ಅಮೆರಿಕದ ಪ್ರತಿಷ್ಠಿತ ಸ್ಕ್ರಿಪ್ಸ್ ಸ್ಪೆಲ್‌ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಪಾರುಪತ್ಯ ಮುಂದುವರೆದಿದ್ದು, 2023ನೇ ಸಾಲಿನ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕ ಪೌರ, 7ನೇ ತರಗತಿ ವಿದ್ಯಾರ್ಥಿ ಬರಹತ್ ಸೋಮಾ (12) ಗೆಲುವು ಸಾಧಿಸಿದ್ದಾನೆ.
ವಾಷಿಂಗ್ಟನ್: ಅಮೆರಿಕದ ಪ್ರತಿಷ್ಠಿತ ಸ್ಕ್ರಿಪ್ಸ್ ಸ್ಪೆಲ್‌ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಪಾರುಪತ್ಯ ಮುಂದುವರೆದಿದ್ದು, 2023ನೇ ಸಾಲಿನ ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕ ಪೌರ, 7ನೇ ತರಗತಿ ವಿದ್ಯಾರ್ಥಿ ಬೃಹತ್ ಸೋಮಾ (12) ಗೆಲುವು ಸಾಧಿಸಿದ್ದಾನೆ.
ಸೋಮಾ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ 250 ಕೋಟಿ ರು. ನಗದು (50 ಸಾವಿರ ಡಾಲರ್) ಮತ್ತು ಆಕರ್ಷಕ ಟ್ರೋಫಿಯನ್ನು ಬಹುಮಾನವಾಗಿ ಪಡೆದಿದ್ದಾನೆ. ಅಂತಿಮ ಸುತ್ತಿನ ಟೈಬ್ರೇಕರ್‌ನಲ್ಲಿ ಸೋಮಾ 90 ಸೆಕೆಂಡ್‌ನಲ್ಲಿ 29 ಪದಗಳಿಗೆ ಸರಿಯಾದ ಸ್ಪೆಲ್ಲಿಂಗ್ ಹೇಳುವ ಮೂಲಕ ತನ್ನ ಪ್ರತಿಸ್ಪರ್ಧಿಯನ್ನು ಸೋಲಿಸಿದನು. ಎರಡನೇ ಸ್ಥಾನ ಗಳಿಸಿದ ಫೈಜಾ಼ನ್ ಟೈ ಬ್ರೇಕರ್ ಸುತ್ತಿನಲ್ಲಿ ಕೇವಲ 20 ಪದಗಳಿಗೆ ಮಾತ್ರ ಸರಿಯಾದ ಸ್ಪೆಲ್ಲಿಂಗ್ ಹೇಳಲು ಸಾಧ್ಯವಾಯಿತು.
undefined
ಸ್ವಿಟ್ಜರ್‌ಲೆಂಡ್ ಹೋಗೋಕೆ ಇಷ್ಟು ಕಡಿಮೆ ದುಡ್ಡು ಸಾಕಾ, ಅತೀ ಕಡಿಮೆ ಖರ್ಚಲ್ಲಿ 25 ನಗರ ಸುತ್ತಾಡಿದ ಕುಟುಂಬ!
ಇದರೊಂದಿಗೆ 99 ವರ್ಷಗಳ ಇತಿಹಾಸವಿರುವ ಸ್ಪರ್ಧೆಯಲ್ಲಿ 29 ಬಾರಿ ಭಾರತೀಯ ಮೂಲದ ವಿದ್ಯಾರ್ಥಿಗಳೇ ಗೆಲುವು ಸಾಧಿಸಿದಂತಾಗಿದೆ.
ಬಹುಮುಖ ಪ್ರತಿಭೆಯಾಗಿರುವ ಬೃಹತ್ ಹೆಸರಿಗೆ ತಕ್ಕಂತೆ ಅನೇಕ ಆಸಕ್ತಿಗಳು ಮತ್ತು ಹವ್ಯಾಸಗಳನ್ನು ಹೊಂದಿದ್ದಾನೆ. ಬ್ಯಾಸ್ಕೆಟ್‌ಬಾಲ್ ನೆಚ್ಚಿನ ಕ್ರೀಡೆಯಾಗಿದೆ ಇದರ ಜೊತೆಗೆ ಪಿಂಗ್ ಪಾಂಗ್ ಆಡಲು ಇಷ್ಟಪಡುತ್ತಾನೆ. ಬಾಲಕನ ಫೇವರಿಟ್ ಆಟಗಾರ ಲೆಬ್ರಾನ್ ಜೇಮ್ಸ್ ಆಗಿದ್ದಾರೆ. ಇದು ಕ್ರೀಡೆಗಳ ಬಗ್ಗೆ ಬಾಲಕ ಉತ್ಸಾಹವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇಷ್ಟೇ ಅಲ್ಲದೇ ಬಾಲಕ ಬೃಹತ್ ತಮ್ಮ ಶಾಲಾ ಬ್ಯಾಂಡ್‌ನಲ್ಲಿ ಸ್ನೇರ್ ಡ್ರಮ್ ನುಡಿಸುವ ಮೂಲಕ ಸಂಗೀತದ ಆಸಕ್ತಿ ಇರುವುದನ್ನ ತೋರಿಸಿದ್ದಾರೆ. ಇನ್ನು ಕೈಗೆ ಸಿಕ್ಕುವ ಯಾವುದೇ ಪುಸ್ತಕವನ್ನು ಓದಿಮುಗಿಸದೇ ಬಿಡುವುದಿಲ್ಲ. ಓದುವುದರಲ್ಲೂ ವಿಪರೀತ ಆಸಕ್ತಿ ಹೊಂದಿದ್ದಾನೆ.
ಜಿಮ್ನಾಸ್ಟಿಕ್‌ನಲ್ಲಿ ದೀಪಾ ಕರ್ಮಾಕರ್ ಏಷ್ಯನ್ ಚಾಂಪಿಯನ್; ಈ ಸಾಧನೆ ಮಾಡಿದ ಮೊದಲ ಭಾರತೀಯ ಪಟು!
ಕಾರ್ಯಕರ್ತಮದಲ್ಲಿ ಭಾಗಿಯಾಗಿದ್ದ ಬಾಲಕನ ತಂದೆ ತಾಯಿ ಮಗನ ಸಾಧನೆ ಕಂಡು ಹೆಮ್ಮೆ ಪಟ್ಟಿದ್ದಾರೆ. 'ನನ್ನ ಮಗನಿಗೆ ತೀಕ್ಷ್ಮವಾದ ಜ್ಞಾಪಕ ಶಕ್ತಿಯಿದೆ ಅವನು ಭಗವದ್ಗೀತೆಯ ಶೇ.80ರಷ್ಟು ಕಂಠಪಾಠ ಮಾಡಿದ್ದಾನೆ' ಎಂದು ಹೇಳಿದ್ದಾರೆ. ಇದು ಬಾಲಕನ ಉನ್ನತ ಐಕ್ಯೂ ಮಟ್ಟವನ್ನು ತೋರಿಸುತ್ತದೆ.