ಜನ ಮೆಚ್ಚುವ ಪಾತ್ರ ಮಾಡುವಾಸೆ: ಬಿಂದುಶ್ರೀ

Kannadaprabha News   | Asianet News
Published : Jan 25, 2021, 09:24 AM IST
ಜನ ಮೆಚ್ಚುವ ಪಾತ್ರ ಮಾಡುವಾಸೆ: ಬಿಂದುಶ್ರೀ

ಸಾರಾಂಶ

ಬಾಲ ನಟಿಯಿಂದ ನಾಯಕ ನಟಿ ಆದ ಬಿಂದುಶ್ರೀ ಸಂದರ್ಶನ

ಆರ್‌ ಕೇಶವಮೂರ್ತಿ

ನಿಮ್ಮ ನಟನೆಯ ಹೆಜ್ಜೆಗಳು ಶುರುವಾಗಿದ್ದು ಎಲ್ಲಿಂದ?

ಯುಕೆಜಿಗೆ ನಾನು ಟ್ಯೂಷನ್‌ಗೆ ಹೋಗುವಾಗಲೇ ಸಿನಿಮಾ ನಂಟು ಶುರುವಾಯಿತು. ಅಲ್ಲಿ ನಮಗೆ ಟ್ಯೂಷನ್‌ ಮಾಡುತ್ತಿದ್ದ ಮೇಡಮ್‌ ಅವರ ತಾಯಿಗೆ ಸಿನಿಮಾದವರ ಪರಿಚಯ ಇತ್ತು. ಆಗ ನಾನು ಅವರಿಗೆ ಕಂಡು ಬಾಲ ನಟಿಯಾದೆ. ಅಲ್ಲಿಂದ ಬಾಲನಟಿಯಾಗಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದೇನೆ.

ಚಿತ್ರ ವಿಮರ್ಶೆ: ಲಡ್ಡು 

ತೆರೆ ಮೇಲೆ ಕಾಣಿಸಿಕೊಂಡ ಮೊದಲ ಸಿನಿಮಾ ಯಾವುದು?

ಸಾಯಿಕುಮಾರ್‌ ಅವರ ‘ಅಗ್ನಿ ಐಪಿಎಸ್‌’. ಆ ನಂತರ ರಮೇಶ್‌ ಅರವಿಂದ್‌ ಹಾಗೂ ಅನುಪ್ರಭಾಕರ್‌ ಅವರ ನಟನೆಯ ‘ಶ್ರೀರಸ್ತು ಶುಭಮಸ್ತು’ ಚಿತ್ರದಲ್ಲಿ ಅನುಪ್ರಪಭಾಕರ್‌ ಅವರಿಗೆ ಬಾಲ ನಟಿಯಾಗಿ ಕಾಣಿಸಿಕೊಂಡಿರುವುದು ನಾನೇ. ಬಿ ಸಿ ಪಾಟೀಲ್‌ ಅವರ ‘ಶಿವಪ್ಪ ನಾಯಕ’, ರವಿಚಂದ್ರನ್‌ ಅವರ ಜತೆ ‘ಪ್ರೀತ್ಸೋದ್‌ ತಪ್ಪಾ...?’ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿರುವೆ. ಇದರ ಜತೆಗೆ ‘ಗೌತಮಿ’, ‘ಕಪಿಚೇಷ್ಟೆ’ ಧಾರಾವಾಹಿಗಳಲ್ಲಿ ನಟಿಸಿದ್ದೇನೆ.

ಚಿತ್ರರಂಗದಿಂದ ದೂರವಾಗಿ ಮತ್ತೆ ಬಂದಿದ್ದಾ?

7ನೇ ತರಗತಿವರೆಗೂ ನಟನೆ ಮಾಡಿದೆ. ನಂತರ ಓದಿನ ಕಡೆ ಹೆಚ್ಚು ಗಮನ ಕೊಟ್ಟೆ. ಬಿಇ ಸಿವಿಲ್‌ ಇಂಜಿನಿಯರಿಂಗ್‌ ಮುಗಿಸಿ, ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಆಗಲೇ ನನಗೆ ‘ಮಹಿಷಾಸುರ’ ಚಿತ್ರದಲ್ಲಿ ನಾಯಕಿ ಆಗುವ ಅವಕಾಶ ಬಂತು. ಉದ್ಯೋಗ ಬಿಟ್ಟು ನಟನೆ ಕಡೆ ಮತ್ತೆ ಬಂದೆ.

ಉದ್ಯೋಗ ಬಿಟ್ಟು ನಟನೆ ಮರಳುವಷ್ಟುವಿಶ್ವಾಸ ಮೂಡಿದ್ದು ಹೇಗೆ?

ನಾನು ಇಂಜಿನಿಯರಿಂಗ್‌ ಓದಬೇಕು ಎಂಬುದು ಅಪ್ಪನ ಆಸೆ. ಸಿನಿಮಾ ನಟಿಯಾಗಬೇಕು ಎಂಬುದು ನನ್ನ ತಾಯಿಯ ಆಸೆ. ನನಗೂ ನಟನೆ ಮೇಲೆ ಆಸಕ್ತಿ ಇತ್ತು. ಆದರೆ, ನಾನು ಸಿನಿಮಾದಲ್ಲಿ ನಾಯಕಿ ಆಗುವ ಮೊದಲೇ ಅಮ್ಮ ತೀರಿಕೊಂಡರು. ಆ ನೋವು ಇದೆ.

ಎಲ್ಲಿದ್ದೆ ಇಷ್ಟುವರ್ಷ ಅಂದಿದ್ರು ರಿಷಬ್‌, ಕಣ್ತುಂಬಿ ಬಂತು : ಗಾನವಿ ಲಕ್ಷ್ಮಣ್‌ 

ನಿಮ್ಮ ಮುಂದಿನ ಚಿತ್ರಗಳು ಯಾವುವು?

ಹಾಸ್ಯ ಸಿನಿಮಾ ‘ಲಡ್ಡು ’ ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಜ್ಜಾಗಿದೆ. ರಮಾನಂದ ನಿರ್ದೇಶನ, ಮೇಘನಾ ನಿರ್ಮಾಪಕರು. ಮಿ ಆಂಡ್‌ ಮಿಸಸ್‌ ಜಾನು ಚಿತ್ರ ಮೊದಲ ಹಂತದ ಶೂಟಿಂಗ್‌ ಮುಗಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು