ಚೆನ್ನಾಗಿ ಆಡಿಯೂ ದುನಿಯಾ ರಶ್ಮಿ ಬಿಗ್ ಬಾಸ್‌ನಿಂದ ಔಟ್ ಆಗಿದ್ಯಾಕೆ?

By Kannadaprabha News  |  First Published Nov 6, 2019, 12:04 PM IST

ಬಿಗ್ ಬಾಸ್ ಮನೆಯಿಂದ ಮೂರು ವಾರಕ್ಕೆ ದುನಿಯಾ ರಶ್ಮಿ ಔಟ್ |  ಬಿಗ್ ಬಾಸ್ ಮನೆಯ ಟಫ್ ಕಂಟೆಸ್ಟಂಟ್ ಎಂದು ಪರಿಗಣಿಸಲಾಗಿತ್ತು | BB7 ಮನೆಯ ಅನುಭವಗಳನ್ನು ಹಂಚಿಕೊಂಡ ದುನಿಯಾ ರಶ್ಮಿ 


ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ದಿನೇ ದಿನೆ ಕುತೂಹಲ ಹುಟ್ಟಿಸುತ್ತಿದೆ. ಈಗಾಗಲೇ ಮೂರು ವಾರ ಸರಿದಿವೆ. ಬಿಗ್‌ಬಾಸ್ ಮನೆಯಿಂದ ಈಗ ನಟಿ ದುನಿಯಾ ರಶ್ಮಿ ಔಟ್ ಆಗಿದ್ದಾರೆ. ರಶ್ಮಿ ಜತೆಗೆ ಮಾತುಕತೆ.

- ಇಷ್ಟು ಬೇಗ ಯಾಕೆ ಔಟ್ ಆದ್ರಿ?

Tap to resize

Latest Videos

undefined

ಇದು ನಂಗೂ ಆಶ್ಚರ್ಯ. ಯಾಕೆ ಅಂತ ಗೊತ್ತಾಗುತ್ತಿಲ್ಲ. ಪ್ರತಿಯೊಂದು ಟಾಸ್ಕ್‌ನಲ್ಲೂ ಚೆನ್ನಾಗಿಯೇ ಆಡಿದ್ದೆ. ಎಲ್ಲರ ಜತೆಗೂ ಚೆನ್ನಾಗಿದ್ದೆ. ಕೆಲವರು ಮಾತ್ರ ನನ್ನ ವೈರಿ ರೀತಿ ನೋಡುತ್ತಿದ್ರು. ಆದ್ರೂ ಟಾಸ್ಕ್ ಅಂತ ಬಂದಾಗ ಅವರ ಜತೆಗೂ ಫ್ರೆಂಡ್ಲಿ ಆಗಿಯೇ ಇರುತ್ತಿದ್ದೆ. ಆದ್ರೂ ಯಾಕೆ ಬಂದೆ ಅನ್ನೋದೇ ಯಕ್ಷ ಪ್ರಶ್ನೆ. ಅಲ್ಲಿನ ನಮ್ಮ ಆ್ಯಕ್ಟಿವಿಟಿಗಳು ಸರಿಯಾಗಿ ಟೆಲಿಕಾಸ್ಟ್ ಆಗಿದ್ದರೆ ನಾನು ಎಲಿಮಿನೇಟ್ ಆಗ್ತಿರಲಿಲ್ಲ ಅಂತೆನಿಸುತ್ತಿದೆ.

ಇದೇನಿದು.. ಬಿಗ್ ಬಾಸ್ ಮನೆಯಲ್ಲಿ ಚಂದನಾಳ ಕೆನ್ನೆಗೆ ಕಿಶನ್ ಕಿಸ್!

- ಅದು ಸರಿ, ಮೂರು ವಾರಗಳ ಅಲ್ಲಿನ ಅನುಭವ ಹೇಗಿತ್ತು?

ಆರಂಭದಲ್ಲಿ ಹೊಸ ಪ್ರಪಂಚ ಅಂತೆನಿಸಿತು. ಮೊಬೈಲ್ ಇಲ್ಲದೆ ಇರೋದಿಕ್ಕೆ ಕಷ್ಟ ಅಂತೆನಿಸಿತ್ತು. ಕ್ರಮೇಣ ಅಲ್ಲಿರೋದೇ ಖುಷಿ ಎನಿಸಿತು.ಆರಂಭದಲ್ಲಿ ್ಲ ಒಂಥರ ಫ್ಯಾಮಿಲಿ ವಾತಾವರಣ ಇತ್ತು. ಆಮೇಲೆ ಶುರುವಾಯಿತು ಕೆಲವರ ಆಟ. ಇದೆಲ್ಲ ಟಾಸ್ಕ್ ಇರಬೇಕು ಅಂತ ಸಮ್ಮನಿರುತ್ತಿದ್ದೆವು.

- ಆಟ ಆಡ್ಲಿಕ್ಕೆ ಹೋದ್ಮೇಲೆ ನಾವು ನಾವಾಗಿರಲು ಸಾಧ್ಯವಾ?

ಹಾಗಂತ ಮುಖವಾಡ ಹಾಕಿಕೊಂಡು ಇರ್ಲಿಕ್ಕೆ ಆಗುತ್ತಾ? ನನ್ನ ಮಟ್ಟಿಗೆ ಅದೆಲ್ಲ ಕಷ್ಟ. ನಾನು ಇರೋದೇ ಹಾಗೆ. ಆದ್ರೂ, ಕೆಲವರು ಆಟ ಆಡ್ಲಿಕ್ಕೂ ನಿರ್ಲಕ್ಷ್ಯ ವಹಿಸಿದವರಿದ್ದರು.ಅವರೆಲ್ಲ ಅಲ್ಲಿರೋದೇ ಮುಖವಾಡ ಹಾಕಿಕೊಂಡು. ಅವರಿಗೆ ವಾಸ್ತವ ಏನು ಅಂತ ಅರಿವಾಗುವುದು ಹೊರಗೆ ಬಂದ ಮೇಲೆ.

- ಬಿಗ್‌ಬಾಸ್ ಮನೆಗೆ ಹೋಗಿ ನೀವು ಕಲಿತಿದ್ದು ಏನನ್ನು?

ಆ ಮನೆ ಸಾಕಷ್ಟು ವಿಷಯಗಳನ್ನು ಕಲಿಸಿಕೊಟ್ಟಿದೆ. ಜನರ ಜತೆ ಹೇಗಿರಬೇಕು ಎನ್ನುವುದು ಅದರಲ್ಲಿ ಮುಖ್ಯವಾದದ್ದು. ನಾನು ತುಂಬಾ ಎಮೋಷನಲ್ ಹುಡುಗಿ. ಎಲ್ಲರನ್ನು ಆತ್ಮೀಯವಾಗಿಯೇ ನೋಡುತ್ತೇನೆ. ಪರಿಚಿತರನ್ನು ಒಮ್ಮೆ ಹಚ್ಚಿಕೊಂಡ್ರೆ ಮರೆಯೋದಿಕ್ಕೆ ಕಷ್ಟ. ಅಲ್ಲಿ ಮೂವರ ಜತೆಗೆ ತುಂಬ ಕ್ಲೋಸ್ ಆಗಿದ್ದೆ. ಅವರನ್ನು ಉಳಿಸೊಣ ಅಂದುಕೊಳ್ಳುತ್ತಿದ್ದೆ. ಆದ್ರೆ ಅವರೇ ನನ್ನನ್ನು ನಾಮಿನೇಟ್ ಮಾಡಿಬಿಟ್ಟರು. ಆಗ ಅನಿಸಿದ್ದು ಜನ್ರು ಹೀಗೆಲ್ಲ ಇರ್ತಾರಾ ಅಂತ.

BB7: ಮೊದಲ ದಿನವೇ ವೈಲ್ಡ್ ಕಾರ್ಡ್ ಸ್ಪರ್ಧಿ ಪೃಥ್ವಿ ಬಕ್ರ!

- ಬಿಗ್‌ಬಾಸ್ ಜರ್ನಿಯಿಂದ ನಿಮ್ಮ ಸಿನಿಮಾ ಕರಿಯರ್‌ಗೆ ಅನುಕೂಲ ಆಗಬಹುದಾ?

ಖಂಡಿವಾಗಿಯೂ ಹೌದು. ಈಗಾಗಲೇ ನನ್ನ ಫ್ಯಾನ್ಸ್ ಪೇಜ್ ಹೆಚ್ಚಾಗಿದೆ. ಆ ಪೇಜ್‌ಗಳಲ್ಲಿ ಸಾಕಷ್ಟು ಲೈಕ್ಸ್, ಕಮೆಂಟ್ ಬಂದಿವೆ. ಆ ಸಂಖ್ಯೆ ಪ್ರತಿಕ್ರಿಯಿಸಲು ಆಗದಷ್ಟಿದೆ. ಇದೆಲ್ಲ ಒಳ್ಳೆಯದೇ ಅಲ್ವಾ?

- ಬಿಗ್‌ಬಾಸ್ ವಿನ್ನರ್ ಆಗಬಹುದಾದ ಕಂಟೆಸ್ಟೆಂಟ್ ಯಾರು?

ನಾನು ಕಂಡಂತೆ ಕಿಶನ್ ಹಾಗೂ ಹರೀಶ್ ರಾಜ್ ತುಂಬಾ ಜಾಣ್ಮೆಯಿಂದ ಆಟವಾಡುತ್ತಿದ್ದಾರೆ. ಅವರು ಹಾಗೆಯೇ ಆಡಲಿ ಎನ್ನುವುದು ನನ್ನ ಹಾರೈಕೆ. ಮುಂದಿನ ಟಾಸ್ಕ್‌ಗಳಲ್ಲಿ ಯಾರು ಹೇಗಿರುತ್ತಾರೋ ಗೊತ್ತಿಲ್ಲ.

- ಎಲಿಮಿನೇಟ್ ಆಗುವವರು ನೀವೇ ಅಂದಾಗ ಹೇಗನಿಸಿತು?

ನಿಜಕ್ಕೂ ಶಾಕ್ ಆದೆ. ಒಂದು ಕ್ಷಣ ಏನು ತಿಳಿದಂತಾಯಿತು. ಯಾಕಂದ್ರೆ ಈ ಸಲ ನಾನೇ ಎಲಿಮಿನೇಟ್ ಆಗ್ತೀನಿ ಅಂತ ಭಾವಿಸಿರಲಿಲ್ಲ. ನಾಮಿನೇಷನ್ ಆದ ಐವರ ಪೈಕಿ ಚಂದನ್ ಆಚಾರ್ಯ ಗ್ಯಾರಂಟಿ ಹೊರ ಹೋಗ್ತಾರೆ ಅಂತಂದುಕೊಂಡಿದ್ದೆ. ಯಾಕಂದ್ರೆ, ಪ್ರತಿಸಲವೂ ಅವರು ನಾಮಿನೇಷನ್ ಆಗುತ್ತಿದ್ದರು. ಅವರು ಬರೀ ನಾಟಕ ಆಡುತ್ತಿದ್ದರೇ ಹೊರತು ಟಾಸ್ಕ್ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಿರಲಿಲ್ಲ. ಆದ್ರೆ ಅಲ್ಲಿ ಆಗಿದ್ದೆ ಬೇರೆ. ಒಂದು ಕ್ಷಣ ಬೇಸರ ಆಯಿತು. 

- ದೇಶಾದ್ರಿ ಹೊಸ್ಮನೆ 

click me!