ಬಾಡಿ ಬೆಳೆಸಲು ಡ್ರಗ್ಸ್‌ ಮೊರೆ ಹೋದವರಿದ್ದಾರೆ: ರಘು ರಾಮಪ್ಪ

By Suvarna News  |  First Published Aug 31, 2020, 12:35 PM IST

ರಘು ರಾಮಪ್ಪ ಕನ್ನಡದ ಯುವನಟರಲ್ಲಿ ಒಬ್ಬರು. ರಾಜ್ಯಮಟ್ಟದ ಫಿಟ್ನೆಸ್ ಸಲಹೆಗಾರರಾಗಿ ಗುರುತಿಸಲ್ಪಟ್ಟಿರುವ ಇವರೊಡನೆ ತಾರೆಯರ ಫಿಟ್ನೆಸ್ ಮತ್ತು ಡ್ರಗ್ಸ್  ಬಗ್ಗೆ ನಡೆಸಿರುವ ಮಾತುಕತೆ ಇದು.
 


ಕನ್ನಡ ಚಿತ್ರರಂಗ ಪ್ರಸ್ತುತ ಸುದ್ದಿಯಲ್ಲಿರುವುದು ಡ್ರಗ್ಸ್ ಬಳಸುವ ಕಲಾವಿದರು ನಮ್ಮಲ್ಲಿದ್ದಾರೆ ಎಂದು ಬಂದಿರುವ ಕಾರಣಕ್ಕಾಗಿ. ಅಚ್ಚರಿ ಏನೆಂದರೆ ಅದರಲ್ಲಿಯೂ ನಟರಿಗಿಂತ ಹೆಚ್ಚಿನ ಸುದ್ದಿಯಾಗಿರುವುದು ನಟಿಯರು ಮತ್ತು ಸಂಗೀತ ನಿರ್ದೇಶಕರು ಭಾಗಿಯಾಗಿಯಾಗಿದ್ದಾರೆ ಎನ್ನುವ ವಿಚಾರ. ಸೌಂದರ್ಯ ವರ್ಧನೆಯ ಕಾರಣಕ್ಕಾಗಿ ಡ್ರಗ್ಸ್ ಬಳಸುತ್ತಾರೆ ಎನ್ನುವುದು ಒಂದಷ್ಟು ನಟಿಯರ ಮೇಲಿರುವ ಆರೋಪ. ಅದೇ ಸಂದರ್ಭದಲ್ಲಿ ಮಹಿಳೆಯರಾಗಲೀ, ಪುರುಷರಾಗಲೀ ತಾರೆಯರು ತಮ್ಮ ಮೈಕಟ್ಟು ಕಾಯ್ದುಕೊಳ್ಳಲು ಮೊದಲು ಆಶ್ರಯಿಸುವುದೇ ಜಿಮ್‌ಗಳನ್ನು. ಅಲ್ಲಿ ಎಷ್ಟರ ಮಟ್ಟಿಗೆ ಮಾದಕ ದ್ರವ್ಯಗಳ ಬಳಕೆಯಾಗುತ್ತದೆ ಎನ್ನುವ ಬಗ್ಗೆ ಕನ್ನಡದ ಹಲವಾರು ತಾರೆಯರ ಆಪ್ತರಾದ ನಟ, ಫಿಟ್ನೆಸ್ ಕನ್ಸಲ್ಟೆಂಟ್ ರಘು ರಾಮಪ್ಪ ಅವರು ಸುವರ್ಣ ನ್ಯೂಸ್.ಕಾಮ್ ಜತೆ ಮಾತನಾಡಿದ್ದಾರೆ.

- ಶಶಿಕರ ಪಾತೂರು

Latest Videos

undefined

ಕಲಾವಿದರಿಗೆ ದೇಹದಾರ್ಢ್ಯತೆಯ ಪ್ರದರ್ಶನ ಎಷ್ಟು ಮುಖ್ಯ?
ದೇಹದಾರ್ಢ್ಯತೆ ಎನ್ನುವುದು ಎಲ್ಲರಿಗೂ ಅಗತ್ಯ. ನವರಸಗಳನ್ನು ಪ್ರದರ್ಶಿಸಬೇಕಾದಾಗ ಕಲಾವಿದರಿಗೆ ಮೈಕಟ್ಟನ್ನು ಪ್ರದರ್ಶಿಸಬೇಕಾಗುವ ಅನಿವಾರ್ಯತೆಯೂ ಇರಬಹುದು. ಪ್ರದರ್ಶಿಸದೇ ಇದ್ದರೂ ವ್ಯಾಯಾಮದ ಮೂಲಕ ಮೈಕಟ್ಟು ಚೆನ್ನಾಗಿರಿಸಿಕೊಳ್ಳುವುದು ಎಲ್ಲರ ಅಗತ್ಯ. ಇಲ್ಲಿ ಚೆನ್ನಾಗಿರಿಸುವುದು ಎಂದರೆ ಅದು ನೋಟಕ್ಕೆ ಚೆನ್ನಾಗಿದ್ದರಷ್ಟೇ ಆರೋಗ್ಯ ಅಂತ ಏನಲ್ಲ. ಕೃಷಿಕನ ದುಡಿಮೆಯ ಮೈಯಲ್ಲಿಯೂ ಚೆಲುವು ಇರುತ್ತದೆ. ಅದು ಆರೋಗ್ಯದ ಚೆಲುವು. ಅದೇ ಅಂತಿಮ. ಅದಕ್ಕಾಗಿ ಸಿಕ್ಸ್‌ಪ್ಯಾಕ್ ಮಾಡಬೇಕಿಲ್ಲ.

ಸಮಯ ಇರೋದೇ ಸದುಪಯೋಗಕ್ಕೆ - ಶರಣ್

ಸಿಕ್ಸ್ ಪ್ಯಾಕ್‌ ಎನ್ನುವುದು ಆರೋಗ್ಯಪೂರ್ಣವೇ?
ಕೆಲವೊಮ್ಮೆ ಶ್ರಮಿಕ ವರ್ಗದವರಲ್ಲಿ ಅವರು ಮಾಡುವ ದೈಹಿಕ ವ್ಯಾಯಾಮದಿಂದಾಗಿ ತನ್ನಷ್ಟಕ್ಕೇ ಮೂಡುವ ಸಿಕ್ಸ್‌ಪ್ಯಾಕ್ ಖಂಡಿತವಾಗಿ ಆರೋಗ್ಯಪೂರ್ಣ. ಆದರೆ ಹೊಟ್ಟೆಯ ಮೇಲೆ ಸಿಕ್ಸ್‌ ಪ್ಯಾಕ್ ಮೂಡಿಸಲೆಂದೇ ಮಾಡುವ ಪ್ರಯತ್ನ ಅಷ್ಟು ಉತ್ತಮವಾದದ್ದೇನೂ ಅಲ್ಲ. ಯಾಕೆಂದರೆ ದೇಹದಿಂದ ಕೊಬ್ಬಿನಂಶ ಪೂರ್ತಿಯಾಗಿ ನಿವಾರಿಸಿದಾಗ ಮಾತ್ರ ಸಿಕ್ಸ್ ಪ್ಯಾಕ್ ಕಾಣಿಸಲು ಸಾಧ್ಯ. ಆದರೆ ಮನುಷ್ಯನಲ್ಲಿ ಕೊಬ್ಬಿನ ಅಂಶ ಒಂದಷ್ಟು ಮಟ್ಟಿಗೆ ಇರಲೇಬೇಕು. ಅದನ್ನು ಪೂರ್ತಿಯಾಗಿ ತೆಗೆದು ಬಿಡುವುದು ಅಷ್ಟು ಒಳಿತಲ್ಲ. ಹಾಗಾಗಿಯೇ ಸಿಕ್ಸ್ ಪ್ಯಾಕ್ ಮಾಡುವವರು ಅದನ್ನು ಸಿನಿಮಾಗಳಿಗೆ ಅಥವಾ ದೇಹದಾರ್ಢ್ಯ ಸ್ಪರ್ಧೆಗಷ್ಟೇ ಮೀಸಲಾಗಿರಿಸುತ್ತಾರೆ. ಆದರೆ ಅದನ್ನೇ ಮುಂದುವರಿಸುವುದು ಕಷ್ಟ ಮತ್ತು ಅದರಿಂದ ಬೇರೆ ಉಪಯೋಗವೂ ಇಲ್ಲ. 

