ಧೂಳೆಬ್ಬಿಸಿದೆ 'ಒಡೆಯ' ಚಿತ್ರದ ಟ್ರೇಲರ್, ಟೀಸರ್ | ಅನ್ನದಾತನ ಧ್ವನಿಯಾಗಿದ್ದಾರೆ ದರ್ಶನ್ | ಚಿತ್ರದ ನಾಯಕಿ ಸನಾ ತಿಮ್ಮಯ್ಯ ಕನ್ನಡ ಪ್ರಭದೊಂದಿಗೆ ಮಾತನಾಡಿದ್ದಾರೆ
ದರ್ಶನ್ 'ಒಡೆಯ' ಸಿನಿಮಾ ಟ್ರೇಲರ್. ಟೀಸರ್ ಮೂಲಕ ಭಾರೀ ಗಮನ ಸೆಳೆದಿದೆ. ಈ ಚಿತ್ರದ ನಾಯಕಿ ಸನಾ ತಿಮ್ಮಯ್ಯ ಕನ್ನಡ ಪ್ರಭದೊಂದಿದೆ 'ಒಡೆಯ'ನ ಬಗ್ಗೆ ಮಾತನಾಡಿದ್ದಾರೆ.
ನಿಮ್ಮ ಮೊದಲ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿರುವ ಹೊತ್ತಿನಲ್ಲಿ ಹೇಗನಿಸುತ್ತಿದೆ?
ನಿರೀಕ್ಷೆ ಮಾಡದೆ ದಕ್ಕಿದ ಅವಕಾಶ ಇದು. ಹೊಸ ನಟಿಗೆ ದೊಡ್ಡ ನಿರ್ಮಾಣ ಸಂಸ್ಥೆ, ಸ್ಟಾರ್ ನಟ, ಅನುಭವಿ ತಂಡದ ಜತೆ ಕೆಲಸ ಮಾಡುವ ಅವಕಾಶ ಕೊಟ್ಟಸಿನಿಮಾ. ಇಷ್ಟೆಲ್ಲ ಮೊದಲ ಹಂತದಲ್ಲಿ ನೀಡಿದ ‘ಒಡೆಯ’, ನನ್ನ ಭವಿಷ್ಯವನ್ನು ರೂಪಿಸಿ ನಿರ್ಧರಿಸುವ ಸಿನಿಮಾ ಆಗಲಿದೆ ಎನ್ನುವ ನಂಬಿಕೆ ಮೂಡುತ್ತಿದೆ.
ದರ್ಶನ್ ಅವರ ತಾಯಿ ಶಿಫಾರಸ್ಸಿನ ಮೂಲಕ ನಾಯಕಿ ಆಂದ್ರಿ ಅನ್ನೋ ಮಾತಿಗೆ ಏನು ಹೇಳುತ್ತೀರಿ?
ಈ ಚಿತ್ರಕ್ಕೆ ನಾನು ಕನೆಕ್ಟ್ ಆಗಿದ್ದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಮೂಲಕವೇ. ಇದನ್ನು ನಾನೇ ಹೆಮ್ಮೆಯಿಂದ ಹೇಳಿಕೊಂಡಿರುವೆ. ಪ್ರತಿಭೆ ಇದೆ, ಒಳ್ಳೆಯ ಕಲಾವಿದೆ ಅನ್ನುವ ಕಾರಣಕ್ಕೆ ತಾನೆ ಅವರು ನನ್ನ ‘ಒಡೆಯ’ ತಂಡಕ್ಕೆ ಪರಿಚಯಿಸಿದು.
ಹಾಗಾದರೆ ನೀವು ಪ್ರತಿಭಾವಂತೆ ಅನಿಸಿದ್ದು ಯಾವಾಗ, ಯಾವ ಕಾರಣಕ್ಕೆ?
ನಾನು ಕೇವಲ ಮಾಡೆಲಿಂಗ್‌ನಿಂದ ಬಂದವಳಲ್ಲ. ರಾರಯಂಪ್ ಶೋಗಳಲ್ಲಿ ಹೆಜ್ಜೆ ಹಾಕುತ್ತಿರುವ ಹೊತ್ತಿನಲ್ಲೇ ರಂಗಭೂಮಿಯಲ್ಲೂ ಗುರುತಿಸಿಕೊಂಡಿದ್ದೆ. ನಾಟಕಗಳಲ್ಲಿ ನಟಿಸುವಾಗ ನನಗೆ ಯಾವ ರೀತಿ ಪಾತ್ರ ಕೊಟ್ಟರೂ ಅಭಿನಯಿಸುವೆ ಎನ್ನುವ ವಿಶ್ವಾಸ ಮೂಡಿಸಿತು. ನಾನು ಸಿನಿಮಾಗಳಲ್ಲಿ ನಟಿಸುವುಕ್ಕೆ ಕಾಯುತ್ತಿದ್ದಾಗ ‘ಒಡೆಯ’ ಸಿಕ್ಕಿತು.
ಒಡೆಯ ಚಿತ್ರಕ್ಕೆ ನಾಯಕಿ ಆದ ಮೇಲೆ ನಿಮ್ಮ ವೈಯಕ್ತಿಕ ಜೀವನದಲ್ಲಿ ಆದ ಬದಲಾವಣೆಗಳು?
ನಾನು ಕೂಡ ಸೆಲೆಬ್ರಿಟಿ ಅನಿಸಿಕೊಂಡಿದ್ದು. ಸೋಷಿಯಲ್ ಮೀಡಿಯಾಗಳಲ್ಲಿ ದರ್ಶನ್ ಅವರ ಅಭಿಮಾನಿಗಳು ನನಗೆ ತೋರುತ್ತಿದ್ದ ಪ್ರೀತಿ, ನಾನು ಅವರ ಚಿತ್ರದ ನಾಯಕಿ ಎಂದು ಗೊತ್ತಾದ ಮೇಲೆ ದರ್ಶನ್ ಅವರ ಅಭಿಮಾನಿಗಳೇ ನನ್ನ ಸೆಲೆಬ್ರಿಟಿಯನ್ನಾಗಿಸಿದರು. ಡಿ ಬಾಸ್ ಅಭಿಮಾನಿಗಳಿಗೆ ನಾನು ಋುಣಿ.
ಚಿತ್ರೀಕರಣದ ಅನುಭವ ಹೇಗಿತ್ತು?
ನಿಜ ಹೇಳಬೇಕು ಅಂದರೆ ಸಿನಿಮಾ ಸೆಟ್ ನನಗೆ ತೀರಾ ಹೊಸದು ಅನಿಸಿತು. ಯಾಕೆಂದರೆ ‘ಒಡೆಯ’ ಚಿತ್ರಕ್ಕೆ ಕೆಲಸ ಮಾಡುತ್ತಿದ್ದ ಎಲ್ಲರು ಅನುಭವಸ್ಥರು. ಪ್ರತಿ ದಿನ ಶೂಟಿಂಗ್‌ಗೆ ಹೋಗುವಾಗ ನನಗೆ ಹೊಸ ಮನೆಗೆ ಹೋಗುತ್ತಿದ್ದ ಅನುಭವ. ಸಿನಿಮಾ ಭಾಷೆ, ಸಿನಿಮಾ ವ್ಯವಸ್ಥೆಯನ್ನು ಹತ್ತಿರದಿಂದ ನೋಡಿ ಕಲಿತ. ಮೊದಲ ಸಿನಿಮಾ ಸೆಟ್- ಶೂಟಿಂಗ್ ನನಗೆ ಸಿನಿಮಾ ಪಾಠದಂತೆ ಇತ್ತು.
ನೀವು ಕಂಡಂತೆ ದರ್ಶನ್ ಅವರು ಹೇಗೆ?
ಒಪ್ಪಿಕೊಂಡ ಕೆಲಸವನ್ನು ಬದ್ದತೆಯಿಂದ ಮಾಡುವ, ಸಿನಿಮಾವನ್ನು ಅತ್ಯಂತ ಅಪಾರವಾಗಿ ಪ್ರೀತಿಸುವ ಮತ್ತು ಕೆಲಸದ ಬಗ್ಗೆ ಶ್ರದ್ದೆ ಇದ್ದವರು ಹೇಗಿರುತ್ತಾರೆ ಎಂಬುದಕ್ಕೆ ನಾನು ದರ್ಶನ್ ಅವರನ್ನು ತೋರಿಸಬಹುದು. ಶೂಟಿಂಗ್ ಮುಗಿಯುವ ಮುನ್ನವೇ ಅವರಿಗೆ ಆ್ಯಕ್ಸಿಡೆಂಟ್ ಆಗಿದ್ದು ಎಲ್ಲರಿಗೂ ಗೊತ್ತಿದೆ. ಆ ಘಟನೆ ನಂತರ ಚಿತ್ರೀಕರಣಕ್ಕೆ ಬಂದವರು ಆ ನೋವನ್ನು ಎಲ್ಲೂ ತೋರಿಸಿಕೊಳ್ಳಲಿಲ್ಲ. ಎಷ್ಟು ಎನರ್ಜಿಯಿಂದ ಕೆಲಸ ಮಾಡಿದರೂ ಎಂದರೆ ನಮಗೆಲ್ಲ ಸ್ಫೂರ್ತಿಯಾಗಿ ನಿಂತರು.
ಈ ನಡುವೆ ನಿಮ್ಮ ಹೆಸರು ಯಾಕೆ ಬದಲಾಗಿದ್ದು?
ರಾಗವಿ ಎನ್ನುವ ಹೆಸರಿನಲ್ಲೇ ನಾನು ಚಿತ್ರರಂಗಕ್ಕೆ ಬಂದೆ. ಆದರೆ, ಮೊದಲ ಸಿನಿಮಾ, ಜತೆಗೆ ಒಂದಿಷ್ಟುನಂಬಿಕೆಗಳ ಕಾರಣಕ್ಕೆ ಹೆಸರು ಬದಲಾಯಿಸಿಕೊಂಡೆ. ನ್ಯೂಮರಾಲಜಿ ಪ್ರಕಾರ ಸನ ತಿಮ್ಮಯ್ಯ ಎನ್ನುವ ಹೆಸರಿನಿಂದ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದೇನೆ.