'ನಮ್ಮ ತೆರಿಗೆ ನಮ್ಮ ಹಕ್ಕು..' ಎಂದ ಟ್ರಂಪ್‌; ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಸಾಲು ಸಾಲು ವಿವಾದಾತ್ಮಕ ನಿರ್ಧಾರಕ್ಕೆ ಸಹಿ!

Published : Jan 21, 2025, 10:22 AM IST
'ನಮ್ಮ ತೆರಿಗೆ ನಮ್ಮ ಹಕ್ಕು..' ಎಂದ ಟ್ರಂಪ್‌;  ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಸಾಲು ಸಾಲು ವಿವಾದಾತ್ಮಕ ನಿರ್ಧಾರಕ್ಕೆ ಸಹಿ!

ಸಾರಾಂಶ

ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹಲವು ವಿವಾದಾತ್ಮಕ ನಿರ್ಧಾರಗಳನ್ನು ಕೈಗೊಂಡರು. ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವುದು, ಕ್ಯಾಪಿಟಲ್ ಗಲಭೆಕೋರರಿಗೆ ಕ್ಷಮಾದಾನ, ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಹಿಂದೆ ಸರಿಯುವುದು ಮತ್ತು ಕ್ಯೂಬಾವನ್ನು ಭಯೋತ್ಪಾದನೆ ಪ್ರಾಯೋಜಕ ರಾಷ್ಟ್ರಗಳ ಪಟ್ಟಿಗೆ ಮರು ಸೇರ್ಪಡೆ ಪ್ರಮುಖ ನಿರ್ಧಾರಗಳಾಗಿವೆ.

ನವದೆಹಲಿ (ಜ.21): ಎರಡು ಬಾರಿ ಮಹಾಭಿಯೋಗದಿಂದ ಪಾರಾಗಿ, ಕ್ರಿಮಿನಲ್‌ ವಂಚನೆ ಕೇಸ್‌ಗಳನ್ನು ಎದುರಿಸಿ ಕೊನೆಗೆ ಎರಡು ಬಾರಿ ಹತ್ಯೆಯ ಪ್ರಯತ್ನಗಳ ಎದರೂ ದಿಟ್ಟವಾಗಿ ನಿಂತಿದ್ದ ಡೊನಾಲ್ಡ್‌ ಟ್ರಂಪ್‌ ಸೋಮವಾರ ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ವಾಷಿಂಗ್ಟನ್‌ನಲ್ಲಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲಿಯೇ ದೇಶದ ಸಂಸ್ಥೆಗಳನ್ನು ಪುನರ್‌ನವೀಕರಣ ಮಾಡುವ ಕ್ರಮಗಳಿಗೆ ಕೈಹಾಕಿದ್ದಾರೆ. ಅತಿಯಾದ ಶೀತವಾತಾವರಣ ಇದ್ದ ಕಾರಣಕ್ಕೆ ಟ್ರಂಪ್‌ ಪದಗ್ರಹಣ ಸಮಾರಂಭ ಒಳಾಂಗಣದಲ್ಲಿ ನಡೆದಿತ್ತು. ಪದಗ್ರಹಣ ಸಮಾರಂಭದ ಬಳಿಕ ಕ್ಯಾಪಿಟಲ್‌ ಒನ್ ಏರಿಯಾದಲ್ಲಿ ಒಂದು ಸುತ್ತು ಹಾಕಿದ ಟ್ರಂಪ್‌, ಬಳಿಕ ಕೆಲವೊಂದು ಅಧಿಕೃತ ಆದೇಶಗಳಿಗೆ ಸಹಿ ಹಾಕಿದರು. 2021ರ ಜನವರಿ 6 ರಂದು ಅಮೆರಿಕದ ಕ್ಯಾಪಿಟಲ್‌ಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದ ತಮ್ಮ ಬೆಂಬಲಿಗರಿಗೆ ಕ್ಷಮಾದಾನವನ್ನೂ ನೀಡುವ ಆದೇಶಕ್ಕೆ ಸಹಿ ಹಾಕಿದರು.

ಮೊದಲ ದಿನದಂದು ಟ್ರಂಪ್ ತೆಗೆದುಕೊಂಡ ಅತ್ಯಂತ ವಿವಾದಾತ್ಮಕ ನಿರ್ಧಾರಗಳು
ವಿಶ್ವ ಆರೋಗ್ಯ ಸಂಸ್ಥೆಗೆ ಗುಡ್‌ಬೈ:
COVID-19 ಸಾಂಕ್ರಾಮಿಕ ರೋಗ ಮತ್ತು ಇತರ ಅಂತರರಾಷ್ಟ್ರೀಯ ಆರೋಗ್ಯ ಬಿಕ್ಕಟ್ಟುಗಳನ್ನು ಜಾಗತಿಕ ಆರೋಗ್ಯ ಸಂಸ್ಥೆಯು ಸರಿಯಾಗಿ ನಿರ್ವಹಿಸಿಲ್ಲ ಎಂದು ಟೀಕಿಸಿ, ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಹೊರಬರುವುದಾಗಿ ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದರು. "WHO ಸದಸ್ಯ ರಾಷ್ಟ್ರಗಳ ಅನುಚಿತ ರಾಜಕೀಯ ಪ್ರಭಾವ" ದಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ವಿಫಲವಾಗಿದೆ. ಅಮೆರಿಕ ವಾರ್ಷಿಕವಾಗಿ ವಿಶ್ವ ಆರೋಗ್ಯ ಸಂಸ್ಥೆಗೆ 500 ಮಿಲಿಯನ್‌ ಡಾಲರ್‌ ನೀಡುತ್ತದೆ. ಆದರೆ, 140 ಕೋಟಿ ಜನಸಂಖ್ಯೆ ಇರುವ ಚೀನಾ ಬರೀ 39 ಮಿಲಿಯನ್‌ ಡಾಲರ್‌ ನೀಡುತ್ತಿರುವುದು ಅನ್ಯಾಯ ಎಂದುಸ ಟ್ರಂಪ್‌ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ನಮ್ಮನ್ನು ಕಿತ್ತುತಿಂದಿದೆ. ಎಲ್ಲರೂ ಅಮೆರಿಕವನ್ನು ಕಿತ್ತು ತಿನ್ನುತ್ತಿದ್ದಾರೆ. ಇನ್ನು ಮುಂದೆ ಇದಾಗೋದಿಲ್ಲ ಎಂದು ಆದೇಶಕ್ಕೆ ಸಹಿ ಹಾಕುವ ಮುನ್ನ ಟ್ರಂಪ್‌ ಹೇಳಿದ್ದಾರೆ.

ಗಲಭೆಕೋರರಿಗೆ ಕ್ಷಮಾದಾನ: 2020ರ ಚುನಾವಣಾ ಫಲಿತಾಂಶವನ್ನು ರದ್ದು ಮಾಡುವಂತೆ ಟ್ರಂಪ್‌ ಬೆಂಬಲಿಗರು 2021ರ ಜನವರಿ 6 ರಂದು ಕ್ಯಾಪಿಟಲ್‌ ಮೇಲೆ ದಾಳಿ ಮಾಡಿದ್ದರು. ಇದರಲ್ಲಿ ತಮ್ಮ 1500 ಬೆಂಬಲಿಗರಿಗೆ ಅವರು ಕ್ಷಮಾದಾನವನ್ನು ನೀಡುವ ಆದೇಶಕ್ಕೆ ಸಹಿ ಹಾಕಿದ್ದಾರೆ.

ಅಮೆರಿಕದ 47ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣವಚನ, ಆಡಳಿತದ ಮೊದಲ ದಿನವೇ ದಾಖಲೆ

ಪ್ಯಾರಿಸ್ ಹವಾಮಾನ ಒಪ್ಪಂದ: ಪ್ಯಾರಿಸ್ ಹವಾಮಾನ ಒಪ್ಪಂದದಲ್ಲಿ ಅಮೆರಿಕ ಇರೋದಿಲ್ಲ ಎನ್ನುವ ಆದೇಶಕ್ಕೂ ಟ್ರಂಪ್‌ ಸಹಿ ಹಾಕಿದ್ದಾರೆ. ಆ ಮೂಲಕ ತಮ್ಮ ಮೊದಲ ಅವಧಿಯ ಕ್ರಮವನ್ನೇ ಪುನರಾವರ್ತಿಸಿದರು. ವಿಶ್ವಾದ್ಯಂತ ಹವಾಮಾನ ವೈಪರೀತ್ಯಗಳು ಹೆಚ್ಚುತ್ತಿರುವಾಗ, ಹವಾಮಾನ ಬದಲಾವಣೆಯನ್ನು ಪರಿಹರಿಸುವ ಜಾಗತಿಕ ಪ್ರಯತ್ನಗಳ ವಿರುದ್ಧ ಅವರ ಪ್ರತಿಭಟನೆಯ ನಿಲುವನ್ನು ಈ ಕ್ರಮವು ಮತ್ತಷ್ಟು ಒತ್ತಿಹೇಳುತ್ತದೆ ಎಂದು AFP ವರದಿ ಮಾಡಿದೆ.

ಅಮೆರಿಕದಲ್ಲಿ ಕಾಂಚಿಪುರಂ ಸೀರೆಯುಟ್ಟು ಭಾರತದ ಸಂಪ್ರದಾಯ ಮೆರೆಸಿದ ನೀತಾ ಅಂಬಾನಿ!

ಕ್ಯೂಬಾ: ಭಯೋತ್ಪಾದನೆಯನ್ನು ಪ್ರಾಯೋಜಿಸುವ ರಾಷ್ಟ್ರಗಳ ಕಪ್ಪುಪಟ್ಟಿಯಿಂದ ಕ್ಯೂಬಾವನ್ನು ತೆಗೆದುಹಾಕುವ ಜೋ ಬಿಡೆನ್ ಅವರ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ರದ್ದುಗೊಳಿಸಿದರು, ಕೈದಿಗಳನ್ನು ಮುಕ್ತಗೊಳಿಸುವ ಒಪ್ಪಂದದ ಭಾಗವಾಗಿ ಕೆಲವೇ ದಿನಗಳ ಹಿಂದೆ ಈ ಕ್ರಮವನ್ನು ಘೋಷಿಸಲಾಯಿತು. ಕ್ಯೂಬಾದ ಅಧ್ಯಕ್ಷ ಮಿಗುಯೆಲ್ ಡಯಾಜ್-ಕ್ಯಾನೆಲ್, ಕೆರಿಬಿಯನ್ ರಾಷ್ಟ್ರವನ್ನು ಮತ್ತೆ ಅಮೆರಿಕದ ಭಯೋತ್ಪಾದನಾ ಪ್ರಾಯೋಜಕರ ಪಟ್ಟಿಗೆ ಸೇರಿಸಿದ್ದಕ್ಕಾಗಿ ಹೊಸದಾಗಿ ಅಧಿಕಾರ ವಹಿಸಿಕೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಟೀಕಿಸಿದ್ದಾರೆ, ಇದು "ದುರಹಂಕಾರ ಮತ್ತು ಸತ್ಯದ ನಿರ್ಲಕ್ಷ್ಯದ ಕೃತ್ಯ" ಎಂದು ಕರೆದಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು