಂದ ಎರಡೂ ಚಿತ್ರಗಳು ಸೂಪರ್ ಹಿಟ್ ಆಗಿವೆ. ಇದು ಕೂಡ ಹಿಟ್ ಆಗುತ್ತೆ ಎನ್ನುವ ನಿರೀಕ್ಷೆ ಪ್ರೇಕ್ಷಕರದ್ದು. ಹಾಗಾದ್ರೆ ಈ ಚಿತ್ರದಲ್ಲಿ ಅಂತಹದೇನಿದೆ ಸ್ಪೆಷಲ್? ಆ ಬಗ್ಗೆ ದರ್ಶನ್ ಜತೆಗೆ ಮಾತುಕತೆ.
ದೇಶಾದ್ರಿ ಹೊಸ್ಮನೆ
ಒಡೆಯ ಸಿನಿಮಾದ ಜರ್ನಿ ಹೇಗಿತ್ತು? ಹೇಗನಿಸಿತು?
undefined
ಇದೊಂದು ಸೂಪರ್ ಜರ್ನಿ. ಜತೆಗೆ ಸ್ನೇಹಿತನ ಸಿನಿಮಾ. ಅದಕ್ಕಿಂತ ಹೆಚ್ಚಾಗಿ ಇದು ನನ್ನದೇ ಸಿನಿಮಾ. ಯಾಕಂದ್ರೆ, ಸಂದೇಶ ಪ್ರೊಡಕ್ಷನ್ ಆಗಲಿ, ತೂಗುದೀಪ ಪ್ರೊಡಕ್ಷನ್ ಆಗಲಿ ಬೇರೆ ಅಲ್ಲ. ಎರಡು ಒಂದೇ ಸಂಸ್ಥೆ ಇದ್ದಂತೆ. ಆ ಕಾರಣಕ್ಕಾಗಿಯೇ ನಾನು ಸಿನಿಮಾ ಕತೆ ಕೇಳಿ ಒಪ್ಪಿಕೊಳ್ಳುವಾಗ ಪ್ರೊಡಕ್ಷನ್ ಬಗ್ಗೆ ಯೋಚಿಸುವುದಕ್ಕೆ ಹೋಗಲಿಲ್ಲ. ಕತೆ ಕೇಳುವಾಗ ನಿರ್ದೇಶಕರ ಜತೆಗೆ ನಿರ್ಮಾಪಕ ಸಂದೇಶ್ ಕೂಡ ಇದ್ದರು. ಆಯ್ತು ಮಾಡೋಣ ಅಂತ ಖುಷಿಯಾಗಿಯೇ ಮಾತು ಕೊಟ್ಟಿದ್ದೆ. ಅದೇ ಖುಷಿ ಮತ್ತು ಗೆಳೆತನದ ಬಾಂಡಿಂಗ್ ಮೇಲೆ ಈ ಸಿನಿಮಾ ಬಂದಿದೆ.
ದರ್ಶನ್ ಬಗ್ಗೆ ಈ ರೀತಿ ಹೇಳಿದ್ರಾ 'ಒಡೆಯ' ನಟಿ?
ಸಂದೇಶ್ ಪ್ರೊಡಕ್ಷನ್‌ನಲ್ಲಿ ಇದು ನಿಮಗೆ ಮೂರನೇ ಸಿನಿಮಾ, ಇದು ಹೇಗೆ ಭಿನ್ನ?
ಕತೆ ಅಥವಾ ಅದರ ವಿಶೇಷತೆ ಬಗ್ಗೆ ಈಗಲೇ ಏನನ್ನು ಹೇಳುವುದಕ್ಕೆ ಇಚ್ಛಿಸುವುದಿಲ್ಲ. ಉಳಿದಂತೆ ಪ್ರೊಡಕ್ಷನ್ ಬಗ್ಗೆ ಹೇಳೋದಾದ್ರೆ, ಸಂದೇಶ್ ಬದಲಾಗಿದ್ದಾರೆ. ಇಡೀ ಸಿನಿಮಾ ಅವರ ಹಾರ್ಡ್‌ವರ್ಕ್ ಮೂಲಕವೇ ನಿರ್ಮಾಣ ಆಗಿದೆ. ಸಿನಿಮಾ ಅಂದ್ರೇನೆ ಹಾಗೆ, ಯಾರೋ ಮಾಡ್ತಾರೆ, ಇನ್ನಾರೋ ಇದ್ದಾರೆ ಅಂತ ಬಂಡವಾಳ ಹಾಕಿ ಕೂರುವುದಲ್ಲ, ಬಂಡವಾಳ ಹಾಕಿ ನಿರ್ಮಾಪಕ ಎನಿಸಿಕೊಂಡವರು, ಸೆಟ್‌ನಲ್ಲಿರಬೇಕು. ಪ್ರತಿಯೊಂದನ್ನು ಅವಲೋಕಿಸಿ, ತಮ್ಮ ಅಭಿರುಚಿಗೆ ತಕ್ಕಂತೆ ಸಿನಿಮಾ ತೆರೆ ಮೇಲೆ ಬರಬೇಕು ಅಂದಾಗ ಒಂದೊಳ್ಳೆಯ ಸಿನಿಮಾ ಮಾಡಲು ಸಾಧ್ಯ. ಸಂದೇಶ್ ಆ ಕೆಲಸವನ್ನು ಈ ಸಿನಿಮಾದಲ್ಲಿ ಮಾಡಿದ್ದಾರೆನ್ನುವುದು ನನಗೂ ಖುಷಿ ಕೊಟ್ಟಿದೆ.
ದರ್ಶನ್ ಅವರೇ ‘ಒಡೆಯ’ ಸಿನಿಮಾದ ರೂವಾರಿ ಅಂತ ನಿರ್ಮಾಪಕರು ಹೇಳಿದ್ದ ಮಾತಿನ ಅರ್ಥವೇನು?
ಅದು ಮೇಕಿಂಗ್ ದೃಷ್ಟಿಯಲ್ಲಿ ಹೇಳಿದ್ದು. ಹಿಂದಿನ ಎರಡು ಸಿನಿಮಾಗಳಲ್ಲಿ ಸಣ್ಣ ಪುಟ್ಟತಪ್ಪುಗಳಾಗಿದ್ದವು. ತಮ್ಮದೇ ಕೆಲಸ ಕಾರ್ಯಗಳು ಅಂತ ಸಂದೇಶ್ ಪ್ರೊಡಕ್ಷನ್ ಕಡೆಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ. ಏನೋ ಆಗೋಯ್ತು ಅಂತ ಆ ಮೇಲೆ ಬೇಸರ ಪಟ್ಟುಕೊಂಡಿದ್ದರು. ಅದು ಮತ್ತೆ ಮರುಕಳಿಸಬಾರದು ಅಂತ ಮೊದಲೇ ಮುನ್ನೆಚ್ಚರಿಕೆ ಕೊಟ್ಟಿದ್ದೆ. ಜತೆಗೆ ಸೆಟ್‌ನಲ್ಲಿದ್ದು ಎಲ್ಲವನ್ನು ಎಚ್ಚರಿಕೆಯಿಂದ ನೋಡಿಕೋ ಅಂತಲೂ ಸಲಹೆ ನೀಡಿದ್ದೆ. ಅದನ್ನವರು ಈ ಸಲ ಮಾಡಿದರು. ಕೆಲವೊಮ್ಮೆ ಹಾಗಲ್ಲ, ಹೀಗೆ ಅಂತ ನಾನು ಐಡಿಯಾ ಕೊಡುತ್ತಿದ್ದೆ. ಆ ಬೆಂಬಲಕ್ಕೆ ಅವರು ಹಾಗೆ ಹೇಳಿದ್ದು.
'ಕುಚ್ಚಿಕು' ಸಾಂಗ್ ರೀಮೆಕ್; ಡಿ-ಬಾಸ್‌ಗೆ ಜೋಡಿಯಾಗಿ ಟೈಗರ್!
ನಿಮ್ಮ ಫ್ಯಾನ್ಸ್‌ಗೆ ಇಷ್ಟವಾಗುವಂತಹ ಕಮರ್ಷಿಯಲ್ ಎಲಿಮೆಂಟ್ಸ್ ಈ ಚಿತ್ರದಲ್ಲಿ ಏನೇನಿವೆ?
ಸಹಜವಾಗಿ ನನ್ನ ಸಿನಿಮಾ ಅಂದ್ರೆ ಹೇಗಿರಬೇಕು, ಏನೇನು ಇರಬೇಕು ಅಂತ ಫ್ಯಾನ್ಸ್ ಬಯಸುತ್ತಾರೋ ಅದೆಲ್ಲವೂ ಈ ಸಿನಿಮಾದಲ್ಲಿವೆ. ಸೆಂಟಿಮೆಂಟ್ ಇದೆ, ಲವ್ ಇದೆ, ಕಾಮಿಡಿ ಇದೆ, ಅದರ ಜತೆಗೆ ಫ್ಯಾಮಿಲಿ ಆಡಿಯನ್ಸ್‌ಗೆ ಬೇಕಾದ ಎಲ್ಲಾ ಮನರಂಜನೆಯ ಅಂಶಗಳು ಚಿತ್ರದಲ್ಲಿವೆ. ಆ ದೃಷ್ಟಿಯಲ್ಲಿ ಇದು ಪಕ್ಕಾ ಫ್ಯಾಮಿಲಿ ಸೆಂಟಿಮೆಂಟ್ ಸಿನಿಮಾವೂ ಹೌದು.ಹಾಗೆಯೇ ಮಾಸ್ ಸಿನಿಮಾವೂ ಹೌದು. ರಿಮೇಕ್ ಸಿನಿಮಾವೊಂದನ್ನು ಇಲ್ಲಿನ ನೆಟಿವಿಟಿಗೆ ಹೇಗೆ ಬೇಕೋ ಹಾಗೆ ತೆರೆಗೆ ತಂದಿದ್ದೇವೆ. ಸಾಕಷ್ಟುಬದಲಾವಣೆ ಮಾಡಿಕೊಂಡಿದ್ದೇವೆ.
ಮೇಕಿಂಗ್ ದೃಷ್ಟಿಯಲ್ಲಿ ‘ಒಡೆಯ’ ಅದ್ಧೂರಿ ಸಿನಿಮಾ ಎನ್ನುವ ಮಾತಿದೆ...
ಸುಮ್ನೆ ಖರ್ಚು ಮಾಡ್ಬೇಕು ಅಂತ ಯಾವುದನ್ನು ಖರ್ಚು ಮಾಡಿಲ್ಲ. ಒಂದು ಕಮರ್ಷಿಯಲ್ ಸಿನಿಮಾ ಹೇಗೆ ನಿರ್ಮಾಣ ಆಗಬೇಕೋ ಹಾಗಿದೆ ಈ ಸಿನಿಮಾ. ಸ್ವಲ್ಪ ವಿಲೇಜ್ ಬ್ಯಾಕ್‌ಡ್ರಾಪ್ ಬರುತ್ತೆ, ಅದು ಬಿಟ್ಟರೆ ಇದೊಂದು ಪಕ್ಕಾ ಟೌನ್ ಹಿನ್ನೆಲೆಯಲ್ಲಿ ನಡೆಯುವ ಸಿನಿಮಾ. ಆ ಸನ್ನಿವೇಶಕ್ಕೆ ಏನೆಲ್ಲ ಬೇಕೋ ಅದನ್ನು ಸೆಟ್ ಹಾಕಿಯೂ ಶೂಟ್ ಮಾಡಿದ್ದೇವೆ. ಅದೆಲ್ಲವೂ ಚಿತ್ರಕ್ಕೆ ಅಗತ್ಯವಾಗಿ ಬೇಕಾಗಿದ್ದೇ ಹೊರತು ಅನಗತ್ಯ ಅಲ್ಲ. ಸಿನಿಮಾ ನೋಡುವ ಪ್ರೇಕ್ಷಕರಿಗೆ ಒಂದು ದೃಶ್ಯವೂ ವೆಸ್ಟ್ ಅಂತ ಎನಿಸಿಬಾರದು ಎನ್ನುವುದನ್ನು ತಲೆಯಲ್ಲಿಟ್ಚುಕೊಂಡೇ ನಿರ್ಮಾಣ ಮಾಡಿದ ಸಿನಿಮಾ ಇದು.
'ರಾಜವೀರ ಮದಕರಿ ನಾಯಕ'ನ ಹಿಂದಿದ್ದಾರೆ ಈ ನಾಲ್ಕು ಪ್ರಬಲ ವ್ಯಕ್ತಿಗಳು!
ಚಿತ್ರಕ್ಕಾಗಿ ನಿಮ್ಮ ತಾಯಿಯವರೇ ಹುಡುಕಿ ತಂದ ಹೀರೋಯಿನ್ ಬಗ್ಗೆ ಏನ್ ಹೇಳ್ತೀರಾ?
ಒಂದು ಸಿನಿಮಾ ಒಪ್ಪಿಕೊಳ್ಳುವಾಗ ನನಗೆ ಕತೆ ಮತ್ತು ನನ್ನ ಪಾತ್ರ. ಅದು ಬಿಟ್ಟು ಅದರ ಹೀರೋಯಿನ್ ಯಾರು, ಎಲ್ಲಿಂದ ಕರೆ ತರುತ್ತೀರಿ ಅಂತ ಯಾರನ್ನು ಕೇಳಿಲ್ಲ. ನನ್ನ ಕೆಲಸ ಏನು, ನನ್ನ ಪಾತ್ರ ಮಾಡೋದು. ಉಳಿದಂತೆ ಆ ಕತೆಯಲ್ಲಿನ ನಾಯಕಿ ಪಾತ್ರಕ್ಕೆ ನಿರ್ದೇಶಕರು ಯಾರನ್ನೇ ನಾಯಕಿ ಆಗಿ ಆಯ್ಕೆ ಮಾಡಿಕೊಂಡರೆ ಅದು ಅವರ ನಿರ್ಧಾರ. ಇಲ್ಲೂ ಹಾಗೆಯೇ. ಆದರೆ ಅಮ್ಮನಿಗೆ ಯಾರೋ ಹೇಳಿದ್ದಂತೆ. ಅದಕ್ಕಾಗಿ ಒಂದು ಸಲಹೆ ಕೊಟ್ಟಿದ್ದರು. ಆ ಪ್ರಕಾರ ಆಡಿಷನ್ಸ್ ನಡೆಸಿ, ಪಾತ್ರಕ್ಕೆ ಸೂಕ್ತ ಆಗುತ್ತಾರೆಂದ ಮೇಲೆ ನಾಯಕಿ ಸನ ತಿಮ್ಮಯ್ಯಚಿತ್ರಕ್ಕೆ ಬಂದಿದ್ದು. ಅವರಿಗೆ ಇದು ಮೊದಲ ಸಿನಿಮಾವಾದ್ರೂ ಚೆನ್ನಾಗಿ ಅಭಿನಯಿಸಿದ್ದಾರೆ. ಅಮ್ಮನ ಭರವಸೆ ಈಡೇರಿಸಿದ್ದಾರೆನ್ನುವ ನಂಬಿಕೆ ನನಗಿದೆ.