ಅಧ್ಯಾತ್ಮದ ಬಗ್ಗೆ ಮಾಸ್ಟರ್ ಆನಂದ್ ಮಾತು

ಬಾಡಿ ಬಿಲ್ಡಿಂಗ್‌ ಮಾಡಲು ಡ್ರಗ್ಸ್ ಸೇವಿಸುವವರು ಇದ್ದಾರೆಯೇ?
ಖಂಡಿತವಾಗಿ ಇದ್ದಾರೆ. ಅಂಥವರಲ್ಲಿ ಕಾಲೇಜ್ ಆದ ತಕ್ಷಣ ಜಿಮ್‌ಗೆ ಹೋಗಿ ಬಾಡಿ ಬೆಳೆಸಬೇಕು ಎನ್ನುವ ಮನಸ್ಥಿತಿಯ ಯುವಕರೇ ಹೆಚ್ಚಿರುತ್ತಾರೆ. ರಾತ್ರೋರಾತ್ರಿ ಅವರಿಗೆ ಸಲ್ಮಾನ್ ಖಾನ್, ಶಾರುಖ್ ಖಾನ್ ಆಗುವ ಕನಸು! ಅದಕ್ಕೆ ತಕ್ಕಂತೆ ಜಿಮ್ ಗಳಲ್ಲಿರುವ ಕೆಲವು ಟ್ರೇನರ್ಸ್ ನೀನು ಈ ಮೆಡಿಸಿನ್ ತೆಗೆದುಕೊಂಡಲ್ಲಿ ರಾತ್ರೋರಾತ್ರಿ ಬಾಡಿ ಬಿಲ್ಡ್ ಮಾಡಬಹುದು ಎಂದು ತಪ್ಪು ದಾರಿಗೆಳೆಯುತ್ತಾರೆ. ಆದರೆ ಹುಡುಗರಿಗೆ ಅದರ ದುರಂತಗಳು ಸರಿಯಾಗಿ ಅರ್ಥಮಾಡಿಕೊಳ್ಳುವ ಮನಸ್ಥಿತಿ ಇರುವುದಿಲ್ಲ. ಅದರಿಂದಾಗಿ ಅವರಿಗೆ ಮುಂದೆ ತುಂಬ ದೊಡ್ಡಮಟ್ಟದಲ್ಲಿ ಸೈಡ್ ಎಫೆಕ್ಟ್‌ ಇರುತ್ತವೆ. ಆದರೆ ನಾನು ನೈಸರ್ಗಿಕವಾಗಿ ಏನು ದೊರಕುತ್ತದೆಯೋ ಅದನ್ನೇ ತಿನ್ನಬೇಕು ಎಂದು ಹೇಳುತ್ತೇನೆ. 'ಎಂಟು ಗಂಟೆ ನಿದ್ದೆ ಮಾಡಿ. ಮನೆಯ ಆಹಾರವನ್ನೇ ಸೇವಿಸಿ' ಎಂದು ನನಗೆ ಸಾಧ್ಯವಾದಷ್ಟು ನೈಸರ್ಗಿಕವಾಗಿ ದೇಹ ಬೆಳೆಸುವ ಸಂದೇಶ ನೀಡುತ್ತಿರುತ್ತೇನೆ. 'ನ್ಯಾಚುರಲ್ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್' ಅವರು ಕೂಡ ಎಲ್ಲರಿಗೂ ಬ್ಲಡ್ , ಯೂರಿನ್ ಟೆಸ್ಟ್ ಮಾಡಿಯೇ ಸ್ಪರ್ಧೆಗೆ ಆಯ್ಕೆ ಮಾಡುತ್ತಾರೆ. 

ಶೂಟಿಂಗ್ ತಾಣಗಳ ಬಗ್ಗೆ ಡಾ. ಶ್ರುತಿಯ ಮಾಹಿತಿ

ನಿಮ್ಮಿಂದ ಸಲಹೆ ಪಡೆದು ದೇಹ ಪ್ರಕೃತಿ ಚೆನ್ನಾಗಿರಿಸಿಕೊಂಡ ತಾರೆಯರು ಯಾರು?
ಸಿನಿಮಾದ ಮಂದಿಯಲ್ಲಿ ರಘು ದೀಕ್ಷಿತ್, ನೀತು ಶೆಟ್ಟಿ ಮೊದಲಾದವರು ಇದ್ದಾರೆ. ಅವರಲ್ಲದೆ ಇಂಡಿಯನ್ ಹಾಕಿ ಟೀಮ್ ಸೇರಿದಂತೆ ತುಂಬ ಮಂದಿ ಬೇರೆ ಬೇರೆ ವಿಭಾಗದ ಗಣ್ಯರಿಗೆ ನಾನು ಫಿಟ್ನೆಸ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡಿದ್ದೀನಿ. ಅವರೆಲ್ಲ ಇಂದಿರಾ ನಗರದ ಬಳಿ ಇರುವ ಪೌಂಡ್ ಫಿಟ್ನೆಸ್ ಸೆಂಟರ್‌ಗೆ ಬಂದು ಶ್ರಮ ವಹಿಸಿ ತಮ್ಮ ಬಾಡಿ ಫಿಟ್ ಮಾಡಿಕೊಂಡಿದ್ದಾರೆ. ಅದರಲ್ಲಿ ಕೂಡ ರಘು ದೀಕ್ಷಿತ್ ಅವರ ಬಗ್ಗೆ ಹೇಳಲೇಬೇಕು. ಅವರು ಅಲ್ಲಿಗೆ ಬರುವಾಗ ನೂರ ಹದಿನಾರು ಕೆಜಿ ಇದ್ರು. ಲಾಕ್ಡೌನ್ ಕಾರಣದಿಂದ ಮನೇಲೆ ಇದ್ದು ಡಿಪ್ರೆಶನ್‌ಗೆ ಹೋಗಿದ್ದ ಅವರಿಗೆ ತಮ್ಮ ತೂಕ ಇಳಿಸಿಕೊಳ್ಳಲೇಬೇಕಿತ್ತು. ಇದೀಗ ಅವರ ಮೈತೂಕ ತೊಂಬತ್ತು ಕೆಜಿಗೆ ಬಂದು ನಿಂತಿದೆ. ಇನ್ನಷ್ಟು ಕಡಿಮೆಯಾಗಬೇಕಿದೆ. ಅವರು ತೂಕ ಕಡಿಮೆ ಮಾಡಲು ನಾನು ನೀಡಿದ ಸಲಹೆಗಳನ್ನು ಗಂಭೀರವಾಗಿ ಸ್ವೀಕರಿಸಿದಂಥ ಒಳ್ಳೆಯ ವಿದ್ಯಾರ್ಥಿ. ಇನ್ನು ಕೆಲವರು ದಪ್ಪ ಇರುವ ಕಾರಣಕ್ಕೆ ಅವರನ್ನು ಫಿಟ್ ಇಲ್ಲ ಎಂದು ನಿರ್ಧರಿಸುವುದು ತಪ್ಪು. ದೈಹಿಕವಾಗಿ ಕ್ರಿಯಾಶೀಲರಾಗಿರುವುದು ಮುಖ್ಯ.

click me!