ಚಿರುನೇ ನನ್ನ ಧೈರ್ಯ ಮತ್ತು ಗೈಡ್‌: ಧ್ರುವ ಸರ್ಜಾ

By Kannadaprabha NewsFirst Published Aug 10, 2020, 9:07 AM IST
Highlights

ಅಣ್ಣ ಚಿರಂಜೀವ ಸರ್ಜಾ ಅಗಲಿಕೆಯ ನೋವಿಂದ ಇನ್ನೂ ಹೊರಬರಲು ಒದ್ದಾಡುತ್ತಿರುವ ಧ್ರುವ ಸರ್ಜಾ ಅವರಿಗೆ ಸಖತ್‌ ಮೈಲೇಜ್‌ ಕೊಡುತ್ತಿರುವುದು ಪೊಗರು ಚಿತ್ರದ ಹಾಡು. ತೆಲುಗಿನಲ್ಲೂ ಬಿಡುಗಡೆ ಆದ ಮೂರನೇ ದಿನಕ್ಕೆ 8 ಮಿಲಿಯನ್‌ ಹಿಟ್ಸ್‌ ದಾಟಿದೆ. ಮತ್ತೊಂದು ಕಡೆ ಧ್ರುವ ಶೂಟಿಂಗ್‌ಗೆ ರೆಡಿ ಆಗುತ್ತಿದ್ದಾರೆ. ಈ ಹಿನ್ನೆಲೆ ಧ್ರುವ ಅವರ ಮಾತುಗಳು ಇಲ್ಲಿವೆ.

ಚಿರು ನನ್ನ ಬಿಟ್ಟಿಲ್ಲ

ಚಿರಂಜೀವಿ ಸರ್ಜಾ ನನಗೆ ಬರೀ ಅಣ್ಣ ಮಾತ್ರವಲ್ಲ. ನನ್ನ ಬೆಸ್ಟ್‌ ಫ್ರೆಂಡ್‌, ನನ್ನ ಗೈಡ್‌, ನನ್ನ ಧೈರ್ಯ ಎಲ್ಲವೂ ಆಗಿದ್ದವರು. ನನ್ನ ಪಾಲಿನ ನಿಜವಾದ ಹೀರೋ ಚಿರು. ನಿಜ, ಬೌದ್ಧಿಕವಾಗಿ ನನ್ನ ಚಿರು ನನ್ನೊಂದಿಗೆ ಇಲ್ಲದಿರಬಹುದು. ಆದರೆ, ನನ್ನ ಜೀವನದ ಪ್ರತಿ ಹೆಜ್ಜೆ, ಪ್ರತಿ ಯಶಸ್ಸು, ಪ್ರತಿ ಸಂಭ್ರಮದಲ್ಲೂ ಆತ ಇದ್ದಾನೆ. ನನ್ನ ಹಿಂದೆ ನಿಂತು ನನ್ನ ಮುನ್ನಡೆಸುತ್ತ, ಧೈರ್ಯ ತುಂಬುವ ಶಕ್ತಿಯಾಗಿ ನನ್ನ ಜತೆ ಇದ್ದಾನೆ. ಆತ ಚಿರಂಜೀವಿ. ನನ್ನ ಬಿಟ್ಟು ಎಲ್ಲೂ ಹೋಗಿಲ್ಲ. ಅವನ ನೆನಪು ಮತ್ತಷ್ಟು, ಮಗದಷ್ಟುಕಾಡುತ್ತಲೇ ಇರುತ್ತದೆ. ಆ ಮೂಲಕ ನನ್ನ ಅಣ್ಣ, ನನ್ನ ಕಣ್ಣಲ್ಲಿ, ನೆನಪುಗಳಲ್ಲಿ ಸದಾ ಚಿರಂಜೀವಿ.

ನಾನು ಪ್ಲಾನ್‌ ಮಾಡಲ್ಲ

ನನ್ನ ಸಿನಿಮಾ ಹೆಜ್ಜೆಗಳನ್ನು ನಾನು ಪ್ಲಾನ್‌ ಮಾಡಿ ರೂಪಿಸಿಕೊಳ್ಳುವುದಿಲ್ಲ. ಅಣ್ಣ ಚಿರು ಎಲ್ಲವನ್ನೂ ನನ್ನ ಜತೆ ನಿಂತು ಪ್ಲಾನ್‌ ಮಾಡಿಕೊಡುತ್ತಾನೆ. ಆ ನಂಬಿಕೆ ನನಗೆ ಇದೆ. ಈ ಲಾಕ್‌ಡೌನ್‌ ಹೊತ್ತಿನಲ್ಲಿ, ನಮ್ಮ ಪೊಗರು ಚಿತ್ರದ ಹಾಡು ಇಷ್ಟುದೊಡ್ಡ ಮಟ್ಟಕ್ಕೆ ಹಿಟ್‌ ಆಗಿದ್ದು ಖುಷಿ ವಿಚಾರ.

10 ಕೋಟಿ ವೀಕ್ಷಣೆ ಪಡೆದ 'ಕರಾಬು'; ಯಾರೂ ಮಾಡದ ದಾಖಲೆ ಇದು!

ಕಣ್ಣೀರು ತಡೆಯಲಾರೆ

ಸದ್ಯಕ್ಕೆ ಚಿರಂಜೀವಿ ಸರ್ಜಾ ಸಿನಿಮಾಗಳ ಪೈಕಿ ರಾಜ ಮಾರ್ತಾಂಡ ಚಿತ್ರಕ್ಕೆ ನಾನೇ ಡಬ್ಬಿಂಗ್‌ ಮಾಡುವುದಕ್ಕೆ ಒಪ್ಪಿಕೊಂಡಿದ್ದೇನೆ. ಆದರೆ, ಈಗಲೇ ಮಾಡಲ್ಲ. ಯಾಕೆಂದರೆ ಚಿರುವನ್ನು ತೆರೆ ಮೇಲೆ ಮೇಲೆ ನೋಡಿದರೆ ನನಗೆ ಕಣ್ಣೀರು ಬರುತ್ತದೆ. ಆ ದುಃಖ ನನ್ನಿಂದ ತಡೆಯಲಾಗಲ್ಲ. ಹೀಗಾಗಿ ಒಂದಿಷ್ಟುದಿನ ಬಿಟ್ಟು ರಾಜಾಮಾರ್ತಾಂಡ ಚಿತ್ರಕ್ಕೆ ಡಬ್ಬಿಂಗ್‌ ಮಾಡಿಕೊಡುತ್ತೇನೆ.

"

ಹಾಡಿನ ಯಶಸ್ಸು ಕೊಟ್ಟಉತ್ಸಾಹ

ನಮ್ಮ ಪೊಗರು ಚಿತ್ರದ ಹಾಡನ್ನು ಜನ ದೊಡ್ಡ ಮಟ್ಟದಲ್ಲಿ ಸ್ವೀಕರಿಸಿದ್ದಾರೆ. ಕನ್ನಡದಲ್ಲಿ 100 ಮಿಲಿಯನ್‌ ಹಿಟ್ಸ್‌ ಪಡೆದುಕೊಂಡಿದೆ. ಅಂದರೆ ಬಿಡುಗಡೆಯಾಗಿ ನೂರು ದಿನದಲ್ಲಿ 10 ಕೋಟಿ ವೀಕ್ಷಣೆ ಪಡೆದಿರುವ ಮೊದಲ ಹಾಡು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ತೆಲುಗಿನಲ್ಲೂ ಹಾಡು ಬಂದಿದ್ದು, ಮೂರು ದಿನದಲ್ಲಿ 8 ಮಿಲಿಯನ್‌ ವೀಕ್ಷಣೆ ದಾಟಿದೆ. ತೆಲುಗು ವರ್ಶನ್‌ ಹಾಡನ್ನು ಮಾವ ಅರ್ಜುನ್‌ ಸರ್ಜಾ ಬಿಡುಗಡೆ ಮಾಡಿದ್ದು, ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಇದು ನನ್ನ ಒಬ್ಬನ ಯಶಸ್ಸು ಅಲ್ಲ. ನಿರ್ದೇಶಕ ನಂದ ಕಿಶೋರ್‌, ನಿರ್ಮಾಪಕ ಗಂಗಾಧರ್‌ ಸೇರಿದಂತೆ ಪೊಗರು ಚಿತ್ರಕ್ಕೆ ಕೆಲಸ ಮಾಡಿದ ಪ್ರತಿಯೊಬ್ಬರೂ ಈ ಯಶಸ್ಸಿನಲ್ಲಿ ಪಾಲುದಾರರು. ಕರಾಬು ಎನ್ನುವ ಒಂದೇ ಹಾಡು ಚಿತ್ರಕ್ಕೆ ಈ ಮಟ್ಟಕ್ಕೆ ಮೈಲೇಜ್‌ ಕೊಡುತ್ತಿರುವುದು ನೋಡಿದರೆ ಸಿನಿಮಾ ಮೇಲೆ ಭರವಸೆ ಮತ್ತಷ್ಟುಹೆಚ್ಚಾಗಿದೆ.

ಅ.15 ರಿಂದ ಚಿತ್ರೀಕರಣ ಸಂಭ್ರಮ

ಪೊಗರು ಚಿತ್ರಕ್ಕೆ ಒಂದೇ ಒಂದು ಹಾಡಿನ ಚಿತ್ರೀಕರಣ ಬಾಕಿ ಇದೆ. ಹೀಗಾಗಿ ಅದಕ್ಕಾಗಿ ಮತ್ತಷ್ಟುಎಲ್ಲರನ್ನು ಕಾಯಿಸುವುದು ಬೇಡ. ಅ.15ರ ನಂತರ ಚಿತ್ರೀಕರಣಕ್ಕೆ ಪ್ಲಾನ್‌ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲೇ ಹಲವು ಕಡೆ ಸೆಟ್‌ ಹಾಕಿ ಚಿತ್ರೀಕರಣ ಮಾಡುವ ಯೋಜನೆ ಇದೆ. ಹಾಡಿನ ಯಶಸ್ಸು, ತುಂಬಾ ದಿನಗಳ ನಂತರದ ಚಿತ್ರೀಕರಣದ ಸಂಭ್ರಮದ ಕಾರಣಕ್ಕೆ ಮತ್ತೆ ಹೊಸದಾಗಿ ಬರುತ್ತಿರುವಂತೆ ತೋರುತ್ತಿದೆ.

ಹನುಮ ಭಕ್ತನಿಗೆ ಸಿಕ್ತು ಶ್ರೀರಾಮನ ಆಶೀರ್ವಾದ; ಕರಾಬು ಸೂಪರ್ ಹಿಟ್!

ಒಂದೇ ಚಿತ್ರ ಒಪ್ಪಿರುವುದು

ಉದಯ್‌ ನಿರ್ಮಾಣದ ಚಿತ್ರವಿದು. ಈ ಚಿತ್ರವನ್ನೂ ನಂದ ಕಿಶೋರ್‌ ಅವರೇ ನಿರ್ದೇಶನ ಮಾಡಲಿದ್ದಾರೆ. ಪೊಗರು ಚಿತ್ರದ ನಂತರ ಆ ಬಗ್ಗೆ ಮಾತನಾಡುತ್ತೇನೆ.

ಪೂರಿ ಜಗನ್ನಾಥ್‌ ಮೆಚ್ಚುಗೆ

ಪೊಗರು ಚಿತ್ರದ ಕರಾಬು ಹಾಡಿನ ತೆಲುಗು ವರ್ಶನ್‌ಗೆ ಟಾಲಿವುಡ್‌ನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂದಕಿಶೋರ್‌ ಅವರ ಚಿತ್ರದ ಹಾಡು ತುಂಬಾ ಚೆನ್ನಾಗಿದೆ. ಇಡೀ ತಂಡಕ್ಕೆ ಶುಭವಾಗಲಿ ಎಂದು ಹಾಡನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

click me!